For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆ ಎಕ್ಸಾಸ್ಟ್ ಫ್ಯಾನ್ ಕ್ಲೀನ್ ಮಾಡೋದು ಸುಲಭ

|
Tips to Remove Oil from Fan
ಅಡುಗೆ ಮನೆ ಎಂದ ಮೇಲೆ ಎಣ್ಣೆ, ಧೂಳು ಮಾಮೂಲಿ. ಅದರಲ್ಲೂ ಅಡುಗೆ ಮನೆಯಲ್ಲಿ ಹಾಕಿರುವ ಎಕ್ಸಾಸ್ಟ್ ಫ್ಯಾನ್ ನಲ್ಲಿ ಎಣ್ಣೆ, ಗ್ರೀಸ್ ಬೇಗ ಸೇರಿಕೊಳ್ಳುತ್ತೆ. ಈ ಫ್ಯಾನನ್ನು ಸ್ವಚ್ಚಗೊಳಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದ ಫ್ಯಾನನ್ನು ಶುಚಿಗೊಳಿಸಬೇಕಾದ ಸುಲಭ ಮಾರ್ಗ ಇಲ್ಲಿದೆ.

ಫ್ಯಾನ್ ಕ್ಲೀನ್ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿವೆ.

1. ಫ್ಯಾನನ್ನು ಉಪಯೋಗಿಸದೆ ಇದ್ದ ಸಂದರ್ಭದಲ್ಲಿ ಫ್ಯಾನ್ ಸ್ವಿಚ್ ಅನ್ನು ತೆಗೆದಿಡಬೇಕು. ಫ್ಯಾನ್ ಶುದ್ಧಗೊಳಿಸಲು ಮೊದಲು ಫ್ಯಾನಿನ ನಟ್ ಗಳನ್ನು ಬಿಚ್ಚಿ ಪೂರ್ತಿ ಸಲಕರಣೆಗಳನ್ನು ಒಂದೊಂದಾಗಿ ಬಿಚ್ಚಬೇಕು.

2. ಬಿಸಿ ನೀರಿನಲ್ಲಿ ಡಿಟರ್ಜೆಂಟ್ ಬೆರೆಸಿ 15-20 ನಿಮಿಷ ಫ್ಯಾನ್ ನ ಸಲಕರಣೆಗಳನ್ನು ಆ ನೀರಿನಲ್ಲಿ ನೆನೆಸಬೇಕು. ನಂತರ ಮೆದುವಾದ ಬ್ರಶ್ ನಿಂದ ಅಥವಾ ಮೆದುವಾದ ನಾರಿನಿಂದ ಫ್ಯಾನನ್ನು ಉಜ್ಜಿದರೆ ನಿಧಾನವಾಗಿ ಕಲೆ ಬಿಡುತ್ತದೆ.

3. ಬಿಸಿ ನೀರನ್ನು ಉಪಯೋಗಿಸಿದರೂ ಕೂಡ ಎಣ್ಣೆ ಜಿಡ್ಡು ಹೋಗದಿದ್ದರೆ ಅತಿ ಹೆಚ್ಚು ಹರಿತವಲ್ಲದ ಚಾಕನ್ನು ಉಪಯೋಗಿಸಿ ಆ ಎಣ್ಣೆ ಅಂಟನ್ನು ತೆಗೆಯಬಹುದು. ಆದರೆ ಹೆಚ್ಚು ಒತ್ತಡ ಹಾಕದೆ ಉಜ್ಜಬೇಕು.

4. ಫ್ಯಾನನ್ನು ಶುದ್ಧಗೊಳಿಸಲು ನಿಂಬೆರಸವನ್ನು ಉಪಯೋಗಿಸಬಹುದು. ಇದು ಎಣ್ಣೆ ಜಿಡ್ಡನ್ನು ಸುಲಭವಾಗಿ ಹೋಗಿಸಲು ಸಹಾಯ ಮಾಡುತ್ತದೆ.

5. ಅಮೋನಿಯಾ ಮತ್ತು ಅಡುಗೆ ಸೋಡವನ್ನು ಬಿಸಿ ನೀರಿನಲ್ಲಿ ಬೆರೆಸಿ 10-15 ನಿಮಿಷ ಫ್ಯಾನ್ ಸಲಕರಣೆಗಳನ್ನು ನೆನೆಸಿ ಮೆದುವಾದ ಬ್ರಶ್ ನಿಂದ ಉಜ್ಜಿದರೂ ಎಣ್ಣೆ ಕಲೆ ಬೇಗನೆ ತೊಲಗುತ್ತದೆ.

6. ವೆನಿಗರ್ ಕೂಡ ಫ್ಯಾನ್ ಕ್ಲೀನ್ ಮಾಡಲು ತುಂಬಾ ಸಹಕಾರಿ. ಬಿಸಿ ನೀರಿನಲ್ಲಿ ವೆನಿಗರ್ ಬೆರೆಸಿ ಆ ನೀರಿನಲ್ಲಿ ಫ್ಯಾನನ್ನು ಉಜ್ಜಿದರೆ ತುಂಬಿಕೊಂಡಿದ್ದ ಕೊಳೆ ಅತಿ ಬೇಗನೆ ಮಾಯವಾಗುತ್ತದೆ.

English summary

How to Clean Exhaust Fan | Tips to Remove Oil from Fan | ಅಡುಗೆ ಮನೆ ಎಕ್ಸಾಸ್ಟ್ ಫ್ಯಾನ್ ಶುದ್ಧಗೊಳಿಸುವುದು ಹೇಗೆ | ಫ್ಯಾನ್ ಮೇಲಿನ ಎಣ್ಣೆ ಜಿಡ್ಡು ತೊಲಗಿಸುವ ಸುಲಭೋಪಾಯ

The kitchen exhaust fan collects grease and lot of oil while cooking. These stains or rather oil coat on the exhaust fan doesn't go off easily therefore keeping the ventilation dirty and unhygienic. Following are ways to clean kitchen exhaust fan at home.
Story first published: Monday, October 3, 2011, 15:35 [IST]
X
Desktop Bottom Promotion