For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ದೃಢಪಟ್ಟಾಗ ನಾಸಲ್‌ ಸ್ಪ್ರೇ ಬಳಸಿದರೆ ಬೇಗನೆ ಗುಣಮುಖರಾಗುವಿರಿ

|

ಕೋವಿಡ್‌ 19 ಆತಂಕ ಮತ್ತೆ ಹೆಚ್ಚುತ್ತಿದೆ, ದೇಶದಲ್ಲಿ 40 ಸಾವಿರಕ್ಕೂಅಧಿಕ ಸಕ್ರೀಯ ಕೋವಿಡ್‌ ಕೇಸ್‌ಗಳಿವೆ. ಪರೀಕ್ಷೆ ಮಾಡಿಸಿದಾಗ ಕೋವಿಡ್‌ 19 ಅಂತ ದೃಢಪಟ್ಟರೆ ಆತಂಕ ಪಡಬೇಡಿ, ವೈದ್ಯರ ಸೂಚಿಸಿರುವ ಔಷಧಿಗಳನ್ನು ತೆಗೆದುಕೊಳ್ಳಿ, ಜೊತೆಗೆ ದಿನಕ್ಕೆ ಎರಡು ಬಾರಿ ನಾಸನ್‌ ಸ್ಪ್ರೇ ಬಳಸಿ. ಇದು ನಿಮ್ಮಲ್ಲಿ ರೋಗ ಉಲ್ಬಣವಾಗಿ ಆಸ್ಪತ್ರೆಗೆ ಸೇರುವುದನ್ನು ತಪ್ಪಿಸುತ್ತೆ ಅಲ್ಲದೆ ನಾಸಲ್‌ ಸ್ಪ್ರೇ ಬಳಸುವ ಮೂಲಕ ಸಾವಾಗುವುದನ್ನೂ ತಡೆಗಟ್ಟಬಹುದು. ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ:

ದಿನಕ್ಕೆ ಎರಡು ಬಾರಿ ನಾಸಲ್‌ ಸ್ಪ್ರೇ ಬಳಸಿ

ದಿನಕ್ಕೆ ಎರಡು ಬಾರಿ ನಾಸಲ್‌ ಸ್ಪ್ರೇ ಬಳಸಿ

ಕೋವಿಡ್‌ 19 ಎಂದು ಖಚಿತವಾದರೆ ಮೈಲ್ಡ್‌ ಸಲೈನ್‌ ಸಲ್ಯೂಷನ್ ಇರುವ ನಾಸಲ್ ಸ್ಪ್ರೇ ಬಳಸಿ. ಇದರಿಂದ ಕೋವಿಡ್‌ 19ನಿಂದಾಗಿ ಆರೋಗ್ಯ ಸ್ಥಿತಿ ಗಂಭೀರವಾಗುವುದನ್ನು ತಡೆಗಟ್ಟಬಹುದು ಹಾಗೂ ಆಸ್ಪತ್ರೆಗೆ ದಾಖಲಾಗುವುದು, ಕೋವಿಡ್‌ 19ನಿಂದ ಸಾವನ್ನಪ್ಪುವುದನ್ನು ತಡೆಗಟ್ಟಬಹುದಾಗಿದೆ.

ಈ ಕುರಿತು ಮಾತನಾಡಿರುವ ಡಾ. ಬಾಕ್ಸ್ಟರ್ (ಜಾರ್ಜಿಯಾ ಮೆಡಿಕಲ್‌ ಕಾಲೇಜಿನಲ್ಲಿ ಎಮರ್ಜೆನ್ಸಿ ಮೆಡಿಷನ್ ತಜ್ಞ) ಈ ಸಲ್ಯೂಷನ್‌ ಮೂಗಿನಲ್ಲಿರುವ ಕಷ್ಮಲವನ್ನು ತೆಗೆದು ಹಾಕಲು ಸಹಕಾರಿ. ಮೂಗಿನಿಂದ ಕಶ್ಮಲಗಳನ್ನು ತೆಗೆದು ಹಾಕುವುದರಿಂದ ಆರೋಗ್ಯ ಬೇಗನೆ ಸುಧಾರಿಸುವುದು' ಎಂದು ಹೇಳಿದ್ದಾರೆ.

ಅಧ್ಯಯನ ವರದಿ ಏನು ಹೇಳಿದೆ?

ಅಧ್ಯಯನ ವರದಿ ಏನು ಹೇಳಿದೆ?

55 ವರ್ಷ ಮೇಲ್ಪಟ್ಟ 79 ಕೋವಿಡ್ 19 ಸೋಂಕಿತರಿಗೆ ರೋಗ ಪತ್ತೆಯಾದ 24 ಗಂಟೆಯ ಒಳಗಾಗಿ ನಾಸಲ್ ಸ್ಪ್ರೇ ಬಳಸುವಂತೆ ಸೂಚಿಸಲಾಯಿತು. ನಾಸಲ್ ಸ್ಪ್ರೇ ಪ್ರತಿದಿನ ಎರಡು ಬಾರಿ ಬಳಸಿದವರಲ್ಲಿ ತುಂಬಾನೇ ಚೇತರಿಕೆ ಕಂಡು ಬಂದಿತ್ತು, ಯಾರು ಬಳಸಿರಲಿಲ್ಲವೋ ಅವರಲ್ಲಿ ಅಷ್ಟು ಬೇಗ ಚೇತರಿಕೆ ಕಂಡು ಬಂದಿರಲಿಲ್ಲ. ನಾಸಲ್ ಸ್ಪ್ರೇ ಬಳಸಿದ್ದವರಲ್ಲಿ ಎರಡು ವಾರದೊಳಗೆ ಕೋವಿಡ್ 19 ಎಲ್ಲಾ ಲಕ್ಷಣಗಳು ದೂರಾಗಿತ್ತು.

ನಾಸಲ್‌ ಸ್ಪ್ರೇ ಸಲೈನ್‌ ಮನೆಯಲ್ಲಿಯೇ ಮಾಡಬಹುದೇ?

ನಾಸಲ್‌ ಸ್ಪ್ರೇ ಸಲೈನ್‌ ಮನೆಯಲ್ಲಿಯೇ ಮಾಡಬಹುದೇ?

ಒಂದು ಕಪ್‌ನಲ್ಲಿ ನೀರು ಹಾಕಿ ಕುದಿಸಿ ಅದಕ್ಕೆ ಅರ್ಧ ಚಮಚ ಉಪ್ಪು ಹಾಗೂ ಅರ್ಧ ಚಮಚ ಬೇಕಿಂಗ್‌ ಸೋಡಾ ಹಾಕಿ, ನಂತರ ಸಲ್ಯೂಷನ್‌ ಅನ್ನು ನಾಸಲ್‌ ಸ್ಪ್ರೇ ಬಾಟಲಿನಲ್ಲಿ ಹಾಕಿ ಬಳಸಬಹುದು.

English summary

Twice Daily Nasal Irrigation Will Prevent COVID-19 Hospitalization, Death

Study Says when covid 19 confirmed if we use nasal irrigation will Prevent COVID-19 Hospitalization, Death, read on...
Story first published: Friday, September 16, 2022, 12:32 [IST]
X
Desktop Bottom Promotion