For Quick Alerts
ALLOW NOTIFICATIONS  
For Daily Alerts

ಮನೆಯ ಪೂಜಾ ಗೃಹದ ವಿನ್ಯಾಸಕ್ಕೂ ಆದ್ಯತೆ ನೀಡಿ

By ದೀಪಕ್
|

ಭಾರತೀಯ ಸ೦ಸ್ಕೃತಿ, ಸ೦ಪ್ರದಾಯಗಳ ಪ್ರಕಾರ, ಪೂಜಾಗೃಹವು ಮನೆಯೊ೦ದರ ಅವಿಭಾಜ್ಯ ಅ೦ಗವೇ ಸರಿ. ಪ್ರಾರ್ಥನೆಯು ಒ೦ದು ವಿಧವಾದ ಧ್ಯಾನವೇ ಆಗಿದ್ದು, ಈ ಪ್ರಕ್ರಿಯೆಯು ನಮಗೆ ಮಾನಸಿಕ ಚೈತನ್ಯವನ್ನು ಒದಗಿಸುವುದಷ್ಟೇ ಅಲ್ಲ, ಜೊತೆಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿಯೂ ಕೂಡ ಪ್ರಾರ್ಥನೆಯ ಅವಶ್ಯಕತೆ ಇದೆ.

ಎಲ್ಲಾ ಹಿ೦ದೂ ಧರ್ಮೀಯರ ಮನೆಗಳಲ್ಲಿಯೂ ಸಹ, ಪೂಜಾಗೃಹ ಅಥವಾ ಪೂಜಾಕೊಠಡಿಯು ಇರಲೇಬೇಕು. ದೇವರ ಮನೆ ಅಥವಾ ಪೂಜೆ ಕೋಣೆಯು ಮನೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಇದಕ್ಕೆ ಅಡುಗೆ ಮನೆ ಮತ್ತು ಮಲಗುವ ಕೋಣೆಗೆ ಇದ್ದಷ್ಟೇ ಮಹತ್ವವಿರುತ್ತದೆ. ಮನೆ ಮಾಡುವಾಗ ಅಥವಾ ಮನೆಯನ್ನು ಕಟ್ಟುವಾಗ ಪೂಜೆ ಕೋಣೆಯನ್ನು ಸಹ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತವೆ. ಅಲ್ಲದೆ ಹಬ್ಬ ಹರಿದಿನಗಳಂದು ನಮ್ಮ ದೇವರ ಮನೆಯನ್ನು ಸಿಂಗರಿಸಿ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಈ ದೇವರ ಮನೆಯು ಮನೆಗೆ ಅಗತ್ಯವಾದ ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂಬ ಮನೋಭಾವ ಎಲ್ಲರಲ್ಲಿ ಇರುತ್ತದೆ. ಹಾಗಾಗಿಯೇ ದೇವರ ಮನೆಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ದೇವರ ಮನೆಯಲ್ಲಿ ವಿಗ್ರಹಗಳನ್ನು, ದೇವರ ಫೋಟೋಗಳನ್ನು, ಹೂವುಗಳನ್ನು, ಎಣ್ಣೆಯ ದೀಪಗಳನ್ನು ಮತ್ತು ಘಂಟೆಗಳನ್ನು ಇರಿಸಲಾಗಿರುತ್ತದೆ. ಇಲ್ಲಿ ನಾವು ಮಂತ್ರಗಳನ್ನು ಮತ್ತು ಪ್ರಾರ್ಥನೆಗಳನ್ನು, ದೀಪಾರಾಧನೆಯನ್ನು ಮತ್ತು ಧೂಪ ಹಾಗು ಮಂಗಳಾರತಿಗಳನ್ನು ಮಾಡುತ್ತೇವೆ. ಹೀಗಾಗಿ ಇದು ಇಡೀ ಮನೆಯಲ್ಲಿ ನಂಬಿಕೆ, ಭಕ್ತಿಗಳ ತಾಣವಾಗಿ ಮಾರ್ಪಾಡಾಗಿರುತ್ತದೆ.

ಈ ಅಂಕಣದಲ್ಲಿ ನಾವು ನಿಮ್ಮ ಪೂಜೆ ಕೋಣೆಯನ್ನು ಯಾವ ರೀತಿ ಅಲಂಕರಿಸಬೇಕು ಎಂಬುದರ ಕುರಿತು ನಿಮಗೆ ಕೆಲವೊಂದು ಮಾಹಿತಿಗಳನ್ನು ನೀಡುತ್ತೇವೆ. ಸಣ್ಣ ಮತ್ತು ದೊಡ್ಡ ಬಜೆಟಿನಲ್ಲಿ ದೇವರ ಮನೆಯನ್ನು ಹೇಗೆ ಅಲಂಕಾರವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇವೆ. ಜೊತೆಗೆ ನಾವು ದೇವರ ಮನೆಗೆ ಸಂಬಂಧಿಸಿದ ವಾಸ್ತು ಶಾಸ್ತ್ರದ ಸಲಹೆಗಳನ್ನು ಸಹ ತಿಳಿಸಿಕೊಡುತ್ತೇವೆ. ಬನ್ನಿ ಪೂಜೆ ಕೋಣೆಯನ್ನು ಸುಂದರವಾಗಿಸುವ 7 ವಿನ್ಯಾಸಗಳ ಕುರಿತು ನೋಡಿಕೊಂಡು ಬರೋಣ? ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಸಮಕಾಲೀನ ದೇವರ ಮನೆಯ ವಿನ್ಯಾಸ

ಸಮಕಾಲೀನ ದೇವರ ಮನೆಯ ವಿನ್ಯಾಸ

ಇದು ಸಮಕಾಲೀನ ದೇವರ ಮನೆಯ ವಿನ್ಯಾಸವಾಗಿದ್ದು, ಶುಭ್ರತೆಗೆ ಹೆಚ್ಚಿನ ಆಧ್ಯತೆ ನೀಡುತ್ತದೆ, ನೇರವಾದ ರೇಖೆಗಳು ಇದರ ವಿಶೇಷತೆ. ಈ ವಿನ್ಯಾಸವು ಪ್ರಾರ್ಥನೆಗೆ ಹೇಳಿ ಮಾಡಿಸಿದ ವಿನ್ಯಾಸವಾಗಿರುತ್ತದೆ. ಈ ವಿನ್ಯಾಸವು ನಿಮ್ಮ ಸ್ಥಳ ಮತ್ತು ಪ್ರತ್ಯೇಕ ಕೋಣೆಗಳ ಜೊತೆಗೆ ಸಂಯೋಜನೆಯನ್ನು ಹೊಂದಿರುತ್ತದೆ. ಅಲ್ಲದೆ ಇರುವ ಸ್ಥಳಾವಕಾಶವನ್ನೆ ಸರಿಯಾದ ಕ್ರಮದಲ್ಲಿ ಇದು ಬಳಸಿಕೊಳ್ಳುತ್ತದೆ. ಮರದ ಗಾಢ ಬಣ್ಣದ ಬಾರ್ಡರ್‌ಗಳು ಈ ಪೂಜೆ ಕೋಣೆಯ ಅಂದವನ್ನು ಹೆಚ್ಚಿಸುತ್ತದೆ. ಹಿನ್ನಲೆಯಲ್ಲಿರುವ ಟೈಲ್ಸ್‌ಗಳು ಮತ್ತು ಕಣ್ಣಿಗೆ ಆಕರ್ಷಕವಾಗಿ ಎದ್ದು ಕಾಣುವ ಈ ವಿನ್ಯಾಸವು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಜೊತೆಗೆ ಇದನ್ನು ಸ್ವಚ್ಛಗೊಳಿಸುವುದು ಸಹ ಸುಲಭ.Image Courtesy: Hasta Architects/homify.in

 ಕಲೆಯಿಂದ ಕೂಡಿದ ಪೂಜಾ ಮಂದಿರ

ಕಲೆಯಿಂದ ಕೂಡಿದ ಪೂಜಾ ಮಂದಿರ

ಕಲೆಯಿಂದ ಕೂಡಿದ ಪೂಜಾ ಮಂದಿರವು ಹಳದಿ ಮತ್ತು ಬಿಳಿ ಬಣ್ಣಗಳಿಂದ ಕಣ್ಮನ ಸೂರೆಗೊಳ್ಳುತ್ತದೆ. ಈ ಎರಡು ಪವಿತ್ರ ಬಣ್ಣಗಳು ಪೂಜಾ ಮಂದಿರಕ್ಕೆ ಹೇಳಿ ಮಾಡಿಸಿದ ಬಣ್ಣಗಳಾಗಿರುತ್ತವೆ. ಮುರಲ್‌ನಲ್ಲಿ ಅರಳಿರುವ ಕೃಷ್ಣನ ವಿಗ್ರಹವು ಈ ಪೂಜಾ ಮಂದಿರಕ್ಕೆ ವಿಶೇಷ ಕಳೆಯನ್ನು ನೀಡುತ್ತಾನೆ. ಸುಂದರವಾದ ಜಲಿ ಅಥವಾ ಲಟ್ಟೈಸ್ ಮಾಡಲಾದ ಪರದೆಗಳು ಈ ಪೂಜಾ ಮಂದಿರಕ್ಕೆ ಭಾರತೀಯ ವಾಸ್ತು ಶಿಲ್ಪದ ಸ್ಪರ್ಶವನ್ನು ನೀಡಿದೆ.

Image Courtesy: The Orange Lane/ homify.in

ಬೆಡ್‌ರೂಮಿನಲ್ಲಿ ಪೂಜಾ ಕಾರ್ನರ್

ಬೆಡ್‌ರೂಮಿನಲ್ಲಿ ಪೂಜಾ ಕಾರ್ನರ್

ಉಳ್ಳವರು ಶಿವಾಲಯವನ್ನು ಕಟ್ಟವರು ನಾನೇನು ಮಾಡಲಯ್ಯ, ಬಡವನಯ್ಯ ಎಂಬ ವಚನದ ಉಕ್ತಿಯಂತೆ, ಸ್ಥಳಾವಕಾಶ ಇರುವವರು ದೇವರ ಮನೆಯನ್ನು ಮಾಡಿಕೊಳ್ಳುತ್ತಾರೆ. ಸ್ಥಳವಿಲ್ಲದಿದ್ದರೆ ಚಿಂತೆ ಏಕೆ? ಬೆಡ್‌ರೂಮಿನ ಮೂಲೆಯಲ್ಲಿ ಪೂಜಾ ಕಾರ್ನರ್ ಮಾಡಿಕೊಳ್ಳಬಹುದು. ಒಂದು ಸಣ್ಣ ಕ್ಯಾಬಿನೆಟ್ ಮೂಲಕ ಇದನ್ನು ತಯಾರಿಸಿಕೊಳ್ಳಬಹುದು, ಎರಡು ಫ್ಲೋಟಿಂಗ್ ಡ್ರಾಯೆರ್‌ಗಳ ಸಹಾಯದಿಂದ ಇದನ್ನು ಮಾಡಿಕೊಳ್ಳಬಹುದು ಮತ್ತು ಇದರ ಗಾಜಿನ ಶೆಲ್ಫ್‌ಗಳು ದೇವರ ವಿಗ್ರಹವನ್ನು ಇಡಲು ಮತ್ತು ಅವುಗಳು ಎದ್ದು ಕಾಣಲು ಸಹಕರಿಸುತ್ತವೆ. ಇದರ ಮೇಲಿನ ಬಿಳಿ ಪ್ರಭಾವಳಿಯಂತಹ ರಚನೆ ಮತ್ತು ಅದರ ಮೇಲಿನ ಗಂಟೆ ಹಾಗು ಸ್ವಸ್ತಿಕಗಳು ವಾಸ್ತುಶಾಸ್ತ್ರದ ಆಧಾರದ ಮೇಲೆ ರಚಿಸಲಾಗಿದೆ. ಆದರೆ ಒಂದು ಮಾತು ನೆನಪಿಡಿ ನಿಮ್ಮ ಕಾಲುಗಳು ನೇರವಾಗಿ ಪೂಜಾ ಕಾರ್ನರ್ ಕಡೆಗೆ ಮುಖ ಮಾಡಿರಬಾರದು.

Image Courtesy: Instinct Designs/ homify.in

ಪ್ರಾರ್ಥನೆಗಾಗಿ ಪವಿತ್ರ ವೇದಿಕೆ

ಪ್ರಾರ್ಥನೆಗಾಗಿ ಪವಿತ್ರ ವೇದಿಕೆ

ಈ ವೇದಿಕೆಯು ಮುಖ್ಯವಾಗಿ ಪ್ರಾರ್ಥನೆಗೆಂದು ವಿನ್ಯಾಸ ಮಾಡಲಾಗಿರುತ್ತದೆ. ಇದು ಲಿವಿಂಗ್ ಏರಿಯಾ ಅಥವಾ ಡೈನಿಂಗ್ ಪ್ರದೇಶದ ಜೊತೆಗೆ ಸಂಘಟಿತವಾಗಿರುತ್ತದೆ. ಪೂಜಾ ಕೋಣೆಗಳು ಪವಿತ್ರವಾದವು ಮತ್ತು ಯಾವಾಗಲೂ ಇಡೀ ಮನೆಗೆ ಧನಾತ್ಮಕ ಶಕ್ತಿಯನ್ನು ಪಸರಿಸುತ್ತಾ ಇರುತ್ತವೆ. ಹಾಗಾಗಿ ಈ ಕೋಣೆಗಳನ್ನು ಮನೆಯ ಮಧ್ಯ ಭಾಗದಲ್ಲಿ ಸಹ ಇಡಲು ಜನ ಆಲೋಚಿಸುತ್ತಾರೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ.

Image Courtesy: Neeras Design Studio/ homify.in

ಅದ್ಧೂರಿಯಾದ ಪೂಜಾ ಮಂದಿರ

ಅದ್ಧೂರಿಯಾದ ಪೂಜಾ ಮಂದಿರ

ಸೂಕ್ಷ್ಮವಾದ ಕೆತ್ತನೆಗಳು, ಬಿಳಿಯ ಅಮೃತ ಶಿಲೆಯಿಂದ ಅಲಂಕಾರಗೊಂಡ ಈ ಪೂಜಾ ಕೋಣೆಯು ಗೋಡೆಗೆ ಅಂಟಿಕೊಂಡಂತೆ ಇರುವ ಮರದ ಪ್ಯಾನೆಲ್‌ನ ರಕ್ಷಣೆಯನ್ನು ಹೊಂದಿದೆ. ಇವುಗಳೆಲ್ಲವು ಈ ವಿನ್ಯಾಸಕ್ಕೆ ಒಂದು ಅದ್ಭುತವಾದ ಮೆರಗನ್ನು ನೀಡುತ್ತವೆ. ವಾಸ್ತುಶಾಸ್ತದ ಪ್ರಕಾರ ಪೂಜೆ ಕೋಣೆಗೆ ಈಶಾನ್ಯ ದಿಕ್ಕು ಪವಿತ್ರವಾದ ಸ್ಥಳವಾಗಿರುತ್ತದೆ. ಅತ್ಯಂತ ಪ್ರಮುಖವಾಗಿ ಈ ಪೂಜಾ ಕೋಣೆಯನ್ನು ಬಾತ್‌ರೂಮಿಗೆ ಹತ್ತಿರ ಮಾತ್ರ ನಿರ್ಮಿಸಬಾರದು.

Image Courtesy: Hasta Architects/ homify.in

ಮರದ ಪೂಜಾ ಕೋಣೆ ವಿನ್ಯಾಸ

ಮರದ ಪೂಜಾ ಕೋಣೆ ವಿನ್ಯಾಸ

ಅಮೃತ ಶಿಲೆಯ ಮೆಟ್ಟಿಲು ಈ ಪೂಜಾ ಕೋಣೆಯ ಸೌಂದರ್ಯವನ್ನು ಹೆಚ್ಚಿಸಿದೆ. ಜೊತೆಗೆ ಇದರಲ್ಲಿನ ಬಿಳಿ ವಾಲ್‌ಪೇಪರ್‌ಗಳು ತಮ್ಮ ವಿನ್ಯಾಸ ಮತ್ತು ಪ್ರಶಾಂತತೆಯಿಂದ ಮತ್ತಷ್ಟು ಭಕ್ತಿ-ಭಾವಗಳನ್ನು ತರುತ್ತವೆ. ದೊಡ್ಡದಾದ ಕಿಟಕಿಗಳು ಕೋಣೆಗೆ ಅಗತ್ಯವಾದ ಬೆಳಕನ್ನು ಸ್ವಾಭಾವಿಕವಾಗಿ ನೀಡುತ್ತವೆ. ಜೊತೆಗೆ ಮರವು ಪೂಜಾ ಕೋಣೆಗೆ ಸ್ವಾಭಾವಿಕತೆಯ ಮೆರಗನ್ನು ನೀಡುತ್ತದೆ.

Image Courtesy: Hasta Architects/ homify.in

ಕೃತಜ್ಞತಾ ಪೂರ್ವಕ ಪೂಜಾ ಮಂದಿರದ ವಿನ್ಯಾಸ

ಕೃತಜ್ಞತಾ ಪೂರ್ವಕ ಪೂಜಾ ಮಂದಿರದ ವಿನ್ಯಾಸ

ಈ ಮೂರು-ಹಂತದ ಪೂಜಾ ಕೋಣೆಯ ವಿನ್ಯಾಸವು, ತನ್ನ ಲೈಟಿಂಗ್ ಮತ್ತು ಬಿಳಿಯ ಪರದೆಯ ಹಿನ್ನಲೆಯಿಂದ ನಿಮ್ಮ ಮನೆಗೆ ಮೆರಗು ನೀಡಬಲ್ಲದು. ಈ ಪೂಜಾ ಕೋಣೆಯಲ್ಲಿ ದೈವೀಕತೆ, ಪ್ರಶಾಂತತೆಯ ಜೊತೆಗೆ ಉಲ್ಲಾಸಕರವಾದ ಮೂಡ್ ಸಹ ನಿಮಗೆ ಸಿಕ್ಕುತ್ತದೆ. ಬಣ್ಣ, ಬೆಳಕು, ಭಕ್ತಿ ಎಲ್ಲವೂ ಸೇರಿ ನಿಮ್ಮಲ್ಲಿ ದೇವರ ಕೃಪೆಗೆ ಕೃತಜ್ಞತೆಯನ್ನು ತಿಳಿಸುವ ತವಕವನ್ನು ಮೂಡಿಸುತ್ತವೆ. ಸರಳವಾದ ಮತ್ತು ಸುಮಧುರವಾದ ಈ ವಿನ್ಯಾಸವು ಎಂತಹವರನ್ನು ಸಹ ತಡೆದು ಒಮ್ಮೆ ಪ್ರಾರ್ಥನೆ ಸಲ್ಲಿಸುವಂತೆ ಮಾಡುತ್ತದೆ. ಈ ಚೇತೋಹಾರಿಯಾದ ಸುಂದರ ಪೂಜಾಕೋಣೆಗಳ ವಿನ್ಯಾಸಗಳು ನಿಮಗೆ ಇಷ್ಟವಾದವು ಎಂದು ಭಾವಿಸುತ್ತೇವೆ. Image Courtesy: Drashtikon Designer Consultant/ homify.in

ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary

7 Awesome Pooja Room Designs

Pooja rooms or prayer rooms are as essential as a kitchen or a bedroom in an Indian home. The pooja room is a sacred space of worship and prayer; it is a place where we conduct rituals to show honour and reverence to our gods. Pooja rooms are considered highly auspicious as they bring positive energy to a home and its inhabitants. Let's have a look at these 7 beautiful pooja room designs
Story first published: Monday, November 16, 2015, 16:18 [IST]
X
Desktop Bottom Promotion