For Quick Alerts
ALLOW NOTIFICATIONS  
For Daily Alerts

ಕೈತೋಟದಲ್ಲಿ ಘಮ್ಮನೆ ಸುವಾಸನೆ ಸುಳಿಯಲಿ

|
Fragrance plants for garden
ನಿಮ್ಮ ಮನೆಯ ಕೈತೋಟ ಸುಂದರವಾಗಿದ್ದರೆ ಮಾತ್ರ ಸಾಕೆ, ತೋಟಕ್ಕೆ ಇನ್ನಷ್ಟು ಕಳೆ ತರುವ ಸುಗಂಧವೂ ಇದ್ದರೆ? ಹೌದು. ನಿಮ್ಮ ಪುಟ್ಟ ತೋಟವನ್ನು ಸುಗಂಧಭರಿತವಾಗಿಯೂ ಮಾಡಬಹುದು. ಕೆಲವು ಸುವಾಸನೆ ಬೀರುವ ಸಸಿಗಳನ್ನು ನೆಟ್ಟು ಪೋಷಿಸಿದರೆ ತೋಟ ಘಮ್ಮೆಂದು ಎಲ್ಲರನ್ನೂ ಸೆಳೆಯುತ್ತೆ.

ಸುಗಂಧ ಸೂಸುವ ಸಸಿ ಮತ್ತು ಪೋಷಿಸುವ ವಿಧಾನ:

* ಮರುಗ: ಮರುಗದ ಗಿಡವನ್ನು ತೋಟದಲ್ಲಿ ಬೆಳೆಸಿದರೆ ಖಂಡಿತ ನಿಮ್ಮ ಮನೆ ತೋಟ ಘಮ್ಮೆನ್ನುತ್ತೆ. ಸುವಾಸನೆ ಬೀರುವ ಮರುಗದ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು ಅಥವಾ ನೆಲದಲ್ಲೂ ಹಾಕಬಹುದು. ಕೆಂಪು ಮಣ್ಣು ಈ ಮರುಗಕ್ಕೆ ಸೂಕ್ತ. ಮಣ್ಣು ಒಣಗಿದಂತೆ ಕಂಡಾಗ ಮಾತ್ರ ಗಿಡಕ್ಕೆ ನೀರು ಹಾಕಬೇಕು. ಮರುಗ ಬೆಳೆಯುವುದರಿಂದ ಇರುವ ಇನ್ನೊಂದು ಲಾಭವೆಂದರೆ ಇದರ ವಾಸನೆ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.

* ತುಳಸಿ: ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ತುಳಸಿ ಬೀಜಗಳನ್ನು ಹಾಕುವುದರಿಂದ ಗಿಡವನ್ನು ಬೆಳೆಸಬಹುದು. ತುಳಸಿಯಲ್ಲಿ ಎರಡು ವಿಧವಿದೆ. ಒಂದು ಹಸಿರು ಗಿಡ ಇನ್ನೊಂದು ಕೃಷ್ಣ ತುಳಸಿ (ಕೆಂಪು ತುಳಸಿ). ದಿನವೂ ಈ ಗಿಡಕ್ಕೆ ನೀರುಣಿಸಬೇಕು. ತುಳಸಿಗೆ ಸೂರ್ಯನ ಕಿರಣದ ಅವಶ್ಯಕತೆಯಿರುವುದರಿಂದ ಕನಿಷ್ಠ ಪಕ್ಷ 6 ಗಂಟೆಯಾದರೂ ಸೂರ್ಯನ ಕಿರಣವಿರುವ ಜಾಗದಲ್ಲಿ ತುಳಸಿ ಗಿಡ ನೆಡಬಹುದು.

* ದವನ:
ಕಂಪನ್ನು ಸೂಸುವ ದವನ ಎಲ್ಲರಿಗೂ ಚಿರಪರಿಚಿತ. ದವನ ಬೆಳೆಸುವುದೂ ತುಂಬಾ ಸುಲಭ. ಬೀಜ ಅಥವಾ ಸಸಿಯನ್ನು ಸ್ವಲ್ಪ ಕತ್ತರಿಸಿ ತಂದು ಮಣ್ಣಿನಲ್ಲಿ ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡಕ್ಕೆ ದಿನನಿತ್ಯವೂ ನೀರು ಹಾಕಿದರೆ ಉತ್ತಮ. ಉತ್ಕೃಷ್ಟ ಕಂಪನ್ನು ಬೀರುವ ದವನ ಎಲ್ಲರನ್ನೂ ಒಂದು ಕ್ಷಣ ನಿಮ್ಮ ತೋಟದ ಕಡೆ ನೋಡುವಂತೆ ಮಾಡುತ್ತೆ.

* ವೀಳ್ಯೆದೆಲೆ: ಪೂಜೆ, ಪುನಸ್ಕಾರಗಳಿಗೆ ಹೆಚ್ಚು ಬಳಕೆಯಲ್ಲಿರುವ ವೀಳ್ಯೆದೆಲೆಯನ್ನು ನಿಮ್ಮ ಮನೆಯಲ್ಲೂ ಬಳ್ಳಿಯಂತೆ ಹಬ್ಬಿಸಿದರೆ ನೋಡಲೂ ಚೆಂದ. ಸುವಾಸನೆಯೂ ಸುಳಿಯುತ್ತದೆ. ಇದನ್ನು ಪಾಟ್ ಗಳಲ್ಲಿಯೂ ಬೆಳೆಯಬಹುದು ಅಥವಾ ಫಲವತ್ತಾಗಿರುವ ಮಣ್ಣಲ್ಲೂ ಬೆಳೆಯಬಹುದು. ವೀಳ್ಯೆಗೆ ರಾಸಾಯನಿಕ ಗೊಬ್ಬರಕ್ಕಿಂತ ನೈಸರ್ಗಿಕ ಅಥವಾ ಮನೆಯಲ್ಲೇ ತಯಾರಿಸಿದ ಗೊಬ್ಬರ ಬಳಸಿದರೆ ಸೊಂಪಾಗಿ ಹರಡುತ್ತದೆ.

English summary

Fragrant Garden Plant | Aromatic Herbs for Garden | ಸುಗಂಧಭರಿತ ಗಿಡಗಳು | ಕೈತೋಟಕ್ಕೆ ಸುವಾಸನೆ ಬೀರುವ ಸಸಿಗಳು

In India, no pooja or festivals are complete without these fragrant leaves. The aromatic sweet marjoram, the holy basil, the davana and betel leaves all are widely used in the day to day rituals. Take a look at how to grow these fragrant plants with the basic gardening tips.
Story first published: Friday, September 9, 2011, 17:41 [IST]
X
Desktop Bottom Promotion