For Quick Alerts
ALLOW NOTIFICATIONS  
For Daily Alerts

ರೂಪಾಂತರ ಕೊರೊನಾವೈರಸ್‌ ಡೆಲ್ಟಾದಿಂದ ಪಾರಾಗಲು 2 ಡೋಸ್ ಲಸಿಕೆ ಅವಶ್ಯಕ

|

2019 ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಹೊಸದೊಂದು ವೈರಸ್‌ ಕಂಡು ಬಂದಿತ್ತು. ಚೀನಾದಲ್ಲಿ ಅದರ ಆರ್ಭಟ ಹೆಚ್ಚಾದಗಲೇ ಜಗತ್ತಿಗೆ ಅರಿವಾದದ್ದು, ಈ ಪ್ರಪಂಚಕ್ಕೆ ಎಂಥ ಅಪಾಯ ಕಾದಿದೆ ಎಂಬುವುದು. ವರ್ಷದೊಳಗಾಗಿ ಆ ವೈರಸ್‌ ಇಡೀ ವಿಶ್ವವನ್ನು ವ್ಯಾಪಿಸಿದೆ.

ಈ ವೈರಸ್‌ನಿಂದ ಪಾರಾಗಲು ಇಡೀ ವಿಶ್ವವೇ ತನಗೆ ತಾನು ಲಾಕ್‌ಡೌನ್‌ ನಿರ್ಬಂಧ ಹೇರಬೇಕಾಯಿತು. ವಿಶ್ವದ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ವಾರಗಟ್ಟಲೆ ಸ್ತಬ್ಧ ಮಾಡಲಾಯಿತು. ಜನರ ಜೀವನವೇ ಬದಲಾಯಿತು. ಮೊದಲನೇ ಅಲೆ, ಎರಡನೇ ಅಲೆ ಅಂತ ಕೊರೊನಾವೈರಸ್‌ ಕೂಡ ರೂಪಾಂತರವಾಗಿ ತನ್ನ ಆರ್ಭಟ ಮುಂದುವರೆಸಿದೆ.

Covids Delta variant

ಈ ವೈರಸ್‌ನನ್ನು ಇಡೀ ವಿಶ್ವದಿಂದ ಇಲ್ಲವಾಗಿಸಲು ಪ್ರತಿಯೊಂದು ದೇಶ ವ್ಯಾಕ್ಸಿನ್‌ ಡ್ರೈವ್ ಪ್ರಾರಂಭಿಸಿದೆ. ಭಾರತದಲ್ಲಿ ಮೊದಲನೇ ಅಲೆ ಅಷ್ಟೇನು ಭೀಕರವಾಗಿರಲಿಲ್ಲ, ಆದರೆ ಎರಡನೇ ಅಲೆ ಅನೇಕ ಜನರನ್ನು ಬಲಿ ಪಡೆದಿದೆ, ಎಷ್ಟೋ ಕುಟುಂಬಗಳು ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಮುಂದೇನು ಎಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ.

ಇನ್ನು ಕೆಲವರು ಈ ಸೋಂಕಿನ ಕಾರಣದಿಂದಾಗಿ ಲಕ್ಷಗಟ್ಟಲೆ ಹಣವನ್ನು ಆಸ್ಪತ್ರೆಗೆ ಸುರಿದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಲಾಕ್‌ಡೌನ್ ಕಾರಣದಿಂದಾಗಿ ಕೆಲಸವಿಲ್ಲದೆ, ವ್ಯವಹಾರವಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗೆ ಕೊರೊನಾ ರೂಪಾಂತರ ವೈರಸ್‌ 2ನೇ ಅಲೆಯಲ್ಲಿ ಸಾಕಷ್ಟು ನಷ್ಟವನ್ನು ತುಂಬಿದೆ.

ಇದೀಗ ಭಾರತದಲ್ಲಿ ಸೋಂಕಿನ ಪ್ರಮಾಣ ತಗ್ಗುತ್ತಾ ಬಂದಿದೆ, ಜೂನ್‌ ಕಳೆಯುವಷ್ಟರಲ್ಲಿ ಸೋಂಕು ಕಡಿಮೆಯಾಗುವುದು ಎಂದು ತಜ್ಞರು ಹೇಳಿದ್ದಾರೆ, 2ನೇ ಅಲೆ ತಗ್ಗುತ್ತಿದ್ದಂತೆ ಮತ್ತೊಂದು ರೂಪಾಂತರ ಕೊರೊನಾವೈರಸ್ ಪತ್ತೆಯಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇದೀಗ ಹೊಸದಾಗಿ ಪತ್ತೆಯಾಗಿರುವ ಕೊರೊನಾವೈರಸ್‌ ಅನ್ನು ಡೆಲ್ಟಾ ವೈರಸ್‌ ಎಂದು ಗುರುತಿಸಲಾಗಿದೆ.

 ಮೊದಲಿಗೆ ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್

ಮೊದಲಿಗೆ ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್

ರೂಪಾಂತರ ಕೊರೊನಾವೈರಸ್‌ ಡೆಲ್ಟಾ ಮೊದಲಿಗೆ ಪತ್ತೆಯಾಗಿದ್ದೇ ಭಾರತದಲ್ಲಿ. ಆದರೆ ವೈರಸ್ ಇದೀಗ ಯುಕೆಯಲ್ಲಿ ಆರ್ಭಟಿಸುತ್ತಿದೆ. ಈ ವೈರಸ್‌ನ ತಡೆಗಟ್ಟಬೇಕಾದರೆ ಒಂದು ಡೋಸ್‌ ಅಲ್ಲ ಎರಡು ಡೋಸ್‌ ಲಸಿಕೆ ಅಗ್ಯತ ಎಂದು ತಜ್ಞರು ಹೇಳಿದ್ದಾರೆ.

ಡೆಲ್ಟಾ ತಡೆಗಟ್ಟಲು ಒಂದು ಡೋಸ್ ಫೈಜರ್ ಸಮರ್ಥವಲ್ಲ

ಡೆಲ್ಟಾ ತಡೆಗಟ್ಟಲು ಒಂದು ಡೋಸ್ ಫೈಜರ್ ಸಮರ್ಥವಲ್ಲ

ಫೈಜರ್ ಒಂದು ಡೋಸ್‌ನ ಲಸಿಕೆಯಾಗಿದೆ. ಆದರೆ ಈ ಫೈಜರ್‌ ಡೆಲ್ಟಾ ರೂಪಾಂತರವೈರಸ್‌ ತಡೆಗಟ್ಟಲು ಪರಿಣಾಮಕಾರಿಯಲ್ಲ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಅಧ್ಯಯನದಲ್ಲಿ ಈ ಲಸಿಕೆ B.1.617.2 (ಡೆಲ್ಟಾ) ಮತ್ತುB.1.351 (ಬೇಟಾ), Asp614Gly, (D614G) ಮತ್ತು B.1.1.7 (Alpha) ವಿರುದ್ಧ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅಧ್ಯಯನಕ್ಕೆ ಒಳಪಡಿಸಲಾಯಿತು. ಆಗ ಫೈಜರ್ ಒಂದು ಡೋಸ್‌ಗಿಂತ ಎರಡು ಡೋಸ್‌ ಪಡೆಯುವುದು ಸುರಕ್ಷಿತ ಎಂಬ ಅಂಶ ತಿಳಿದು ಬಂದಿದೆ.

ಡೆಲ್ಟಾ ವಿರುದ್ಧ ಹೋರಾಡಲು ಎರಡು ಡೋಸ್ ಲಸಿಕೆ ಪಡೆಯಿರಿ

ಡೆಲ್ಟಾ ವಿರುದ್ಧ ಹೋರಾಡಲು ಎರಡು ಡೋಸ್ ಲಸಿಕೆ ಪಡೆಯಿರಿ

ಯಾರು ಒಂದು ಡೋಸ್‌ ಲಸಿಕೆ ಪಡೆದಿರುತ್ತಾರೋ ಅವರಿಗೆ ಡೆಲ್ಟಾ ಸೋಂಕು ತಗುಲಬಹುದು, ಆದ್ದರಿಂದ ಎರಡು ಡೋಸ್‌ ಲಸಿಕೆ ಪಡೆಯುವುದು ಸುರಕ್ಷಿತ.

ಈ ಡೆಲ್ಟಾ ರೂಪಾಂತರ ಕೊರೊನಾವೈರಸ್‌ನಿಂದ ಪಾರಾಗಲು ಮೊದಲು ಡೋಸ್‌ ಪಡೆದವರು ಎರಡನೇ ಡೋಸ್‌ ತುಂಬಾ ತಡಮಾಡದೆ ತೆಗೆದುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

 ಕೊವಿಶೀಲ್ಡ್‌ ಎರಡನೇ ಡೊಸ್ ಅಂತರ ಹೆಚ್ಚಿಸಿದ ಸರ್ಕಾರ

ಕೊವಿಶೀಲ್ಡ್‌ ಎರಡನೇ ಡೊಸ್ ಅಂತರ ಹೆಚ್ಚಿಸಿದ ಸರ್ಕಾರ

ಕೊವಾಕ್ಸಿನ್‌ ಲಸಿಕೆ ಡೋಸ್‌ಗಳನ್ನು 45 ದಿನಗಳ ಅಂತರ ನೀಡಲಾಗುತ್ತಿದೆ. ಕೊವಿಶೀಲ್ಡ್‌ ಲಸಿಕೆಯ ಎರಡನೇ ಡೋಸ್‌ನ ಅಂತರವನ್ನು ಸರ್ಕಾರ ಹೆಚ್ಚಿಸಿದೆ. ಮೊದಲ ಡೋಸ್‌ ಪಡೆದ 6-8 ವಾರಗಳಲ್ಲಿ ಎರಡನೇ ಡೋಸ್ ನೀಡಲಾಗಿತ್ತು, ಈಗ ಆ ಅಂತರವನನ್ಉ 12-16 ವಾರಕ್ಕೆ ಹೆಚ್ಚಿಸಿದೆ.

English summary

Study Suggests To Fight Covid's Delta Variant, Extend Second-Dose Protection As Quickly As Possible

Study suggests To fight Covid's Delta variant, extend second-dose protection as quickly as possible, read on..
Story first published: Tuesday, June 8, 2021, 21:32 [IST]
X
Desktop Bottom Promotion