For Quick Alerts
ALLOW NOTIFICATIONS  
For Daily Alerts

ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

By Hemanth P
|

ನಿಮ್ಮ ಮನೆ ಅಥವಾ ಕಚೇರಿಯ ವಾಸ್ತುವಿನಲ್ಲಿ ಕನ್ನಡಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸತ್ಯ. ಕನ್ನಡಿ ಅಳವಡಿಸುವ ಸ್ಥಳವು ತುಂಬಾ ಪ್ರಭಾವ ಬೀರಲಿದೆ. ಇದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಇದನ್ನು ನಂಬಲು ತಯಾರಿಲ್ಲವೆಂದರೆ ಅಚ್ಚರಿಯಾಗದು. ಆದರೆ ನಿಮ್ಮ ಮನೆಯಲ್ಲಿ ಇಡುವ ಕನ್ನಡಿ ಮನೆಯ ಶಕ್ತಿ ಹೆಚ್ಚಿಸುವ ಅಥವಾ ಕಡಿಮೆಗೊಳಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಿಮ್ಮ ಮನೆಯ ಯಾವ ಭಾಗದಲ್ಲಿ ಕನ್ನಡಿ ಇಟ್ಟಿರುತ್ತಾರೆ ಎನ್ನುವ ಮೇಲೆ ಒಳಬರುವ ಧನಾತ್ಮಕ ಶಕ್ತಿಯು ಅವಲಂಬಿತವಾಗಿರುತ್ತದೆ. ವಾಸ್ತುವಿನ ಪ್ರಕಾರ ಕನ್ನಡಿಗಳು ಮತ್ತು ಅದನ್ನು ಇಡುವ ಎಲ್ಲಾ ಜಾಗ ಒಳ್ಳೆಯದಲ್ಲ. ಮನೆಯ ಕೆಲವೊಂದು ಭಾಗದಲ್ಲಿ ಅಳವಡಿಸುವ ಕನ್ನಡಿ ಋಣಾತ್ಮಕ ಶಕ್ತಿ ಉಂಟುಮಾಡುತ್ತದೆ ಎಂದು ಪರಿಗಣಿಸಲ್ಪಟ್ಟರೆ,

Mirror vastu tips

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಮತ್ತೆ ಕೆಲವು ಧನಾತ್ಮಕ ಶಕ್ತಿ ಮನೆಯೊಳಗೆ ಬರುವಂತೆ ಮಾಡುತ್ತದೆ. ನಿಮ್ಮ ಮನೆಗೆ ಕನ್ನಡಿ ಬಗ್ಗೆ ಯೋಜನೆ ಹಾಕಿಕೊಂಡಿದ್ದರೆ ಆಗ ಇಲ್ಲಿರುವ ಕೆಲವೊಂದು ಮೂಲ ಟಿಪ್ಸ್ ಗಳು ನಿಮ್ಮ ನೆರವಿಗೆ ಬರಲಿದೆ. ಇಲ್ಲಿ ಕೊಟ್ಟಿರುವ ಕೆಲವೊಂದು ಟಿಪ್ಸ್‌ಗಳ ಹೊರತಾಗಿಯೂ ಹಲವಾರು ಟಿಪ್ಸ್ ಗಳಿವೆ. ಆದರೆ ಇದು ತುಂಬಾ ಮೂಲ ಮತ್ತು ಅತೀ ಹೆಚ್ಚು ಉಲ್ಲೇಖಿಸಲ್ಪಡುವ ಕನ್ನಡಿಯ ವಾಸ್ತು ಟಿಪ್ಸ್ ಗಳೆಂದು ಪರಿಗಣಿಸಲಾಗಿದೆ.

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ವಾಸ್ತು ಪ್ರಕಾರ ಬೆಡ್ ರೂಂನ ವಿನ್ಯಾಸ ಹೀಗಿರಬೇಕು!

ಮನೆಯ ವಾಸ್ತುವಿಗೆ ಕನ್ನಡಿಯ ಟಿಪ್ಸ್
ನಿಮ್ಮ ಮನೆಯಲ್ಲಿ ಕನ್ನಡಿ ಹಾಕುವ ಯೋಜನೆ ಹಾಕಿಕೊಂಡಿದ್ದರೆ ಆಗ ಕೆಲವೊಂದು ವಿಷಯಗಳನ್ನು ಪರಿಗಣಿಸಿ. ನಿಮ್ಮ ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ. ಇದರಿಂದ ಹೆಚ್ಚಿನ ಅನಾರೋಗ್ಯ ಹಾಗೂ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಕನ್ನಡಿಯಲ್ಲಿ ಮುಖ್ಯ ದ್ವಾರ ಕಾಣಿಸುತ್ತಿದ್ದರೆ ಆಗ ನೀವು ಇದನ್ನು ಸ್ಥಳಾಂತರಿಸುವ ಬಗ್ಗೆ ಮರುಚಿಂತಿಸಬೇಕಾಗಿದೆ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಋಣಾತ್ಮಕ ಶಕ್ತಿಯಿರುವ ಬೀರುವಂತಹ ವಸ್ತುಗಳಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದು ಮನೆಯೊಳಗಿನ ಎಲ್ಲಾ ಋಣಾತ್ಮಕ ಶಕ್ತಿ ಹೀರಿಕೊಳ್ಳುತ್ತದೆ ಎನ್ನುವುದು ಮನೆಯಲ್ಲಿ ಕನ್ನಡಿ ಅಳವಡಿಸಲು ಇರುವ ವಾಸ್ತು ಟಿಪ್ಸ್.

ಕಚೇರಿಯ ವಾಸ್ತುವಿಗೆ ಕನ್ನಡಿ ಟಿಪ್ಸ್
ನಿಮ್ಮ ವೃತ್ತಿಪರ ವಾತಾವರಣದಲ್ಲಿ ಎಲ್ಲಾ ಧನಾತ್ಮಕ ಶಕ್ತಿ ತರಲು ಬಯಸುತ್ತಿದ್ದೀರಾ? ಹಾಗಿದ್ದರೆ ಎರಡನ್ನು ಜತೆಯಾಗಿಟ್ಟುಕೊಳ್ಳಿ. ಇದಕ್ಕಾಗಿ ಕನ್ನಡಿಯು ಕೇವಲ ಧನಾತ್ಮಕ ಶಕ್ತಿ ಹೊರಹಾಕಬೇಕು. ಸಮೃದ್ಧಿ ಪಡೆಯಲು ನಿಮ್ಮ ಕಚೇರಿಯ ಲಾಕರ್ ಮುಂದೆ ಕನ್ನಡಿ ಅಳವಡಿಸಬೇಕು. ಕಿರಿದಾದ ಪ್ಯಾಸೆಜ್ ಗಳಲ್ಲಿ ಕನ್ನಡಿ ಅಳವಡಿಸಿದರೆ ಆಗ ಋಣಾತ್ಮಕ ಶಕ್ತಿ ಬರುತ್ತದೆ. ಕಿರಿದಾದ ಪ್ಯಾಸೆಜ್ ಗಳಲ್ಲಿ ಋಣಾತ್ಮಕತೆ ಮತ್ತು ಸುತ್ತಮುತ್ತಲಿನ ಇಕ್ಕಟ್ಟನ್ನು ಪ್ರತಿಫಲಿಸುತ್ತದೆ. ಇಂತಹ ಸ್ಥಳದಲ್ಲಿ ಕನ್ನಡಿ ಇಡಬೇಡಿ. ಕನ್ನಡಿಯಲ್ಲಿ ಒಳ್ಳೆಯ ದೃಶ್ಯಗಳು, ಧನಾತ್ಮಕ ಶಕ್ತಿ ಪ್ರತಿಫಲಿಸುತ್ತಿರಲಿ. ಕಿರುಕೋಣೆಯ ಕಿಟಕಿಗೆ ವಿರುದ್ಧವಾಗಿ ಕನ್ನಡಿ ಅಳವಡಿಸಿ. ಇದರಿಂದ ನಿಮ್ಮ ಕಚೇರಿಗೆ ಧನಾತ್ಮಕ ಶಕ್ತಿ ಬರುತ್ತದೆ.

ವಾಸ್ತು ಕುರಿತು ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಬೆಡ್ ರೂಂನಲ್ಲಿ ಮಾಡುವ ಐದು ತಪ್ಪುಗಳು

ಕನ್ನಡಿಯ ಸಾಮಾನ್ಯ ವಾಸ್ತು ಟಿಪ್ಸ್‌ಗಳು
ನಿಮ್ಮ ಸ್ನಾಹಗೃಹದಲ್ಲಿ ಕನ್ನಡಿ ಅಳವಡಿಸಲು ಬಯಸಿದ್ದರೆ ಆಗ ಅದನ್ನು ಉತ್ತರ ಅಥವಾ ಪೂರ್ವದಲ್ಲಿಡಿ. ಮನೆಯ ಮಧ್ಯಭಾಗದಲ್ಲಿ ಗೋಡೆಯಿದ್ದರೆ ಆಗ ಮನೆಯನ್ನು ಸಂಪರ್ಕಿಸುವಂತಾಗಲು ನೀವು ಅದರಲ್ಲಿ ಒಂದು ಕನ್ನಡಿಯನ್ನಿಡಿ. ಎದುರುಬದುರಾಗಿ ಯಾವಾಗಲೂ ಕನ್ನಡಿ ಅಳವಡಿಸಬೇಡಿ. ಇದಕ್ಕೆ ವಾಸ್ತು ಟಿಪ್ಸ್ ಎಂದರೆ ಹೀಗೆ ಅಳವಡಿಸಿದರೆ ಮನೆಯಲ್ಲಿ ವಿಶ್ರಾಂತಿ ಎನ್ನುವುದು ಇರಲ್ಲ. ಸ್ನಾನಗೃಹವನ್ನು ಹೊರತುಪಡಿಸಿ ಮನೆಯ ಯಾವುದೇ ಭಾಗದಲ್ಲಿ ಉತ್ತರ ಅಥವಾ ಪೂರ್ವ ಭಾಗದಲ್ಲಿ ಅಳವಡಿಸಬೇಡಿ. ಇದರಿಂದ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಚಿತ್ರಗಳು ಕನ್ನಡಿಯಲ್ಲಿ ಪ್ರತಿಫಲಿಸುವಂತಹ ರೀತಿಯಲ್ಲಿ ಕನ್ನಡಿ ಅಳವಡಿಸಬೇಡಿ. ಮುಖ್ಯದ್ವಾರ ಕಾಣುವಂತೆ ಕನ್ನಡಿ ಇಡಲೇಬಾರದು.

ಕನ್ನಡಿ ಅಳವಡಿಕೆಗೆ ಇದು ಕೆಲವೊಂದು ವಾಸ್ತು ಟಿಪ್ಸ್ ಗಳು. ಇವುಗಳನ್ನು ಪಾಲಿಸಿದರೆ ಆಗ ನೀವು ಖಂಡಿತವಾಗಿಯೂ ಧನಾತ್ಮಕ ಶಕ್ತಿ ಪಡೆಯಬಹುದು.

English summary

Mirror vastu tips

Yes, it’s true! Mirrors play an important role in the Vastu of your home or office. Placement of mirrors matter a lot. No one is really ready to believe. It really won’t be surprising if even you fail to believe this.
X
Desktop Bottom Promotion