For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ಬೇಕಿಂಗ್ ಸೋಡಾದಿಂದ ಈ ವಸ್ತುಗಳನ್ನು ಕ್ಲೀನ್ ಮಾಡಲೇಬೇಡಿ

|

ಮನೆಯಲ್ಲಿನ ವಸ್ತುಗಳು ಎಂದ ಮೇಲೆ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದರಂತೆಯೇ ಅವುಗಳನ್ನು ಸ್ವಚ್ಛ ಮಾಡಲು ಅನೇಕ ವಸ್ತುಗಳ ಅಥವಾ ಕ್ಲೀನರ್ ಗಳ ಬಳಕೆ ಮಾಡುತ್ತಾರೆ.

dont clean this with baking soda

ನೀವು ಅಡುಗೆಗಾಗಿ ಬಳಸುವ ಬೇಕಿಂಗ್ ಸೋಡಾ ಕೆಲವೊಂದು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ವಚ್ಛತೆಯ ಕಾರ್ಯಕ್ಕೆ ಇದು ಬಹಳ ಉಪಯೋಗವಾಗಬಹುದು ಎಂಬ ನಂಬಿಕೆಯಿಂದ ಇದನ್ನು ಉಪಯೋಗಿಸಲು ಮುಂದಾಗುವ ಮುಂಚೆ ಈ ಲೇಖನವನ್ನೊಮ್ಮೆ ಪೂರ್ತಿ ಓದಿ.

ಗ್ಲಾಸ್ ವಸ್ತುಗಳು

ಗ್ಲಾಸ್ ವಸ್ತುಗಳು

ನಿಮ್ಮ ಮನೆಯಲ್ಲಿನ ಯಾವುದೇ ಗಾಜಿನ ವಸ್ತುವಿನ ಮೇಲ್ಮೈ ಸಹಜವಾಗಿಯೇ ಬಹಳ ನುಣುಪಾಗಿರುತ್ತದೆ. ಮುಟ್ಟಿದರೆ ಜಾರುವಂತಹ ಸ್ವಭಾವ ಹೊಂದಿರುತ್ತದೆ. ಬೇಕಿಂಗ್ ಸೋಡಾ ಒಂದು ಅಪಘರ್ಷಕ ವಸ್ತುವಾಗಿದ್ದು, ಇದರಿಂದ ಸ್ವಚ್ಛಗೊಳಿಸಲು ಮುಂದಾದಾಗ, ಇದು ನಿಮ್ಮ ನೆಚ್ಚಿನ ಗ್ಲಾಸ್ ವಸ್ತುಗಳನ್ನು ಅಥವಾ ಕನ್ನಡಿಯನ್ನು ಗೀಚಿ ಹಾಕುತ್ತದೆ. ಗಾಜಿನ ವಸ್ತುಗಳು, ಗಾಜಿನ ಕಿಟಕಿ ಅಥವಾ ಕನ್ನಡಿಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಆಲೋಚನೆ ಇದ್ದರೆ ವಿನೆಗರ್ ಉಪಯೋಗಿಸಬಹುದು.

ಅಲ್ಲ್ಯೂಮಿನಿಯಂ

ಅಲ್ಲ್ಯೂಮಿನಿಯಂ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಲ್ಲ್ಯೂಮಿನಿಯಂ ವಸ್ತುಗಳು ಇದ್ದೇ ಇರುತ್ತವೆ. ಅಡುಗೆ ಮಾಡುವ ವಸ್ತುಗಳಿಂದ ಹಿಡಿದು ಅನೇಕ ವಸ್ತುಗಳು ಅಲ್ಲ್ಯೂಮಿನಿಯಂ ಅಂಶವನ್ನು ಒಳಗೊಂಡಿರುತ್ತವೆ. ಬೇಕಿಂಗ್ ಸೋಡಾ ಉಪಯೋಗಿಸಿ ಅಲ್ಲ್ಯೂಮಿನಿಯಂ ಪಾತ್ರೆಗಳನ್ನು ಸ್ವಚ್ಛ ಮಾಡಬಹುದು. ಆದರೆ ಸ್ವಚ್ಛ ಮಾಡಿದ ನಂತರ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇಲ್ಲವೆಂದರೆ ಬೇಕಿಂಗ್ ಸೋಡಾ ತನ್ನ ರಾಸಾಯನಿಕ ಅಂಶದಿಂದ ಅಲ್ಯುಮಿನಿಯಂ ಅಂಶವನ್ನು ಒಕ್ಸಿಡೈಸ್ ಮಾಡುತ್ತದೆ. ಇದರಿಂದ ಅಲ್ಯೂಮಿನಿಯಂ ಪಾತ್ರೆಗಳ ಮೇಲ್ಮೈ ಕಂದು ಬಣ್ಣಕ್ಕೆ ತಿರುಗುತ್ತದೆ.

ಸಿರಾಮಿಕ್ ಅಂಶವುಳ್ಳ ಸ್ಟವ್ ನ ಮೇಲ್ಭಾಗ

ಸಿರಾಮಿಕ್ ಅಂಶವುಳ್ಳ ಸ್ಟವ್ ನ ಮೇಲ್ಭಾಗ

ಬೇಕಿಂಗ್ ಸೋಡಾ ಕುಕ್ ಟಾಪ್ ಗಳನ್ನು ಸ್ವಚ್ಛಗೊಳಿಸಲು ಒಳ್ಳೆಯ ವಸ್ತುವೇನೋ ಸರಿ. ಆದರೆ ಯಾವುದೇ ಕಾರಣಕ್ಕೂ ಸಿರಾಮಿಕ್ ಗ್ಲಾಸ್ ಹೊಂದಿರುವ ನುಣ್ಣನೆಯ ಮೇಲ್ಮೈ ಮೇಲೆ ಉಪಯೋಗಿಸಬಾರದು. ಇದು ಕುಕ್ ಟಾಪ್ ನ ಮೇಲ್ಭಾಗದಲ್ಲಿ ಗೀರುಗಳನ್ನು ಉಂಟು ಮಾಡಿ ಬೆಳ್ಳನೆಯ ಪದರ ಎದ್ದು ಕಾಣುವಂತೆ ಮಾಡುತ್ತದೆ. ಆದರೂ ಗೊತ್ತಿಲ್ಲದೆ ನೀವು ಕುಕ್ ಟಾಪ್ ಕ್ಲೀನ್ ಮಾಡಲು ಈಗಾಗಲೇ ಬೇಕಿಂಗ್ ಸೋಡಾ ಉಪಯೋಗಿಸಿದ್ದರೆ ತಕ್ಷಣ ವಿನೆಗರ್ ಬಳಸಿ ಸ್ವಚ್ಛ ಮಾಡಿಬಿಡಿ.

ಮಾರ್ಬಲ್ ಕಲ್ಲುಗಳು

ಮಾರ್ಬಲ್ ಕಲ್ಲುಗಳು

ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಮಾರ್ಬಲ್ ಅಥವಾ ಕ್ವಾರ್ಟ್ಜ್ ಮೇಲ್ಮೈ ಗಳನ್ನು ಬೇಕಿಂಗ್ ಸೋಡಾ ಬಳಸಿ ಕ್ಲೀನ್ ಮಾಡಬಾರದು. ಏಕೆಂದರೆ ಇದು ಕಾಲಕ್ರಮೇಣ ಮಾರ್ಬಲ್ ಮೇಲಿನ ರಕ್ಷಣಾ ಪದರವನ್ನು ಹಾನಿ ಮಾಡಿ ಮಾರ್ಬಲ್ ಅಥವಾ ಕ್ವಾರ್ಟ್ಜ್ ಪದರದ ಮೇಲೆ ಗೀರುಗಳನ್ನು ಉಂಟು ಮಾಡುತ್ತದೆ.

ಕೆಲವೊಂದು ಜಾಲತಾಣಗಳು ಮಾರ್ಬಲ್ ಅಥವಾ ಕ್ವಾರ್ಟ್ಜ್ ಮೇಲ್ಮೈ ಪದರದ ಮೇಲೆ ಸ್ವಚ್ಛ ಮಾಡಲು ಬೇಕಿಂಗ್ ಸೋಡಾ ಬಳಸಬಹುದು ಎಂದು ತಿಳಿಸಿದ್ದರೆ, ಇವುಗಳ ಉತ್ಪಾದನೆ ಮಾಡುವ ಉತ್ಪಾದಕರು ಮಾತ್ರ ಯಾವುದೇ ಕಾರಣಕ್ಕೂ ಬೇಕಿಂಗ್ ಸೋಡಾ ಬಳಸಬಾರದು ಎಂದು ತಿಳಿಸಿದ್ದಾರೆ. ಏಕೆಂದರೆ ಅವರಿಗೆ ತುಂಬಾ ದಿನಗಳ ಕಾಲ ಮಾರ್ಬಲ್ ಮೇಲ್ಮೈ ಪ್ರದೇಶವನ್ನು ಬೇಕಿಂಗ್ ಸೋಡಾ ಬಳಸಿ ಸ್ವಚ್ಛ ಮಾಡುತ್ತಾ ಬಂದರೆ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂದು ತಿಳಿದಿರುತ್ತದೆ.

ಮರದ ಪೀಠೋಪಕರಣಗಳು

ಮರದ ಪೀಠೋಪಕರಣಗಳು

ನಿಮ್ಮ ಮನೆಯ ಯಾವುದೇ ಮರದ ಪೀಠೋಪಕರಣಗಳನ್ನು ಫಿನಿಶಿಂಗ್ ಮಾಡುವಾಗ ಕಾರ್ಪೆಂಟರ್ ಗಳು ಕೆಲವೊಂದು ಸೀಲೆಂಟ್ ಗಳನ್ನು ಬಳಸಿರುತ್ತಾರೆ. ಈ ಕಾರಣದಿಂದ ಅವು ಮರದ ವಸ್ತುಗಳಾದರೂ ಕೂಡ ಪಳಪಳನೆ ಹೊಳೆಯುತ್ತಿರುತ್ತವೆ. ಕ್ಯಾಮೆರಾನ್ ರವರು ಹೇಳುವ ಪ್ರಕಾರ ಮರದ ಪೀಠೋಪಕರಣಗಳ ಮೇಲಿನ ಧೂಳನ್ನು ಸ್ವಚ್ಛ ಮಾಡಲು ಬೇಕಿಂಗ್ ಸೋಡಾ ಉಪಯೋಗಿಸಿದರೆ ಸೀಲೆಂಟ್ ಗಾರುಗಾರಾಗಿ ಪೀಠೋಪಕರಣವನ್ನು ನೋಡಲು ಹಳೆಯದಾದಂತೆ ಕಾಣುವಂತೆ ಮಾಡುತ್ತದೆ. ಆದ್ದರಿಂದ ಬೇಕಿಂಗ್ ಸೋಡಾ ಉಪಯೋಗಿಸುವ ಬದಲು ಬೇಕಾದರೆ ಡೈಲ್ಯೂಟ್ ಆಗಿರುವ ಸೋಪಿನ ಮಿಶ್ರಣವನ್ನು ಬಳಸಬಹುದು.

ಬೆಳ್ಳಿಯ ವಸ್ತುಗಳು

ಬೆಳ್ಳಿಯ ವಸ್ತುಗಳು

ನಿಮ್ಮ ಮನೆಯಲ್ಲಿ ಹಳೆಯ ಕಾಲದ ಬೆಳ್ಳಿಯ ವಿಗ್ರಹಗಳು ಅಥವಾ ಪಾತ್ರೆಗಳು ಅಥವಾ ಇನ್ನಾವುದೇ ಬೆಳ್ಳಿಯ ವಸ್ತುಗಳು ಇದ್ದರೆ ಅವುಗಳು ದಿನ ಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ. ಅವುಗಳನ್ನು ಸ್ವಚ್ಛ ಮಾಡಲು ಬೇಕಿಂಗ್ ಸೋಡಾ ಬಳಸಿದರೆ ಬಹಳ ಬೇಗನೆ ಅದರ ಮೇಲಿನ ಹೊಳಪು ಮಾಯವಾಗುತ್ತದೆ. ಏಕೆಂದರೆ ಬೇಕಿಂಗ್ ಸೋಡಾ ಮೇಲೆ ಹೇಳಿದಂತೆ ಒಂದು ಅಪಘರ್ಷಕ ವಸ್ತುವಾಗಿದ್ದು, ಬೆಳ್ಳಿ ಸಾಮಾನಿನ ಪಟೀನಾವನ್ನು ಸುಲಭವಾಗಿ ಹಾಳು ಮಾಡುತ್ತದೆ. ನಿಮ್ಮ ಮನೆಯ ಬೆಳ್ಳಿ ಸಾಮಾನುಗಳನ್ನು ನೀವೇ ಸ್ವತಃ ಸ್ವಚ್ಛ ಮಾಡಿಕೊಳ್ಳುವ ಬದಲು ವೃತ್ತಿಪರ ಜನರ ಬಳಿ ತೆಗೆದುಕೊಂಡು ಹೋದರೆ ಒಳ್ಳೆಯದು.

ಆಳವಾದ ಬಿರುಕುಗಳುಳ್ಳ ವಸ್ತುಗಳು

ಆಳವಾದ ಬಿರುಕುಗಳುಳ್ಳ ವಸ್ತುಗಳು

ಈ ರೀತಿಯ ವಸ್ತುಗಳನ್ನು ಬೇಕಿಂಗ್ ಸೋಡಾದಿಂದ ಸ್ವಚ್ಛ ಮಾಡಲ್ಪಟ್ಟರೆ ಅವುಗಳು ಒಣಗಿದ ನಂತರ ಬಿಳಿ ಬಣ್ಣದ ಪದರ ಉಂಟಾಗುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇಕಿಂಗ್ ಸೋಡಾದಿಂದ ಸ್ವಚ್ಛ ಮಾಡಬೇಡಿ.

ಮೈ ಚರ್ಮ

ಮೈ ಚರ್ಮ

ಕೇವಲ ಕೆಲವು ವಸ್ತುಗಳಿಗೆ ಮಾತ್ರವಲ್ಲದೆ ನಿಮ್ಮ ದೇಹದ ಚರ್ಮಕ್ಕೂ ಕೂಡ ಬೇಕಿಂಗ್ ಸೋಡಾ ಹಾನಿಯನ್ನು ಉಂಟು ಮಾಡುತ್ತದೆ. ಏಕೆಂದರೆ ನಿಮ್ಮ ದೇಹದ ಚರ್ಮ ಸ್ವಲ್ಪ ಆಮ್ಲೀಯತೆಯ ಗುಣ ಸ್ವಭಾವವನ್ನು ಹೊಂದಿದ್ದರೆ, ಬೇಕಿಂಗ್ ಸೋಡಾ ಬೇಸ್ ಸ್ವಭಾವವನ್ನು ಹೊಂದಿದೆ. ಆದ್ದರಿಂದ ಬೇಕಿಂಗ್ ಸೋಡಾವನ್ನು ನಿಮ್ಮ ಚರ್ಮದ ಮೇಲೆ ನಿತ್ಯ ನಿಯಮಿತವಾಗಿ ಉಪಯೋಗಿಸುತ್ತಾ ಬಂದರೆ ನಿಮ್ಮ ಚರ್ಮದ ನೈಸರ್ಗಿಕ ಆಮ್ಲದ ಮಟ್ಟಗಳನ್ನು ತಟಸ್ಥಗೊಳಿಸುತ್ತದೆ. ಬೇಕಿಂಗ್ ಸೋಡಾದ ಉಪಯೋಗದಿಂದ ಚರ್ಮ ಒಣಗಿದಂತಾಗಿ ಅಲ್ಲಲ್ಲಿ ಒಡೆದುಕೊಂಡಂತೆ ಆಗುತ್ತದೆ.

ತಲೆ ಕೂದಲು

ತಲೆ ಕೂದಲು

ನಿಮ್ಮ ದೇಹದ ಚರ್ಮದಂತೆ ನಿಮ್ಮ ತಲೆ ಕೂದಲಿಗೆ ಬೇಕಿಂಗ್ ಸೋಡಾವನ್ನು ಪ್ರತಿದಿನ ಅಥವಾ ನಿಯಮಿತವಾಗಿ ಬಳಸುತ್ತಾ ಬಂದರೆ ಕೂದಲಿನ ನೈಸರ್ಗಿಕ ಎಣ್ಣೆ ಅಂಶ ಮಾಯವಾಗಿ ಕೂದಲು ಒಣಗಿದಂತಾಗಿ ಅರ್ಧಕ್ಕೆ ಮುರಿದುಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಆದರಿಂದ ಯಾವುದೇ ಕಾರಣಕ್ಕೂ ನಿಮ್ಮ ತಲೆ ಕೂದಲನ್ನು ಬೇಕಿಂಗ್ ಸೋಡಾ ಉಪಯೋಗಿಸಿ ಸ್ವಚ್ಛ ಮಾಡಿಕೊಳ್ಳಬೇಡಿ.

ಚಿನ್ನದ ಪಾಲಿಶ್ ಮಾಡಿರುವ ಪಾತ್ರೆಗಳು ಅಥವಾ ವಸ್ತುಗಳು

ಚಿನ್ನದ ಪಾಲಿಶ್ ಮಾಡಿರುವ ಪಾತ್ರೆಗಳು ಅಥವಾ ವಸ್ತುಗಳು

ಬೇಕಿಂಗ್ ಸೋಡಾವನ್ನು ಚಿನ್ನದ ಶತ್ರು ಎಂದೇ ಹೇಳುತ್ತಾರೆ. ಏಕೆಂದರೆ ಚಿನ್ನದ ಲೋಹ ಬಹಳ ಸೂಕ್ಷ್ಮ ಸ್ವಭಾವ ಹೊಂದಿದ್ದು ಇದರ ಮೇಲೆ ಬೇಕಿಂಗ್ ಸೋಡಾ ತನ್ನ ಪ್ರಭಾವ ಮೆರೆದು ಸಂಪೂರ್ಣವಾಗಿ ಚಿನ್ನದ ಅಂಶವನ್ನೇ ಇಲ್ಲದಂತೆ ಮಾಡಿ ಬಿಡುತ್ತದೆ. ಚಿನ್ನದ ಹೊಳಪನ್ನು ಮಾಯವಾಗುವಂತೆ ಮಾಡಿ ಮೇಲಿನ ಪಾಲಿಶ್ ಇಲ್ಲದಂತೆ ಮಾಡುತ್ತದೆ.

ಮರದ ನೆಲಹಾಸುಗಳು

ಮರದ ನೆಲಹಾಸುಗಳು

ನಿಮ್ಮ ಮನೆಯ ಮರದ ಪೀಠೋಪಕರಣಗಳಂತೆ ಬೇಕಿಂಗ್ ಸೋಡಾ ನಿಮ್ಮ ಮನೆಯಲ್ಲಿನ ಮರದ ನೆಲಹಾಸುಗಳ ಸೀಲೆಂಟ್ ಗಳನ್ನು ಹಾಳು ಮಾಡುತ್ತದೆ. ಆದರಿಂದ ಮರದ ಯಾವುದೇ ವಸ್ತುಗಳನ್ನು ಸ್ವಚ್ಛ ಮಾಡಲು ಅದಕ್ಕೆ ಸಂಬಂಧ ಪಟ್ಟ ವಿಶೇಷವಾದ ಕ್ಲೀನರ್ ಗಳನ್ನು ಬಳಸುವುದು ಸೂಕ್ತ.

English summary

Things You Should Never Clean with Baking Soda

Here we are discussing about these things you should never clean with baking soda. It seems like baking soda can get any job done, but it can actually cause damage when used to clean some surfaces. Read more.
X
Desktop Bottom Promotion