For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ಇನ್ಮುಂದೆ ನೀವು ಪ್ರತಿನಿತ್ಯ ಇವುಗಳನ್ನು ಸ್ವಚ್ಛ ಮಾಡಲೇಬೇಕು

|

ಇಂದು ಜಗತ್ತೇ ಕರೋನಾ ವೈರಸ್ ಸಮಸ್ಯೆಯಿಂದ ಬಳಲುತ್ತಿದೆ. ಎಷ್ಟೇ ಜಾಗರೂಕರಾಗಿದ್ದರೂ ಈ ವೈರಸ್ ನಮಗೆ ಅಂಟಿಕೊಳ್ಳಬಹುದು. ಹಾಗಾಗಿ ದೈನಂದಿನ ದಿನದಲ್ಲಿ ಅದರಲ್ಲೂ ಸ್ವಚ್ಛತೆಯ ವಿಷಯದಲ್ಲಿ ತೆಗೆದುಕೊಳ್ಳುವ ಎಚ್ಚರಿಕೆಗಿಂತ ದುಪ್ಪಟ್ಟು ಕಾಳಜಿ ಈ ದಿನಗಳಲ್ಲಿ ಮಾಡಬೇಕಾಗುತ್ತದೆ.

Tips To Avoid coronavirus

ಕೋವಿಡ್-19 ಸಾಂಕ್ರಾಮಿಕದಿಂದಾಗಿ ದೈನಂದಿನ (ಅಥವಾ ಗಂಟೆಗೆ!) ಮನೆಯನ್ನು ಸ್ವಚ್ಛಗೊಳಿಸುವಂತೆ ಮಾಡಿದೆ. ಇದು ಸ್ವಲ್ಪ ಅಧಿಕ ಕೆಲಸವಾದರೂ ಕೂಡ ಸೋಂಕು ಹರಡುವುದನ್ನು ತಡೆಗಟ್ಟಲು ನಾವು ಮಾಡಲೇ ಬೇಕು. ಹಾಗದರೆ ಈ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುವುದು ಹೇಗೆ? ನಿಮ್ಮ ಜೀವನವು ಸಾಮಾನ್ಯ ಸ್ಥಿತಿಗೆ ಮರಳಿದ ನಂತರವೂ ನೀವು ಪ್ರತಿದಿನ ನಿಭಾಯಿಸಬಹುದಾದ ಕೆಲವು ಸಲಹೆಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ಕೊರೊನಾವೈರಸ್‌ ತಡೆಗಟ್ಟಲು ಶುಚಿತ್ವಕ್ಕೆ ಮಹತ್ವ

ಕೊರೊನಾವೈರಸ್‌ ತಡೆಗಟ್ಟಲು ಶುಚಿತ್ವಕ್ಕೆ ಮಹತ್ವ

ಕೋವಿಡ್-19 ನಮ್ಮ ದಿನಚರಿಯನ್ನು ದಿನಸಿ ಖರೀದಿಯಿಂದ ಹಿಡಿದು ನಮ್ಮ ಪ್ರಯಾಣದವರೆಗೆ ಸಾಕಷ್ಟು ಬದಲಾಯಿಸಿದೆ. ಈ ಹೊಸ ಅಭ್ಯಾಸಗಳು ಬಹುಪಾಲು ತಾತ್ಕಾಲಿಕವಾಗಿದ್ದರೂ, ನಿಯಮಿತವಾಗಿ ನಮ್ಮ ಮನೆಗಳನ್ನು ಸೋಂಕುರಹಿತಗೊಳಿಸುವುದು ನಾವು ಕೆಲವು ಅಭ್ಯಾಸಗಳನ್ನು ಮುಂದುವರಿಸಲೇ ಬೇಕು.

"ಆಗಾಗ ಮುಟ್ಟುತ್ತಿರುವ ಅಥವಾ ಹೆಚ್ಚು ಬಳಕೆಯಾಗುವ ಮನೆಯ ಯಾವುದೇ ಭಾಗವನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು ರೋಗಾಣುಗಳ ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಮಾರ್ಗವಾಗಿದೆ, ಈಗಿನ ಸಾಂಕ್ರಾಮಿಕ ಸಮಯದಲ್ಲಿ ಮಾತ್ರವಲ್ಲ, ಆದರೆ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗಲೆಲ್ಲಾ ಇದನ್ನು ಅನುಸರಿಸಬೇಕು" ಎಂದು ಹೌಸ್ ಕೀಪಿಂಗ್ ನ ಗೃಹೋಪಯೋಗಿ ಉಪಕರಣಗಳು ಮತ್ತು ಶುಚಿಗೊಳಿಸುವ ಉತ್ಪನ್ನಗಳ ಪ್ರಯೋಗಾಲಯದ ನಿರ್ದೇಶಕ ಕ್ಯಾರೊಲಿನ್ ಫೋರ್ಟೆ ಹೇಳುತ್ತಾರೆ.

"ಗ್ರಾಹಕರು ಹೆಚ್ಚಾಗಿ ಈ ಮರೆಗೆ ಕಡೆಗಣಿಸದ ಮನೆಯ ನೆಲ ಮೊದಲಾದ ಮೇಲ್ಮೈಗಳನ್ನು ಸ್ವಚ್ಛಗೊಳಿಸುವ ಪ್ರಯೋಜನಗಳನ್ನು ನಿಜವಾಗಿಯೂ ಈಗ ಕಲಿತಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಸ್ತುತ ಪರಿಸ್ಥಿತಿ ಸುಧಾರಿಸಿದ ನಂತರವೂ ಅದು ಮುಂದುವರಿಯುತ್ತದೆ". ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ನೀವು ಪ್ರತಿದಿನ ನಿಮ್ಮ ಮನೆಯನ್ನು ನೆಲದಿಂದ ಒಳಚಾವಣಿವರೆಗೂ ಒರೆಸುವ ಅಗತ್ಯವಿಲ್ಲದಿದ್ದರೂ, ವಿಶೇಷವಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮ್ಮ ಜೀವನವು ಸಾಮಾನ್ಯ ಸ್ಥಿತಿಗೆ ಮರಳಿದ ನಂತರವೂ ಉತ್ತಮ ನೈರ್ಮಲ್ಯ ಅಭ್ಯಾಸಗಳು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆರೋಗ್ಯವಾಗಿರಿಸಿಕೊಳ್ಳಲು ಸಹಾಯ ಮಾಡುತ್ತವೆ.

ಬಾಗಿಲ ಗುಬ್ಬಿಗಳು (ಬಾಗಿಲಿನ ಹಿಡಿಕೆಗಳು)

ಬಾಗಿಲ ಗುಬ್ಬಿಗಳು (ಬಾಗಿಲಿನ ಹಿಡಿಕೆಗಳು)

ನೀವು ಪ್ರತಿದಿನ ಸ್ವಚ್ಛಗೊಳಿಸಬೇಕಾದ ಮನೆಯ ಮೇಲ್ಮೈಗಳ/ ನೆಲ ವಿಷಯಕ್ಕೆ ಬಂದರೆ, ಇಲ್ಲಿ ಉತ್ತಮ ಪರಿಹಾರವನ್ನು ನೀಡಲಾಗಿದೆ: "ಒಂದು ವಸ್ತುವನ್ನು ಹೆಚ್ಚಾಗಿ ಮುಟ್ಟಲಾಗುತ್ತದೆ ಎಂದರೆ, ಆಗಾಗ್ಗೆ ಅದನ್ನು ಸ್ವಚ್ಛಗೊಳಿಸಬೇಕು ಮತ್ತು ಸೋಂಕು ರಹಿತಗೊಳಿಸಬೇಕಾಗುತ್ತದೆ" ಎಂದು ಅಮೇರಿಕನ್ ಕ್ಲೀನಿಂಗ್

ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬ್ರಿಯಾನ್ ಸಾನ್ಸೋನಿ ಹೇಳುತ್ತಾರೆ. ವಿಚಿತ್ರವೆಂದರೆ, ನಿಮ್ಮ ಬಾಗಿಲಿನ ಕೈ ಅಥವಾ ಹಿಡಿಕೆಗಳು ಸ್ವಚ್ಛಗೊಳಿಸಬೇಕಾದ ವಿಷಯಗಳ ಪಟ್ಟಿಯ ಮೊದಲ ಸ್ಥಾನದಲ್ಲಿದೆ!

ಹಿಡಿಕೆ ಮೇಲಿನ ಧೂಳು ಮತ್ತು ಕೊಳಕನ್ನು ತೆಗೆಯಲು, ಮೊದಲು ಸೋಪ್ ಮತ್ತು ನೀರಿನಿಂದ ತೊಳೆಯಲು ತಜ್ಞರು ಸಲಹೆ ನೀಡುತ್ತಾರೆ. ನಂತರ, ಬ್ಲೀಚ್ (ಸೋಡಿಯಂ ಹೈಪೋಕ್ಲೋರೈಟ್), (ಐಸೊಪ್ರೊಪಿಲ್) ಆಲ್ಕೋಹಾಲ್ ಅಥವಾ ಲೈಸೋಲ್ ಅಥವಾ ಕ್ಲೋರಾಕ್ಸ್ನಂತಹ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚಿನ ಆಲ್ಕೊಹಾಲ್ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಸೋಂಕುನಿವಾರಕವಾಗಿ, ಒರೆಸುವ ಅಥವಾ ಸಿಂಪಡಿಸುವ ಮೂಲಕ ಬಾಗಿಲಿನ ಹಿಡಿಕೆಗಳನ್ನು ಸ್ವಚ್ಛಗೊಳಿಸಿ.

ಸೋಂಕುನಿವಾರಕವು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಹಾಗಾಗಿ ಉತ್ಪನ್ನಗಳ ಲೇಬಲ್ನಲ್ಲಿ ಶಿಫಾರಸು ಮಾಡಿದ ಸಮಯದಷ್ಟು ಒಣಗಲು ಬಿಡಿ ಎಂದು ಸಾನ್ಸೋನಿ ಎಚ್ಚರಿಕೆ ನೀಡುತ್ತಾರೆ.

ಸ್ಟೇರಿಂಗ್

ಸ್ಟೇರಿಂಗ್

ಈ ದಿನಗಳಲ್ಲಿ ನೀವು ಸಾಮಾನ್ಯಕ್ಕಿಂತ ಕಡಿಮೆ ನಿಮ್ಮ ಕಾರುಗಳನ್ನು ಚಲಿಸುತ್ತಿರಬಹುದು, ಆದರೆ ನಿಮ್ಮ ಮನೆಯೊಳಗಿನ ನೆಲದಂತೆ ನಿಮ್ಮ ಕಾರಿನೊಳಗಿನ ಹೆಚ್ಚಾಗಿ ಮುಟ್ಟುವ, ಹೆಚ್ಚಿನ ಸಂಪರ್ಕದ ಮೇಲ್ಮೈಗಳನ್ನು ನೀವು ಇನ್ನೂ ಸೋಂಕು ರಹಿತಗೊಳಿಸಬೇಕು.

ಬ್ರಿಟಿಷ್ ಕಾರು ವ್ಯಾಪಾರಿ ಮೋಟರ್ಪಾಯಿಂಟ್ ಸರಾಸರಿ ಕಾರಿನಲ್ಲಿ 20 ಸ್ಥಳಗಳನ್ನು ಪರೀಕ್ಷಿಸಿದಾಗ, ಸ್ಟೀರಿಂಗ್ ಚಕ್ರವು ರೋಗಾಣುಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಸ್ಥಳ ಎಂದು ಅವರು ಕಂಡುಕೊಂಡರು. ಡೋರ್ ಹ್ಯಾಂಡಲ್ಗಳು (ಕಾರಿನ ಬಾಗಿಲಿನ ಹಿಡಿಕೆ) ಮತ್ತು ನಿಯಂತ್ರಣಗಳು, ಗೇರ್ ಶಿಫ್ಟ್ಗಳು ಮತ್ತು ಡ್ಯಾಶ್ಬೋರ್ಡ್ ಗುಂಡಿಗಳು ಸಹ ಬ್ಯಾಕ್ಟೀರಿಯಾದ ಪರಿಣಾಮವನ್ನು ಹೊಂದಿರುತ್ತವೆ.

ಲೈಸೋಲ್ ನಂತಹ ಸೋಂಕುನಿವಾರಕ ಒರೆಸುವ ಬಟ್ಟೆಗಳು ನಿಮ್ಮ ಕಾರಿನೊಳಗಿನ ಹೆಚ್ಚಿನ ಮೇಲ್ಮೈಗಳನ್ನು ಸ್ವಚ್ಛಗೊಳಿಸಬಹುದು, ಆದರೆ ನಿಮ್ಮ ಕಾರಿನ ಚರ್ಮದ ಆಸನಗಳು ಅಥವಾ ಟಚ್ಸ್ಕ್ರೀನ್ಗಳನ್ನು ಸ್ವಚ್ಛಗೊಳಿಸುವಾಗ ನಿರ್ದಿಷ್ಟ ಒರೆಸುವ ಬಟ್ಟೆಗಳನ್ನು ಬಳಸಲು ಸಿಎನ್ಇಟಿ (CNET) ಸೂಚಿಸುತ್ತದೆ.

ಹೊರಗಡೆಯಿಂದ ಅನಾರೋಗ್ಯವನ್ನು ನಿಮ್ಮ ವಾಹನಕ್ಕೆ ಹಾಗೂ ಆಮೂಲಕ ನಿಮ್ಮ ಮನೆಯವರಿಗೆ ಹರಡುವುದನ್ನು ತಪ್ಪಿಸಲು, ನಿಮ್ಮ ಕಾರಿನ ಒಳಭಾಗದಲ್ಲಿ ನೀವು ಸ್ಪರ್ಶಿಸುವ ಮೊದಲು ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸಲು ಫೋರ್ಟೆ ಶಿಫಾರಸು ಮಾಡುತ್ತದೆ.

ನಿಮ್ಮ ಕಾರನ್ನು ನೀವು ಚಾಲನೆ ಮಾಡದಿದ್ದರೆ ಏನಾಗಬಹುದು ಎಂಬುದರ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ!

ಲೈಟ್ ಸ್ವಿಚ್ ಗಳು

ಲೈಟ್ ಸ್ವಿಚ್ ಗಳು

ಹೊಸ ಸಂಶೋಧನೆಗಳ ಪ್ರಕಾರ ಕೋವಿಡ್-19 ಪ್ಲಾಸ್ಟಿಕ್ ಮತ್ತು ಸ್ಟೇನ್ಲೆಸ್ ಸ್ಟೀಲ್ ಮೇಲ್ಮೈಗಳಾದ ಲೈಟ್ ಸ್ವಿಚ್ಗಳ ಮೇಲೆ ಎರಡರಿಂದ ಮೂರು ದಿನಗಳವರೆಗೆ ಬದುಕಬಲ್ಲದು ಎಂಬುದು ಖಚಿತವಾಗಿದೆ.

ನಿಮ್ಮ ಮನೆಯಲ್ಲಿರುವ ಬಾಗಿಲಿನ ಹಿಡಿಕೆಗಳು ಮತ್ತು ಇತರ ಹೆಚ್ಚು ಮುಟ್ಟುತ್ತಿರುವ ಸ್ಥಳಗಳಂತೆ, ಮೊದಲು ನಿಮ್ಮ ಮನೆಯ ಲೈಟ್ ಸ್ವಿಚ್ಗಳನ್ನು ಸೋಪ್ ಮತ್ತು ನೀರಿನಿಂದ ಒರೆಸಿಕೊಳ್ಳಿ, ನಂತರ ಮನೆಯ ಸೋಂಕುನಿವಾರಕ ಉತ್ಪನ್ನಗಳಾದ ಲೈಸೋಲ್ ಅಥವಾ ಕ್ಲೋರಾಕ್ಸ್ ಬಳಸಿ ಸ್ವಚ್ಛಗೊಳಿಸಿ.

"ಸ್ವಚ್ಛಗೊಳಿಸುವಿಕೆಯು ಮೇಲ್ಮೈಯಿಂದ ಕೊಳೆಯನ್ನು ತೆಗೆದುಹಾಕುತ್ತದೆ, ಆದರೆ ಸೋಂಕುನಿವಾರಕವು ರೋಗಾಣುಗಳನ್ನು ಕೊಲ್ಲುತ್ತದೆ" ಎಂದು ಸಾನ್ಸೋನಿ ಹೇಳುತ್ತಾರೆ.

"ರೋಗಾಣುಗಳ ಹರಡುವಿಕೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಈ ಎರಡನ್ನೂ ಮಾಡುವುದು." ನಿಮ್ಮಲ್ಲಿ ಸೋಂಕುನಿವಾರಕ ಉತ್ಪನ್ನಗಳು ಕಡಿಮೆಯಾಗಿದ್ದರೆ ಮತ್ತು ಅವುಗಳು ಈಗ ಅಂಗಡಿಗಳಲ್ಲೂ ಲಭ್ಯವಿಲ್ಲದಿದ್ದರೆ, ಸಿ ಡಿ ಸಿ, ಮನೆಯಲ್ಲಿ ಬ್ಲೀಚ್ ಸೋಂಕುನಿವಾರಕವನ್ನು ತಯಾರಿಸಬಹುದು ಎಂದು ಹೇಳಿದೆ.

ಉಪಕರಣಗಳ ಹಿಡಿಕೆ

ಉಪಕರಣಗಳ ಹಿಡಿಕೆ

ರೆಫ್ರಿಜರೇಟರ್ಗಳು, ಡಿಶ್ವಾಶರ್ಗಳು, ಓವನ್ಗಳು ಮತ್ತು ಮೈಕ್ರೊವೇವ್ಗಳಂತಹ ಜನಪ್ರಿಯ ಗೃಹೋಪಯೋಗಿ ಉಪಕರಣಗಳ ಹ್ಯಾಂಡಲ್/ ಹಿಡಿಕೆಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ, ಆದರೆ ಅವು ಸೂಕ್ಷ್ಮಜೀವಿಗಳು ಮತ್ತು ಕೋವಿಡ್-19 ನಂತಹ ಕಾಯಿಲೆಗಳಿಗೆ ಸಂತಾನೋತ್ಪತ್ತಿ ಮಾಡಬಹುದು.

ತಜ್ಞರು ಆಗಾಗ್ಗೆ ಅವುಗಳನ್ನು ಸ್ವಚ್ಛಗೊಳಿಸಲು ಶಿಫಾರಸು ಮಾಡುತ್ತಾರೆ, "ವಿಶೇಷವಾಗಿ ಈ ಸಮಯದಲ್ಲಿ ಕುಟುಂಬದ ಹೆಚ್ಚಿನ ಸದಸ್ಯರು ಕೆಲಸ ಅಥವಾ ಶಾಲೆಗೆ ಹೋಗದೆ ದಿನವಿಡೀ ಮನೆಯಲ್ಲೇ ಇರುವುದರಿಂದ ಹಿಡಿಕೆಗಳನ್ನು ಹೆಚ್ಚಾಗಿ ಸ್ಪರ್ಶಿಸುತ್ತಾರೆ" ಎಂದು ಫೋರ್ಟೆ ಹೇಳುತ್ತಾರೆ.

ಲೈಟ್ ಸ್ವಿಚ್ಗಳು ಮತ್ತು ಬಾಗಿಲಿನ ಹಿಡಿಕೆಗಳನ್ನು ಸ್ವಚ್ಛಗೊಳಿಸುವ ಮಾದರಿಯನ್ನೇ ಅನುಸರಿಸಿ, ಸೋಂಕುನಿವಾರಕ ಒರೆಸುವ ಬಟ್ಟೆಗಳು ಅಥವಾ ಸಿಂಪಡಣೆಯೊಂದಿಗೆ ಮನೆಯ ಉಪಕರಣಗಳ ಹಿಡಿಕೆಗಳನ್ನೂ ಉಜ್ಜಿ.

ಆದರೆ ನಿಮ್ಮ ಮನೆಯೊಳಗೆ ಯಾರಾದರೂ ಸೋಂಕಿಗೆ ಒಳಗಾಗದಿದ್ದರೆ, ನೀವು ಈ ಹಿಡಿಕೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ನಿರ್ಲಕ್ಷ ತೋರಿದರೆ ನೀವೂ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ.

ಯೇಲ್ ಮೆಡಿಸಿನ್‌ನ ಸಾಂಕ್ರಾಮಿಕ ರೋಗ ತಜ್ಞ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಜೋಸೆಫ್ ವಿನೆಟ್ಜ್ ಅವರ ಪ್ರಕಾರ, "ಜನರು ಮೊದಲು ಮತ್ತು ಅಗ್ರಗಣ್ಯವಾಗಿ ಇತರ ಜನರಿಂದಲೇ ಕೋವಿಡ್-19 ಸೋಂಕಿಗೆ ಗುರಿಯಾಗುತ್ತಾರೆ.

ಅಡುಗೆ ಮನೆಯ ಭಾಗಗಳು

ಅಡುಗೆ ಮನೆಯ ಭಾಗಗಳು

ಕೋವಿಡ್-19 ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರವೂ ನಿಮ್ಮ ಅಡಿಗೆ ಮನೆಯ ಭಾಗಗಳನ್ನು ಮತ್ತು ಸಿಂಕ್ / ನಲ್ಲಿ ಯನ್ನು ಸೋಂಕುರಹಿತಗೊಳಿಸುವುದು ನಿಮ್ಮ ಶುಚಿಗೊಳಿಸುವ ದಿನಚರಿಯ ಪ್ರಮುಖ ಭಾಗವಾಗಬೇಕು.

"ಇದು ಕರೋನ ವೈರಸ್ ವಿರುದ್ಧ ಮಾತ್ರವಲ್ಲದೆ ಅನಾರೋಗ್ಯಕ್ಕೆ ಕಾರಣವಾಗುವ ಇತರ ಆಹಾದಿಂದ ಹರಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲೂ ಸಹಾಯ ಮಾಡುತ್ತದೆ" ಎಂದು ಸಾನ್ಸೋನಿ ಹೇಳುತ್ತಾರೆ.

ಮೂರು ಶೇಕಡಾ ಹೈಡ್ರೋಜನ್ ಪೆರಾಕ್ಸೈಡ್ ಪ್ರಮಾಣವು ಎಂಟು ನಿಮಿಷಗಳಲ್ಲಿ ವೈರಸ್ ಅನ್ನು ನಿಷ್ಕ್ರಿಯಗೊಳಿಸಬಹುದು ಎಂದು ಸಿ ಡಿ ಸಿ ಹೇಳಿದೆ. ನಿಮ್ಮ ಅಡುಗೆ ಮನೆಯ ಸಿಂಕ್ ಮತ್ತು ಅಡುಗೆ ಕಟ್ಟೆಯಂತಹ ಯಾವುದೇ ಆಹಾರ ಸಂಪರ್ಕ ಹೊಂದುವ ಮೇಲ್ಮೈಗೆ ಅದನ್ನು ನೇರವಾಗಿ ಅನ್ವಯಿಸಿ, ಮತ್ತು ಆ ಪ್ರದೇಶವನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ನೆನೆಸಿ.

ನಂತರ ಉಜ್ಜಿ, ಅದನ್ನು ನೀರಿನಿಂದ ತೊಳೆಯಿರಿ. ಸ್ವಚ್ಛಗೊಳಿಸುವ ಮೊದಲು ಮತ್ತು ನಂತರ ಕೈಗವಸುಗಳನ್ನು ಧರಿಸಲು ಮತ್ತು ಕೈ ತೊಳೆಯಲು ಸಹ ಸಿ ಡಿ ಸಿ ಸೂಚಿಸುತ್ತದೆ.

ಮೊಬೈಲ್ ಫೋನ್

ಮೊಬೈಲ್ ಫೋನ್

24 ದೇಶಗಳ 56 ಅಧ್ಯಯನಗಳ ಇತ್ತೀಚಿನ ವೈಜ್ಞಾನಿಕ ಸಾಹಿತ್ಯ ವಿಮರ್ಶೆಯ ಪ್ರಕಾರ, ನಿಮ್ಮ ಸ್ಮಾರ್ಟ್ಫೋನ್ ನೀವು ಹೊಂದಿರುವ ಅತ್ಯಂತ ಸೂಕ್ಷ್ಮವಾದ ವಸ್ತುಗಳಲ್ಲಿ ಒಂದಾಗಿದೆ ಮತ್ತು ಇದು ಕರೋನವೈರಸ್ನಂತಹ ಕಾಯಿಲೆಗಳಿಗೆ ಕೇಂದ್ರವಾಗಿದೆ.

ನಿಮ್ಮ ಫೋನ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಲು, ಯಾವುದೇ ಕೊಳಕು, ಧೂಳು ಅಥವಾ ಬೆರಳಚ್ಚುಗಳನ್ನು ತೆಗೆದುಹಾಕಲು ಒಣ, ಮೃದುವಾದ ಬಟ್ಟೆಯಿಂದ ಒರೆಸಲು ಸಾನ್ಸೋನಿ ಸಲಹೆ ನೀಡುತ್ತಾರೆ, ತದನಂತರ ಪೋನ್ ಪರದೆಯನ್ನು ಸೋಂಕುರಹಿತಗೊಳಿಸಲು ಆಲ್ಕೊಹಾಲ್ ಆಧಾರಿತ ಒರೆಸುವ ಬಟ್ಟೆಗಳು ಅಥವಾ ಕನಿಷ್ಠ 70 ಶೇಕಡಾ ಮದ್ಯ ಆಧಾರಿತ ಲಿಕ್ವಿಡ್‌ ಬಳಸಿ.

ಟ್ಯಾಬ್ಲೆಟ್‌ಗಳು ಮತ್ತು ಮನೆಯ ಸುತ್ತಲೂ ಇರುವ ಯಾವುದೇ ಟಚ್‌ ಸ್ಕ್ರೀನ್‌ಗಳಿಗೆ ಇದು ಅನ್ವಯವಾಗುತ್ತದೆ.

ಒಂದು ಸಲಹೆ: ನಿಮ್ಮ ಎಲೆಕ್ಟ್ರಾನಿಕ್ಸ್ ಅನ್ನು ಸ್ವಚ್ಛಗೊಳಿಸುವ ಮೊದಲು ಅವುಗಳ ಪ್ಲಗ್ ಗಳನ್ನು ತೆಗೆಯಲು ಮರೆಯಬೇಡಿ .

ನೆಲ (ಮನೆಯ ಹಾಸು)

ನೆಲ (ಮನೆಯ ಹಾಸು)

ನೀವು ಆಗಾಗ್ಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಅಡುಗೆ ಮಾಡುತ್ತಿದ್ದರೆ, ಫೋರ್ಟೆ ಪ್ರಕಾರ, ನಿಮ್ಮ ಮನೆಯ ನೆಲವನ್ನು ಸಹ ಆಗಾಗ್ಗೆ ಸ್ವಚ್ಛಗೊಳಿಸುವ ಅಗತ್ಯವಿರುತ್ತದೆ. ಒಂದು ಕಪ್ ಬ್ಲೀಚ್ ಮತ್ತು ಐದು ಗ್ಯಾಲನ್ ನೀರಿನ ಮಿಶ್ರಣದಿಂದ ಟೈಲ್ ನೆಲವನ್ನು ಒರೆಸಲು ಸಿ ಡಿ ಸಿ ಶಿಫಾರಸು ಮಾಡುತ್ತದೆ; ದುರ್ಬಲಗೊಳಿಸಿದ ಮ್ಯಾಕ್ವೆಟ್ ಉತ್ಪನ್ನಗಳನ್ನು ಬಳಸಲು ಇ ಪಿ ಎ ಅನುಮೋದಿಸಿದೆ.

ಗಟ್ಟಿಮರದಂತಹ ನೆಲ ಹಾಸುಆಗಿದ್ದರೆ, ಸಿ ಎನ್ ಇ ಟಿಯ ಮಾರ್ಗಸೂಚಿಗಳ ಪ್ರಕಾರ, ಸೋಂಕುರಹಿತ ಒದ್ದೆಯಾದ ಮಾಪ್ ಬಟ್ಟೆಯನ್ನು ಅಥವಾ ಬ್ಲೀಚ್ ಬದಲಿಗೆ ವಿನೆಗರ್ ಮತ್ತು ನೀರಿನ ಮಿಶ್ರಣವನ್ನು ಬಳಸುವುದು ಉತ್ತಮ, ಇದು ನೆಲದ ಕಲೆಯನ್ನೂ ತೆಗೆದುಹಾಕುತ್ತದೆ. ಕಾರ್ಪೆಟ್ ನ್ನು ನೀವು ನೆಲಕ್ಕೆ ಹಾಸಿದ್ದರೆ ಅದು ಧೂಳು, ಹುಳಗಳು ಮತ್ತು ಇತರ ವೈರಸ್ಳಂತಹ ಅಲರ್ಜಿ ಗಳನ್ನು ಉಂಟುಮಾಡಬಹುದು. ಆದ್ದರಿಂದ ವಾರಕ್ಕೊಮ್ಮೆ ವ್ಯಾಕ್ಯೂಮ್ ಮೂಲಕ ಸ್ವಚ್ಛಗೊಳಿಸಬೇಕು ಅಲ್ಲದೆ ರಗ್ಗುಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆದು ಒಣಗಿಸಬೇಕು.

ಕ್ರೆಡಿಟ್ ಕಾರ್ಡ್‌ಗಳು

ಕ್ರೆಡಿಟ್ ಕಾರ್ಡ್‌ಗಳು

ನೀವು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಉಪಯೋಗಿಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳಂತಹ ವಸ್ತುಗಳನ್ನು ಕೋವಿಡ್-19 ನಂತಹ ಕಾಯಿಲೆಗಳನ್ನು ತಡೆಗಟ್ಟಲು ಆಗಾಗ್ಗೆ ಸೋಂಕುರಹಿತಗೊಳಿಸಬೇಕು. ನಿಮ್ಮ ಕಾರ್ಡ್ ಗಳನ್ನು ಬೇರೆಯವರ ಕೈಗೆ ನೀಡಿದ್ದರೆ ಅದರಲ್ಲೂ ವಿಶೇಷವಾಗಿ ಕ್ಯಾಷಿಯರ್ (ಖಜಾಂಚಿ) ಕೈಗೆ ರವಾನೆಯಾಗಿದ್ದರೆ, ಸೋಂಕುನಿವಾರಕದಿಂದ ತ್ವರಿತವಾಗಿ ಒರೆಸಿ.

ತಜ್ಞರ ಪ್ರಕಾರ, ಕೀಗಳು, ತೊಗಲಿನ ಚೀಲಗಳು ಮತ್ತು ಪರ್ಸ್ ಗಳಿಗೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಇನ್ನು ನಮ್ಮ ಬಳಕೆಯ ವಸ್ತುಗಳ ವಿಷಯಕ್ಕೆ ಬಂದರೆ, "ನಾವು ಸಂಪರ್ಕಕ್ಕೆ ಬರುವ ಎಲ್ಲಾ ಮೇಲ್ಮೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೋಂಕುರಹಿತಗೊಳಿಸುವುದು ಅಸಾಧ್ಯ" ಎಂದು ಡಾ. ಲುಶ್ನಿಯಾಕ್ ಹೇಳುತ್ತಾರೆ. "ನಿಮ್ಮ ಕೈಗಳು ಪ್ರತಿದಿನ ಸ್ಪರ್ಶಿಸುವ ವಿಷಯಗಳ ಬಗ್ಗೆ ಯೋಚಿಸಿ ಮತ್ತು ನೀವು ಮುಟ್ಟಿದ ವಸ್ತುಗಳ ಬಗ್ಗೆ ಹಾಗೂ ನಿಮ್ಮ ಕೈಗಳ ಬಗ್ಗೆ ವಿಶೇಷ ಗಮನ ಕೊಡಿ." ಎಂದೂ ಸಲಹೆ ನೀಡಿದ್ದಾರೆ.

ಕೀಬೋರ್ಡ್ ಗಳು

ಕೀಬೋರ್ಡ್ ಗಳು

ನೀವು ನಂಬುತ್ತಿರೋ ಇಲ್ಲವೋ, ಆದರೆ ನಿಮ್ಮ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಕೀಬೋರ್ಡ್ ಗಳು ನಿಮ್ಮ ಮನೆಯ ಕೊಳಕು/ ಶೀರ್ಘವಾಗಿ ಸೋಂಕು ತಗುಲಬಹುದಾದ ವಸ್ತುಗಳಲ್ಲಿ ಒಂದಾಗಿದೆ. ನಿಮ್ಮ ಮತ್ತು ನಿಮ್ಮ ಕಂಪ್ಯೂಟರ್ನ ಆರೋಗ್ಯದ ದೃಷ್ಟಿಯಿಂದ, ಇದನ್ನು ಪ್ರತಿದಿನ ಸೋಂಕುರಹಿತಗೊಳಿಸುವುದು ಅತೀ ಒಳ್ಳೆಯದು.

ಕೀ ಬೋರ್ಡ್ ಕೀಲಿಗಳ/ ಕೀ ಪ್ಯಾಡ್ ಗಳ ನಡುವೆ ಸಿಲುಕಿರುವ ಯಾವುದೇ ಕೊಳೆಯನ್ನು ಏರ್ ಡಸ್ಟರ್ ಬಳಸಿ ಅಥವಾ ಕೀಬೋರ್ಡ್ ಅನ್ನು ತಿರುಗಿಸಿ ಅದನ್ನು ನಿಧಾನವಾಗಿ ಅಲುಗಾಡಿಸುವ ಮೂಲಕ ಸ್ವಚ್ಛಗೊಳಿಸಲು ಸಾನ್ಸೋನಿ ಶಿಫಾರಸು ಮಾಡುತ್ತಾರೆ.

ನಂತರ ಕೀ ಪ್ಯಾಡ್ ಗಳನ್ನು ಸೋಂಕುನಿವಾರಕಗಳಿಂದ ಒರೆಸುವ ಅಥವಾ ಸಿಂಪಡಿಸುವ ಮೂಲಕ ಸ್ವಚ್ಛಗೊಳಿಸಿ, ಕೀಬೋರ್ಡ್ ನ್ನುಮರುಸಂಪರ್ಕಿಸುವ ಮೊದಲು ಅಥವಾ ನಿಮ್ಮ ಕಂಪ್ಯೂಟರ್ ಅನ್ನು ಮತ್ತೆ ಆನ್ ಮಾಡುವ ಮೊದಲು ಅದು ಸಂಪೂರ್ಣವಾಗಿ ಒಣಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ನೀವು ಬಳಸುವ ಸಾಧನಗಳನ್ನು ಅವಲಂಬಿಸಿ ನಾವು ನೀಡುವ ಸೂಚನೆಗಳು ಬದಲಾಗಬಹುದು, ಆದ್ದರಿಂದ ಬಳಸಲು ಉತ್ತಮವಾದ ಶುಚಿಗೊಳಿಸುವ ಉತ್ಪನ್ನಗಳಿಗಾಗಿ ತಯಾರಕರ ಮಾರ್ಗಸೂಚಿಗಳನ್ನು ಪರಿಶೀಲಿಸಿ. ಕರೋನಾ ಸೋಂಕು ಎಲ್ಲೆಲ್ಲೂ ಹರಡುತ್ತಿರುವುದರಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯವನ್ನು ಕಾಯ್ದುಕೊಳ್ಳುವುದು ನಿಮ್ಮ ಕೈಲಿದೆ. ಹಾಗಾಗಿ ಹೆಚ್ಚು ಹೆಚ್ಚು ಜಾಗರೂಕರಾಗಿರಿ, ಮತ್ತು ಮೇಲಿನ ಸೂಚನೆಗಳನ್ನು ತಪ್ಪದೇ ಪಾಲಿಸಿ

English summary

Covid 19: Things You Should Be Cleaning Every Day

Here are what must clean every day to avoid coronavirus
Story first published: Monday, May 25, 2020, 12:33 [IST]
X
Desktop Bottom Promotion