Just In
- 3 hrs ago
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- 5 hrs ago
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- 9 hrs ago
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- 12 hrs ago
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
Don't Miss
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆಯಲ್ಲಿ ಕಳ್ಳಿ ಸಸ್ಯಗಳನ್ನು ಬೆಳೆಸುವುದರಿಂದ ಸಿಗಲಿದೆ ಈ ಅದ್ಭುತ ಲಾಭಗಳು!
ಗಿಡ-ಗಾರ್ಡೆನಿಂಗ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರೂ ಇಷ್ಟಪಡುವ ವಿಚಾರಗಳಲ್ಲಿ ಈ ಗಿಡ ಬೆಳೆಸುವುದು ಸಹ ಒಂದು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದು ಒಂದು ರೀತಿಯ ಟ್ರೆಂಡ್ ಆಗಿದೆ. ಅದರಲ್ಲೂ ಒಳಾಂಗಣ ಗಾರ್ಡೆನಿಂಗ್‌ಗೆ ಕಳ್ಳಿ ಅಥವಾ ರಸಭರಿತ ಸಸ್ಯಗಳು ಫೇಮಸ್. ಕಾಂಡಗಳು ಮತ್ತು ಎಲೆಗಳಲ್ಲಿ ನೀರನ್ನು ಸಂಗ್ರಹಿಸುವ ಈ ಸಸ್ಯಗಳು ಮನೆಯ ಅಂದವನ್ನಷ್ಟೇ ಅಲ್ಲ, ಹಲವಾರು ಅನುಕೂಲಗಳನ್ನು ನೀಡುತ್ತವೆ. ಅವುಗಳು ಯಾವುವು ಎಂಬುದನ್ನ ಇಲ್ಲಿ ನೋಡೋಣ.
ನಿಮ್ಮ ಮನೆಯಲ್ಲಿ ರಸಭರಿತ ಅಥವಾ ಕಳ್ಳಿ ಸಸ್ಯಗಳನ್ನು ಬೆಳೆಯುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಯಾವುದೇ ಹವಾಮಾನದಲ್ಲೂ ಬೆಳೆಯಬಹುದು
ರಸಭರಿತ ಅಥವಾ ಕಳ್ಳಿ ಸಸ್ಯಗಳು ವೈವಿಧ್ಯಮಯ ಹವಾಮಾನಗಳಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿರುತ್ತವೆ. ಇದೇ ಕಾರಣದಿಂದ, ಈ ಕಳ್ಳಿ ಸಸ್ಯಗಳು ಕಡಲತೀರದ ಬಂಡೆಗಳು ಮತ್ತು ಆರ್ದ್ರ ಕಾಡುಗಳಿಂದ ಹಿಡಿದು, ಒಣ ಮರುಭೂಮಿಗಳು ಮತ್ತು ಶೀತ ಪರ್ವತಗಳವರೆಗೆ ಎಲ್ಲಾ ಕಡೆಯಲ್ಲೂ ಕಂಡುಬರುವುದು. ಅದೇ ರೀತಿ, ಮನೆಯ ಕೋಣೆಯ ಉಷ್ಣಾಂಶದಲ್ಲಿ ಯಾವುದೇ ಅಡೆತಡೆಯಿಲ್ಲದೇ ಬೆಳೆಯುತ್ತವೆ. ಯಾವುದೇ ಹವಾಮಾನವಿದ್ದರೂ ಮನೆಗೆ ಹಸಿರು ಕಳೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ.

2. ಗಾಳಿಯನ್ನು ಶುದ್ಧೀಕರಿಸಲು ಸಹಕಾರಿ
" ಪ್ಲಾಂಟ್ಸ್ ಕ್ಲೀನ್ ಏರ್ ಮತ್ತು ವಾಟರ್ ಫಾರ್ ಇಂಡೋರ್ ಎನ್ವಿರಾನ್ಮೆಂಟ್ಸ್ " ಎಂಬ ಲೇಖನದಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕಳ್ಳಿ ಸಸ್ಯಗಳು ಗಾಳಿಯಿಂದ ಅನೇಕ ಬಾಷ್ಪಶೀಲ ಸಾವಯವ ಸಂಯುಕ್ತಗಳು ಅಂದರೆ, ಗಾಳಿಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಬಹುದು ಎಂದು ಹೇಳುತ್ತದೆ. ಈ ಸಸ್ಯಗಳು ಗಾಳಿಯಲ್ಲಿರುವ ಕಲ್ಮಶಗಳನ್ನು ತಮ್ಮ ಬೇರುಗಳ ಬಳಿ ಎಳೆದುಕೊಂಡು, ತಮ್ಮ ಆಹಾರವಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಮನೆಯ ಗಾಳಿ ಶುದ್ಧೀಕರಣಗೊಳ್ಳುತ್ತದೆ.

3. ಮನೆಯ ತೇವಾಂಶವನ್ನು ಸುಧಾರಿಸುವುದು
ಕಳ್ಳಿ ಸಸ್ಯಗಳು ನೀರನ್ನು ಬಿಡುಗಡೆ ಮಾಡುವುದರಿಂದ, ಅವು ನಿಮ್ಮ ಮನೆಯ ತೇವಾಂಶವನ್ನು ಹೆಚ್ಚಿಸುತ್ತವೆ. ಹೆಚ್ಚಿದ ತೇವಾಂಶದ ಪ್ರತಿಯಾಗಿ, ನಿಮಗೆ ಎದುರಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಗಂಟಲು ನೋವು, ಶೀತ, ಕೆಮ್ಮು, ತುರಿಕೆ ಮೊದಲಾದವುಗಳನ್ನು ಸುಧಾರಿಸಬಹುದು:

4. ಫ್ರೆಶ್ ಆಮ್ಲಜನಕವನ್ನು ಸೇರಿಸಬಹುದು
ಇತರ ಸಸ್ಯಗಳಂತೆ, ರಸಭರಿತ ಅಥವಾ ಕಳ್ಳಿ ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದಿಲ್ಲ. ಬದಲಾಗಿ, ಇವು ಆಮ್ಲಜನಕವನ್ನು ಉತ್ಪಾದಿಸುವುದನ್ನು ಮುಂದುವರಿಸುತ್ತವೆ. ಆಮ್ಲಜನಕದ ಈ ನಿರಂತರ ಸ್ಫೋಟವು ನಿಮ್ಮ ಮನೆಯ ಗಾಳಿಯನ್ನು ತಾಜಾಗೊಳಿಸಿ ಉಸಿರಾಟವನ್ನು ಸುಧಾರಿಸುತ್ತದೆ. ಆದ್ದರಿಂದ ಈ ಸಸ್ಯಗಳನ್ನ ಬಾತತರೂಮ್ ಅಥವಾ ಅಡುಗೆಮನೆಯಂತಹ ತಾಜಾ ಗಾಳಿ ಬೇಕು ಎಂದು ಭಾವಿಸುವ ಕೋಣೆಗಳಲ್ಲಿ ಇಡುವುದು ಒಳ್ಳೆಯದು.

5. ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ
ಹೌದು, ಇತರ ಸಸ್ಯಗಳಂತೆ ಈ ಕಳ್ಳಿ ಸಸ್ಯಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ. ಅಂದರೆ ಪದೇ ಪದೇ ನೀರು, ಗೊಬ್ಬರದ ಅವಶ್ಯಕತೆಯಿರುವುದಿಲ್ಲ. ಅವುಗಳು ತನ್ನಷ್ಟಕ್ಕೆ ಬೆಳೆಯುತ್ತವೆ. ಕೆಲವೊಂದು ಕಳ್ಳಿ ಸಸ್ಯಗಳನ್ನು ಮನೆಯೊಳಗೂ ಆರಾಮವಾಗಿ ಬೆಳೆಯಬಹುದು. ಜೊತೆಗೆ ನಿಮ್ಮ ಮನೆಗೆ ಟ್ರೆಂಡಿ ಲುಕ್ ನೀಡುತ್ತದೆ. ಸದಾ ಹಸಿರಾಗಿರುವ ಈ ಗಿಡಗಳು, ಮನೆಯೊಳಗೆ ತಾಜಾತನವನ್ನು ತುಂಬಿರುವಂತೆ ಮಾಡುತ್ತವೆ.

6. ನೋವನ್ನು ಕಡಿಮೆ ಮಾಡಬಹುದು
ಅರೇ, ಮನೆಯಲ್ಲಿ ಕಳ್ಳಿ ಸಸ್ಯ ಇರೋದ್ರಿಂದ ನೋವು ಕಡಿಮೆಯಾಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಕಾನ್ಸಾಸ್ ವಿಶ್ವವಿದ್ಯಾನಿಲಯವು ನಡೆಸಿದ ತೋಟಗಾರಿಕಾ ಚಿಕಿತ್ಸಾ ಸಂಶೋಧನೆಯ ಪ್ರಕಾರ, ಕೆಲವು ರೋಗಿಗಳು ತಮ್ಮ ಆಸ್ಪತ್ರೆಯ ಕೊಠಡಿಗಳಲ್ಲಿ ಈ ಸಸ್ಯಗಳನ್ನು ಹೊಂದಿದ್ದರಿಂದ, ನೋವಿನ ಔಷಧಿಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ ಎಂದು ಕಂಡುಹಿಡಿದಿದೆ.

7. ನೆನಪಿನ ಶಕ್ತಿಯನ್ನು ವೃದ್ಧಿಸಬಹುದು
ಮಿಚಿಗನ್ ವಿಶ್ವವಿದ್ಯಾನಿಲಯವು ನಡೆಸಿದ ಸೈಕಾಲಜಿ ಸಂಶೋಧನೆಯು ಪ್ರಕೃತಿಯೊಂದಿಗೆ ಸಂವಹನ ನಡೆಸುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಪ್ರಯೋಜನಗಳಿಗೆ ಎಂಬುದನ್ನು ತಿಳಿಸುತ್ತದೆ. ಅಂದರೆ ಉದ್ಯಾನವನದಲ್ಲಿ ನಡೆಯುವುದು, ಮನೆಯಲ್ಲಿ ಸಸ್ಯಗಳನ್ನು ಬೆಳೆಸುವುದು ಅಥವಾ ಸಸ್ಯವರ್ಗದ ಛಾಯಾಚಿತ್ರಗಳನ್ನು ನೋಡುವುದು. ಪ್ರಕೃತಿಯಲ್ಲಿ ಒಂದು ಗಂಟೆ ಕಳೆದ ನಂತರ ಮೆದುಳಿನ ಶಕ್ತಿಯು ಇಪ್ಪತ್ತು ಪ್ರತಿಶತದಷ್ಟು ಸುಧಾರಿಸುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ನಿಮ್ಮ ಅಧ್ಯಯನ ಅಥವಾ ಲೈಬ್ರರಿ, ನಿಮ್ಮ ಹೋಮ್ ಆಫೀಸ್ ಅಥವಾ ನಿಮ್ಮ ಮಕ್ಕಳು ಸಾಮಾನ್ಯವಾಗಿ ತಮ್ಮ ಮನೆಕೆಲಸವನ್ನು ಮಾಡುವ ಕೋಣೆಯಲ್ಲಿ ರಸಭರಿತ ಸಸ್ಯಗಳನ್ನು ಇಡುವುದು ಉತ್ತಮ ಉಪಾಯವಾಗಿದೆ.