For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಸೋಂಕಿತರ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಹೇಗೆ?

|

ಕೊರೊನಾ 2ನೇ ಅಲೆಯಲ್ಲಿ ಸೋಂಕು ಅತೀ ಬೇಗನೆ ಹರಡುತ್ತಿರುವುದರಿಂದ ಸೋಂಕಿತ ಪ್ರಮಾಣ ಹೆಚ್ಚಾಗಿದೆ. ಸೋಂಕಿತರಲ್ಲಿ ಹೆಚ್ಚಿನವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ, ಅತೀ ಗಂಭೀರ ಸೋಂಕಿಗೆ ಒಳಗಾದವರಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

how to safely dispose your covid-19 waste

ಆಸ್ಪತ್ರೆಯಲ್ಲಿ ಆದರೆ ಸೋಂಕಿತರು ಬಳಸಿದ ಮಾಸ್ಕ್, ಟಿಶ್ಯೂ, ಇತರ ಸಾಧನಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅದೇ ಹೋಂ ಕ್ವಾರಂಟೈನ್‌ನಲ್ಲಿರುವವರು ತಾವು ಬಳಸಿದ ಮಾಸ್ಕ್‌, ಟಿಶ್ಯೂ ಮುಂತಾದ ವಸ್ತುಗಳನ್ನು ಇತರ ಕಸ ಹಾಕುವ ಕಸದ ಬಕೆಟ್ ಅಥವಾ ತೊಟ್ಟಿಯಲ್ಲಿ ಹಾಕುತ್ತಾರೆ. ಇದನ್ನು ಪೌರ ಕಾರ್ಮಿಕರು ಕೊಂಡೊಯ್ಯುತ್ತಾರೆ. ಸೋಂಕಿತರು ಬಳಸಿದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದ ಕಾರಣ ಅವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಇಡೀ ನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆಯೂ ಸೋಂಕಿತರು ಹಾಗೂ ಮನೆಯವರು ಚಿಂತಿಸುವುದು ಕರ್ತವ್ಯ ಹಾಗೂ ಮಾನವೀಯತೆ ಕೂಡ.

ಕೋವಿಡ್‌ 19 ವೇಸ್ಟ್ (ಕಸ) ಸೂಕ್ತ ವಿಲೇವಾರಿ ಹೇಗೆ

ಕೋವಿಡ್‌ 19 ವೇಸ್ಟ್ (ಕಸ) ಸೂಕ್ತ ವಿಲೇವಾರಿ ಹೇಗೆ

CPCB (ದಿ ಸೆಂಟ್ರಲ್ ಪಲ್ಯೂಷನ್ ಕಂಟ್ರೋಲ್‌ ಬೋರ್ಡ್) ಜೂನ್ 17, 2020ಕ್ಕೇ ಇದರ ಕುರಿತು ಸೂಕ್ತ ಮಾರ್ಗದರ್ಶನ ನೀಡಿದೆ.

ಅದರ ಪ್ರಕಾರ ಕೊರೊನಾ ಸೋಂಕಿತರು ಅಥವಾ ಸೋಂಕಿನ ಲಕ್ಷಣವಿದ್ದು ವರದಿ ಇನ್ನಷ್ಟೇ ಬರಬೇಕಾದವರು, ತಾವು ಬಳಸಿದ ಮಾಸ್ಕ್‌, ಗ್ಲೌಸ್ ಮುಂತಾದ ಬಯೋಮೆಡಿಕಲ್ ತ್ಯಾಜ್ಯಗಳನ್ನು ಸಿಟಿ ಮುನ್ಸಿಪಾಲ್ ಕೌನ್ಸಿಲ್ ಅಥವಾ ಟೌನ್‌ ಮುನ್ಸಿಪಾಲ್ ಕೌನ್ಸಿಲ್ ನೀಡುವ ಹಳದಿ ಬಣ್ಣದ ಬ್ಯಾಗ್ ಬಳಸಬೇಕು.

ಬಯೋಮೆಡಿಕಲ್ ವೇಸ್ಟ್ ಅಂದ್ರೆ ಬಳಸಿದ ಮಾಸ್ಕ್‌, ಟಿಶ್ಯೂ, ಸ್ವ್ಯಾಬ್, ರಕ್ತ ಕಲೆಯಾದ ವಸ್ತು, ಸಿರೆಂಜ್, ಔಷಧಗಳು, ಯೂರಿನ್ ಮತ್ತು ಮಲ ಬ್ಯಾಗ್, ರೋಗಿಯ ಶರೀರದ ದ್ರವ ಅಥವಾ ರಕ್ತ ಒರೆಸಿದ ಟಿಶ್ಯೂ ಮುಂತಾವು ..

ಹಳದಿ ಬ್ಯಾಗ್‌ನಲ್ಲಿ ಹಾಕಿ

ಹಳದಿ ಬ್ಯಾಗ್‌ನಲ್ಲಿ ಹಾಕಿ

ರೋಗಿ ಬಾಕಿಯುಳಿಸಿದ ಆಹಾರ, ಆಹಾರದ ಪೊಟ್ಟಣ, ಟೆಟ್ರಾ ಪ್ಯಾಕ್ ಇವುಗಳನ್ನು ಸಾಮಾನ್ಯ ಕಸದ ಬುಟ್ಟಿಗೆ ಹಾಕಿ, ಹಳದಿ ಬ್ಯಾಗ್‌ನಲ್ಲಿ ಹಾಕುವ ಅಗ್ಯತವಿಲ್ಲ.

* ನಂತರ ಹಳದಿ ಬ್ಯಾಗ್‌ ಅನ್ನು ಬಯೋಮೆಡಿಕಲ್ ವೇಸ್ಟ್ (ತ್ಯಾಜ್ಯ) ಸಂಗ್ರಹಿಸುವವರಿಗೆ ಪೌರ ಕಾರ್ಮಿಕರಿಗೆ ಹೇಳಿ ನೀಡಬೇಕು.

ಈ ಬ್ಯಾಗ್ ಎಲ್ಲಿ ಸಿಗುತ್ತೆ

ಮನೆಯಲ್ಲಿ ಕೋವಿಡ್ 19 ಸೋಂಕಿತರಿದ್ದರೆ ನಗರ ಅಥವಾ ಟೌನ್ ಮುನ್ಸಿಪಾಲಿಟಿ ಕೌನ್ಸಿಲ್‌ ಅವರು ನೀಡುತ್ತಾರೆ ಅಥವಾ ನೀವು ಕೇಳಿ ಪಡೆದುಕೊಳ್ಳಬಹುದು.

ತ್ಯಾಜ್ಯ ಪಡೆಯುವವರು ಅಗ್ಯತ ಸುರಕ್ಷತಾ ಕ್ರಮ ಅನುಸರಿಸಬೇಕು

ತ್ಯಾಜ್ಯ ಪಡೆಯುವವರು ಅಗ್ಯತ ಸುರಕ್ಷತಾ ಕ್ರಮ ಅನುಸರಿಸಬೇಕು

ಬಯೋ ಮೆಡಿಕಲ್ ವೇಸ್ಟ್ ಸಂಗ್ರಹಿಸುವವರು ಸರ್ಕಾರದ ಮಾರ್ಗಸೂಚಿ ಪ್ರಕಾತ ಅಗ್ಯತ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ಗ್ಲೌಸ್, ಗಂಬೂಟ್, ಸೇಫ್ಟ್‌ ಗಾಗಲ್ ತ್ರಿಬಲ್ ಲೇಯರ್ ಮಾಸ್ಕ್ ಹೀಗೆ ಎಲ್ಲಾ ಸುರಕ್ಷಿತಾ ಕ್ರಮ ಅನುಸರಿಸಬೇಕು.

ಈ ಬ್ಯಾಗ್‌ ಅನ್ನು ಸೋಡಿಯಂ ಹೈಪೋಕ್ಲೋರೈಟ್ ಸಲ್ಯೂಷನ್ ಹಾಕಿ ಸ್ಯಾನಿಟೈಸ್ ಮಾಡಲಾಗುವುದು.

ಕೊನೆಯದಾಗಿ

ನಗರ ಪಾಲಿಕೆ ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು.

English summary

Here Is How To Safely Dispose Your Covid-19 Waste In kannada

ere is how to safely dispose your covid-19 waste in kannada, read on..
X
Desktop Bottom Promotion