For Quick Alerts
ALLOW NOTIFICATIONS  
For Daily Alerts

ಮನೆಯ ಮೆಟ್ಟಿಲುಗಳ ನಿರ್ಮಾಣದಲ್ಲಿ ವಾಸ್ತು ಏಕೆ ಅತಿ ಮುಖ್ಯ

|

ಮನೆ ಕಟ್ಟುವ ಸಮಯದಲ್ಲಿ ನೀವು ಪ್ರಮುಖವಾಗಿ ಗಮನ ಹರಿಸಬೇಕಾದ ಅಂಶವಾಗಿದೆ ವಾಸ್ತು ಶಾಸ್ತ್ರ. ವಾಸ್ತುವಿಲ್ಲದೆಯೇ ಮನೆಯ ಗೋಡೆಗಳ ರಚನೆ ಕೂಡ ದೋಷಕ್ಕೆ ಕಾರಣವಾಗಬಹುದು. ಒಂದು ರೀತಿಯಲ್ಲಿ ವಾಸ್ತು ನೋಡುವುದು ಎಂದರೆ ಅದೊಂದು ಮೂಢ ನಂಬಿಕೆ ಎಂಬ ಉದ್ದೇಶವಿದೆ. ಆದರೆ ವಾಸ್ತುವನ್ನು ನೋಡಿ ನಂತರ ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಎಲ್ಲೆಲ್ಲಿ ಇರಬೇಕು ಎಂಬುದನ್ನು ತಿಳಿದುಕೊಳ್ಳುವುದರಿಂದ ನಮಗೆ ಒದಗಿ ಬರುವ ಅಪಾಯಗಳನ್ನು ನಾವು ತಡೆಗಟ್ಟಬಹುದು.

ವಾಸ್ತುವಿನ ರಚನೆಯನ್ನು ನಮ್ಮ ಹಿಂದಿನವರು ಹಿಂದಿನ ಕಾಲದಿಂದಲೇ ಅನುಸರಿಸಿಕೊಂಡು ಬರುತ್ತಿದ್ದಾರೆ. ಪೃಕೃತಿಗೆ ವಿರುದ್ಧವಾಗಿ ನಮ್ಮ ಕಟ್ಟಡಗಳ ರಚನೆ ಇರಬಾರದು ಮತ್ತು ಮಾನವ ಹಾಗೂ ಪೃಕೃತಿ ನಡುವೆ ಮನಸ್ತಾಪ ಏರ್ಪಡಬಾರದು ಎಂಬ ಉದ್ದೇಶವನ್ನು ಹಿಂದಿಟ್ಟುಕೊಂಡೇ ವಾಸ್ತು ರಚನೆಯನ್ನು ಮಾಡಲಾಗಿದೆ. ಇಂದಿನ ನಮ್ಮ ಲೇಖನದಲ್ಲಿ ನಾವು ಮನೆಯ ಮೆಟ್ಟಿಲುಗಳನ್ನು ವಾಸ್ತುವಿನ ಸಲಹೆಗಳನ್ನು ಆಧರಿಸಿಕೊಂಡು ಹೇಗೆ ನಿರ್ಮಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ವಾಸ್ತು ಹೇಳುವಂತೆ ಮನೆಯ ಮೆಟ್ಟಿಲುಗಳು ಜೀವನದಲ್ಲಿ ಕೂಡ ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತವೆ ಎಂದಾಗಿದೆ. ವಾಸ್ತು ಶಾಸ್ತ್ರದಲ್ಲಿ ಇದಕ್ಕಾಗಿ ಸರಿಯಾದ ನಿಯಮಗಳನ್ನು ತಿಳಿಸಲಾಗಿದೆ.

ಪೂರ್ವಕ್ಕೆ ಅಭಿಮುಖವಾಗಿರುವಂತೆ ಮೆಟ್ಟಿಲುಗಳನ್ನು ನಿರ್ಮಿಸಬಾರದು ಎಂಬುದು ವಾಸ್ತು ಹೇಳುತ್ತದೆ. ಅಂತೆಯೇ ಮನೆಯ ಮೆಟ್ಟಿಲುಗಳನ್ನು ಕೆಲವೊಂದು ಭಾಗಕ್ಕೆ ವಿರುದ್ಧವಾಗಿ ನಿರ್ಮಿಸುವುದರಿಂದ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ ಎಂಬುದಾಗಿ ವಾಸ್ತು ಎಚ್ಚರಿಸುತ್ತದೆ. ಹಾಗಿದ್ದರೆ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅನುಸರಿಸಬೇಕಾದ ವಾಸ್ತು ಸಲಹೆಗಳೇನು ಎಂಬುದನ್ನು ತಿಳಿದುಕೊಳ್ಳೋಣ...

ಮೆಟ್ಟಿಲುಗಳ ಕೆಳಭಾಗದಲ್ಲಿರುವ ವಸ್ತುಗಳು

ಮೆಟ್ಟಿಲುಗಳ ಕೆಳಭಾಗದಲ್ಲಿರುವ ವಸ್ತುಗಳು

ಮೆಟ್ಟಿಲುಗಳ ಕೆಳಭಾಗದಲ್ಲಿ ನೀವು ಯಾವುದೇ ವಸ್ತುಗಳನ್ನು ಇರಿಸಬಾರದು. ತಮ್ಮ ಲಾಕರ್‌ಗಳನ್ನು ಕೆಲವರು ಮೆಟ್ಟಿಲುಗಳ ಅಡಿಭಾಗದಲ್ಲಿ ಇರಿಸುತ್ತಾರೆ. ಅಂತೆಯೇ ಕಸದ ಡಬ್ಬಿಗಳನ್ನು ಇರಿಸಲು ಬಳಸುತ್ತಾರೆ. ಅಂತೆಯೇ ಮೆಟ್ಟಿಲುಗಳ ಕೆಳಗೆ ಶೂ ರ‍್ಯಾಕ್ ಅನ್ನು ಇರಿಸುವುದು ಅಮಂಗಳಕರವಾಗಿದೆ. ಮತ್ತು ಇದು ಕುಟುಂಬದಲ್ಲಿ ಕಲಹವನ್ನು ಉಂಟುಮಾಡುತ್ತದೆ.

ಮೆಟ್ಟಿಲುಗಳ ಕೆಳಗೆ ಇರುವ ಕೊಠಡಿಗಳು

ಮೆಟ್ಟಿಲುಗಳ ಕೆಳಗೆ ಇರುವ ಕೊಠಡಿಗಳು

ಪೂಜಾ ಕೊಠಡಿ ಅಥವಾ ಕೃತಕ ದೇವಾಲಯಗಳನ್ನು ಮೆಟ್ಟಿಲುಗಳ ಅಡಿಯಲ್ಲಿ ನಿರ್ಮಿಸಿ ಅಲ್ಲಿ ದೇವರ ಪೂಜೆ ಮಾಡುವುದು ಅಮಂಗಳವಾಗಿದೆ. ಹೀಗೆ ಮಾಡುವುದರಿಂದ ಹಣ ನಷ್ಟ ಉಂಟಾಗಬಹುದು.

Most Read:ಮಲಗುವ ಕೋಣೆಯ ವಾಸ್ತು ಹೇಗಿರಬೇಕು ಗೊತ್ತಾ?

ಅಡುಗೆ ಕೋಣೆ

ಅಡುಗೆ ಕೋಣೆ

ಮೆಟ್ಟಿಲುಗಳ ಕೆಳಗೆ ಅಡುಗೆ ಕೋಣೆಯನ್ನು ನಿರ್ಮಿಸಬಾರದು. ಮೆಟ್ಟಿಲುಗಳ ಕೆಳಗೆ ಅಡುಗೆ ಕೋಣೆಯನ್ನು ನಿರ್ಮಿಸಿದರೆ, ಮನೆಯ ಸದಸ್ಯರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಬಚ್ಚಲು ಮನೆ

ಬಚ್ಚಲು ಮನೆ

ಮೆಟ್ಟಿಲುಗಳ ಕೆಳಗೆ ಬಚ್ಚಲು ಮನೆಯನ್ನು ಕೂಡ ನಿರ್ಮಿಸಬಾರದು. ಇನ್ನು ಸೋರುತ್ತಿರುವ ಟ್ಯಾಪ್ ಇಲ್ಲ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಿ.

ಸರಿಯಾದ ದಿಕ್ಕುಗಳು

ಸರಿಯಾದ ದಿಕ್ಕುಗಳು

ಮೆಟ್ಟಲಿಗಳ ಮೇಲೆ ನಡೆಯುತ್ತಿರುವಾಗ ಒಬ್ಬ ವ್ಯಕ್ತಿ ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ನಡೆಯಬೇಕು ಅದೇ ರೀತಿ ಮೆಟ್ಟಿಲುಗಳಿಂದ ಇಳಿಯುವಾಗ ಅವನು ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು. ಮೆಟ್ಟಿಲುಗಳನ್ನು ಮನೆಯ ಮಧ್ಯ ಭಾಗದಲ್ಲಿ ಇರಿಸಬಾರದು. ಅಂತೆಯೇ ಮೆಟ್ಟಿಲುಗಳು ಅಡುಗೆ ಕೋಣೆ, ಪೂಜಾ ಕೊಠಡಿ ಅಥವಾ ಸ್ಟೋರ್ ರೂಮ್ ಕಡೆಗೆ ಆರಂಭ ಅಥವಾ ಅಂತ್ಯಗೊಳ್ಳಬಾರದು. ಮನೆಯ ಪ್ರವೇಶ ದ್ವಾರದಿಂದ ಮೆಟ್ಟಿಲುಗಳು ಆರಂಭಗೊಂಡರೆ ಮತ್ತು ಕೊಠಡಿಯ ಕಡೆಗೆ ಹೋಗುತ್ತಿದ್ದರೆ ಉತ್ತಮ.

ಮೆಟ್ಟಿಲುಗಳ ಕೆಳಗೆ ಅಂತರ

ಮೆಟ್ಟಿಲುಗಳ ಕೆಳಗೆ ಅಂತರ

ಮೆಟ್ಟಿಲುಗಳ ಕೆಳಗೆ ಕತ್ತಲೆ ಇರಬಾರದು. ಅಸ್ತವ್ಯಸ್ತಗೊಂಡಿರಬಾರದು. ವಾಸ್ತು ಶಾಸ್ತ್ರದ ಪ್ರಕಾರ ಮೆಟ್ಟಿಲುಗಳ ಕೆಳಗೆ ಚೆನ್ನಾಗಿ ಬೆಳಕು ಬರುವಂತೆ ಮತ್ತು ಸಂಘಟಿತ ಸ್ಥಳಕ್ಕೆ ಆದ್ಯತೆ ನೀಡಲಾಗುತ್ತದೆ.

ಹಾನಿಗೊಂಡ ಮೆಟ್ಟಿಲುಗಳು

ಹಾನಿಗೊಂಡ ಮೆಟ್ಟಿಲುಗಳು

ಮೆಟ್ಟಿಲುಗಳಲ್ಲಿ ಏನಾದರೂ ಮುರಿತ ಸಂಭವಿಸಿದ್ದರೆ ಮನೆಯಲ್ಲಿರುವ ದಂಪತಿಗಳ ನಡುವಿನ ಕಲಹವನ್ನು ಇದು ಸೂಚಿಸುತ್ತದೆ. ಆದ್ದರಿಂದ ಇದನ್ನು ಕೂಡಲೇ ರಿಪೇರಿ ಮಾಡಬೇಕು.

Most Read: ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ

ಮೆಟ್ಟಿಲುಗಳ ಪಕ್ಕದಲ್ಲಿರುವ ಕೊಠಡಿ

ಮೆಟ್ಟಿಲುಗಳ ಪಕ್ಕದಲ್ಲಿರುವ ಕೊಠಡಿ

ಮೆಟ್ಟಿಲುಗಳ ಪಕ್ಕ ಯಾವುದೇ ಕೊಠಡಿಯನ್ನು ನಿರ್ಮಿಸಬಾರದು. ಮೆಟ್ಟಿಲುಗಳ ಪಕ್ಕದಲ್ಲಿರುವ ಕೊಠಡಿಯನ್ನು ಮನೆಯ ಸದಸ್ಯರು ಲಿವಿಂಗ್ ರೂಮ್‌ನಂತೆ ಬಳಸಬಾರದು. ಇದನ್ನು ಅತಿಥಿಗಳ ಕೋಣೆಯಂತೆ ಬಳಸಬೇಕು. ಅಂತೆಯೇ ಇದು ಗೋಡೌನ್ ಕಡೆಗೆ ಮುಖ ಮಾಡಬಾರದು. ಬೇಸ್‌ಮೆಂಟ್‌ನಲ್ಲಿರುವ ಗೋಡೌನ್ ಮೆಟ್ಟಿಲುಗಳನ್ನು ಹೊಂದಬಹುದು.

ಮೆಟ್ಟಿಲುಗಳ ಸಂಖ್ಯೆ

ಮೆಟ್ಟಿಲುಗಳ ಸಂಖ್ಯೆ

ಮೆಟ್ಟಿಲುಗಳ ಸಂಖ್ಯೆ 5, 11 ಅಥವಾ 7. ಮೆಟ್ಟಿಲುಗಳನ್ನು ನಿರ್ಮಿಸುವಾಗ ಸಮ ಸಂಖ್ಯೆಯಲ್ಲಿ ರಚಿಸಿದ್ದರೆ ನಂತರ ನಾವು ಒಂದು ಹೆಚ್ಚುವರಿ ಮೆಟ್ಟಿಲನ್ನು ಸೇರಿಸಬಹುದು.

English summary

How Should The Stairs Of The House Be According To Vastu Shastra?

The stairs of the house can lead one to heights of success in one's personal life if they have been constructed keeping in mind the Vastu rules. Similarly, it might be inauspicious when the staircase does not comply with these rules. 7 major rules need to be kept in mind while constructing as well as during the maintenance of the staircase.
X
Desktop Bottom Promotion