For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ 16 ಆಹಾರಗಳು!

|

ನಿಮ್ಮ ಮನೆಯನ್ನು ನೈಸರ್ಗಿಕ ಸಾಮಾಗ್ರಿಗಳಿಂದ ಸ್ವಚ್ಛಗೊಳಿಸುವ ಮುಖ್ಯ ಕಾರಣವೆಂದರೆ ಅದು ಸುರಕ್ಷಿತ ಮತ್ತು ಯಾವುದೇ ದುಷ್ಟಪರಿಣಾಮಗಳನ್ನು ಉಂಟು ಮಾಡುವುದಿಲ್ಲ ಎಂದಾಗಿದೆ. ನೀವು ಬಳಸುವ ಕೆಲವೊಂದು ಆಹಾರಗಳೂ ಕೂಡ ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ ಅದ್ಭುತ ಶಕ್ತಿಯನ್ನು ಮತ್ತು ಮತ್ತು ಸುವಾಸನೆಯನ್ನು ಹೊಂದಿರುವುದು ನಿಮಗೆ ತಿಳಿದಿದೆಯೇ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಾಳೆ ಹಣ್ಣಿನ ಸಿಪ್ಪೆಯ ಚಮತ್ಕಾರೀ ಉಪಯೋಗ!

ನೀವು ಬಳಸದೇ ಬಿಸಾಡುವ ಕೆಲವೊಂದು ಪದಾರ್ಥಗಳು ನಿಮ್ಮ ಸುತ್ತಲಿರಬಹುದು. ಅವುಗಳು ನಿಷ್ಪ್ರಯೋಜಕ ಎಂದು ನಿಮಗನಿಸಿರಬಹುದು ಆದರೆ ಅವುಗಳು ನಿಮ್ಮ ಮನೆಯನ್ನು ಇನ್ನಷ್ಟು ಜಗಮಗಿಸುವಂತೆ ಮಾಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಪರಿಸರ ಸ್ನೇಹಿ ಜೀವನ ಶೈಲಿಯನ್ನು ಆಸ್ವಾದಿಸುವ ಅಭಿರುಚಿ ನಿಮ್ಮದಾಗಿದ್ದರೆ ಈ ತರದ ವೇಸ್ಟ್ ವಸ್ತುಗಳು ನಿಮ್ಮ ಮನೆಯನ್ನು ಮನವನ್ನು ಬೆಳಗಿಸುವುದರಲ್ಲಿ ಸಂದೇಹವಿಲ್ಲ.

ಅವುಗಳ ಬಳಕೆಯ ವಿಧಾನವನ್ನು ನೀವು ಚೆನ್ನಾಗಿ ಅರಿತಿರಬೇಕು ಎಂಬುದು ಇಲ್ಲಿ ಗಮನಾರ್ಹ. ಮುಂದಿನ ದಿನಗಳಲ್ಲಿ ಆಲೂಗಡ್ಡೆಯ ಸಿಪ್ಪೆಯನ್ನು ಹಾಗೆಯೇ ತೆಗೆದಿರಿಸಿ ಅವುಗಳು ನಿಮ್ಮ ಗ್ಯಾಸ್ ಸ್ಟವ್ ಅನ್ನು ಪಳಪಳ ಹೊಳೆಯುವಂತೆ ಮಾಡುತ್ತವೆ.

ಹೀಗೆಯೇ ಈ ಲೇಖನ ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ 16 ಆಹಾರಗಳನ್ನು ನಿಮ್ಮ ಮುಂದಿರಿಸುತ್ತಿದೆ. ಅವುಗಳ ಬಳಕೆ ಹೇಗೆಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಶ್ವಾನ ಪ್ರೇಮಿಗಳಿಗಾಗಿ ಇಲ್ಲಿದೆ ಕೆಲವೊಂದು ಸಲಹೆ

ಬಾತ್ ಟಬ್‌ಗಾಗಿ ಗ್ರೇಪ್‌ಫ್ರುಟ್:

ಬಾತ್ ಟಬ್‌ಗಾಗಿ ಗ್ರೇಪ್‌ಫ್ರುಟ್:

ಬಾತ್ ಟಬ್‌ನಲ್ಲಿ ಅಂಟಿಕೊಂಡಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಗ್ರೇಪ್‌ಫ್ರುಟ್ ಅನ್ನು ಬಳಸಿ. ಗ್ರೇಪ್‌ಫ್ರುಟ್‌ಗೆ ಉಪ್ಪು ಸೇರಿಸಿ ಕೊಳೆಯನ್ನು ತೆಗೆಯಿರಿ. ವೃತ್ತಾಕಾರವಾಗಿ ಗ್ರೇಪ್‌ಫ್ರುಟ್ ಅನ್ನು ಕೊಳೆ ಮೆತ್ತಿದ ಬಾತ್ ಟಬ್ ಮತ್ತು ಸಿಂಕ್‌ಗೆ ಉಜ್ಜುತ್ತಾ ಅವುಗಳನ್ನು ಹೊಳೆಯುವಂತೆ ಮಾಡಿ.

ತುಕ್ಕಿಗೆ ಆಲೂಗಡ್ಡೆ:

ತುಕ್ಕಿಗೆ ಆಲೂಗಡ್ಡೆ:

ತುಕ್ಕನ್ನು ನಿವಾರಿಸಲು, ನಿಮಗೆ ತಕ್ಕ ಪರಿಹಾರ ಆಲೂಗಡ್ಡೆಯಾಗಿದೆ. ತುಂಡರಿಸಿದ ಆಲೂಗಡ್ಡೆಯನ್ನು ತುಕ್ಕಿರುವ ಭಾಗಕ್ಕೆ ಉಜ್ಜಿ ಕೂಡಲೇ ತುಕ್ಕು ನಿವಾರಣೆಯಾಗುತ್ತದೆ.

ಪಾತ್ರೆಗಳಿಗಾಗಿ ಕಾಫಿ:

ಪಾತ್ರೆಗಳಿಗಾಗಿ ಕಾಫಿ:

ಕಾಫಿಯ ಸೋಸಿದ ಡಿಕಾಕ್ಷನ್ ನಿಮ್ಮ ಪಾತ್ರಗಳಿಗೆ ಯಾವುದೇ ಹಾನಿ ಮಾಡದೇ ಉತ್ತಮವಾಗಿ ತೊಳೆಯುತ್ತದೆ. ಇದು ಕಠಿಣವಾದ ಜಿಡ್ಡನ್ನು ಪಾತ್ರೆಯಿಂದ ನಿವಾರಿಸುವ ಸಾಮರ್ಥ್ಯ ಹೊಂದಿದೆ.

ಕಿಟಕಿಗಳಿಗೆ ಈರುಳ್ಳಿ:

ಕಿಟಕಿಗಳಿಗೆ ಈರುಳ್ಳಿ:

ಇತರ ದುಬಾರಿ ಮಾರುಕಟ್ಟೆ ಉತ್ಪನ್ನಗಳಿಗಿಂತ ನಿಮ್ಮ ಮನೆಯ ಕಿಟಕಿಯನ್ನು ಈರುಳ್ಳಿ ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಈರುಳ್ಳಿಯನ್ನು ಅರ್ಧಹೋಳು ಮಾಡಿಕೊಂಡು ಕೊಳೆ ಮೆತ್ತಿರುವ ಕಿಟಕಿಗೆ ಉಜ್ಜಿ. ನಂತರದ ಚಮತ್ಕಾರವನ್ನು ಆಸ್ವಾದಿಸಿ.

ಸಿಂಕ್ ಸ್ವಚ್ಛಗೊಳಿಸಲು ಲಿಂಬೆ:

ಸಿಂಕ್ ಸ್ವಚ್ಛಗೊಳಿಸಲು ಲಿಂಬೆ:

ಅರ್ಧ ತುಂಡರಿಸಿದ ಲಿಂಬೆಯನ್ನು ಉಪ್ಪು ಬೆರೆಸಿ ನಿಮ್ಮ ಪಿಂಗಾಣಿ, ತಟ್ಟೆ, ಮಡಕೆ ಹಾಗೂ ಸಿಂಕ್ ಅನ್ನು ಸ್ವಚ್ಛಗೊಳಿಸಿ.

ಮರದ ಪೀಠೋಪಕರಣಗಳಿಗೆ ಚಹಾ:

ಮರದ ಪೀಠೋಪಕರಣಗಳಿಗೆ ಚಹಾ:

ಚಹಾದಲ್ಲಿರುವ ಟ್ಯಾನಿನ್ ಮರದ ಪೀಠೋಪಕರಣಗಳನ್ನು ಹೊಳೆಯುವಂತೆ ಮಾಡುತ್ತದೆ. ವಾರ್ನಿಶ್ ಬಳಸದೇ ಟೀ ಯನ್ನು ಬಳಸಿ ನಿಮ್ಮ ಮರದ ಪೀಠೋಪಕರಣಗಳನ್ನು ಹೊಳೆಯಿಸಿ.

ಬೇ ಎಲೆಗಳು ಕೀಟಗಳ ನಿವಾರಣೆಗೆ:

ಬೇ ಎಲೆಗಳು ಕೀಟಗಳ ನಿವಾರಣೆಗೆ:

ಬೇ ಎಲೆಗಳನ್ನು ಬಳಸಿಕೊಂಡು ಕೀಟಗಳನ್ನು ನಿವಾರಿಸಿ. ಕೀಟಗಳನ್ನು ನಿವಾರಿಸುವಲ್ಲಿ ಬೇ ಎಲೆಗಳ ಪಾತ್ರ ಹಿರಿದು.

ಕಪ್‌ಗಳನ್ನು ಹೊಳೆಯಿಸಲು ವಿನೇಗರ್:

ಕಪ್‌ಗಳನ್ನು ಹೊಳೆಯಿಸಲು ವಿನೇಗರ್:

ಬಿಳಿ ವಿನೇಗರ್ ಅನ್ನು ಬಳಸಿ ಮೆತ್ತಿಕೊಂಡಿರುವ ಕೊಳೆಯನ್ನು ನಿವಾರಿಸಿ. ಸೆರಾಮಿಕ್ ಕಪ್ ಹಾಗೂ ಪೋಟ್ಸ್‌ಗಳಿಂದ ಕಾಫಿ ಕಲೆಗಳನ್ನು ಹೋಗಲಾಡಿಸಲು ವಿನೇಗರ್ ಒಂದು ನೈಸರ್ಗಿಕ ಸಾಮಾಗ್ರಿಯಾಗಿದೆ.

ರೆಫ್ರಿಜರೇಟರ್‌ಗಾಗಿ ಗ್ರೀನ್ ಟೀ:

ರೆಫ್ರಿಜರೇಟರ್‌ಗಾಗಿ ಗ್ರೀನ್ ಟೀ:

ರೆಫ್ರಿಜರೇಟರ್‌ನಿಂದ ಹೊರಬರುವ ದುರ್ಗಂಧ ಹೋಗಲಾಡಿಸಲು ಉತ್ತಮ ನೈಸರ್ಗಿಕ ಪರಿಹಾರ ನೀಡುವ ಸಾಮಾಗ್ರಿ ಗ್ರೀನ್ ಟೀಯಾಗಿದೆ. ಗ್ರೀನ್ ಟೀ ಎಲೆಗಳನ್ನು ಒಂದು ಪಾತ್ರೆಯಲ್ಲಿ ಮುಚ್ಚದೆ ಫ್ರಿಡ್ಜ್‌ನಲ್ಲಿ ತೆಗೆದಿರಿಸಿ.

ಒಡೆದ ಲೋಟಕ್ಕೆ ಬ್ರೆಡ್:

ಒಡೆದ ಲೋಟಕ್ಕೆ ಬ್ರೆಡ್:

ಬಿಳಿ ಬ್ರೆಡ್‌ಗೆ ಅಂಟುವ ಪ್ರವೃತ್ತಿಯನ್ನು ಹೊಂದಿದೆ.ಮುಂದಿನ ಬಾರಿ ನಿಮ್ಮ ಕೈಯಿಂದ ಗಾಜಿನ ಲೋಟ ಒಡೆದರೆ, ಬ್ರೆಡ್ ತುಣುಕುಗಳನ್ನು ಬಳಸಿ ಗಾಜಿನ ಚೂರುಗಳನ್ನು ಆರಿಸಿ.

ಸಾಕುಪ್ರಾಣಿಗಳ ಕೋಟ್‌ಗಾಗಿ ಜೋಳದ ಗಂಜಿ:

ಸಾಕುಪ್ರಾಣಿಗಳ ಕೋಟ್‌ಗಾಗಿ ಜೋಳದ ಗಂಜಿ:

ನಿಮ್ಮ ಸಾಕುಪ್ರಾಣಿಗಳ ಕೋಟ್ ಜಿಡ್ಡಾಗಿದೆಯೇ? ನೀವು ಮಾಡಬೇಕಾದ್ದು ಇಷ್ಟೇ ನಿಮ್ಮ ಪ್ರಾಣಿಯ ಕೋಟ್‌ಗೆ ಜೋಳದ ಗಂಜಿಯ ಒಂದು ಹನಿಯನ್ನು ಹಾಕಿ. ನಿಮ್ಮ ಪ್ರಾಣಿಯ ಕೋಟ್ ಹೊಳೆಯುವುದನ್ನು ನೋಡಿ.

ಬೆಳ್ಳಿ ಪಾತ್ರೆಗಳಿಗೆ ಬಾಳೆಹಣ್ಣು ಸಿಪ್ಪೆ:

ಬೆಳ್ಳಿ ಪಾತ್ರೆಗಳಿಗೆ ಬಾಳೆಹಣ್ಣು ಸಿಪ್ಪೆ:

ಬೆಳ್ಳಿ ಪಾತ್ರೆಯ ಹೊಳಪು ಮಸುಕಾಗಿದ್ದರೆ ಬಾಳೆಹಣ್ಣು ಸಿಪ್ಪೆಯನ್ನು ಅವುಗಳ ಮೇಲೆ ಉಜ್ಜಿ ಅವುಗಳನ್ನು ಹೊಳಪುಗೊಳಿಸಿ.

ಟಾಯ್ಲೇಟ್‌ಗಾಗಿ ವೋಡ್ಕಾ:

ಟಾಯ್ಲೇಟ್‌ಗಾಗಿ ವೋಡ್ಕಾ:

ನಿಮ್ಮ ಬಾತ್‌ರೂಮ್ ಹಾಗೂ ಟಾಯ್ಲೇಟ್ ಅನ್ನು ಸ್ವಚ್ಛಗೊಳಿಸಲು ಕಡಿಮೆ ವೆಚ್ಚದ ವೋಡ್ಕಾ ಮಹತ್ತರ ಪ್ರಭಾವವನ್ನು ಬೀರುತ್ತದೆ. ಇತರ ದುಬಾರಿ ಉತ್ಪನ್ನಗಳಿಗೆ ಹೋಲಿಸಿದರೆ ಇದು ಅಧಿಕ ಪರಿಣಾಮಕಾರಿ.

ಸಿಂಕ್‌ಗಳನ್ನು ಹೊಳೆಯಿಸಲು ಬೇಕಿಂಗ್ ಪೌಡರ್:

ಸಿಂಕ್‌ಗಳನ್ನು ಹೊಳೆಯಿಸಲು ಬೇಕಿಂಗ್ ಪೌಡರ್:

ಬೇಕಿಂಗ್ ಸೋಡಾ ಮತ್ತು ವಿನೇಗರ್ ಅನ್ನು ಬಳಸಿ ನಿಮ್ಮ ಸಿಂಕ್ ಅನ್ನು ಹೊಳೆಯಿಸಿ. ಈ ಎರಡೂ ಸಾಮಾಗ್ರಿಗಳನ್ನು ಬಳಸಿ ಕೊಳೆಯನ್ನು ನಿವಾರಿಸಿ.

ಟೊಮೇಟೋ:

ಟೊಮೇಟೋ:

ನಿಮ್ಮ ತಾಮ್ರದ ಪಾತ್ರೆಗಳನ್ನು ಬೆಳ್ಳಗೆ ಮಾಡುವ ಸಾಮರ್ಥ್ಯ ಟೊಮೇಟೋ ಹಣ್ಣಿಗಿದೆ. ಅರ್ಧ ಕತ್ತರಿಸಿದ ಟೋಮೇಟೋವನ್ನು ಬಳಸಿಕೊಂಡು ತಾಮ್ರದ ಪಾತ್ರೆಯನ್ನು ಹೊಳೆಯಿಸಿ. ಟೊಮೇಟೋದಲ್ಲಿರುವ ನೈಸರ್ಗಿಕ ಏಸಿಡಿಟಿ ಅಂಶಗಳು ತಾಮ್ರದ ಪಾತ್ರೆಯನ್ನು ಫಳಫಳನೆ ಹೊಳೆಯಿಸುತ್ತದೆ.

ಸ್ಟೀಲ್ ಸ್ವಚ್ಛೊಳಿಸಲು ಸೌತೆಕಾಯಿ:

ಸ್ಟೀಲ್ ಸ್ವಚ್ಛೊಳಿಸಲು ಸೌತೆಕಾಯಿ:

ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆ ಮಿನುಗಲು ಸೌತೆಕಾಯಿಯನ್ನು ಬಳಸಿ. ನಿಮ್ಮ ಮನೆಯನ್ನು ನೈಸರ್ಗಿಕವಾಗಿ ಮಿರುಗಿಸುವ ಸಾಮರ್ಥ್ಯ ಸೌತೆಕಾಯಿಗಿದೆ.

English summary

16 Best Foods That Can Clean Your Home

The reason why you should clean your home with natural ingredients is because it is safe and there are no side effects. Did you know that there are certain types of foods that can clean your house leaving a perfect aura and beautiful shine too?
X
Desktop Bottom Promotion