For Quick Alerts
ALLOW NOTIFICATIONS  
For Daily Alerts

ಮನೆಯ ನೆಲದ ಟೈಲ್ಸ್ ಸಿಂಪಲ್ ಆಗಿದ್ದರೂ ಸ್ವಚ್ಛವಾಗಿರಲಿ

By Super
|

ಮನೆಯ ನೆಲದ ಹಾಗೂ ಗೋಡೆಯ ಟೈಲ್ಸ್ ಸ್ವಚ್ಛಗೊಳಿಸಿದ ಬಳಿಕ, ಒ೦ದು ವಾರವು ಕಳೆಯುವುದರೊಳಗಾಗಿ ಪುನ: ಅವು ಮಲಿನಗೊ೦ಡು ಅಸಹ್ಯವಾಗಿ ಕಾಣತೊಡಗುತ್ತವೆ. ಈ ಟೈಲ್ಸ್‌ಗಳ ಮೂಲೆಗಳಲ್ಲಿ ಸಾಮಾನ್ಯವಾಗಿ ಕೊಳಕು ಜಮಾವಣೆಗೊಳ್ಳುವುದರಿ೦ದ ಇವುಗಳ ಸ್ವಚ್ಛತೆಗೆ ವಿಶೇಷವಾದ ಗಮನವನ್ನು ನೀಡುವುದು ಅತ್ಯಗತ್ಯ.

ಹಾಗಿದ್ದರೆ ಇದಕ್ಕೆ ಪರಿಹಾರವೇನು? ಎಲ್ಲರಿಗೂ ನೆಲ ಕ್ಲೀನ್ ಮಾಡುವ ಯಂತ್ರವನ್ನು ಕೊಳ್ಳಲು ಶಕ್ತಿಯಿದೆಯೇ? ಖಂಡಿತಾ ಇಲ್ಲ ಮತ್ತು ಯಾವಾಗಲೂ ಅದರ ಅಗತ್ಯವು ಇರುವುದಿಲ್ಲ ಅಲ್ಲವೇ...? ಸಾಮಾನ್ಯವಾಗಿ ಮನೆಯ ಅಡಿಗೆಮನೆ ಸಿಂಕ್, ನೆಲ, ಸ್ಟವ್ ಇಟ್ಟಿರುವ ಸ್ಥಳ ಮತ್ತು ಸ್ನಾನದ ಕೊಠಡಿಗಳ ಟೈಲ್ಸ್ ನಲ್ಲಿ ಕೊಳಕು ಕಂಡುಬರುವುದು ಸಹಜ. ಆದ್ದರಿಂದ ಅಡಿಗೆಮನೆಯ ನೆಲದಲ್ಲಿರುವ ಬಿಳಿ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸಲು ಕಲಿತುಕೊಳ್ಳುವುದು ಬಹಳ ಮುಖ್ಯ.

Easy Ways To Clean White Tiles At Home

ಬಿಳಿ ಟೈಲ್ಸ್ ನೋಡುವುದಕ್ಕೆ ಬಹಳ ಸೊಗಸಾಗಿ ಕಾಣುತ್ತದೆ ಮತ್ತು ಅಡಿಗೆಮನೆಯಲ್ಲಿರುವ ಬಿಳಿ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸುವ ವಿಧಾನ ಗೊತ್ತಾದಲ್ಲಿ ಅವುಗಳು ಅನೇಕ ವರ್ಷಗಳ ಕಾಲ ಬೆಳ್ಳಗೆ ಮತ್ತು ಹೊಳೆಯುತ್ತಿರುವ ಹಾಗೆ ಮಾಡಬಹುದು. ನೀವು ಎಷ್ಟೋ ಬಾರಿ ನೆಲಗಳನ್ನು ಸ್ವಚ್ಛಗೊಳಿಸಿದಾಗ ಟೈಲ್ಸ್‌ಗಳ ಅಂಚುಗಳಲ್ಲಿ ಮತ್ತು ಟೈಲ್ಸ್‌ಗಳ ಜೋಡಣೆ ಮಧ್ಯೆ ಕೊಳೆ ಹಾಗೆಯೇ ಉಳಿದು ಕ್ರಮೇಣ ಕಪ್ಪಾಗಿ ಕಾಣುತ್ತದೆ. ಆದ್ದರಿಂದ ನೀವು ಬಿಳಿ ಟೈಲ್ಸ್ ಸ್ವಚ್ಛಮಾಡುವಾಗ ಅಂತಹ ಸ್ಥಳಗಳ ಮೇಲೆ ಗಮನವಿಡಿ.

ಅಡುಗೆಮನೆಯ ಬಿಳಿ ಟೈಲ್ಸ್‌ಗಳನ್ನು ಸ್ವಚ್ಛಮಾಡಲು ಕೆಲವು ಸುಲಭ ಸಲಹೆಗಳನ್ನು ಅನುಸರಿಸಿದರೆ ಅವುಗಳನ್ನು ಸ್ವಚ್ಛಮಾಡುವುದು ಇನ್ನು ಮುಂದೆ ದುಃಸ್ವಪ್ನವಾಗುವ ಪ್ರಮೇಯವಿರುವುದಿಲ್ಲ. ಈ ಲೇಖನದಲ್ಲಿ ಬಿಳಿ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಕೆಲವು ಸಲಹೆಗಳನ್ನು ಒದಗಿಸಲು ನಮ್ಮ ಉದ್ದೇಶ ಮತ್ತು ಅವುಗಳನ್ನು ನೀವು ಖಂಡಿತವಾಗಿಯೂ ಬಹಳ ಉಪಯುಕ್ತವೆಂದು ಕಾಣಬಹುದು. ಅಚ್ಚುಕಟ್ಟಾದ ಅಡುಗೆಮನೆಯ ಅಂದಕ್ಕಾಗಿ ಟಾಪ್ ಸಲಹೆಗಳು

ವಿನೇಗರ್


ಸ್ಪ್ರೇ ಬಾಟಲ್ ಒ೦ದರಲ್ಲಿ ಅಥವಾ ಒ೦ದು ಬಕೆಟ್‌ನಲ್ಲಿ ಒ೦ದು ಅ೦ಶ ವಿನೇಗರ್ ಹಾಗೂ ಐದು ಅ೦ಶಗಳಷ್ಟು ನೀರನ್ನು ಬೆರೆಸಿಕೊ೦ಡು ಮಿಶ್ರಗೊಳಿಸಿ ದ್ರಾವಣವನ್ನು ತಯಾರಿಸಿಕೊಳ್ಳಿರಿ. ಮನೆಯ ಟೈಲ್ಸ್ ಹಾಗೂ ಇತರ ಅ೦ತಹುದೇ ಮೇಲ್ಮೈಗಳ ಮೇಲೆ ಈ ದ್ರಾವಣವನ್ನು ಸಿ೦ಪಡಿಸಿರಿ. ಹಾಗೆ ಚಿಮುಕಿಸಿದ ದ್ರಾವಣವನ್ನು ಟೈಲ್ಸ್‌ಗಳ ಮೇಲೆ ಹಾಗೆಯೇ ಹತ್ತರಿ೦ದ ಹದಿನೈದು ನಿಮಿಷಗಳ ಕಾಲ ಇರಗೊಡಿರಿ. ಹೀಗೆ ಮಾಡುವುದರಿ೦ದ ಕೊಳಕು ದ್ರಾವಣದೊಡನೆ ವಿಲೀನಗೊಳ್ಳುತ್ತದೆ. ಇದಾದ ಬಳಿಕ, ಟೈಲ್ಸ್‌ಗಳ ಮೇಲ್ಮೈಗಳನ್ನು ಬ್ರಶ್ ನಿ೦ದ ಉಜ್ಜಿ, ನೀರಿನಿ೦ದ ತೊಳೆದುಬಿಡಿರಿ. ಈ ದ್ರಾವಣವನ್ನು ಟೈಲ್ಸ್‌ಗಳ, ಕಿ೦ಡಿಗಳು, ಕಪಾಟುಗಳ ಮೇಲ್ಮೈ ಗಳನ್ನೂ ಕೂಡ ಸ್ವಚ್ಛಗೊಳಿಸಲು ಬಳಸಬಹುದು.

ಟೈಲ್ಸ್ ಕ್ಲೀನರ್ ಬಳಸಿ
ಸ್ವಚ್ಛಗೊಳಿಸಬೇಕಾಗಿರುವ ಟೈಲ್ಸ್‌ಗಳ ಮೇಲೆ ಟೈಲ್ಸ್ ಕ್ಲೀನರ್ ಅನ್ನು ಹಾಕಿರಿ, ಟೈಲ್ಸ್ ಕ್ಲೀನರ್ ದ್ರಾವಣವನ್ನು ನಿಯಮಿತವಾಗಿ ಬಳಸುವುದನ್ನು ಮಾತ್ರ ಮರೆಯಬೇಡಿ, ಟೈಲ್ಸ್ ಕ್ಲೀನರ್ ದ್ರಾವಣವನ್ನು ಟೈಲ್ಸ್‌ಗಳ ಮೇಲೆ ಹಾಗೆಯೇ ಸುಮಾರು ಅರ್ಧಗಂಟೆಯ ಕಾಲ ಇರಗೊಡಿರಿ.

ನೀರು
ನಾವು ಬಿಳಿ ಟೈಲ್ಸ್‌ಗಳನ್ನು ಮತ್ತು ಅವುಗಳ ಅಂಚುಗಳನ್ನು ಕ್ರಮವಾಗಿ ನಿರ್ವಹಿಸುತ್ತಿದ್ದರೆ ಬಣ್ಣಗೆಡುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು. ನಮಗಿರುವ ಸದಾ ಲಭ್ಯವಿರುವ ಉಪಕರಣವಾದ ನೀರನ್ನು ಉಪಯೋಗಿಸಿ ಬಿಳಿ ಟೈಲ್ಸ್‌ಗಳನ್ನು ಸ್ವಚ್ಛಗೊಳಿಸುವುದು ಅತ್ಯುತ್ತಮ ವಿಧಾನ. ಅದು ಅಗ್ಗ ಮತ್ತು ಅತ್ಯುತ್ತಮ ಸ್ವಚ್ಛಗೊಳಿಸುವ ಸಾಧನ. ಮೊದಲಿಗೆ ಪ್ರತಿದಿನವೂ ನೀವು ಅಡುಗೆಮನೆಯ ಟೈಲ್ಸ್‌ಗಳ ಮೇಲೆ ಚೆನ್ನಾಗಿ ಗುಡಿಸಿ ಹಾಗೂ ಮಾರ್ಜಕವನ್ನು(Vacuum Cleaaner) ಬಳಸಿ ಸ್ವಚ್ಛಮಾಡಿ. ಹೀಗೆ ಮಾಡುವುದರಿಂದ ನೆಲದಮೇಲೆ ಸಂಗ್ರಹವಾಗುವ ಸಡಿಲ ಧೂಳು, ಬ್ರೆಡ್ ಮತ್ತು ಆಹಾರದ ಚೂರುಗಳು ತೆಗೆದುಹಾಕಬಹುದು.


ಸ್ವಚ್ಛಮಾಡಿದನಂತರ ಒದ್ದೆಯ ನೆಲದಮೇಲೆ ಕೊಳಕು ಸ್ವಲ್ಪವೂ ಇಲ್ಲದಿರುವಂತೆ ನೋಡಿಕೊಳ್ಳಿ. ಹಾಗಿಲ್ಲದಿದ್ದಲ್ಲಿ ಕೊಳಕು ಮತ್ತೆ ಅಂಟುಕೊಳ್ಳುವ ಸಂಭವ ಹೆಚ್ಚು ಮತ್ತು ಅದು ಗಟ್ಟಿಯಾಗುವ ಸಂಭವವೂ ಹೆಚ್ಚು. ತಕ್ಷಣ ಒಂದು ಒಣಗಿದ ಬಟ್ಟೆ ಅಥವ ಮಾಪ್ ಉಪಯೋಗಿಸಿ ಒಣಗುವ ಹಾಗೆ ಮಾಡಿ. ಟೈಲ್ಸ್‌ಗಳ ಮೇಲೆ ಹೋಗಲಾಡಿಸದ ಅಥವಾ ಪಟ್ಟುಬಿಡದ ಕೊಳೆ ಇದ್ದಲ್ಲಿ ಬಿಸಿನೀರನ್ನುಪಯೋಗಿಸಿ ಸಾರಿಸಿದಾಗ ನಿಮ್ಮ ಟೈಲ್ಸ್ ಸಂಪೂರ್ಣವಾಗಿ ಶುಭ್ರವಾಗಿಟ್ಟುಕೊಳ್ಳಬಹುದು. ಹಾಗೆ ಮಾಡಿದ ತಕ್ಷಣ ಹೊಸ ಧೂಳು ಕೂಡುವ ಮುನ್ನ ಒಂದು ಒಣಗಿದ ಬಟ್ಟೆಯಿಂದ ಒರಸಿ. ಟೈಲ್ಸ್ ಜೋಡಣೆಯನ್ನು ಒಂದು ಟೂತ್ ಬ್ರಶ್ ಉಪಯೋಗಿಸಿ ಸ್ವಚ್ಛಗೊಳಿಸಬಹುದು. ಹಾಗೆಯೇ ಬಿಳಿ ಟೈಲ್ಸ್‌ಗಳ ಮೇಲೆ ಏನು ಚೆಲ್ಲಿದರೂ ತಕ್ಷಣವೇ ಒರಸಿ ಸ್ವಚ್ಛಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕೊಳೆಯು ಟೈಲ್ಸ್‌ಗಳ ಮೇಲೆ ಬಹಳ ಸಮಯ ಕುಳಿತಷ್ಟೂ ಅದು ಅಂಟುಕೊಳ್ಳುವುದೇ ಅಲ್ಲದೆ ಜೋಡಣೆಗಳ ಮಧ್ಯೆ ಒಳಗಿಳಿದು ಸೇರಿಕೊಳ್ಳುವ ಸಾಧ್ಯತೆಗಳಿವೆ. ಬಾತ್ ರೂಂಗಿಂತ ಅಡುಗೆ ಮನೆಯಲ್ಲೇ ಹೆಚ್ಚು ಕೀಟಾಣು!

ಡಿಟೆರ್ಜೆಂಟ್ ಪೌಡರ್ ಮತ್ತು ಅಮೋನಿಯ


ಅಡುಗೆಮನೆಯ ಬಿಳಿ ಟೈಲ್ಸ್‌ಗಳ ಮೇಲೆ ಮೇಣದ ಚೂರುಗಳು ಸೇರಿದ್ದರೆ ಡಿಟೆರ್ಜೆಂಟ್ ಪೌಡರ್ ಮತ್ತು ಅಮೋನಿಯ ಮಿಶ್ರಣವು ಸ್ವಚ್ಛಗೊಳಿಸಲು ಒಂದು ಅತ್ಯುತ್ತಮ ವಿಧಾನವಾಗಿದೆ. ಇದಕ್ಕೆ ನೀವು ಒಂದು ಕಪ್ ಲಾಂಡ್ರಿ ಡಿಟೆರ್ಜೆಂಟ್ ಪೌಡರ್, ಅರ್ಧ ಕಪ್ ಅಮೋನಿಯ ದ್ರವ ಮತ್ತು ಒಂದು ಗ್ಯಾಲನ್ ಬಿಸಿನೀರು ಮಿಶ್ರಣ ಅಗತ್ಯ. ಈ ಮಿಶ್ರಣವನ್ನು ಬೇಕಾದ ಸ್ಥಳಗಳ ಮೇಲೆ ಹಾಕಿ ಮೇಣ ಅಂಟಿಕೊಂಡಿರುವುದನ್ನು ತೆಗೆಯಲು ಒಂದು ಸ್ಥಿರ ಸ್ಕ್ರಬ್ ಬ್ರಶ್ ಉಪಯೋಗಿಸಿದರೆ ನಿಮ್ಮ ಬಿಳಿ ಟೈಲ್ಸ್‌ಗಳನ್ನು ನಿರ್ಮಲವಾಗಿ ಹೊಳೆಯುವಂತೆ ಇರಿಸಿಕೊಳ್ಳಬಹುದು.
English summary

Easy Ways To Clean White Tiles At Home

A beautiful house with sparkling white tiles is every person’s dream. But have we ever given a thought on maintaining these tiles? We all know that even a little dirt or stain can make these white tiles look ugly. So what do we do? This article intends to provide you some ways to clean white tiles in kitche
X
Desktop Bottom Promotion