For Quick Alerts
ALLOW NOTIFICATIONS  
For Daily Alerts

ಸೂಪರ್‌ ಫುಡ್‌ ಆಗಿರುವ ಟೆಫ್‌ ಬಗ್ಗೆ ನಿಮಗೆಷ್ಟು ಗೊತ್ತು?

|

ಸಿರಿಧಾನ್ಯಗಳ ವರ್ಗಕ್ಕೆ ಸೇರಿದ ನವಣೆ ಅಕ್ಕಿ, ರಾಗಿ, ಫ಼ಾರ್ರೋ ಮೊದಲಾದವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಆಹಾರವಸ್ತುಗಳಾಗಿವೆ. ಇದಕ್ಕೆ ಕಾರಣ ಅವು ಸಸ್ಯಾಧಾರಿತ ಪ್ರೋಟೀನ್, ನಾರಿನಂಶ, ಖನಿಜಗಳು, ಹಾಗೂ ನಿಧಾನವಾಗಿ ಜೀರ್ಣಗೊಳ್ಳುವ ಕಾರ್ಬೋಹೈಡ್ರೇಟ್ ಗಳ ಸಮೃದ್ಧ ಆಗರವಾಗಿರುವುದು.

Teff

ಈ ಸಿರಿಧಾನ್ಯಗಳ ಪೈಕಿ ಅತ್ಯಂತ ಕಿರಿದಾದ ಹಾಗೂ ಇನ್ನೂ ಅಷ್ಟೇನೂ ಜನಪ್ರಿಯವಾಗಿರದ, ಆದರೆ ಅದೇ ವೇಳೆಗೆ ಅತ್ಯಂತ ಮಹತ್ವದ ಪೋಷಕ ತತ್ತ್ವಗಳನ್ನೇ ತನ್ನೊಳಗೆ ತುಂಬಿಕೊಂಡಿರುವ ಆಹಾರವಸ್ತುವು ಯಾವುದಾದರೊಂದು ಇದ್ದರೆ ಅದು ಬೇರಾವುದೂ ಅಲ್ಲ, ಬದಲಿಗೆ ಅದು "ಟೆಫ಼್" ಎಂಬ ಹೆಸರಿನ ಒಂದು ಆಹಾರವಸ್ತು. ಇಥಿಯೋಪಿಯಾ ದೇಶದ ಓಟಗಾರರು ಹಾಗೂ ಅಥೀಟ್ಲ್ (ಕ್ರೀಡಾಪಟು) ಗಳು ಬಹು ದೀರ್ಘಕಾಲ, ತಮ್ಮ ಸಾಮರ್ಥ್ಯದ ಗುಟ್ಟು ಬಿಟ್ಟುಕೊಡದೇ ಹಾಗೇ ಉಳಿಸಿಕೊಂಡಿದ್ದು ಯಾವುದನ್ನ ಎಂದರೆ ಅದು ಈ "ಟೆಫ಼್" ಎಂಬ ಆಹಾರವಸ್ತುವಿನ ಕುರಿತು.

ಆದರೆ, ಈಗ ಈ ಗುಟ್ಟು ರಟ್ಟಾಗಿದೆ. ಹಾಗಾಗಿ "ಟೆಫ಼್" ಈಗ ಎಲ್ಲರ ಸೊತ್ತು! ಇತ್ತೀಚಿನ ದಿನಗಳಲ್ಲಿ ಈ ಅಪೂರ್ವ ಆಹಾರವಸ್ತುವಿನ ಕುರಿತು ಜಗತ್ತಿನಾದ್ಯಂತ ಜನಪ್ರಿಯತೆಯು ಹೆಚ್ಚುತ್ತಿರುವ ಕಾರಣ ಇದರಲ್ಲಿರುವ ಸಾಟಿಯಿಲ್ಲದ ಪೋಷಕಾಂಶ ಗುಣಗಳು. ಯು.ಎಸ್.ಎ., ಕೆನಡಾ, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್, ಹಾಗೂ ನೆದರ್ಲ್ಯಾಂಡ್ ಗಳನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಇದೀಗ ಈ ಧಾನ್ಯವನ್ನು ಬೆಳೆಸಲಾಗುತ್ತಿದೆ.

ಯಾವೆಲ್ಲ ಪೋಷಕಾಂಶಗಳು ಟೆಫ್ ನಲ್ಲಿವೆ ?

ಯಾವೆಲ್ಲ ಪೋಷಕಾಂಶಗಳು ಟೆಫ್ ನಲ್ಲಿವೆ ?

ತಮ್ಮ ದೇಹದ ದೃಢಕಾಯತೆಯನ್ನು ಕಾಪಿಟ್ಟುಕೊಳ್ಳಬಯಸುವ ಜಗತ್ತಿನಾದ್ಯಂತದ ಉತ್ಸಾಹಿಗಳ ಪಾಲಿನ ಅತ್ಯಪೂರ್ವ ಆಹಾರವಸ್ತುಗಳಲ್ಲಿ ಟೆಫ಼್ ಕೂಡ ಒಂದು. ಪ್ರೋಟೀನ್ ಹಾಗೂ ಇತರ ಖನಿಜಾಂಶಗಳನ್ನು ಸಾಟಿಯಿಲ್ಲದ ಪರಿಮಾಣಗಳಲ್ಲಿ ಒಳಗೊಂಡಿರುವ ಈ ಟೆಫ್, ಕ್ರಮೇಣ ನವಣೆ ಅಕ್ಕಿಯ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದೆ! ಟೆಫ಼್ ನಿಂದ ತಯಾರುಗೊಂಡಿರುವ ಆಹಾರಪದಾರ್ಥಗಳಲ್ಲಿ ಕಚ್ಛಾ ನಾರಿನಂಶವು ಹೇರಳವಾಗಿರುತ್ತದೆ.

ಅತ್ಯುತ್ತಮ ಸಮತೋಲನದೊಂದಿಗೆ ಟೆಫ಼್, ಅತ್ಯುನ್ನತ ಮಟ್ಟದ ಪ್ರೋಟೀನ್ ನ ಅಂಶವನ್ನು ಒದಗಿಸುತ್ತದೆ ಹಾಗೂ ಅತ್ಯಗತ್ಯವಾಗಿರುವ ಅಮೈನೋ ಆಮ್ಲಗಳನ್ನೂ ಇದು ಪೂರೈಸುವುದರಿಂದ, "ಶರೀರದ ತಾಕತ್ತನ್ನು ನಿರ್ಮಾಣಗೊಳಿಸುವ ಆಹಾರವಸ್ತು" ಎಂಬ ಸ್ಥಾನಮಾನವನ್ನು ಟೆಫ಼್ ಪಡೆದುಕೊಳ್ಳುತ್ತದೆ. ಬಹುಧಾನ್ಯ ಹಿಟ್ಟುಗಳ ರೂಪದಲ್ಲಿ ಬಳಸಲಾಗುವ ಗೋಧಿ, ಮುಸುಕಿನ ಜೋಳ, ಬಾರ್ಲಿ, ಹಾಗೂ ಸೋರ್ಗಮ್ ನಂತಹ ಇತರ ಏಕದಳ ಧಾನ್ಯಗಳಿಗೆ ಹೋಲಿಸಿದಲ್ಲಿ, ಟೆಫ಼್ ಅಧಿಕ ಕಬ್ಬಿಣಾಂಶವನ್ನಷ್ಟೇ ಒಳಗೊಂಡಿರುವುದಲ್ಲ, ಜೊತೆಗೆ ಕ್ಯಾಲ್ಸಿಯಂ, ತಾಮ್ರ, ಹಾಗೂ ಸತುವಿನಂತಹ ಇನ್ನಿತರ ಖನಿಜಾಂಶಗಳನ್ನೂ ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.

ಇತ್ತೀಚೆಗೆ ಕೈಗೊಳ್ಳಲಾದ ಅಧ್ಯಯನವೊಂದರ ಪ್ರಕಾರ, ಪಾಲಿಫ಼ೆನಾಲ್ ಗಳನ್ನೂ ಒಳಗೊಂಡಂತೆ ಬಯೋಆಕ್ಟಿವ್ ಸಂಯುಕ್ತ ವಸ್ತುಗಳಿಂದ ಟೆಫ಼್ ಸಮೃದ್ಧವಾಗಿದೆ; ಅದರಲ್ಲೂ ವಿಶೇಷವಾಗಿ ಫ಼್ಲಾವೊನಾಯ್ಡ್ ಡಿರೈವೆಟಿವ್ ಗಳಿಂದಂತೂ ಅತ್ಯಂತ ಸಮೃದ್ಧವಾಗಿದೆ. ಸಾಮಾನ್ಯವಾಗಿ ಬಳಸಲ್ಪಡುವ ಇತರ ಧಾನ್ಯಗಳಲ್ಲಿ ಇವೆಲ್ಲವೂ ಕಂಡುಬರುವುದು ಅಪರೂಪ.

ಟೆಫ಼್ ನಿಂದ ಶರೀರಕ್ಕಾಗುವ ಆರೋಗ್ಯ ಲಾಭಗಳು

ಟೆಫ಼್ ನಿಂದ ಶರೀರಕ್ಕಾಗುವ ಆರೋಗ್ಯ ಲಾಭಗಳು

ಭಾರತೀಯ ಆಹಾರಪದ್ಧತಿಯ ಶೇ. 60‍% ರಷ್ಟು ಭಾಗವು ಬಹುಧಾನ್ಯ/ಏಕದಳ ಧಾನ್ಯದ ಆಧಾರಿತವಾಗಿರುವುದೇ ಭಾರತವು ಪ್ರೋಟೀನ್ ಹಾಗೂ ಬಿ12 ರ ಕೊರತೆಯಿಂದ ಬಳಲಲು ಪ್ರಧಾನ ಕಾರಣವಾಗಿದೆ. ಈ ಕೊರತೆಯನ್ನು ನೀಗಿಸುವಲ್ಲಿ ಟೆಫ್ ಬಲು ಪರಿಣಾಮಕಾರಿಯಾಗಿ ಹೊಂದಾಣಿಕೆಯಾಗುತ್ತದೆ. ಜೊತೆಗೆ, ಟೆಫ಼್ ನೈಸರ್ಗಿಕವಾಗಿಯೇ ಗ್ಲುಟೆನ್-ಮುಕ್ತವಾಗಿರುವುದರಿಂದ, ಟೆಫ಼್ ಅನ್ನು ಬಹು ವಿಶಾಲ ವ್ಯಾಪ್ತಿಯ ಅನೇಕ ಉತ್ಪನ್ನಗಳಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಅದರಲ್ಲೂ ವಿಶೇಷವಾಗಿ ಸಿಲಿಯಾಕ್ ರೋಗ (ಜೀರ್ಣಕ್ರಿಯೆಗೆ ಸಂಬಂಧಿಸಿದ ಒಂದು ಬಗೆಯ ರೋಗ) ದಿಂದ ಬಳಲುತ್ತಿರುವವರಿಗೆ ಬೇಕಾದ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಿಕೊಳ್ಳಲು ಹೇಳಿಮಾಡಿಸಿದಂತಹ ಉತ್ಪನ್ನ ಈ ಟೆಫ಼್. ಟೆಫ಼್ ನ ಸಕ್ಕರೆಯ ಸೂಚ್ಯಂಕವು ತುಲನಾತ್ಮಕವಾಗಿ ಕಡಿಮೆ ಇರುವುದರಿಂದ ಹಾಗೂ ಇದರಲ್ಲಿ ನಾರಿನಂಶವೂ ಹೆಚ್ಚಾಗಿರುವುದರಿಂದ, ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ನಿಯಾಮಕಗೊಳಿಸುತ್ತದೆ. ಒಂದಿಷ್ಟು ತೂಕವನ್ನ ಕಳೆದುಕೊಳ್ಳಬೇಕೆಂದು ಬಯಸುವವರಿಗೂ ಇದೊಂದು ಪರಿಪೂರ್ಣವಾದ ಧಾನ್ಯರೂಪದ ಸಂಗಾತಿಯಾಗಿದೆ.

ನೈಸರ್ಗಿಕವಾಗಿಯೇ ಸೋಡಿಯಂ ಅನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುವ ಟೆಫ಼್, ಒಂದು ಆರೋಗ್ಯದಾಯಕ ಭೋಜನಕ್ಕೆ ಯೋಗ್ಯ ಸೇರ್ಪಡೆಯೇ ಆಗಿರುತ್ತದೆ. ಹಾಗಾಗಿ, ದೇಹಾರೋಗ್ಯದ ಕಾಳಜಿಗೆ ಸಂಬಂಧಿಸಿದ ಯಾವುದೇ ಕಾರಣಕ್ಕಾದರೂ ಕೂಡ, ಟೆಫ಼್ ಅದಕ್ಕೆ ಪೂರಕವಾಗಿ ಒಂದಲ್ಲ ಒಂದು ಅಂಶವನ್ನು ಒಳಗೊಂಡಿರುತ್ತದೆ. ಟೆಫ಼್ ನಿಮ್ಮ ದೇಹಾರೋಗ್ಯಕ್ಕೆ ನೀಡಬಹುದಾದ ಇನ್ನಷ್ಟು ಪ್ರಯೋಜನಗಳ ಪಟ್ಟಿ ಈ ಕೆಳಗಿನಂತಿದೆ:

ನೈಸರ್ಗಿಕವಾಗಿಯೇ ಗ್ಲುಟೆನ್-ಮುಕ್ತವಾಗಿದೆ

ನೈಸರ್ಗಿಕವಾಗಿಯೇ ಗ್ಲುಟೆನ್-ಮುಕ್ತವಾಗಿದೆ

ಕಚ್ಛಾ ನಾರಿನಂಶದಿಂದ ಸಮೃದ್ಧವಾಗಿದೆ.

ಅತ್ಯುತ್ತಮ ಸಮತೋಲನದೊಂದಿಗೆ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್ ಅನ್ನು ಒಳಗೊಂಡಿದೆ ಹಾಗೂ ಶರೀರಕ್ಕೆ ಅತ್ಯಗತ್ಯವಾಗಿರುವ ಅಮೈನೋ ಆಮ್ಲಗಳ ಸಂಪೂರ್ಣ ಗಡಣವನ್ನೇ ಒಳಗೊಂಡಿದೆ. 100 ಗ್ರಾಮ್ ನಷ್ಟು ಟೆಫ಼್, 13.3 ಗ್ರಾಮ್ ನಷ್ಟು ಪ್ರೋಟೀನನ್ನು ಒಳಗೊಂಡಿದೆ.

ಇನ್ನಿತರ ಏಕದಳ ಧಾನ್ಯಗಳಿಗೆ ಹೋಲಿಸಿದಲ್ಲಿ, ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಒಳಗೊಂಡಿದೆ ಹಾಗೂ ಕ್ಯಾಲ್ಸಿಯಂ, ತಾಮ್ರ, ಹಾಗೂ ಸತುವಿನಂತಹ ಇತರ ಖನಿಜಗಳನ್ನೂ ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.

100 ಗ್ರಾಮ್ ನಷ್ಟು ಟೆಫ಼್ ನಲ್ಲಿ 7.6 ಮಿ.ಲಿ. ಗ್ರಾಂ ನಷ್ಟು ಕಬ್ಬಿಣಾಂಶವಿರುತ್ತದೆ.

ಪಾಲಿಫ಼ೆನಾಲ್ ಗಳನ್ನೂ ಒಳಗೊಂಡಂತೆ ಬಯೋ-ಆಕ್ಟಿವ್ ಸಂಯುಕ್ತ ವಸ್ತುಗಳ ಒಂದು ಮಹತ್ತರ ಆಗರವಾಗಿದೆ. ವಿಶೇಷವಾಗಿ ಫ಼್ಲಾವೊನಾಯ್ಡ್ ಡೆರೈವೆಟೀವ್ ಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊಂಡಿದೆ.

ಅರ್ಧ ಲೋಟದಷ್ಟು ಹಾಲು ಒಳಗೊಂಡಿರಬಹುದಾದಷ್ಟೇ ಪ್ರಮಾಣದ ಕ್ಯಾಲ್ಸಿಯಂ ಅನ್ನು 100 ಗ್ರಾಮ್ ಗಳಷ್ಟು ಟೆಫ಼್ ಒಳಗೊಂಡಿದೆ.

ನಮ್ಮ ಶರೀರಕ್ಕೆ ದಿನವೊಂದಕ್ಕೆ ಅಗತ್ಯವಿರುವ ತಾಮ್ರದ ಶೇ. 28% ರಷ್ಟು ಭಾಗವನ್ನು ಕೇವಲ ಒಂದು ಕಪ್ ನಷ್ಟು ಟೆಫ಼್ ಒಳಗೊಂಡಿದೆ.

ಟೆಫ಼್, ಬಿ ವಿಟಮಿನ್ ಗಳ ಹಾಗೂ ಅಗತ್ಯ ಖನಿಜಾಂಶಗಳ ಅತ್ಯುನ್ನತ ಆಗರವಾಗಿರುವುದರಿಂದ, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನೈಸರ್ಗಿಕವಾಗಿಯೇ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿದೆ.

ಟೆಫ಼್ ಅನ್ನು ಸ್ವಾರಸ್ಯಪೂರ್ಣವಾಗಿ ನಿಮ್ಮ ಆಹಾರದೊಡನೆ ಹೇಗೆಲ್ಲ ಸೇರಿಸಿಕೊಳ್ಳಬಹುದೆಂದು ಗೊತ್ತೇ ?

ಟೆಫ಼್ ಅನ್ನು ಸ್ವಾರಸ್ಯಪೂರ್ಣವಾಗಿ ನಿಮ್ಮ ಆಹಾರದೊಡನೆ ಹೇಗೆಲ್ಲ ಸೇರಿಸಿಕೊಳ್ಳಬಹುದೆಂದು ಗೊತ್ತೇ ?

ಟೆಫ಼್ ನ ಕುರಿತಾಗಿ ಈ ಒಂದು ವಿಚಾರವನ್ನು ಕಟ್ಟಕಡೆಯದಾಗಿ ನಾವು ಹೇಳುತ್ತಿರುವೆವಾದರೂ ಕೂಡ, ಅದೇನೂ ಕಡೆಗಣಿಸುವಂತಹದ್ದಲ್ಲ! ಅದೇನೆಂದರೆ, ಟೆಫ಼್ ಅತ್ಯಂತ ಸ್ವಾಧಿಷ್ಟಪೂರ್ಣವಾಗಿದೆ!! ಅಲ್ಪಪ್ರಮಾಣದಲ್ಲಿ ಧಾನ್ಯದಂತಹ ಲೇಪನವುಳ್ಳ ಟೆಫ಼್, ಯಾವುದೇ ತಿನಿಸಿಗೂ ಉತ್ತಮ ಕುರುಕುಲು ಅನುಭವವನ್ನು ಒದಗಿಸಬಲ್ಲದು!!

ಅದ್ವಿತೀಯವಾದ ಕಾಳಿನಂತಹ ಸ್ವಾದವನ್ನು ಟೆಫ಼್ ಹೊಂದಿದ್ದು, ಇನ್ನಿತರ ಧಾನ್ಯಗಳಿಗಿಂತಲೂ ಟೆಫ಼್ ಬೇಗನೇ ಬೇಯುತ್ತದೆ. ಹೀಗೆ ಟೆಫ಼್ ಗೆ ಬಹು ಆಯಾಮಗಳಿರುವುದರಿಂದಲೇ ಟೆಫ಼್ ಅನ್ನು ಚಪಾತಿಗಳಿಂದ, ದೋಸೆಗಳಿಂದ, ಹಾಗೂ ಬ್ರೆಡ್ ಗಳಿಂದ ಮೊದಲ್ಗೊಂಡು ಕುಕ್ಕೀ ಗಳಿಗೆ ಹಾಗೂ ಕೇಕ್ ಗಳಿಗೂ ಸೇರಿಸಿಕೊಳ್ಳಬಹುದು. ಈ ರೀತಿಯಾಗಿ ಈ ಟೆಫ಼್ ಅನ್ನು ಯಾವುದೇ ಆಹಾರಪದಾರ್ಥದೊಡನೆಯೂ ಬಲು ಸುಲಭವಾಗಿ ಸೇರಿಸಿಕೊಳ್ಳಬಹುದು. ಮೂಲತ: "ಅತ್ಯಪೂರ್ವ ಆಹಾರವಸ್ತು" ಎಂದು ಕರೆಯಿಸಿಕೊಳ್ಳಲು ಬೇಕಾದ ಎಲ್ಲ ಸದ್ಗುಣಗಳೂ ಟೆಫ಼್ ನಲ್ಲಿವೆ.

English summary

What is Teff: Everything to Know About This Superfood in Kannada

What is Teff: Everything to Know About This Superfood,Read on...
Story first published: Monday, March 8, 2021, 13:40 [IST]
X
Desktop Bottom Promotion