For Quick Alerts
ALLOW NOTIFICATIONS  
For Daily Alerts

ಪಾತ್ರೆ ತೊಳೆಯೋಕೆ ಇವುಗಳನ್ನು ಬಳಸಬಹುದು

By Su.Ra
|

ಪಾತ್ರೆ ತೊಳೆಯಲು ಈಗಿನ ಮಹಿಳೆಯರಿಗಂತೂ ಸಾಬೂನು ಬೇಕೇ ಬೇಕು..ಈಗೆಲ್ಲ ಅಂತೂ ಪಾತ್ರೆ ತೊಳೆಯಲೆಂದೇ ನೊರೆ ಬರುವ ಲಿಕ್ವಿಡ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ರೆ ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಈ ಎಲ್ಲಾ ವಸ್ತುಗಳು ಇರಲೇ ಇಲ್ಲ. ಹಾಗಾದ್ರೆ ಹಿಂದಿನ ಕಾಲದಲ್ಲಿ ಬಳಸ್ತಾ ಇದ್ದ ವಸ್ತುಗಳನ್ನು ಈಗಲೂ ಪಾತ್ರೆ ತೊಳೆಯಲು ಬಳಸಬಾರದಾ? ತಪ್ಪಾ ಅಂತ ಪ್ರಶ್ನೆ ಕೇಳಿದ್ರೆ ಖಂಡಿತ ಇಲ್ಲ. ನೀವೂ ಕೂಡ ನಿಮ್ಮ ಮನೆಯ ಪಾತ್ರೆಗಳನ್ನು ತೊಳೆಯಲು ಈ ನೈಸರ್ಗಿಕ ವಸ್ತು ಇಲ್ಲವೇ, ನಿಮ್ಮ ಅಡುಗೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸ್ಬಹುದು.

ಕಾಫಿ ಪುಡಿಯ ಚರಟ
ಕಾಫಿಗೆ ಅಂತ ಡಿಕಾಕ್ಷನ್ ಹಾಕಿದ ನಂತ್ರ, ಆ ಕಾಫಿಪುಡಿಯನ್ನು ಹೆಚ್ಚಿನ ಮಹಿಳೆಯರು ಎಸೆಯೋದು ಮಾಮೂಲಿ. ಆದ್ರೆ ಹಿಂದಿನ ಕಾಲದಲ್ಲಿ ಆ ಕಾಫಿಪುಡಿಯನ್ನೇ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆಯಲು ಬಳಸಲಾಗ್ತಾ ಇತ್ತು. ನೀವೂ ಕೂಡ ಸೋಪು, ನೊರೆ ಬರುವ ಲಿಕ್ವಿಡ್ಗಳ ಬದಲಾಗಿ ಇದನ್ನ ಬಳಸ್ಬಹುದು. ಪಾತ್ರೆ ತೊಳೆಯುವುದೇ ಸಮಸ್ಯೆ ಆಗಿ ಬಿಟ್ಟಿದೆ! ಏನು ಮಾಡ್ಲಿ?

ತೆಂಗಿನಕಾಯಿ ನಾರಿನ ಸ್ಕ್ರಬ್
ಈಗೆಲ್ಲ ಪಾತ್ರೆ ತೊಳೆಯಲು ಮೆಟಲ್ ಸ್ಕ್ರಬ್, ಅಥ್ವಾ ಇತ್ಯಾದಿ ವೆರೈಟಿಯ ಸ್ಕ್ರಬ್ಗಳು ಲಭ್ಯವಿದೆ. ಬಟ್ ಹಿಂದಿನ ಕಾಲದಲ್ಲಿ, ಈಗಲೂ ಕೆಲವು ಹಳ್ಳಿಕಡೆಗಳಲ್ಲಿ ಪಾತ್ರೆ ತೊಳೆಯಲು ತೆಂಗಿನಕಾಯಿ ನಾರನ್ನೇ ಸ್ಕ್ರಬ್ ಆಗಿ ಬಳಸಲಾಗುತ್ತೆ. ನೀವು ತೆಂಗಿನಕಾಯಿ ತುರಿಯುವ ಸಂದರ್ಬದಲ್ಲಿ ನಾರನ್ನು ಕಿತ್ತು ಎಸೆದು ಬಿಡ್ತೀರಿ. ಆದ್ರೆ ಎಸಿಬೇಡಿ. ಬದಲಾಗಿ ಪಾತ್ರೆ ತೊಳೆಯಲು ಬಳಸಿ ನೋಡಿ.. ಸ್ಕ್ರಬ್ ಖರೀದಿಗಾಗಿ ವ್ಯಚ್ಛ ಮಾಡುವ ಹಣ ಉಳಿಸ್ಬಹುದು..

ಅಂಟವಾಳಕಾಯಿ
ನೀರಿನಲ್ಲಿ ಹಾಕಿ ಪಾತ್ರೆ ಉಜ್ಜಲು ಆರಂಭಿಸಿದ್ರೆ ಸೋಪಿನಲ್ಲಿ ನೊರೆ ಬರುವಂತೆಯೇ ಅಂಟುವಾಳಕಾಯಿ ಬಳಸೋದ್ರಿಂದಲೂ ನೊರೆ ಬರುತ್ತೆ. ಪಾತ್ರೆ ಫಳಫಳ ಹೊಳೆಯುವಂತಾಗುತ್ತೆ. ಸೋಪಿನ ಅಲರ್ಜಿ ಇರುವವರು ಖಂಡಿತ ಅಂಟುವಾಳಕಾಯಿಯನ್ನು ಪಾತ್ರೆ ತೊಳೆಯಲು ಬಳಸ್ಬಹುದು. ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಅಂಟುವಾಳಕಾಯಿಯನ್ನು ಕೂಡ ಬಳಸಲಾಗ್ತಿತ್ತು.. ನೀವೂ ಟ್ರೈ ಮಾಡಿ..

Quick & Easy Tips for Wash utensils

ಹುಣಸೆ ಹಣ್ಣು
ಹುಣಸೆ ಹಣ್ಣಿನ ರಸ ತೆಗೆದು ಆ ರಸವನ್ನು ಅಡುಗೆಗೆ ಬಳಸಿ. ಆಮೇಲೆ ಹುಣಸೆ ಕಿವುಚಿದ ವೇಸ್ಟನ್ನು ಎಸಿಬೇಡಿ. ಅದ್ರಿಂದ ಪಾತ್ರೆ ತೊಳೆಯರಿ. ಪಾತ್ರೆಗಳು ಫಳಫಳ ಹೊಳೆಯುತ್ತೆ. ಅದ್ರಲ್ಲೂ ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳನ್ನು ತೊಳೆಯಲು ಹುಣಸೆ ಬೆಸ್ಟ್.. ನಂಬಿದರೆ ನಂಬಿ ಬಿಟ್ಟರೆ ಬಿಡಿ: ಅಡುಗೆ ಪಾತ್ರೆ ಕೂಡ ಸುರಕ್ಷಿತವಲ್ಲ!

ನಿಂಬೆಸಿಪ್ಪೆ
ನಿಂಬೆ ಹಣ್ಣಿನ ರಸವನ್ನು ಅಡುಗೆಗೆ ಬಳಸಿ ಆಯ್ತು. ನಂತರ ಆ ರಸತೆಗೆದ ನಿಂಬೆಯ ಸಿಪ್ಪೆಯನ್ನು ಅಥ್ವಾ ಹೋಳನ್ನು ಎಸೆಯೋದು ಮಾಮೂಲು. ಆದ್ರೆ ಹಾಗೆ ಮಾಡ್ಬೇಡಿ. ಒಂದೆರಡು ಪಾತ್ರೆಗಳನ್ನು ತೊಳೆಯಲು ಆ ನಿಂಬೆಸಿಪ್ಪೆ ಬಳಕೆ ಮಾಡಿ. ಸಿಟ್ರಿಕ್ ಅಂಶವಿರುವ ಹಣ್ಣು ಇದಾಗಿರೋದ್ರಿಂದ ಪಾತ್ರೆಯಲ್ಲಿರುವ ಕೀಟಾಣುಗಳ ನಿವಾರಣೆಗೆ ನಿಂಬೆ ಸಹಕಾರಿಯಾಗಿರುತ್ತೆ. ಅದೇ ಕಾರಣಕ್ಕೆ ಈಗಿನ ಡಿಟರ್ಜೆಂಟ್ಗಳಲ್ಲೂ ನಿಂಬೆಯನ್ನು ಬಳಸಲಾಗಿರುತ್ತೆ.

ಕಿತ್ತಲೆಸಿಪ್ಪೆ
ಕೆಲವು ಪಾತ್ರೆಗಳು ಸ್ಮೆಲ್ ಆಗಿ ಬಿಡ್ತವೆ. ಅಂತಹ ಸ್ಮೆಲ್ ನಿವಾರಣೆಗಾಗಿ ಕಿತ್ತಲೆ ಸಿಪ್ಪೆಯನ್ನು ಬಳಸ್ಬಹುದು. ಕಿತ್ತಲೆ ಮಾತ್ರವಲ್ಲ. ಸಿಟ್ರಿಕ್ ಅಂಶವನ್ನು ಒಳಗೊಂಡಿರುವ ಎಲ್ಲಾ ಹಣ್ಣುಗಳ ಸಿಪ್ಪೆ ಕೂಡ ಪಾತ್ರೆ ತೊಳೆಯಲು ಬಳಕೆ ಮಾಡ್ಬಹುದು. ಕಂಚಿಕಾಯಿ, ಮೂಸಂಬಿ ಸಿಪ್ಪೆ, ಚಕ್ಕೊತಾ ಹಣ್ಣಿನ ಸಿಪ್ಪೆ.. ಹೀಗೆ ಎಲ್ಲವೂ ಕೂಡ ಬಳಕೆಗೆ ಯೋಗ್ಯವಾಗಿದೆ.

ಟೀ ಚರಟ
ಟೀ ಪುಡಿಯಿಂದ ಟೀ ತಯಾರಿಸಿದ ನಂತ್ರ ಚರಟವನ್ನು ಹಾಗೇ ಎಸೆಯುವ ಬದಲು ಒಂದೆರಡು ಪಾತ್ರೆಯನ್ನು ತೊಳೆಯಲು ಅದನ್ನು ಬಳಸ್ಬಹುದು. ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?

ಬೂದಿ
ಸಿಟಿ ಮಂದಿಗೆ ಬೂದಿ ಸಿಗೋದು ಕಷ್ಟವೇ. ಆದ್ರೆ ಹಳ್ಳಿಗಳಲ್ಲಿ ಒಲೆ ಉರಿ ಉರಿಸಿದ ನಂತ್ರ ಉಳಿಯುವ ಬೂದಿಯನ್ನು ಪಾತ್ರೆ ತೊಳೆಯಲು ಇಂದಿಗೂ ಬಳಕೆ ಮಾಡುವ ಪದ್ದತಿ ಜಾರಿಯಲ್ಲಿದೆ. ಬೂದಿಯಲ್ಲಿರುವ ಕೀಟಾಣು ನಿವಾರಕ ಅಂಶಗಳು ಪಾತ್ರೆಗಳನ್ನು ಫಳಫಳ ಮಾಡುತ್ತೆ. ಈ ಎಲ್ಲಾ ವಸ್ತುಗಳನ್ನು ಡಿಟರ್ಜೆಂಟ್ ಅಲರ್ಜಿ ಇರುವವರು ಖಂಡಿತ ಬಳಸ್ಬಹುದು. ಯಾಕಂದ್ರೆ ಇವೆಲ್ಲವೂ ನೈಸರ್ಗಿಕ ವಸ್ತುಗಳಾಗಿರೋದ್ರಿಂದ ಮತ್ತು ಕೆಮಿಕಲ್ ರಹಿತವಾಗಿರೋದ್ರಿಂದ ಸೈಡ್ ಎಫೆಕ್ಟ್ ಆಗುವ ಸಾಧ್ಯತೆಗಳು ತೀರಾ ವಿರಳ.

X
Desktop Bottom Promotion