For Quick Alerts
ALLOW NOTIFICATIONS  
For Daily Alerts

ಶೂ ದೀರ್ಘಕಾಲ ಬಾಳಿಕೆ ಬರಲು ಕ್ಲೀನಿಂಗ್ ಟಿಪ್ಸ್

|

ಚಪ್ಪಲಿಯಷ್ಟು ಸುಲಭವಾಗಿ ಶೂ ಕ್ಲೀನಿಂಗ್ ಮಾಡಲು ಸಾಧ್ಯವಿಲ್ಲ, ಆದರೆ ಮಿರ ಮಿರ ಮಿನುಗುವ ಶೂ ಧರಿಸಿದರೆ ಮಾತ್ರ ಆಕರ್ಷಕ ಲುಕ್ ಸಿಗುವುದು. ಕೆಲವೊಂದು ಶೂ ನೀರಿನಲ್ಲಿ ತೊಳೆಯಬಹುದು. ಲೆದರ್ ಶೂ ಆಗಿದ್ದರೆ ತೊಳೆಯಲು ಸಾಧ್ಯವಿಲ್ಲ. ತೊಳೆಯಲು ಸಾಧ್ಯವಾಗದ ಶೂಗಳನ್ನು ಹೊಸ ಶೂ ರೀತಿಯಲ್ಲಿ ಕಾಣುವಂತೆ ಮಾಡುವ ಟಿಪ್ಸ್ ತಿಳಿಯಬೇಕೆ? ಹಾಗಾದರೆ ಮುಂದೆ ಓದಿ:

ಮೊದಲಿಗೆ ಲೆದರ್ ಶೂ ಅಧಿಕ ಕಾಲ ಬಾಳಿಕೆ ಬರಲು ಮತ್ತು ನೋಡಲು ಆಕರ್ಷಕವಾಗಿ ಕಾಣಲು ಅದರ ಕ್ಲೀನಿಂಗ್ ಯಾವ ರೀತಿಯಲ್ಲಿ ಮಾಡಬೇಕೆಂದು ನೋಡೋಣವೇ?

Tips To Clean Shoes n Make It Shine

ಲೆದರ್ ಶೂ ಕ್ಲೀನಿಂಗ್ ಟಿಪ್ಸ್

* ಮೊದಲಿಗೆ ಶೂ ಲೇಸ್ ಬಿಚ್ಚಿ ಅದನ್ನು ಮೃದುವಾದ ಬಟ್ಟೆಯಿಂದ ಒರೆಸಿ, ನಂತರ ಶೂ ಒರೆಸಿ. ಪ್ರತೀಬಾರಿ ಶೂ ಹಾಕುವಾಗ ಮತ್ತು ಬಿಚ್ಚಿ ಇಡುವಾಗ ಈ ರೀತಿಯಲ್ಲಿ ಅದರ ದೂಳು ಒರೆಸಿ ಇಡಿ.

* ಬಟ್ಟೆಗೆ ಸ್ವಲ್ಪ ನೀರು ಹಾಕಿ ಉಪ್ಪು ಹಾಕಿ ಚೆನ್ನಾಗಿ ಉರಿಸಿ ಒಣಗಲು ಇಡಿ. ಹೀಗೆ ಒಣಗಲು ಇಡುವಾಗ ತುಂಬಾ ಬಿಸಿಲಿನಲ್ಲಿ ಇಡಬೇಡಿ, ಶೂನಲ್ಲಿ ಬಿರುಕು ಕಂಡು ಬರುವುದು.

* ಲೆದರ್ ಶೂ ಅನ್ನು ಅಪರೂಪಕ್ಕೆ ಬಳಸುವುದಾದರೆ ತಿಂಗಳಿಗೊಮ್ಮೆ ಒರೆಸಿದರೂ ಸಾಕು. ಲೆದರ್ ಶೂಗೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಕೂಡ ಒರೆಸಬಹುದು.

ಈ ಟಿಪ್ಸ್ ಪಾಲಿಸಿದರೆ ಲೆದರ್ ಶೂ ಮಿರ ಮಿರ ಮಿಂಚುವುದು.

sneakers ಮತ್ತು canvas ಶೂ ಕ್ಲೀನ್ ಮಾಡಲು ಟಿಪ್ಸ್:
* ಬಳಕೆ ಮಾಡಿದ ನಂತರ ಅದರಲ್ಲಿರುವ ಮಣ್ಣನ್ನು ಹೋಗಲಾಡಿಸಲು ಬ್ರಷ್ ಹಾಕಿ ತಿಕ್ಕಿದರೆ ಅಥವಾ ಬಟ್ಟೆಯಿಂದ ಒರೆಸಿದರೆ ಶೂ ಕ್ಲೀನ್ ಆಗುವುದು.
* ಅಂಟಿ ಹಿಡಿದ ಕೊಳೆಯನ್ನು ಹೋಗಲಾಡಿಸಲು ಸ್ವಲ್ಪ ಹತ್ತಿಗೆ ಮದ್ಯ ಹಾಕಿ ತಿಕ್ಕಿದರೆ ಸಾಕು ಶೂ ಕ್ಲೀನ್ ಆಗುವುದು. ಅಪರೂಪಕ್ಕೆ ಅದರ ಮೇಲ್ಮೆಯನ್ನು ಬ್ರೆಷ್ ನಿಂದ ತಿಕ್ಕಿ, ನೀರು ಹಾಕಿ ತೊಳೆದು ಒಣಗಿಸಲೂ ಬಹುದು.
* ಶೂ ಒಣಗಿಸುವಾಗ ನೇರವಾಗಿ ಸೂರ್ಯನ ಬಿಸಿಲು ಬೀಳುವ ಜಾಗದಲ್ಲಿ ಇಟ್ಟು ಒಣಗಿಸಬೇಡಿ.
* ನಂತರ ಕಲರ್ ಲೆಸ್ ವ್ಯಾಕ್ಸ್ ಅಥವಾ ಕ್ರಿಮ್ ರೀತಿಯ ಶೂ ಪಾಲಿಷ್ ಹಚ್ಚಿ ತಿಕ್ಕಿ ಇಟ್ಟರೆ ಶೂ ಹೊಸ ಶೂನಂತೆ ಕಾಣುವುದು.

English summary

Tips To Clean Shoes n Make It Shine

Shoes tend to get dirty and damaged too often requiring regular care and maintenance to increase their life. Maintaining your shoes as new requires some care, little attention and work.
 
X
Desktop Bottom Promotion