For Quick Alerts
ALLOW NOTIFICATIONS  
For Daily Alerts

ಕ್ಸೆರೋಸಿಸ್ ಗೆ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

|

ಚರ್ಮದ ಹೊರಪದರ ಒಣಗಿದ್ದು ಪಕಳೆಯೇಳುವಂತಾದಾಗ ಈ ಸ್ಥಿತಿಗೆ ಕ್ಸೆರೋಸಿಸ್ ಎಂದು ಕರೆಯುತ್ತಾರೆ. ಗ್ರೀಕ್ ಪದ "xero" ದಿಂದ ಈ ಪದ ಬಂದಿದ್ದು ಇದಕ್ಕೆ ಒಣಗಿದ ಎಂಬ ಅರ್ಥವಿದೆ. ಒಣ ಚರ್ಮ ಸಾಮಾನ್ಯವಾಗಿ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾದಾಗ ಅಥವಾ ವಯಸ್ಸಿನ ಪ್ರಭಾವದಿಂದ ಎದುರಾಗುತ್ತದೆ. ತೀರಾ ಚಳಿ ಇದ್ದಾಗ ನೀರು ಒಣಗಿ ಗಾಳಿಗೆ ಬರುವುದೇ ಇಲ್ಲವಾದುದರಿಂದ ಈ ಹವೆಯಲ್ಲಿಯೂ ಒಣಚರ್ಮ ಸಾಮಾನ್ಯವಾಗುತ್ತದೆ. ನಿಮಗೆ ವಯಸ್ಸಾದಂತೆ, ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ. ಆದರೆ ಈ ಸ್ಥಿತಿ ತಾತ್ಕಾಲಿಕವಾಗಿದ್ದು ಸೂಕ್ತ ಆರೈಕೆಯಿಂದ ಪುನಃ ಸಹಜಸ್ಥಿತಿಗೆ ಮರಳುತ್ತದೆ. ಒಣಚರ್ಮ ಹೆಚ್ಚು ಹೊತ್ತು ಹಾಗೇ ಇದ್ದರೆ ಮಾತ್ರ ಗಂಭೀರ ಪರಿಣಾಮವುಂಟಾಗಬಹುದು. ಇದನ್ನು ತಡೆಯಲು ಇರುವ ಅತ್ಯುತ್ತಮ ಮಾರ್ಗವೆಂದರೆ ಸೂಕ್ತ ತೇವಕಾರಕ ಅಥವಾ ಮಾಯಿಶ್ಚರೈಸರ್ ಬಳಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು.

ನೀರು ಮತ್ತು ಎಣ್ಣೆಯಂಶಗಳನ್ನು ಕಳೆದುಕೊಂಡಂತೆ ನಿಮ್ಮ ಚರ್ಮವು ಶುಷ್ಕ ಮತ್ತು ಒರಟಾಗಬಹುದು. ಶೀತ ಚಳಿಗಾಲದ ತಿಂಗಳುಗಳಲ್ಲಿ ಶುಷ್ಕ ಚರ್ಮವು ಹೆಚ್ಚಾಗಿ ಕಂಡುಬರುತ್ತದೆ. ಕಡಿಮೆ ಅವಧಿಯ ಸ್ನಾನ ಹಾಗೂ ಮಾಯಿಶ್ಚರೈಸರ್ ಬಳಸುವ ಮೂಲಕ ಕ್ಸೆರೋಸಿಸ್ ನಿಂದ ನೀವು ದೂರವಿರಬಹುದು.

ಕ್ಸೆರೋಸಿಸ್ ಎದುರಾಗಲು ಕಾರಣಗಳೇನು?

ಕ್ಸೆರೋಸಿಸ್ ಎದುರಾಗಲು ಕಾರಣಗಳೇನು?

ಕ್ಸೆರೋಸಿಸ್ ಕ್ಕೆ ಮುಖ್ಯ ಕಾರಣ ಚರ್ಮದ ಹೊರಪದರದಲ್ಲಿ ಎಣ್ಣೆಯ ಅಂಶ ಇಲ್ಲವಾಗುವುದು. ಇದಕ್ಕೆ ವಾತಾವರಣದಲ್ಲಿ ತೇವಾಂಶ ಇಲ್ಲದಿರುವಿಕೆ ಪ್ರಮುಖ ಕಾರಣ. ಇದರ ಹೊರತಾಗಿ ಕೆಳಗಿನ ಚಟುವಟಿಕೆ ಅಥವಾ ಸ್ಥಿತಿಗಳೂ ಒಣಚರ್ಮಕ್ಕೆ ಕಾರಣವಾಗಬಹುದು:

* ಚರ್ಮವನ್ನು ಅಗತ್ಯಕ್ಕೂ ಹೆಚ್ಚಾಗಿ ಉಜ್ಜುವುದು ಅಥವಾ ಸ್ವಚ್ಛಗೊಳಿಸುವುದು

* ಅತಿಯಾದ ಬಿಸಿನೀರಿನಿಂದ ಸ್ನಾನ ಮಾಡುವುದು

* ಅತಿ ಕಡಿಮೆ ಅಂತದಲ್ಲಿ ಹಲವಾರು ಬಾರಿ ಸ್ನಾನ ಮಾಡುವುದು

* ಸ್ನಾನದ ಬಳಿಕ ಹೆಚ್ಚಿನ ಒತ್ತಡದಲ್ಲಿ ಟವೆಲ್ಲಿನಿಂದ ಉಜ್ಜಿಕೊಳ್ಳುವುದು

* ಅತಿ ಕಡಿಮೆ ಆರ್ದ್ರತೆ ಇರುವ ಸ್ಥಳದಲ್ಲಿ ವಾಸವಾಗಿರುವುದು

* ಮನೆ ಅಥವಾ ಕೆಲಸದ ಸ್ಥಳದಲ್ಲಿ ವಾತಾವರಣವನ್ನು ಬಿಸಿಯಾಗಿಸುವ ವ್ಯವಸ್ಥೆ ಇರುವುದು

* ಸಾಕಷ್ಟು ನೀರು ಕುಡಿಯದೇ ಇದ್ದು ನಿರ್ಜಲೀಕರಣಕ್ಕೆ ಒಳಗಾಗಿರುವುದು

* ಅತಿ ಹೆಚ್ಚು ಕಾಲ ಸೂರ್ಯನ ರಶ್ಮಿಗೆ ಒಡ್ಡಿಕೊಂಡಿರುವುದು

ಕ್ಸೆರೋಸಿಸ್ ಸಾಧ್ಯತೆ ಅತಿ ಹೆಚ್ಚು ಇರುವುದು ಯಾರಿಗೆ?

ಕ್ಸೆರೋಸಿಸ್ ಸಾಧ್ಯತೆ ಅತಿ ಹೆಚ್ಚು ಇರುವುದು ಯಾರಿಗೆ?

ಶೀತಲ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಗಾಳಿ ತುಂಬಾ ಒಣಗಿದ್ದಾಗ ಮತ್ತು ಕಡಿಮೆ ಆರ್ದ್ರತೆ ಇರುವ ಸಂದರ್ಭದಲ್ಲಿ ಕ್ಸೆರೋಸಿಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕಿರಿಯರಿಗಿಂತ ವಯಸ್ಸಾದವರಿಗೆ ಈ ಸ್ಥಿತಿ ಆವರಿಸುವ ಸಾಧ್ಯತೆ ಹೆಚ್ಚು. ಹಾರ್ಮೋನುಗಳಲ್ಲಿನ ಬದಲಾವಣೆಗಳಿಂದಾಗಿ ವಯಸ್ಸಾದಂತೆ ನಮ್ಮ ಬೆವರು ಗ್ರಂಥಿಗಳು ಮತ್ತು ಸೆಬಾಸಿಯಸ್ ಗ್ರಂಥಿಗಳು ಕಡಿಮೆ ಸಕ್ರಿಯವಾಗುತ್ತಾ ಹೋಗುತ್ತವೆ. ಇದರಿಂದ ಕ್ಸೆರೋಸಿಸ್ ಸಮಸ್ಯೆ ಉಂಟಾಗುತ್ತದೆ. 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಇದು ಹೆಚ್ಚು ಆವರಿಸುತ್ತದೆ. ಮಧುಮೇಹ ಇನ್ನೊಂದು ಅಪಾಯಕಾರಿ ಅಂಶವಾಗಿದೆ, ಮಧುಮೇಹ ಹೊಂದಿರುವ ವಯಸ್ಸಾದ ವ್ಯಕ್ತಿಗಳಿಗೂ ಕ್ಸೆರೋಸಿಸ್ ಎದುರಾಗುವ ಸಾಧ್ಯತೆ ಅತಿ ಹೆಚ್ಚು.

ಕ್ಸೆರೋಸಿಸ್ ಲಕ್ಷಣಗಳು ಯಾವುವು?

ಕ್ಸೆರೋಸಿಸ್ ಲಕ್ಷಣಗಳು ಯಾವುವು?

* ಚರ್ಮದ ಹೊರಪದರ ಒಣಗಿ ಪಕಳೆಯೇಳುವುದು, ತುರಿಕೆ

* ಮೊಣಕಾಲ ಕೆಳಗೆ ಮತ್ತು ಮೊಣಕೈ ಭಾಗದಲ್ಲಿ, ಎಂದರೆ ಮೂಳೆಗೆ ಚರ್ಮ ಹೆಚ್ಚು ಅಂಟಿರುವ ಭಾಗದಲ್ಲಿ ಚರ್ಮದಲ್ಲಿ ಬಿಗಿತದ ಅನುಭವ

* ಸ್ನಾನದ ಬಳಿಕ ಚರ್ಮ ಬಿಳಿಚಿಕೊಳ್ಳುವುದು ಮತ್ತು ಪಕಳೆಗಳಿಂದ ಕೂಡಿರುವುದು

* ಚರ್ಮ ಕೆಂಪಗಾಗುವುದು ಮತ್ತು ಉರಿತ

* ಚರ್ಮದಲ್ಲಿ ಸೂಕ್ಷ್ಮ ಬಿರುಕುಗಳು ಕಾಣಿಸಿಕೊಳ್ಳುವುದು.

ಕ್ಸೆರೋಸಿಸ್ ಗೆ ಚಿಕಿತ್ಸೆ

ಕ್ಸೆರೋಸಿಸ್ ಗೆ ಚಿಕಿತ್ಸೆ

ಒಣಚರ್ಮಕ್ಕೆ ಸರಳ ಮನೆಮದ್ದುಗಳೇ ಸಾಕಾಷ್ಟಿದೆ.

* ಅತಿ ಸರಳ ಉಪಾಯವೆಂದರೆ ಉತ್ತಮ ಗುಣಮಟ್ಟದ ತೇವಕಾರಕವನ್ನು ಹಚ್ಚಿಕೊಳ್ಳುವುದು.

* ಎಣ್ಣೆಯಾಧಾರಿತ ಕ್ರೀಂ ಅಥವಾ ವ್ಯಾಸೆಲಿನ್ ಒಣಚರ್ಮಕ್ಕೆ ಧಾರಾಳವಾಗಿ ಸಾಕಾಗುತ್ತದೆ

* ನೀರು ಆಧಾರಿತ ಕ್ರೀಂ ಬೇಕಾಗುತ್ತದೆ.(ಲ್ಯಾಕ್ಟಿಕ್ ಅಮ್ಲ, ಯೂರಿಯಾ ಅಥವಾ ಇವೆರಡೂ ಇರುವ ಪ್ರಸಾದನಗಳನ್ನು ಬಳಸಿ)

* ತೀರಾ ಒಣಚರ್ಮಕ್ಕೆ ಸ್ಟ್ರೆರಾಯ್ಡ್ ಚಿಕಿತ್ಸೆಯ ಅಗತ್ಯ ಬೀಳಬಹುದು.

ಆದರೆ ಈ ವಿಧಾನಗಳನ್ನು ಸ್ವತಃ ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.

ಕೆಲವು ಉತ್ಪನ್ನಗಳು "ಲೋಶನ್" ಎಂಬ ಹೆಸರನ್ನು ಹೊಂದಿದ್ದರೆ ಇವನ್ನು ಬಳಸದಿರಿ. ಏಕೆಂದರೆ ಕ್ರೀಂ ಗಿಂತಲೂ ಲೋಶನ್ ಗಳಲ್ಲಿ ಕಡಿಮೆ ತೈಲದ ಅಂಶವಿರುತ್ತದೆ. ಕೆಲವರಿಗೆ ನೀರು ಆಧಾರಿತ ಉತ್ಪನ್ನಗಳು ಒಳ್ಳೆಯದು ಮಾಡುವ ಬದಲು ಉರಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಒಂದು ವೇಳೆ ಈ ಅನುಭವವಾದರೆ ತಕ್ಷಣವೇ ಇದನ್ನು ತೊಳೆದುಕೊಳ್ಳಬೇಕು.

ಇತರ ಚಿಕಿತ್ಸೆಗಳೆಂದರೆ:

ಇತರ ಚಿಕಿತ್ಸೆಗಳೆಂದರೆ:

* ಆದಷ್ಟೂ ಬಿಸಿ ತಾಕುವುದರಿಂದ ರಕ್ಷಣೆ ಪಡೆಯಬೇಕು

* ಸ್ನಾನವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಮಾಡಬೇಕು

* ದಿನವಿಡೀ ಸಾಕಷ್ಟು ನೀರನ್ನು ಕುಡಿಯುತ್ತಾ ಇರಬೇಕು.

ಅವಶ್ಯಕ ತೈಲಗಳು ಮತ್ತು ಅಲೋವೆರಾದಂತಹ ನೈಸರ್ಗಿಕ ಚಿಕಿತ್ಸೆಗಳು ಕ್ಸೆರೋಸಿಸ್ ಚಿಕಿತ್ಸೆಯಲ್ಲಿ ಜನಪ್ರಿಯವಾಗಿವೆ, ಆದರೆ ಅವುಗಳ ಪರಿಣಾಮಗಳು ಹೆಚ್ಚಾಗಿ ಸಾಬೀತಾಗಿಲ್ಲ. ಕ್ಸೆರೋಸಿಸ್ ಚಿಕಿತ್ಸೆಗೆ ಅಲೋವೆರಾವನ್ನು ಬಳಸದಿರುವುದೇ ಉತ್ತಮ , ಏಕೆಂದರೆ ಇದು ಚರ್ಮವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ತೆಂಗಿನ ಎಣ್ಣೆಯಂತಹ ಹಿತವಾದ ತೈಲ ಚರ್ಮದಲ್ಲಿ ತೇವಾಂಶವನ್ನು ಹಿಡಿದಿಡಲು ಮತ್ತು ತುರಿಕೆ ನಿವಾರಿಸಲು ಸಹಾಯ ಮಾಡುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು?

ವೈದ್ಯರನ್ನು ಯಾವಾಗ ಕಾಣಬೇಕು?

ಈ ಕೆಳಗಿನ ಸ್ಥಿತಿಗಳು ಕಾಣಿಸಿಕೊಂಡರೆ ತಡಮಾಡದೇ ಚರ್ಮವೈದ್ಯರನ್ನು ಕಾಣಬೇಕು:

* ನಿಮ್ಮ ಚರ್ಮದಿಂದ ದ್ರವ ಒಸರುತ್ತಿದ್ದರೆ

* ನಿಮ್ಮ ಚರ್ಮದ ಹೆಚ್ಚಿನ ಭಾಗದಲ್ಲಿ ಹೊರಚರ್ಮ ಸುಲಿಯಲಾರಂಭಿಸಿದಾಗ

* ಚರ್ಮದ ಮೇಲೆ ವೃತ್ತಾಕಾರದಲ್ಲಿ ಕೆಂಪು ಚಿಕ್ಕ ಚಿಕ್ಕ ಗುಳ್ಳೆಗಳು ಅಥವಾ ಕೆಂಪಗಾಗಿರುವುದು ಕಂಡುಬಂದರೆ

* ಕೆಲವು ವಾರಗಳ ಚಿಕಿತ್ಸೆಯ ಬಳಿಕವೂ ಸುಧಾರಣೆ ಕಾಣಿಸದಿದ್ದರೆ

* ಚಿಕಿತ್ಸೆಯಿಂದ ಗುಣವಾಗುವ ಬದಲು ಉಲ್ಬಣಗೊಂಡರೆ

ಒಣಚರ್ಮವಿದ್ದಾಗ ಅತಿಯಾಗಿ ತುರಿಸಿಕೊಂಡಾಗಲೂ ಸೋಂಕಿಗೆ ಕಾರಣವಾಗಬಹುದು. ಇದರಿಂದ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕು, ಅಲರ್ಜಿ ಅಥವಾ ಚರ್ಮದ ಸಮಸ್ಯೆಯನ್ನೂ ಎದುರಿಸಬೇಕಾಗಬಹುದು.

ಯುವಜನರಲ್ಲಿ ಒಣ ಚರ್ಮದಿಂದ ಅಟೊಪಿಕ್ ಡರ್ಮಟೈಟಿಸ್ ಉಂಟಾಗಬಹುದು. ಇದನ್ನು ಎಕ್ಸಿಮಾ ಎಂತಲೂ ಕರೆಯಲಾಗುತ್ತದೆ. ಎಕ್ಸಿಮಾದ ಪ್ರಮುಖ ಲಕ್ಷಣವೆಂದರೆ ಶುಷ್ಕ ಮತ್ತು ತುರಿಕೆ ಉಂಟಾಗುವುದು. ನಿಮಗೆ ಎಕ್ಸಿಮಾ ಇರುವ ಬಗ್ಗೆ ಸಂಶಯವಿದ್ದರೆ ಕೂಡಲೇ ಚರ್ಮರೋಗ ತಜ್ಞರನ್ನು ಬೇಡಿ ಮಾಡಿ. ಈ ಚಿಕಿತ್ಸೆಯು ಕ್ಸೆರೋಸಿಸ್ ಗಿಂದ ಭಿನ್ನವಾಗಿರುತ್ತದೆ.

ಕ್ಸೆರೋಸಿಸ್ ನಿಂದ ಇಂತಹ ಸಮಸ್ಯೆಗಳೂ ಉದ್ಭವಿಸಬಹುದು

ಕ್ಸೆರೋಸಿಸ್ ನಿಂದ ಇಂತಹ ಸಮಸ್ಯೆಗಳೂ ಉದ್ಭವಿಸಬಹುದು

* ಹುಳಕಡ್ಡಿ

* ಥೈರಾಯ್ಡ್ ಸಮಸ್ಯೆಗಳು

* ಸೋರಿಯಾಸಿಸ್

ಆದ್ದರಿಂದ, ಕ್ಸೆರೋಸಿಸ್ ಅನ್ನು ನಿರ್ಲಕ್ಷಿಸದಿರುವುದು ಉತ್ತಮ.

ಕ್ಸೆರೋಸಿಸ್ ಅನ್ನು ಹೇಗೆ ತಡೆಯಬಹುದು?

ಕ್ಸೆರೋಸಿಸ್ ಅನ್ನು ಹೇಗೆ ತಡೆಯಬಹುದು?

ಒಣಚರ್ಮವನ್ನು ಸದಾ ತಡೆಯಲು ಸಾಧ್ಯವಿಲ್ಲ, ವಿಶೇಷವಾಗಿ ವಯಸ್ಸಾಗುತ್ತಿದ್ದಂತೆ ಇದು ಕಷ್ಟಕರವಾಗುತ್ತದೆ. ಆದರೂ, ನಿಮ್ಮ ದೈನಂದಿನ ದಿನಚರಿಯನ್ನು ಸರಳವಾಗಿ ಮಾರ್ಪಡಿಸುವ ಮೂಲಕ ಕ್ಸೆರೋಸಿಸ್ ರೋಗಲಕ್ಷಣಗಳನ್ನು ತಪ್ಪಿಸಲು ಅಥವಾ ಕಡಿಮೆ ಮಾಡಬಹುದು:

* ತುಂಬಾ ಬಿಸಿಯಾಗಿರುವ ನೀರಿನಲ್ಲಿ ಸ್ನಾನ ಅಥವಾ ಕೈಕಾಲು ತೊಳೆಯದಿರಿ. ಉಗುರುಬೆಚ್ಚಗಿನ ನೀರನ್ನೇ ಬಳಸಿ

* ಕಡಿಮೆ ಸಮಯದಲ್ಲಿ ಸ್ನಾನ ಮಾಡಿ

* ಅತಿಯಾದ ನೀರಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ ಮತ್ತು ಬಿಸಿನೀರಿನ ಟಬ್ ಅಥವಾ ಕೊಳದಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಡಿ.

* ಯಾವುದೇ ಬಣ್ಣಗಳು, ಸುಗಂಧ ದ್ರವ್ಯಗಳು ಅಥವಾ ಆಲ್ಕೋಹಾಲ್ ಇಲ್ಲದ ಸ್ವಚ್ಛಕಾರಕ (ಕ್ಲೀನ್ಸರ್) ಗಳನ್ನು ಬಳಸಿ.

* ಸ್ನಾನದ ಬಳಿಕ ನಿಮ್ಮ ದೇಹದ ಮೇಲೆ ಟವೆಲ್ ನಿಂದ ಉಜ್ಜುವ ಬದಲು ಒತ್ತಿಕೊಂಡು ಒಣಗಿಸಿ

* ದಿನವಿಡೀ ಸಾಕಷ್ಟು ನೀರು ಕುಡಿದು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳಿ

* ಚರ್ಮದ ಒಣ ಪ್ರದೇಶಗಳಲ್ಲಿ ಸಾಬೂನು ಬಳಕೆಯನ್ನು ಮಿತಿಗೊಳಿಸಿ ಮತ್ತು ಎಣ್ಣೆಯನ್ನು ಸೇರಿಸಿದ ಸೌಮ್ಯವಾದ ಸಾಬೂನುಗಳನ್ನೇ ಬಳಸಿ.

* ಒಣಚರ್ಮವಿದ್ದಲ್ಲಿ ತುರಿಕೆಗೆ ಎಷ್ಟೇ ಬಯಕೆಯಾದರೂ ಉಗುರು ತಾಕಿಸದಿರಿ

* ತೈಲ ಆಧಾರಿತ ಲೋಷನ್ ಗಳನ್ನು ಆಗಾಗ್ಗೆ ಬಳಸಿ, ವಿಶೇಷಶವಾಗಿ ಚಳಿಗಾಲದಲ್ಲಿ ಮತ್ತು ಸ್ನಾನದ ಬಳಿಕ ತಕ್ಷಣವೇ ಹಚ್ಚಿಕೊಳ್ಳಿ

* ಬಿಸಿಲಿಗೆ ಒಡ್ಡಿಕೊಳ್ಳಬೇಕಾದಾಗ ಸನ್‌ಸ್ಕ್ರೀನ್ ಬಳಸಿ.

* ನಿಮ್ಮ ಮನೆಯಲ್ಲಿ ಗಾಳಿಯ ತೇವಾಂಶವನ್ನು ಹೆಚ್ಚಿಸಲು ಹ್ಯೂಮಿಡಿಫೈಯರ್ ಅಥವಾ ಆರ್ದ್ರತಾ ಯಂತ್ರವನ್ನು ಬಳಸಿ.

English summary

Xerosis: Causes, Symptoms, and Treatments

Xerosis cutis is the medical term for abnormally dry skin. This name comes from the Greek word “xero,” which means dry. Dry skin is common, especially in older adults. It’s usually a minor and temporary problem, but it may cause discomfort. Your skin needs moisture to stay smooth. As you age, retaining moisture in the skin becomes more difficult. Your skin may become dry and rough as it loses water and oils.
Story first published: Monday, November 4, 2019, 16:25 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X