For Quick Alerts
ALLOW NOTIFICATIONS  
For Daily Alerts

ಜ್ವರದ ಚುಚ್ಚುಮದ್ದು ಹಾಗೂ ನಾಸಲ್‌ ಸ್ಪ್ರೇನ ಅಡ್ಡಪರಿಣಾಮಗಳು

|

ಫ್ಲೂ ಜ್ವರದ ಚುಚ್ಚುಮದ್ದಿನ ಅಡ್ಡಪರಿಣಾಮಗಳು: ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು, ತಲೆನೋವು, ಲಘು ಜ್ವರ ಮತ್ತು ವಾಕರಿಕೆ. ಕಟ್ಟಿರುವ ಮೂಗು ತೆರೆಯುವ ಸ್ಪ್ರೇ ಬಳಕೆಯ ಅಡ್ಡಪರಿಣಾಮಗಳು ಸ್ರವಿಸುವ ಮೂಗು, ಉಬ್ಬಸ, ನೋಯುವ ಗಂಟಲು, ತಲೆನೋವು, ಜ್ವರ ಮತ್ತು ವಾಕರಿಕೆ.

ಆದರೆ ಹೆಚ್ಚಿನ ಅಡ್ಡಪರಿಣಾಮಗಳು ಸೌಮ್ಯವಾಗಿರುತ್ತವೆ, ಆದ್ದರಿಂದ ಉಸಿರಾಟದ ತೊಂದರೆ, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳನ್ನು ಗಮನಿಸಿ, ಇದು ಅಲರ್ಜಿಯ ಪ್ರತಿಕ್ರಿಯೆಯ ಸಂಕೇತವೂ ಆಗಿರಬಹುದು.

ಈ ಲೇಖನವನ್ನು ಟೆಕ್ಸಾಸ್ ಎ ನಲ್ಲಿ ಕುಟುಂಬ ಔಷಧ ವೈದ್ಯ ಮತ್ತು ಕ್ಲಿನಿಕಲ್ ಸಹಾಯಕ ಪ್ರಾಧ್ಯಾಪಕರಾಗಿರುವ ಜೇಸನ್ ಆರ್. ಮೆಕ್‌ನೈಟ್, ಎಂಡಿ, ಎಂ.ಎಸ್ ರವರ ಉಸ್ತುವಾರಿಯಲ್ಲಿ ಪ್ರಕಟಿಸಲಾಗಿದೆ.

ಫ್ಲೂ ಜ್ವರದ ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು ಮತ್ತು ತಲೆನೋವಿನಂತಹ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ, ಆದರೆ ಇವು ಅಲ್ಪಾವಧಿಯವು ಮತ್ತು ಈ ಕಾರಣಗಳಿಗಾಗಿ ಲಸಿಕೆ ಪಡೆಯುವುದನ್ನು ತಡೆಯಬಾರದು.

ಅಪರೂಪದ ಸಂದರ್ಭಗಳಲ್ಲಿ, ಫ್ಲೂ ಜ್ವರದ ಚುಚ್ಚುಮದ್ದು ಅಲರ್ಜಿಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಹೀಗಾದರೆ ಮಾತ್ರ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಫ್ಲೂ ಜ್ವರದ ಚುಚ್ಚುಮದ್ದು ಅಡ್ಡ ಪರಿಣಾಮಗಳ ಬಗ್ಗೆ ಮತ್ತು ಸಾಮಾನ್ಯ ಪ್ರತಿಕ್ರಿಯೆ ಮತ್ತು ಅಲರ್ಜಿಯ ಪ್ರತಿಕ್ರಿಯೆಯ ನಡುವಿನ ವ್ಯತ್ಯಾಸವನ್ನು ಹೇಗೆ ಹೇಳಬೇಕು ಎಂಬುದರ ಕುರಿತು ಪ್ರತಿಯೊಬ್ಬರೂ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಅಗತ್ಯ.

ಫ್ಲೂ ಜ್ವರದ ಚುಚ್ಚುಮದ್ದಿನ ಅಡ್ಡಪರಿಣಾಮಗಳು:

ಫ್ಲೂ ಜ್ವರದ ಚುಚ್ಚುಮದ್ದಿನ ಅಡ್ಡಪರಿಣಾಮಗಳು:

ಈ ಚುಚ್ಚುಮದ್ದು ನೀಡಿದ ಬಳಿಕ ಎದುರಾಗುವ ಅಡ್ಡಪರಿಣಾಮಗಳಲ್ಲಿ ಪ್ರಮುಖವಾದವು ಎಂದರೆ:

ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು, ಚರ್ಮ ಕೆಂಪಗಾಗುವುದು, ಚಿಕ್ಕ ದದ್ದು ಅಥವಾ ಊತ

ತಲೆನೋವು

ಅತಿಯಲ್ಲದ ಜ್ವರ (101 ° F ಗಿಂತಲೂ ಕಡಿಮೆ)

ವಾಕರಿಕೆ ಅಥವಾ ಹೊಟ್ಟೆ ನೋವು

ಸಿಡಿಸಿ ಸಂಸ್ಥೆಯ ಪ್ರಕಾರ ಅಡ್ಡಪರಿಣಾಮಗಳು ಸಾಮಾನ್ಯವಾಗಿ ಚುಚ್ಚುಮದ್ದು ನೀಡಿದ ನಂತರವೇ ಪ್ರಾರಂಭವಾಗುತ್ತವೆ ಮತ್ತು ಕೆಲವು ದಿನಗಳವರೆಗೂ ಇರುತ್ತದೆ.

"ತಲೆನೋವು, ಜ್ವರ ಮತ್ತು ಮೈ ಕೈ ನೋವು ಅಲರ್ಜಿಯ ಪ್ರತಿಕ್ರಿಯೆಗಳ ಸಂಕೇತವಲ್ಲ" ಎಂದು ಸಿಡಿಸಿಯ ಇಮ್ಯುನೈಸೇಶನ್ ಸೇಫ್ಟಿ ಆಫೀಸ್‌ನಲ್ಲಿ ಲಸಿಕೆ ಸುರಕ್ಷತಾ ಡೇಟಾಲಿಂಕ್‌ನ ತಂಡದ ಮುಖ್ಯಸ್ಥರಾಗಿರುವ ಮೈಕೆಲ್ ಮೆಕ್‌ನೀಲ್, ಎಂಡಿ ಎಂಪಿಹೆಚ್ ರವರು ಹೇಳುತ್ತಾರೆ. "ರೋಗಿಯ ರೋಗ ನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿದ ಪರಿಣಾಮವಾಗಿ ಈ ಪ್ರತಿಕ್ರಿಯೆಗಳೂ ಸಂಭವಿಸಬಹುದು."

ಈ ಹೆಚ್ಚಿನ ಅಡ್ಡಪರಿಣಾಮಗಳು ಅನಿವಾರ್ಯ, ಆದರೆ ಚುಚ್ಚುಮದ್ದು ನೀಡಿರುವ ಕೈಗೆ ಎದುರಾಗಿರುವ ನೋವನ್ನು ತಪ್ಪಿಸಲು, ನಿಮ್ಮ ವ್ಯಾಕ್ಸಿನೇಷನ್ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಐಬುಪ್ರೊಫೇನ್ ಮಾತ್ರೆಯನ್ನು ಸೇವಿಸಲು ಪ್ರಯತ್ನಿಸಿ.

ಫ್ಲೂ ಚುಚ್ಚುಮದ್ದಿನಿಂದ ನಿಮಗೆ ಇನ್ಫ್ಲೂಯೆಂಜಾ ಜ್ವರ ಬರುತ್ತದೆ ಎಂದು ಕೆಲವರು ನಂಬಿದ್ದಾರೆ, ಇದು ನಿಜವಲ್ಲ, ಏಕೆಂದರೆ ಫ್ಲೂ ಲಸಿಕೆ ಯಾವುದೇ ಸಕ್ರಿಯ ವೈರಸ್ಸುಗಳ ಕಣಗಳನ್ನು ಹೊಂದಿರುವುದಿಲ್ಲ.

ಫ್ಲೂ ಜ್ವರಕ್ಕೆ ಮೂಗಿನ ಸಿಂಪರಣೆ ವಿಧಾನದ ಅಡ್ಡಪರಿಣಾಮಗಳು

ಫ್ಲೂ ಜ್ವರಕ್ಕೆ ಮೂಗಿನ ಸಿಂಪರಣೆ ವಿಧಾನದ ಅಡ್ಡಪರಿಣಾಮಗಳು

ಮೂಗಿನ ಸ್ಪ್ರೇ ಅಥವಾ ತುಂತುರು ರೂಪದ ಔಷಧಿ ಪಡೆಯುವ ಮೂಲಕ ಫ್ಲೂ ಲಸಿಕೆ ಪಡೆಯುವಾಗ ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಎದುರಾದ ನೋವು ಹಾಗೂ ಇತರ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು. ಆದರೆ ಈ ವಿಧಾನದಲ್ಲಿ ತನ್ನದೇ ಆದ ಅಡ್ಡಪರಿಣಾಮಗಳಿವೆ.

ಮೂಗಿನ ಸ್ಪ್ರೇ ವಿಧಾನದ ಲಸಿಕೆಯಿಂದ ಎದುರಾಗುವ ಸಂಭವನೀಯ ಅಡ್ಡಪರಿಣಾಮಗಳು:

ಸೋರುವ ಮೂಗು

ಉಬ್ಬಸ

ಗಂಟಲು ಕೆರತ

ತಲೆನೋವು

ಜ್ವರ

ವಾಕರಿಕೆ

ಸಿಡಿಸಿ ಸಂಸ್ಥೆಯ ಪ್ರಕಾರ, ಮೂಗಿನ ಲಸಿಕೆಗಳು 2 ರಿಂದ 49 ವರ್ಷದೊಳಗಿನ ಹೆಚ್ಚಿನ ವ್ಯಕ್ತಿಗಳಿಗೆ ಸುರಕ್ಷಿತವಾಗಿದೆ. ಆದರೆ ಮೂಗಿನ ಸ್ಪ್ರೇ ಯನ್ನುಕೆಲವು ಗುಂಪುಗಳಿಗೆ ನೀಡಬಾರದು. ಈ ವ್ಯಕ್ತಿಗಳೆಂದರೆ:

  • ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು.
  • ಆಸ್ತಮಾ ಅಥವಾ ಟೈಪ್ 1 ಡಯಾಬಿಟಿಸ್‌ನಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು
  • ಆಸ್ಪಿರಿನ್ ಮತ್ತು ಸ್ಯಾಲಿಸಿಲೇಟ್-ಒಳಗೊಂಡಿರುವ ಚಿಕಿತ್ಸೆಗಳಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ 2-17 ವಯಸ್ಸಿನ ಮಕ್ಕಳು
  • ಗರ್ಭವತಿಯರು.
  • ಮೂಗಿನ ಸಿಂಪಡಿಸುವ ಲಸಿಕೆಯನ್ನು ಯಾರು ತಪ್ಪಿಸಬೇಕು ಎಂಬ ಸಂಪೂರ್ಣ ಪಟ್ಟಿಯನ್ನು ಸಿಡಿಸಿಯ ವೆಬ್‌ಸೈಟ್‌ನಲ್ಲಿ ಹುಡುಕಿ ಪಡೆಯಬಹುದು.
  • ಫ್ಲೂ ಚುಚ್ಚುಮದ್ದಿಗೆ ಅಲರ್ಜಿಯ ಪ್ರತಿಕ್ರಿಯೆಗಳು

    ಫ್ಲೂ ಚುಚ್ಚುಮದ್ದಿಗೆ ಅಲರ್ಜಿಯ ಪ್ರತಿಕ್ರಿಯೆಗಳು

    ಮೇಲೆ ಪಟ್ಟಿ ಮಾಡಲಾದ ಅಡ್ಡಪರಿಣಾಮಗಳು ಫ್ಲೂ ಲಸಿಕೆಯ ಸಾಮಾನ್ಯ ಪ್ರತಿಕ್ರಿಯೆಗಳಾಗಿದ್ದರೂ, ನೀವು ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಲಸಿಕೆಗೆ ನಿಮ್ಮ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಮುಖ್ಯ. ಅಲರ್ಜಿಯ ಪ್ರತಿಕ್ರಿಯೆಗಳು ವಿರಳವಾಗಿದ್ದರೂ - ಪ್ರತಿ 1 ಮಿಲಿಯನ್ ವ್ಯಾಕ್ಸಿನೇಷನ್‌ಗಳಲ್ಲಿ ಅಂದಾಜು 1.3 ವ್ಯಕ್ತಿಗಳಿಗೆ ಇವು ಸಂಭವಿಸಬಹುದು - ಅವು ಗಂಭೀರ ರೂಪವನ್ನೂ ಪಡೆದುಕೊಳ್ಳಬಹುದು.

    ಜ್ವರ ಲಸಿಕೆಗೆ ಗಂಭೀರ ಅಲರ್ಜಿಯ ಪ್ರತಿಕ್ರಿಯೆಯ ಲಕ್ಷಣಗಳು:

    ಜ್ವರ ಲಸಿಕೆಗೆ ಗಂಭೀರ ಅಲರ್ಜಿಯ ಪ್ರತಿಕ್ರಿಯೆಯ ಲಕ್ಷಣಗಳು:

    ಉಸಿರಾಟದ ತೊಂದರೆ

    ಉಸಿರಾಡುವಾಗ ಗೊರಗೊರ ಸದ್ದು ಬರುವುದು ಅಥವಾ ಉಬ್ಬಸ

    ತ್ವಚೆಯ ಬಣ್ಣ ಕುಂದುವುದು

    ಅತೀವ ಸುಸ್ತು

    ಹೃದಯ ಬಡಿತದ ಗತಿಯಲ್ಲಿ ಏರಿಕೆ

    ತಲೆತಿರುಗುವಿಕೆ

    ಮೆಕ್ ನೀಲ್ ರವರ ಪ್ರಕಾರ, ಈ ಲಕ್ಷಣಗಳು ಸಾಮಾನ್ಯವಾಗಿ ಚುಚ್ಚುಮದ್ದು ಪಡೆದ ಕೆಲವೇ ನಿಮಿಷಗಳಂದ ಕೆಲವು ಗಂಟೆಗಳಲ್ಲಿ ಕಂಡುಬರುತ್ತವೆ ಮತ್ತು ಅವರಿಗೆ ತಕ್ಷಣದ ವೈದ್ಯಕೀಯ ಮೌಲ್ಯಮಾಪನ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ.

    ಇತರ ಎಲ್ಲಾ ಲಸಿಕೆಗಳಂತೆಯೇ ಫ್ಲೂ ಲಸಿಕೆಯೂ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವ ಹಲವಾರು ಅಂಶಗಳನ್ನು ಒಳಗೊಂಡಿದೆ. ಮೊಟ್ಟೆಯಲ್ಲಿರುವ ಜಿಲಾಟಿನ್ ಎಂಬ ಪ್ರೋಟೀನ್ನ್ ಅಥವಾ ಲಸಿಕೆಯಲ್ಲಿನ ಇತರ ಸೇರ್ಪಡೆಗಳಿಗೆ ಅಲರ್ಜಿ ಇರುವ ವ್ಯಕ್ತಿಗಳಿಗೆ ಹೆಚ್ಚಿನ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಫ್ಲೂ ಚುಚ್ಚುಮದ್ದು ಮೊಟ್ಟೆಯ ಅಂಶವನ್ನು ಹೊಂದಿದೆ. ಸೌಮ್ಯ ಮೊಟ್ಟೆಯ ಅಲರ್ಜಿ ಹೊಂದಿರುವ ಹೆಚ್ಚಿನ ಜನರು ಇನ್ಸ್ಫೂಯೆಂಜಾ ಜ್ವರದ ಲಸಿಕೆಯಂತೆಯೇ ಈ ಲಸಿಕೆಯನ್ನೂ ಪಡೆಯಬಹುದು ಎಂದು ಸಂಶೋಧನೆಗಳು ಖಚಿತಪಡಿಸಿವೆ.

    ಗಂಭೀರವಾದ ಅಲರ್ಜಿಯಲ್ಲದ ಪ್ರತಿಕ್ರಿಯೆಗಳು

    ಗಂಭೀರವಾದ ಅಲರ್ಜಿಯಲ್ಲದ ಪ್ರತಿಕ್ರಿಯೆಗಳು

    ಅತ್ಯಂತ ಅಪರೂಪದ ಸಂದರ್ಭಗಳಲ್ಲಿ, ಪಾರ್ಶ್ವವಾಯುಗೆ ಕಾರಣವಾಗುವ ನರವೈಜ್ಞಾನಿಕ ಕಾಯಿಲೆಯಾದ ಗುಯಿಲಿನ್-ಬಾರ್ ಸಿಂಡ್ರೋಮ್ (ಜಿಬಿಎಸ್-Guillain-Barré syndrome (GBS)) ಅನ್ನು ಇನ್ಸ್ಫೂಯೆಂಜಾ ಜ್ವರದ ಲಸಿಕೆ ಪ್ರಚೋದಿಸುತ್ತದೆ.

    ಲಸಿಕೆ ಹಾಕಿದ ಪ್ರತಿ ಹತ್ತು ಲಕ್ಷ ಜನರಲ್ಲಿ ಕೇವಲ ಒಬ್ಬರಿಗೆ ಅಥವಾ ಇಬ್ಬರು ವ್ಯಕ್ತಿಗಳಲ್ಲಿ ಮಾತ್ರವೇ ಜಿಬಿಎಸ್ ಕಾಣಬರುತ್ತದೆ ಎಂದು ಅಂದಾಜಿಸಲಾಗಿದೆ.ಲಸಿಕೆ ನೀಡಿದ ಮಾಡಿದ ನಂತರದ ಕೆಲವು ದಿನಗಳು ಅಥವಾ ವಾರಗಳ ನಂತರವೇ ಜಿಬಿಎಸ್ ಸಂಭವಿಸಬಹುದು, ಮತ್ತು ತೀವ್ರವಾದ ಸ್ನಾಯು ದೌರ್ಬಲ್ಯ, ಕಣ್ಣಿನ ಸ್ನಾಯುಗಳನ್ನು ನಿಯಂತ್ರಿಸುವಲ್ಲಿ ತೊಂದರೆ ಅಥವಾ ಆಹಾರ ನುಂಗಲು ತೊಂದರೆ ಉಂಟಾಗುತ್ತದೆ.

    ಈ ರೋಗಲಕ್ಷಣಗಳನ್ನು ಪ್ರಕಟಿಸುವ ಯಾವುದೇ ವ್ಯಕ್ತಿಯನ್ನು ತಕ್ಷಣವೇ ವೈದ್ಯರಲ್ಲಿ ಕೊಂಡೊಯ್ಯಬೇಕು.

    ಕೊನೆಯ ಮಾತು

    ಕೊನೆಯ ಮಾತು

    ಜ್ವರ ಲಸಿಕೆ - ಚುಚ್ಚು ಮದ್ದು ಅಥವಾ ಮೂಗಿನ ಸ್ಪ್ರೇ ರೂಪದಲ್ಲಿ ಪಡೆದುಕೊಂಡರೆ - ತಲೆನೋವು, ಜ್ವರ ಮತ್ತು ವಾಕರಿಕೆ ಸೇರಿದಂತೆ ಕೆಲವು ಅಡ್ಡಪರಿಣಾಮಗಳು ಎದುರಾಗಬಹುದು. ಆದರೂ, ಪ್ರತಿ ವರ್ಷ ಲಸಿಕೆ ಪಡೆಯುವುದು ಇನ್ನೂ ಮುಖ್ಯವಾಗಿದೆ.

    "ಫ್ಲೂ ಲಸಿಕೆಗಳು ಉತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿವೆ" ಎಂದು ಮೆಕ್ ನೀಲ್ ಹೇಳುತ್ತಾರೆ "ಕಳೆದ 50 ವರ್ಷಗಳಲ್ಲಿ ಲಕ್ಷಾಂತರ ಅಮೆರಿಕನ್ನರು ಸುರಕ್ಷಿತವಾಗಿ ಫ್ಲೂ ಲಸಿಕೆಗಳನ್ನು ಪಡೆದಿದ್ದಾರೆ ಮತ್ತು ಫ್ಲೂ ಲಸಿಕೆಗಳ ಸುರಕ್ಷತೆಯನ್ನು ಬೆಂಬಲಿಸುವ ವ್ಯಾಪಕ ಸಂಶೋಧನೆಗಳು ನಡೆದಿವೆ."

    ಇನ್ಸ್ಫೂಯೆಂಜಾ ಅಪಾಯಕಾರಿ ಕಾಯಿಲೆಯಾಗಿದೆ, ವಿಶೇಷವಾಗಿ ಯುವಕರು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳಿಗೆ ಮಾರಕವಾಗಿದೆ.

    ಫ್ಲೂ ಲಸಿಕೆಯನ್ನು ಪಡೆಯುವುದರಿಂದ ರೋಗವನ್ನು ನೀವಾಗಿ ಆಹ್ವಾನಿಸುವ ಅವಕಾಶ ಕಡಿಮೆಯಾಗುತ್ತದೆ, ಅಥವಾ ದುರ್ಬಲರಿಗೆ ಹಬ್ಬಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಕೆಲವು ಅಡ್ಡಪರಿಣಾಮಗಳು ಎದುರಾಗುವ ಸಾಧ್ಯತೆ ಇದ್ದರೂ, ಅವು ಹೆಚ್ಚಿನ ಜನರಿಗೆ ಅಲ್ಪ ಮಟ್ಟದಲ್ಲಿ ಮತ್ತು ಅಲ್ಪಕಾಲಿಕವಾಗಿರುತ್ತವೆ ಮತ್ತು ಫ್ಲೂ ಲಸಿಕೆ ಪಡೆಯುವ ನಿಮ್ಮ ಯೋಜನೆಗಳ ಮೇಲೆ ಪ್ರಭಾವ ಬೀರಬಾರದು.

Read more about: fever cold ಜ್ವರ ಶೀತ
English summary

The Side Effects Of The Flu Shot And Nasal Spray In Kannada

Do you know the side effects of the flu shot and nasal spray, read on...
X
Desktop Bottom Promotion