For Quick Alerts
ALLOW NOTIFICATIONS  
For Daily Alerts

ನಿಮಗೆ ಈವರೆಗೂ ತಿಳಿದಿರದ ಸಿಲಿಕಾ ಜೆಲ್‌ನ ಉಪಯೋಗಗಳು

|

ಹಲವಾರು ಸಿಂಪಲ್‌ ತಂತ್ರಗಳು ದೊಡ್ಡ ದೊಡ್ಡ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬುದನ್ನು ನೀವು ಒಪ್ಪುತ್ತೀರಾ?. ಇಂಥಾ ಒಂದು ಸರಳ ಹಾಗೂ ಹಲವರಿಗೆ ತಿಳಿದಿರದ ಸಲಹೆಯೊಂದನ್ನು ನಾವಿಂದು ನಿಮಗೆ ಹೇಳಿಲಿದ್ದೇವೆ.

ಸಾಮಾನ್ಯ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳು, ಅಟಿಕೆಗಳು ಸೇರಿದಂತೆ ಹಲವು ಪ್ರಾಡಕ್ಟ್‌ಗಳನ್ನು ಖರೀದಿ ಮಾಡಿದಾಗ ಅದರ ಬಾಕ್ಸ್‌ನಲ್ಲಿ ಸಣ್ಣದಾದ ಸಿಲಿಕಾ ಜೆಲ್‌ ಅನ್ನು ನೋಡಿರುತ್ತೀರಾ. ಇದನ್ನು ಕಸ ಎಂದು ಬಿಸಾಡುವವರ ಸಂಖ್ಯೆ ಏನು ಕಮ್ಮಿ ಇಲ್ಲ. ಆದರೆ ಇದರ ಉಪಯೋಗ ತಿಳಿದರೆ ನೀವು ಇದನ್ನು ಎಂದಿಗೂ ಬಿಸಾಡುವುದಿಲ್ಲ.

ಹೌದು ಸಿಲಿಕಾ ಜೆಲ್ ಪ್ಯಾಕೆಟ್‌ಗಳು ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇದನ್ನು ನಿಮ್ಮ ಮನೆಯಲ್ಲಿ ಹೆಚ್ಚು ತೇವಾಂಶ ಇರುವ ಪ್ರದೇಶಗಳು, ಬಾಟಲಿಗಳು, ಬಾಕ್ಸ್‌ಗಳು ಅಥವಾ ಶೂ ಸ್ಟ್ಯಾಂಡ್‌ ಸೇರಿಂದತೆ ಹಲವೆಡೆ ಇಡುತ್ತಾರೆ. ನಾವು ನಿತ್ಯ ಮನೆಗಳಲ್ಲಿ ಸಿಲಿಕಾ ಜೆಲ್‌ ಅನ್ನು ಎಲ್ಲೆಲ್ಲಿ ಬಳಸಬಹುದು, ಇದು ಯಾವೆಲ್ಲಾ ವಸ್ತುಗಳನ್ನು ಸಂರಕ್ಷಿಸುತ್ತದೆ ನಿಮಗೆ ತಿಳಿಸಲಿದ್ದೇವೆ, ಇದನ್ನು ತಿಳಿದು ಅವುಗಳನ್ನು ಎಸೆಯುವುದರ ಬದಲಿಗೆ ಅವುಗಳನ್ನು ಬಳಸಲು ಪ್ರಾರಂಭಿಸಿ.

ನೀರಿನಲ್ಲಿ ಬಿದ್ದ ಮೊಬೈಲ್‌ ಆನ್‌ ಮಾಡಲು

ನೀರಿನಲ್ಲಿ ಬಿದ್ದ ಮೊಬೈಲ್‌ ಆನ್‌ ಮಾಡಲು

ಇದು ಎಲ್ಲರಿಗೂ ತಿಳಿದಿರಲೇಬೇಕಾದ ಅತ್ಯಂತ ಅಗತ್ಯವಾದ ಜ್ಞಾನವಾಗಿದೆ. ನಾವು ಎಷ್ಟೋ ಬಾರಿ ಆಕಸ್ಮಿಕವಾಗಿ ನಮ್ಮ ಫೋನ್ ಅನ್ನು ನೀರಿನಲ್ಲಿ ಬೀಳಿಸಿದ್ದೇವೆ ಅಥವಾ ನೀರರು, ಜ್ಯೂಸ್‌ ಮೊಬೈಲ್‌ ಮೇಲೆ ಬಿದ್ದು ಆಫ್‌ ಆಗುವುದು ಸಹಜ. ಇದಕ್ಕೆ ಪರಿಹಾರ ಏನು ಗೊತ್ತಾ? ಬಹಳ ಸಿಂಪಲ್‌. ಫೋನ್‌ನಿಂದ ಬ್ಯಾಟರಿ ಮತ್ತು ಯಾವುದೇ ಮೆಮೊರಿ ಕಾರ್ಡ್‌ಗಳನ್ನು ತೆಗೆದುಹಾಕಿ ನಂತರ ಅದನ್ನು ಸಿಲಿಕಾ ಜೆಲ್ ಪ್ಯಾಕೆಟ್‌ಗಳಿಂದ ತುಂಬಿದ ಬೌಲ್‌ನಲ್ಲಿ ಹಾಕಿ. ಒಂದು ರಾತ್ರಿ ಇಡೀ ಮೊಬೈಲ್ ಆನ್‌ ಮಾಡದೇ ಹಾಗೆಯೇ ಇಡಿ ಇದು ಮೊಬೈಲ್‌ನಲ್ಲಿರುವ ನೀರನ್ನು ಎಳೆದುಕೊಳ್ಳಲು ಸಹಾಯ ಮಾಡುತ್ತದೆ. ಸಿಲಿಕಾ ಜೆಲ್‌ ಇಲ್ಲದಿದ್ದರೆ ಬದಲಾಗಿ ಅಕ್ಕಿ ಕೂಡ ಬಳಸಬಹುದು.

ಕ್ಯಾಮೆರಾ ರಕ್ಷಣೆಗೆ

ಕ್ಯಾಮೆರಾ ರಕ್ಷಣೆಗೆ

ಕ್ಯಾಮೆರಾ ಅಥವಾ ಅದರ ಲೆನ್ಸ್‌ ಮೇಲೆ ತೇವಾಂಶ ಅಥವಾ ಮಂಜು ಗೆರೆಗಳು ಕ್ಯಾಮೆರಾವನ್ನು ಹಾಳುಮಾಡುತ್ತದೆ, ಅದರ ಬ್ಯಾಗ್‌ ಅನ್ನು ಸಹ ಶೀಘ್ರ ಬೂಜು ಹಿಡಿಯುವಂತೆ ಮಾಡುತ್ತದೆ. ಇದನ್ನು ತಪ್ಪಿಸುವ ಅತ್ಯುತ್ತಮ ತಂತ್ರವೆಂದರೆ ಕ್ಯಾಮರಾ ಬ್ಯಾಗ್‌ನಲ್ಲಿ ಸದಾ ಒಂದೆರಡು ಪ್ಯಾಕೆಟ್ ಸಿಲಿಕಾ ಜೆಲ್ ಅನ್ನು ಇಡಬೇಕು. ಇದು ಎಲ್ಲಾ ಹೆಚ್ಚುವರಿ ನೀರನ್ನು ಒಣಗಿಸುವ ಗುಣವನ್ನು ಹೊಂದಿದೆ.

ರೇಜರ್ ಬ್ಲೇಡ್‌ಗಳು

ರೇಜರ್ ಬ್ಲೇಡ್‌ಗಳು

ಆಕ್ಸಿಡೀಕರಣ ಮತ್ತು ತೇವಾಂಶವು ರೇಜರ್ ಬ್ಲೇಡ್‌ಗಳು ಮಂದವಾಗುವುದಕ್ಕೆ ಕಾರಣ. ಅದಕ್ಕಾಗಿ ಶೇವಿಂಗ್ ಮಾಡಿದ ನಂತರ ನಿಮ್ಮ ರೇಜರ್ ಅನ್ನು ಬ್ಲಾಟ್ ಮಾಡಿ ಮತ್ತು 4 -5 ಸಿಲಿಕಾ ಜೆಲ್ ಪ್ಯಾಕೆಟ್‌ಗಳನ್ನು ಹೊಂದಿರುವ ಮುಚ್ಚಿದ ಟಪ್ಪರ್‌ವೇರ್‌ನಲ್ಲಿ ರೇಜರ್ ಅನ್ನು ಸಂಗ್ರಹಿಸಿ.

ಬಟ್ಟೆಗಳ ನಡುವೆ

ಬಟ್ಟೆಗಳ ನಡುವೆ

ನೀವು ಹೊಲಿಯಲು ಅಥವಾ ಕರಕುಶಲ ಯೋಜನೆಗಳಿಗೆ ಬಟ್ಟೆಯನ್ನು ಬಳಸಲು ಬಯಸಿದರೆ ಅಥವಾ ನಿಮ್ಮ ವಾರ್ಡ್‌ರೋಬ್‌ನಲ್ಲಿ ತೇವಾಂಶವನ್ನು ಹೊರಗಿಡಲು ಪ್ಲಾಸ್ಟಿಕ್ ಅಥವಾ ಜಿಪ್‌ಲಾಕ್ ಚೀಲದಲ್ಲಿ ಬಟ್ಟೆಗಳ ನಡುವೆ ಕೆಲವು ಸಿಲಿಕಾ ಪ್ಯಾಕೆಟ್‌ಗಳನ್ನು ಇರಿಸಿ.

ಮೇಕಪ್ ಕಿಟ್

ಮೇಕಪ್ ಕಿಟ್

ಮೇಕಪ್‌ ಸಾಮಾಗ್ರಿಗಳನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡುವುದೇ ದೊಡ್ಡ ಕೆಲಸವಾಗಿರುತ್ತದೆ. ತೇವಾಂಶ ಇರುವ ಕಡೆ ಇಟ್ಟರಂತೂ ಶೀಘ್ರ ಹಾಳಾಗುತ್ತದೆ ಎಂಬ ಭಯ. ಇದನ್ನು ತಡೆಯಲು ಎಲ್ಲಾ ಕಾಲಮಾನದಲ್ಲೂ ನಿಮ್ಮ ಮೇಕಪ್‌ ಕಿಟ್ ತೇವಾಂಶದಿಂದ ಸಂರಕ್ಷಿಸಲು ಕಿಟ್‌ ಒಳಗೆ ಒಂದಷ್ಟು ಸಿಲಿಕಾ ಜೆಲ್‌ ಪ್ಯಾಕೆಟ್‌ಗಳನ್ಉ ಇಡಿ, ಅದು ಸಾಕಷ್ಟು ನೀರು ಮತ್ತು ಯಾವುದೇ ಸೋರಿಕೆಯನ್ನು ತಡೆದುಕೊಳ್ಳುವ ತೇವಾಂಶದ ಹೋರಾಟದ ಸಾಮರ್ಥ್ಯವನ್ನು ಹೊಂದಿದೆ.

English summary

Uses Of Silica Gel Packets in Kannada

Here we are discussing about Uses Of Silica Gel Packets in Kannada Multiple Desiccant silica gel packets, with dark tone, used for moisture protection in the food industry, on packaging has the label clearly labeled "Desiccant, Silica gel, Throw Away, Do not eat". Read more.
Story first published: Friday, December 3, 2021, 13:51 [IST]
X
Desktop Bottom Promotion