For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

By Jaya Subramanya
|

ಮನೆಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತಿನಂತೆ ಸುಂದರವಾದ ಮನೆಯು ಪ್ರಶಾಂತ ವಾತಾವರಣ ಮತ್ತು ವಾಸ ಮಾಡಲು ಅನುಕೂಲಕರವಾಗಿರುವ ವ್ಯವಸ್ಥೆಯನ್ನು ಹೊಂದಿದ್ದರೆ ಅಲ್ಲಿ ನೆಲೆಸಿರುವವರಿಗೂ ನೆಮ್ಮದಿ ಶಾಂತಿ ಇರುತ್ತದೆ. ಮನೆಕಟ್ಟು ಮೊದಲು ಕೆಲವೊಂದು ಶಾಸ್ತ್ರಗಳನ್ನು ನಾವು ಅನುಸರಿಸುವುದು ಮನೆಯ ಶ್ರೋಯೋಭಿವೃದ್ಧಿಗೆ ಒಳ್ಳೆಯದು ಎಂದು ಹಿರಿಯರು ಹೇಳಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ ಶಾಸ್ತ್ರಗಳಿಗೆ ಹೆಚ್ಚಿನ ಮಹತ್ವವವನ್ನು ನೀಡುವುದರಿಂದ ಅಂತೆಯೇ ಅದನ್ನು ಪಾಲಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಫೆಂಗ್ ಶುಯಿ ವಾಸ್ತು ಪ್ರಕಾರ ಮನೆಯ ವಿನ್ಯಾಸ

ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬಂದಿರುವ ಈ ಕಟ್ಟು ಕಟ್ಟಲೆಗಳನ್ನು ಕಿರಿಯರು ಸಂಪೂರ್ಣವಾಗಿ ಪಾಲಿಸಲು ಸಾಧ್ಯವಾಗದೇ ಇದ್ದರೂ ಅದರಲ್ಲಿರುವ ಒಳಿತನ್ನು ಅರಿತುಕೊಂಡು ಪಾಲನೆ ಮಾಡುವುದರಿಂದ ಶ್ರೇಯಸ್ಸು ಲಭಿಸುವುದು ಖಂಡಿತ. ಮನೆಗೆ ಸಂಬಂಧಿಸಿದಂತೆ ಪರಿಪಾಲಿಸಬೇಕಾದ ಶಾಸ್ತ್ರವಾಗಿದೆ ವಾಸ್ತು ಶಾಸ್ತ್ರ. ಮನೆಯ ನಿರ್ಮಾಣ, ಬಾಗಿಲು, ಕಿಟಕಿ, ಅಡುಗೆ ಮನೆ, ದೇವರ ಕೋಣೆ ಎಲ್ಲಿರಬೇಕೆಂಬ ಪೂರ್ಣ ಮಾಹಿತಿಯನ್ನು ಈ ಶಾಸ್ತ್ರ ನೀಡುತ್ತದೆ. ಅಂತೆಯೇ ಅದಕ್ಕನುಸಾರವಾಗಿ ಮನೆ ಕಟ್ಟಿದರೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದು ಖಂಡಿತ. ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ಬಹಳ ಹಳೆಯ ಕಾಲದಿಂದಲೂ ವಾಸ್ತು ಶಾಸ್ತ್ರ ಎಂಬುದು ಪ್ರಚಲಿತದಲ್ಲಿರುವುದರಿಂದ ಅದು ತನ್ನದೇ ಆದ ಹಿರಿಮೆಯನ್ನು ಪಡೆದುಕೊಂಡು ಬಂದಿದೆ. ಆಗ್ನೇಯ ಮೂಲೆ, ವಾಯುವ್ಯ ಮೂಲೆ ಮುಂತಾದ ಪ್ರಕಾರಗಳಿದ್ದು ಮನೆಯ ಕೊಠಡಿಗಳು ಇಂತಹುದೇ ದಿಕ್ಕಿನಲ್ಲಿರಬೇಕೆಂದು ವಾಸ್ತು ತಿಳಿಸುತ್ತದೆ. ವಾಸ್ತು ತಜ್ಞರು ನಿಮ್ಮ ಮನೆಯ ನಡುಮನೆಯನ್ನು ಎರಡು ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ ಒಂದು ಸಾಮಾಜೀಕರಣ ಅಂದರೆ ಗೆಳೆಯರು ಬಂಧು ಮಿತ್ರರೊಂದಿಗೆ ಕಳೆಯಲು ಇನ್ನೊಂದು ಕುಟುಂಬದವರ ಜೊತೆ ಖಾಸಗಿ ಸಮಯವನ್ನು ಕಳೆಯಲು. ಚಕಿತಗೊಳಿಸುವ ವಾಸ್ತು ದೋಷದ ಮಹಾ ರಹಸ್ಯ!

ಆದ್ದರಿಂದ ನಡುಮನೆಯ ವಾಸ್ತುವನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. ಇಂದಿನ ಲೇಖನದಲ್ಲಿ ನಡುಮನೆಗೆ ಅಳವಡಿಸಿಕೊಳ್ಳಬಹುದಾದ ವಾಸ್ತು ಸಲಹೆಗಳನ್ನು ನಾವು ನೀಡುತ್ತಿದ್ದು ಇದರಿಂದ ವಾಸ್ತುವಿನ ಮಹತ್ವ ಹಾಗೂ ವಾಸ್ತು ಪಾಲನೆಯಿಂದ ಉಂಟಾಗುವ ಪ್ರಯೋಜನವನ್ನು ಅರಿತುಕೊಳ್ಳಬಹುದಾಗಿದೆ...

ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು

ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು

ನಿಮ್ಮ ನಡುಮನೆಯು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಅದಾಗ್ಯೂ ನಿಮ್ಮ ಮನೆಯು ದಕ್ಷಿಣಕ್ಕೆ ಮುಖ ಮಾಡುತ್ತಿದೆ ಎಂದಾದಲ್ಲಿ ನಿಮ್ಮ ನಡುಮನೆಯು ಆಗ್ನೇಯ ಮೂಲೆಯಲ್ಲಿರಬೇಕು. ಅದಾಗ್ಯೂ ಉತ್ತರ ದಿಕ್ಕು ನಡುಮನೆಗೆ ಹೆಚ್ಚು ಪ್ರಶಸ್ತವಾಗಿದೆ.

ವಾಯುವ್ಯ ದಿಕ್ಕು

ವಾಯುವ್ಯ ದಿಕ್ಕು

ನೀವು ಪಾರ್ಟಿ ಅಥವಾ ಗೆಟ್ ಟುಗೆದರ್ ಅನ್ನು ಇಷ್ಟಪಡದ ವರ್ಗದವರು ಎಂದಾದಲ್ಲಿ ನಡುಮನೆಯನ್ನು ವಾಯುವ್ಯ ದಿಕ್ಕಿನಲ್ಲಿ ಕಟ್ಟಿರಿ. ಮನೆಯ ವಾಯವ್ಯ ಭಾಗವು ಗಾಳಿಯ ಅಂಶವಾಗಿದೆ. ಮನೆಯ ಅತಿಥಿಗಳಿಗೆ ಕರಿಕಿರಿ ಉಂಟಾಗಿ ಬಹಳ ಬೇಗನೇ ಮನೆಯನ್ನು ತೊರೆಯಲು ಅವರು ಒಲವು ತೋರುತ್ತಾರೆ.

ದೇವರ ಕೋಣೆ

ದೇವರ ಕೋಣೆ

ನಿಮಗೆ ಸಣ್ಣ ಪ್ರಾರ್ಥನಾ ಅಥವಾ ದೇವರ ಕೋಣೆ ಬೇಕು ಎಂದಾದಲ್ಲಿ, ದೇವತೆಗಳು ನೆಲೆಸಿರುವ ದಿಕ್ಕು ಎಂದು ಹೇಳಲಾದ ವಾಯುವ್ಯ ದಿಕ್ಕು ಇದಕ್ಕೆ ಸೂಕ್ತವಾದುದಾಗಿದೆ.

ನೈಋತ್ಯ ಭಾಗ

ನೈಋತ್ಯ ಭಾಗ

ಅತಿಥಿಗಳನ್ನು ಹೆಚ್ಚು ಪ್ರೀತಿಸುವವರು ಮತ್ತು ಹೆಚ್ಚು ಸಮಯ ಅವರು ನಿಮ್ಮೊಂದಿಗೆ ಇರಬೇಕೆಂದು ಬಯಸುವವರು ನೀವಾಗಿದ್ದಲ್ಲಿ ನಡುಮನೆಯನ್ನು ನೈಋತ್ಯ ಭಾಗದಲ್ಲಿ ಕಟ್ಟಿಸಿ. ಮಾಸ್ಟರ್ ಬೆಡ್‌ರೂಮ್‌ಗೆ ಈ ದಿಕ್ಕು ಹೇಳಿಮಾಡಿಸಿರುವಂಥದ್ದಾಗಿದೆ.

ಪೂರ್ವ ಅಥವಾ ಉತ್ತರ ಭಾಗ

ಪೂರ್ವ ಅಥವಾ ಉತ್ತರ ಭಾಗ

ನಡುಮನೆಯ ಬಾಗಿಲನ್ನು ಪೂರ್ವ ಅಥವಾ ಉತ್ತರ ಭಾಗದಲ್ಲಿ ಇರಿಸುವುದರಿಂದ ಹಣ, ಆರೋಗ್ಯ ಮತ್ತು ಸಕಲ ಸಂಪತ್ತುಗಳು ದೊರೆಯುತ್ತದೆ ಎಂದು ಹೇಳಲಾಗುತ್ತದೆ. ದಕ್ಷಿಣ, ಈಶಾನ್ಯ ಅಥವಾ ಆಗ್ನೇಯ ಪ್ರವೇಶವು ಯಶಸ್ಸನ್ನು ಸೂಚಿಸುತ್ತದೆ ಆದರೆ ಇದನ್ನು ಸಾಧಿಸಲು ಸತತ ಪ್ರಯತ್ನವನ್ನು ಪಡಬೇಕಾಗುತ್ತದೆ. ಪಶ್ಚಿಮದ ಪ್ರವೇಶವು ವಿದ್ವಾಂಸರು ಮತ್ತು ಸಂಶೋಧಕರಿಗೆ ಉತ್ತಮವಾದುದು. ವಾಯುವ್ಯ ದ್ವಾರವು ಜೀವನದ ಎಲ್ಲಾ ಅಭಿವೃದ್ಧಿಯ ದ್ಯೋತಕವಾಗಿದೆ. ನಡುಮನೆಯ ಬಾಗಿಲನ್ನು ದಕ್ಷಿಣದಲ್ಲಿ ಇರಿಸುವುದು ಅಶುಭವಾಗಿದೆ.

ಮನೆಯ ಪೀಠೋಪಕರಣಗಳು

ಮನೆಯ ಪೀಠೋಪಕರಣಗಳು

ಯಾವಾಗಲೂ ಮನೆಯ ಒಳಗಿನ ಪೀಠೋಪಕರಣಗಳನ್ನು ಭಾರವಾದ ವಸ್ತುಗಳನ್ನು ಪಶ್ಚಿಮ ಅಥವಾ ದಕ್ಷಿಣದಲ್ಲಿರಿಸಬೇಕು. ಈ ರೀತಿ ಇರಿಸಲು ಸಾಧ್ಯವಿಲ್ಲ ಎಂದಾದಲ್ಲಿ ಉತ್ತರ ಅಥವಾ ಈಶಾನ್ಯದಲ್ಲಿ 1-3 ಇಂಚುಗಳ ಎತ್ತರದಲ್ಲಿ ಇರಿಸಿರಿ.

ಟಿವಿ ರೂಮ್

ಟಿವಿ ರೂಮ್

ಟಿವಿಯನ್ನು ಆಗ್ನೇಯ ಮೂಲೆಯಲ್ಲಿರಿಸಿ, ಇಲ್ಲದಿದ್ದರೆ ಇದು ಆಗಾಗ್ಗೆ ಬೀಳುವ ಸಾಧ್ಯತೆ ಇರುತ್ತದೆ. ಟಿವಿಯನ್ನು ವಾಯುವ್ಯ ಮೂಲೆಯಲ್ಲಿ ಇರಿಸುವುದರಿಂದ ಮನೆಯ ಸದಸ್ಯರು ಅದನ್ನು ನೋಡುತ್ತಾ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಾರೆ.

ಮನೆಯ ಅಂದ ಹೀಗಿರಲಿ...

ಮನೆಯ ಅಂದ ಹೀಗಿರಲಿ...

ನಡುಮನೆಯಲ್ಲಿ ಚೌಕಾಕಾರ ಅಥವಾ ಆಯತಾಕಾರದ ಪೀಠೋಪಕರಣಗಳನ್ನು ಇರಿಸಿ ವೃತ್ತಾಕಾರದ, ಅಂಡಾಕಾರದ ಅಥವಾ ಇತರೆ ಆಕಾರದ ಪೀಠೋಪಕರಣಗಳನ್ನು ಇಲ್ಲಿ ಇರಿಸದಿರಿ. ಈಶಾನ್ಯ ಭಾಗದ ಕಿಟಕಿ ಬಾಗಿಲುಗಳಿಗೆ ಹಗುರವಾದ ಕರ್ಟನ್‌ಗಳನ್ನು ಹಾಕಿ ಅಂತೆಯೇ ನೈಋತ್ಯ ಭಾಗದ ಕಿಟಕಿ ಬಾಗಿಲುಗಳಿಗೆ ಕೊಂಚ ಭಾರದ ಕರ್ಟನ್‌ಗಳನ್ನು ಹಾಕಿ. ನಡುಮನೆಯಲ್ಲಿ ದಕ್ಷಿಣ, ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಮೆಟ್ಟಿಲುಗಳನ್ನು ಒದಗಿಸಿ.

ಮನೆಯ ಅಂದ ಹೀಗಿರಲಿ...

ಮನೆಯ ಅಂದ ಹೀಗಿರಲಿ...

ಸಾಧ್ಯವಾದಲ್ಲಿ ನಡುಮನೆಯ ಈಶಾನ್ಯ ಮೂಲೆಯನ್ನು ಸ್ವಚ್ಛವಾಗಿ ಮತ್ತು ಖಾಲಿಯಾಗಿ ಇರಿಸಿಕೊಳ್ಳಿ. ಮೂಲೆಯಲ್ಲಿ ಆರೋಗ್ಯಕರ ಸಸ್ಯಗಳನ್ನು ಇರಿಸಿ. ಕೃತಕ ಹೂವುಗಳನ್ನು ಒಣ ಹೂವುಗಳನ್ನು, ಮತ್ತು ಕ್ಯಾಕ್ಟಸ್ ಅಥವಾ ಬೋನ್ಸೈ ಸಸ್ಯಗಳನ್ನು ಈ ಭಾಗದಲ್ಲಿ ಇರಿಸದಿರಿ.

English summary

Vaastu tips for positivity in the living room

Whether you have a modern house or a traditional one, living rooms are the most common part of it for the simple reason that man is a social animal by nature, therefore he needs a place which he can call as a place of gathering - where he can socialize with people and spend quality time with his family.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more