For Quick Alerts
ALLOW NOTIFICATIONS  
For Daily Alerts

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಬಳಸಿಕೊಳ್ಳಿ

|

ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟೀರಿಯಾಗಳಂತೆಯೇ ನಮ್ಮ ಆಹಾರವನ್ನು ಕೊಳೆಸಿ ಹಾಳು ಮಾಡುವ ಬ್ಯಾಕ್ಟೀರಿಯಾಗಳೂ ಇವೆ. ನಾವು ಸೇವಿಸುವ ಆಹಾರಗಳಲ್ಲಿ ಅತಿ ಸುಲಭವಾಗಿ ಹಾಳಾಗುವ ಆಹಾರವೆಂದರೆ ಹಾಲು. ವಾಸ್ತವವಾಗಿ ಹಾಲು ಒಡೆಯುವುದು ಅಂದರೆ ಹಾಲಿನಂಶ ಮತ್ತು ನೀರಿನಂಶವನ್ನು ಬೇರೆ ಮಾಡುವ ಪ್ರಕ್ರಿಯೆಯೇ ಆಗಿದೆಯೇ ಹೊರತು ಇದನ್ನು ಇತರ ಕಾರ್ಯಗಳಿಗೆ ಬಳಸಲಾಗದು ಎಂದೇನಿಲ್ಲ.

Spoiled Milk

ಹಣ್ಣು ತರಕಾರಿಗಳು ಹಾಳಾದರೆ ಇವನ್ನು ಅನಿವಾರ್ಯವಾಗಿ ಎಸೆಯಲೇಬೇಕಾಗುತ್ತದೆ. ಒಡೆದ ಹಾಲನ್ನೂ ಕೆಲವು ಬಗೆಗಳಲ್ಲಿ ಉಪಯೋಗಿಸುವ ಮೂಲಕ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಈ ಮೂಲಕ ಒಡೆದ ಹಾಲಿಗೆ ಅತ್ತು ಪ್ರಯೋಜನವಿಲ್ಲ ಎಂಬ ನಾಣ್ಣುಡಿಯನ್ನು ಕೊಂಚ ಬದಲಿಸಬೇಕಾಗಿ ಬರಬಹುದು.

ಸಾಲಾಡ್ ಅಲಂಕಾರಕ್ಕಾಗಿ

ಸಾಲಾಡ್ ಅಲಂಕಾರಕ್ಕಾಗಿ

ಮುಂದಿನ ಬಾರಿ ಹಾಲು ಒಡೆದಾಗ ಹುಳಿ ಕ್ರೀಂ ಬದಲು ಈ ಹಾಲನ್ನು ನಿಮ್ಮ ಸಾಲಾಡ್ ಮೇಲೆ ಸುರಿದು ಅಲಂಕರಿಸಬಹುದು. ಆದರೆ ಇದಕ್ಕಾಗಿ ಪ್ಯಾಶ್ಚರೀಕರಿಸಿದ ಹಾಲು ಹಾಳಾದರೆ ಬಳಸಬಾರದು, ಕೇವಲ ಪ್ಯಾಶ್ಚರೀಕರಿಸದ ಹಾಲು ಹಾಳಾದರೆ ಮಾತ್ರವೇ ಅನುಸರಿಸಬಹುದು.

ಗಿಡಕ್ಕೆ ಗೊಬ್ಬರವಾಗಿ

ಗಿಡಕ್ಕೆ ಗೊಬ್ಬರವಾಗಿ

ಹಾಲನ್ನು ಒಡೆದ ಬ್ಯಾಕ್ಟೀರಿಯಾಗಳೇ ಮಣ್ಣನ್ನೂ ಒಡೆದು ಫಲವತ್ತಾಗಿಸುವ ಕ್ಷಮತ್ ಹೊಂದಿವೆ. ಹಾಗಾಗಿ ಒಡೆದ ಹಾಲನ್ನು ಹೂಕುಂಡಕ್ಕೆ ಸುರಿಯುವ ಮೂಲಕ ಗಿಡಗಳಿಗೆ ಉತ್ತಮ ಗೊಬ್ಬರ ದೊರಕಿದಂತಾಗುತ್ತದೆ ಮಾತ್ರವಲ್ಲದೇ ಪ್ರಾಣಿಗಳ ಜೀವಕೋಶಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಾಗಿಯೇ ಒದಗಿಸಲು ಸಾಧ್ಯವಾಗುತ್ತದೆ.

ಸಾಕುಪ್ರಾಣಿಗೆ ಆಹಾರ

ಸಾಕುಪ್ರಾಣಿಗೆ ಆಹಾರ

ಒಡೆದ ಹಾಲನ್ನು ನಾವು ಜೀರ್ಣಿಸಿಕೊಳ್ಳಲಾರೆವಾದರೂ ನಮ್ಮ ಸಾಕುಪ್ರಾಣಿಗಳು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು. ಹಾಗಾಗಿ ಇವುಗಳನ್ನು ಸುರಕ್ಷಿತವಾಗಿ ನಮ್ಮ ಸಾಕುಪ್ರಾಣಿಗಳಿಗೆ ಒದಗಿಸಬಹುದು. ಅಥವಾ ಇತರ ಆಹಾರಗಳಾದ ಬಿಸ್ಕತ್ ಮೊದಲಾದವುಗಳ ಜೊತೆಗೆ ಬೆರೆಸಿ ನೀಡಬಹುದು. ಇದರಿಂದ ಪ್ರಾಣಿಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ದೊರಕುತ್ತದೆ.

ಮುಖಲೇಪದ ರೂಪದಲ್ಲಿ

ಮುಖಲೇಪದ ರೂಪದಲ್ಲಿ

ಇದರಲ್ಲಿರುವ ಬ್ಯಾಕ್ಟೀರಿಯಾಗಳು ವಿಶೇಷವಾಗಿ ಚರ್ಮದಾಳದಲ್ಲಿರುವ ಕ್ರಿಮಿ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸುವ ಕ್ಷಮತೆ ಪಡೆದಿವೆ. ಹಾಗಾಗಿ ಒಡೆದ ಹಾಲನ್ನು ಮುಖಲೇಪದ ರೂಪದಲ್ಲಿ ಬಳಸುವ ಮೂಲಕ ಮೊಡವೆಗಳಿರುವ ಚರ್ಮಕ್ಕೆ ಹೆಚ್ಚಿನ ಆರೈಕೆ ಒದಗಿಸಬಹುದು. ಒಡೆದ ಹಾಲನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಕೊಂಚ ಹೊತ್ತು ವಾಸನೆಯನ್ನು ಸಹಿಸಬೇಕಾಗಿ ಬಂದರೂ, ಬಳಿಕ ಇದು ನೀಡುವ ಪರಿಣಾಮ ಮಾತ್ರ ಸಿಹಿಯೇ ಆಗಿರುತ್ತದೆ.

ಚೀಸ್

ಚೀಸ್

ಹೆಚ್ಚಿನ ಜನರಿಗೆ ಈ ಮಾಹಿತಿಯ ಅರಿವಿಲ್ಲದಿರಬಹುದು, ಏನೆಂದರೆ ಚೀಸ್ ಅನ್ನು ಹುಳಿಬರಿಸಿದ ಮೊಸರಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಮುಂದಿನ ಬಾರಿ ಹಾಲು ಒಡೆದಾಗ ನಿಮ್ಮದೇ ಆದ ಚೀಸ್ ತಯಾರಿಗೆ ಇದನ್ನು ಬಳಸಬಹುದು. ನಿಮಗೆ ಸೂಕ್ತವೆನಿಸಿದ ಯಾವುದೇ ಪ್ರಕಾರವನ್ನು ಅನುಸರಿಸಿ ಚೀಸ್ ತಯಾರಿಸಿ. ಈ ಮೂಲಕ ಹಣದಲ್ಲಿಯೂ ಉಳಿತಾಯ ಸಾಧಿಸಬಹುದು.

ಬೇಕರಿ ಉತ್ಪನ್ನಗಳಲ್ಲಿ

ಬೇಕರಿ ಉತ್ಪನ್ನಗಳಲ್ಲಿ

ನಿಮಗೆ ಮನೆಯಲ್ಲಿಯೇ ಬೇಕರಿ ಉತ್ಪನ್ನಗಳನ್ನು, ಕೇಕ್, ಪಫ್ಸ್ ಮೊದಲಾದವುಗಳನ್ನು ಮಾಡುವ ಉತ್ಸಾಹವಿದೆಯೇ ಅಥವಾ ಸರಳವಾಗಿ ದೋಸೆ ಮಾಡುವುದಾದರೂ ಇದರಲ್ಲಿ ಹುಳಿಬರಿಸುವ ಹುದುಗುಪದಾರ್ಥವನ್ನಾಗಿ ಒಡೆದ ಹಾಲನ್ನು ಬಳಸಬಹುದು. ಅಚ್ಚರಿ ಎಂದರೆ, ಯಾವಾಗ ಒಡೆದ ಹಾಲನ್ನು ಈ ಖಾದ್ಯಗಳಲ್ಲಿ ಹುಳಿಕಾರಕವಾಗಿ ಬಳಸುತ್ತೇವೆಯೋ ಆಗ ಆ ಖಾದ್ಯ ಆಕರ್ಷಕವಾಗಿ ಉಬ್ಬುವ ಜೊತೆಗೇ ಹುಳಿಯೇ ಇರದೇ ಅತ್ಯುತ್ತಮ ರುಚಿಯನ್ನು ಹೊಂದುತ್ತದೆ.

English summary

Don't Throw Out Your Spoiled Milk Just Yet

Thanks to wretched bacteria with which we share our ecosystem, most of our food falls prey to spoilage. Milk is one such food which is easily susceptible to bacteria infestation, and although milk does get spoiled, it does not even remotely signify its demise. Unlike other foods like vegetables or fruits, spoiled milk can be used in other ways, which makes it almost as useful as fresh milk. So literally keeping in tune with the saying, ‘There’s no use crying over spilled milk,’ let’s take a look at some interesting uses of spoiled milk.
Story first published: Friday, October 4, 2019, 13:20 [IST]
X
Desktop Bottom Promotion