For Quick Alerts
ALLOW NOTIFICATIONS  
For Daily Alerts

ಮನೆ ಸಣ್ಣದಾದರೂ ಪರವಾಗಿಲ್ಲ, ಆಕರ್ಷಕವಾಗಿರಲಿ

|

ಇತ್ತೀಚೆಗೆ ಪಟ್ಟಣಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಹಳೆಯ ಮನೆಗಳನ್ನೆಲ್ಲಾ ಕೆಡವಿ ಹಲವಾರು ಮಹಡಿಗಳ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಸಾಮಾನ್ಯವಾಗಿ ಎರಡರಿಂದ ಮೂರು ಕೋಣೆಗಳಿದ್ದು, ಇದನ್ನು ಫ್ಲ್ಯಾಟ್ ಎನ್ನಲಾಗುತ್ತದೆ. ಹಿಂದಿನ ಕಾಲದಲ್ಲಿ ಮನೆ ಸಣ್ಣದಾದರೂ, ಎಲ್ಲರೂ ಒಟ್ಟಿಗೆ ಜೀವನ ನಡೆಸುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ಮೂರು ಕೋಣೆಗಳಿರುವ ಫ್ಲ್ಯಾಟ್ ನಾಲ್ಕು ಜನರಿರುವ ಕುಟುಂಬಕ್ಕೆ ಸಾಕಾಗುತ್ತಿಲ್ಲ.

ಆದರೂ ಇದನ್ನು ನಿಭಾಯಿಸಬೇಕಾಗಿದೆ. ಇದರಿಂದಾಗಿ ಮನೆಯನ್ನು ಅಲಂಕರಿಸುವಾಗ ತುಂಬಾ ಎಚ್ಚರಿಕೆ ವಹಿಸಿ ಹೆಚ್ಚಿನ ಜಾಗ ಉಳಿಯುವಂತೆ ನೋಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಫ್ಲ್ಯಾಟ್‌ಗಳಲ್ಲಿ ಮೊದಲಿನಂತೆ ಹೆಚ್ಚಿನ ಜಾಗ ಕೂಡ ಇಲ್ಲದಾಗಿದೆ. ಪ್ರತಿಯೊಬ್ಬರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸುವುದು ಸಾಧ್ಯವಾಗದ ಮಾತು. ಇದರಿಂದ ನೀವು ಜಾಣ್ಮೆಯಿಂದ ಕೋಣೆಗಳನ್ನು ಅಲಂಕಾರ ಮಾಡಿ ಹೆಚ್ಚಿನ ಜಾಗ ಉಳಿಯುವಂತೆ ನೋಡಿಕೊಳ್ಳುವುದರ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡುವುದನ್ನು ನೋಡಿಕೊಳ್ಳಿ.

ಅಲಂಕಾರಕ್ಕೆ ಮೊದಲು ಸಣ್ಣ ಕೋಣೆಗಳನ್ನು ಸಿಂಗರಿಸುವಾಗ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೌದು, ಕೋಣೆಯನ್ನು ಸರಳವಾಗಿಡಬೇಕೆಂದು ನೀವು ಬಯಸಿದರೂ ಅದರಲ್ಲಿ ಸಾಮಗ್ರಿಗಳು ತುಂಬಿ ಇಕ್ಕಟ್ಟಾಗಬಹುದು. ನೀವು ಯಾರಾದರೂ ಇಂಟೀರಿಯರ್ ಡೆಕೋರೇಟರ್‌ನ್ನು ಸಂಪರ್ಕಿಸಿ ಅಥವಾ ನೀವೇ ಕೋಣೆಗಳನ್ನು ಅಲಂಕರಿಸಿ. ಕೋಣೆಗಳನ್ನು ಅಲಂಕರಿಸುವಾಗ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳ ಬಗ್ಗೆ ನಿಮಗೆ ಅರಿವಿದ್ದರೆ ಆಗ ಅಂತಹ ತಪ್ಪುಗಳು ಪುನರಾವರ್ತನೆಯಾಗುವುದು ತಪ್ಪುತ್ತದೆ. ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು

ಸಣ್ಣ ಕೋಣೆಗಳನ್ನು ಅಚ್ಚುಕಟ್ಟಾಗಿ ಅಲಂಕರಿಸಬೇಕು

Simple Ways To Decorate Small Room

ಸಣ್ಣ ಕೋಣೆಗಳನ್ನು ಸುಂದರವಾಗಿ ಅಲಂಕರಿಸಲು ಸಾಧ್ಯವಿಲ್ಲವೆಂದು ಹೆಚ್ಚಿನವರು ಭಾವಿಸುವುದು ಮಾಡುವಂತಹ ಮೊದಲ ತಪ್ಪಾಗಿದೆ. ನಿಮ್ಮಲ್ಲಿರುವ ಕಲಾತ್ಮಕತೆಯನ್ನು ಹೊರಗೆಡಹಿ ನಿಮ್ಮ ಕೋಣೆಯನ್ನು ಅಲಂಕರಿಸಿ. ಅಲ್ಲದೆ ಆತ್ಮವಿಶ್ವಾಸವನ್ನು ಯಾವತ್ತೂ ಕಳಕೊಳ್ಳಬೇಡಿ ಜೊತೆಗೆ ಇದ್ದುದರಲ್ಲಿಯೇ ತೃಪ್ತಿಕರ ಜೀವನ ನಡೆಸಿ

ನೆಲದ ಬಳಕೆ-ಸರಿಸುವ ಕರ್ಟನ್


ದೊಡ್ಡದಾದ ಕರ್ಟನ್ ಅನ್ನು ಸಣ್ಣ ಕೋಣೆಗಳ ಅಲಂಕಾರಕ್ಕೆ ಬಳಸಿಕೊಳ್ಳುವುದು ಮಾಡುವಂತಹ ಸಣ್ಣ ತಪ್ಪು. ಉದ್ದನೆಯ ಕರ್ಟನ್‪ಗಳಿದ್ದರೆ ಆಗ ನಿಮ್ಮ ನೆಲದ ಅರ್ಧಭಾಗವನ್ನು ಅದು ಆವರಿಸಿಕೊಳ್ಳುತ್ತದೆ ಮತ್ತು ಇಕ್ಕಟ್ಟಾದಂತೆ ಕಾಣಿಸುತ್ತದೆ.

ಕನ್ನಡಿ ಅಳವಡಿಸದೆ ಇರುವುದು


ಕನ್ನಡಿಯಿಂದಾಗಿ ಕೋಣೆಗಳಲ್ಲಿ ತುಂಬಾ ಜಾಗವಿದ್ದಂತೆ ಮತ್ತು ಹೊಳೆದಂತೆ ಭಾಸವಾಗುತ್ತದೆ. ಇದು ಗೋಡೆಗಳ ಏಕತಾನತೆಯನ್ನು ನಿವಾರಿಸಬಲ್ಲದು. ಚೌಕಟ್ಟಿನಿಂದ ಕೂಡಿರುವಂತಹ ಕನ್ನಡಿಯು ನಿಮ್ಮ ರುಚಿಯನ್ನು ತಿಳಿಸುತ್ತದೆ ಮತ್ತು ಕೋಣೆಯಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಕನ್ನಡಿ ಇಲ್ಲವೆಂದಾದರೆ ಸಣ್ಣ ಕೋಣೆಯನ್ನು ಸಿಂಗರಿಸುವಾಗ ಮಾಡುವಂತಹ ತಪ್ಪುಗಳಲ್ಲಿ ಇದೂ ಒಂದಾಗಿದೆ.

ಬಹುಬಳಕೆಯ ಪೀಠೋಪಕರಣಗಳನ್ನು ಖರೀದಿಸದೆ ಇರುವುದು
ನಿಮ್ಮ ಕೋಣೆಯಲ್ಲಿ ತುಂಬಾ ಕಡಿಮೆ ಜಾಗವಿದೆ. ಇದರಿಂದ ಮಂಚ ಅಥವಾ ಇತರ ಪೀಠೋಪಕರಣಗಳನ್ನು ಎಲ್ಲಿಡುತ್ತೀರಿ? ಪ್ರತಿಯೊಂದು ಅಗತ್ಯಕ್ಕೆ ಪೀಠೋಪಕರಣ ಬಳಸುವುದು ತಪ್ಪಾಗುತ್ತದೆ. ಇದಕ್ಕಿಂತ ಬಹುಬಳಕೆ ಮಾಡಬಹುದಾದಂತಹ ಪೀಠೋಪಕರಣಗಳನ್ನು ಖರೀದಿಸಿ. ಉದಾಹರಣೆಗೆ ಬಾಕ್ಸ್ ಬೆಡ್‌ನಲ್ಲಿ ಬಟ್ಟೆಗಳನ್ನು ಸಂಗ್ರಹಿಸಬಹುದು.

English summary

Simple Ways To Decorate Small Room

With the growing population of any state, the old houses are replaced with the multi-storied apartments which have generally 2-3 room-flats. In previous time, the old houses had several rooms and the space was more than the number of people. But now the situation has changed completely.
Story first published: Friday, June 12, 2015, 16:07 [IST]
X
Desktop Bottom Promotion