For Quick Alerts
ALLOW NOTIFICATIONS  
For Daily Alerts

ಮೈಕೈ ನೋವು ಹೋಗಲಾಡಿಸಲು ಸುಲಭದ 5 ಪರಿಹಾರಗಳು

|

ಮೈ ಕೈ ನೋವು ಎಂಬುದು ಸಾಮಾನ್ಯವಾಗಿ ಕೆಲಸ ತಪ್ಪಿಸಿಕೊಳ್ಳಲು ಸೋಮಾರಿಗಳು ಬಳಸುವ ಒಂದು ತಂತ್ರವಾಗಿದೆ. ಆದರೆ ನಿಜವಾಗಿ ಎದುರಾಗುವ ಮೈ ಕೈ ನೋವಿಗೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ.

ಇದು ಆಯಾಸ, ನಿಮ್ಮ ಕೆಲಸದ ಮೇಜಿನ ಬಳಿ ಹೆಚ್ಚು ಹೊತ್ತು ಹೊತ್ತು ಕುಳಿತುಕೊಳ್ಳುವುದು ಅಥವಾ ಬೇರಾವುದೋ ಆರೋಗ್ಯ ಸ್ಥಿತಿಯ ಕಾರಣದಿಂದಾಗಿರಬಹುದು. ದೀರ್ಘಕಾಲದ ದೈಹಿಕ ಚಟುವಟಿಕೆಯು ದೇಹದ ನೋವು ಮತ್ತು ಒತ್ತಡಕ್ಕೆ ಕಾರಣವಾಗಬಹುದು, ನಿರ್ಜಲೀಕರಣ ಮತ್ತು ನಿದ್ರೆಯ ಕೊರತೆ ಇದ್ದರೆ ಈ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ದೇಹದ ನೋವಿಗೆ ತಾತ್ಕಾಲಿಕ ಪರಿಹಾರವೇನೋ ದೊರಕಬಹುದು. ವಾಸ್ತವದಲ್ಲಿ, ನೋವು ನಿವಾರಕಗಳು ನೋವಿನ ಅನುಭವವನ್ನು ಮೆದುಳಿಗೆ ತಲುಪಿಸುವುದನ್ನು ತಡೆಯುತ್ತವೆಯೇ ಹೊರತು ನೋವಿನ ಮೂಲವನ್ನು ನಿವಾರಿಸುವುದಿಲ್ಲ.

ವಿಶೇಷವಾಗಿ ನೀವು ಆಗಾಗ್ಗೆ ಇಂತಹ ನೋವನ್ನು ಅನುಭವಿಸುತ್ತಿದ್ದರೆ ಪರಿಹಾರ ಪಡೆಯಲು ನೋವಿನ ಮೂಲ ಕಾರಣವನ್ನು ಕಂಡುಹಿಡಿಯುವುದು ಅಗತ್ಯ. ನೋವು ಆರೋಗ್ಯದ ಯಾವುದೋ ಸ್ಥಿತಿಯ ಕಾರಣದಿಂದಾಗಿ ಮತ್ತು ಹದಗೆಡುತ್ತಿರುವಂತೆ ತೋರುತ್ತಿದ್ದರೆ, ಆದಷ್ಟೂ ಬೇಗನೇ ವೈದ್ಯರನ್ನು ಕಾಣುವುದು ಅವಶ್ಯಕ.

ಸಾಮಾನ್ಯವಾದ ಮೈ ಕೈ ನೋವಿಗೆ ಪರಿಹಾರ ನೀಡುವ ಕೆಲವು ಸುಲಭ ಮನೆಮದ್ದುಗಳು ಇಲ್ಲಿವೆ:

1. ಉಪ್ಪುನೀರಿನ ಶಾಖ

1. ಉಪ್ಪುನೀರಿನ ಶಾಖ

ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುಗಳ ನೋವಿನಿಂದ ಪರಿಹಾರ ನೀಡುತ್ತದೆ. ಬೆಚ್ಚಗಿನ ನೀರು ಸ್ನಾಯುಗಳಲ್ಲಿ ಉಂಟಾಗಿದ್ದ ಸೆಡೆತವನ್ನು ಸಡಿಲಿಸುತ್ತವೆ ಮತ್ತು ಆದ್ದರಿಂದ ತಾಲೀಮು ಅಥವಾ ದೈಹಿಕ ಚಟುವಟಿಕೆಯಿಂದ ಉಂಟಾಗುವ ದೇಹದ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಉಪ್ಪು ಬೆರೆಸಿದ ನೀರಿನ ತೊಟ್ಟಿಯಲ್ಲಿ ನೋವಿರುವ ಭಾಗವನ್ನು ಅಥವಾ ಸಾಧ್ಯವಾದರೆ ಸ್ನಾನದ ತೊಟ್ಟಿಯಲ್ಲಿ ಇಡಿಯ ದೇಹವನ್ನು ಕೊಂಚ ಹೊತ್ತು ಮುಳುಗಿಸಿಡುವುದು ಉತ್ತಮ. ಪರ್ಯಾಯವಾಗಿ ಉಪ್ಪನ್ನು ಬಿಸಿಮಾಡಿ ದಪ್ಪನೆಯ ಬಟ್ಟೆಯೊಳಗಿಟ್ಟು ಇದರ ಶಾಖವನ್ನೂ ನೀಡಬಹುದು.

2. ಮಸಾಜ್

2. ಮಸಾಜ್

ಮೈ ಕೈ ನೋವುಗಳನ್ನು ನಿವಾರಿಸಲು ಮಸಾಜ್ ಬಹುಶಃ ಸಾಮಾನ್ಯ ವಿಧಾನವಾಗಿದೆ. ಸರಿಯಾದ ಕ್ರಮದಲ್ಲಿ ಮಾಡಿದಾಗ, ಮಸಾಜ್ ಅಂಗಾಂಶಗಳ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನರಗಳ ಸಂಕೋಚನವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ, ತನ್ಮೂಲಕ ಮೈ ಕೈ ನೋವಿನಿಂದ ಪರಿಹಾರ ನೀಡುತ್ತದೆ. ಬೆಚ್ಚಗಿನ ಸಾಸಿವೆ ಎಣ್ಣೆಯೊಂದಿಗೆ ಮಸಾಜ್ ಮಾಡುವುದರಿಂದ ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ ಗುಣಗಳನ್ನು ಬಳಸಿಕೊಳ್ಳಬಹುದು ಹಾಗೂ ಮೈ ಕೈ ನೋವಿನ ವಿರುದ್ಧ ವಿಶೇಷವಾಗಿ ಪರಿಣಾಮಕಾರಿಯಾಗಿದೆ ಎಂದು ಸೂಚಿಸಲಾಗಿದೆ. ಆದರೆ ಮಸಾಜ್ ಮಾಡುವುದು ಒಂದು ಕಲೆಯಾಗಿದ್ದು ನುರಿತ ಮತ್ತು ಅನುಭವಸ್ಥರಿಂದಲೇ ಮಸಾಜ್ ಮಾಡಿಸಿಕೊಳ್ಳುವುದು ಅಗತ್ಯ. ಸಾಮಾನ್ಯವಾದ ಭಾಗಗಳಿಗೆ ಕುಟುಂಬದ ಸದಸ್ಯರೇ ಮಸಾಜ್ ಮಾಡಬಹುದು.

3. ಬೆಚ್ಚಗಿನ ಶಾಖ ಒದಗಿಸುವಿಕೆ

3. ಬೆಚ್ಚಗಿನ ಶಾಖ ಒದಗಿಸುವಿಕೆ

ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ಶಾಖ ಒದಗಿಸುವುದು ಉತ್ತಮ ಮಾರ್ಗವಾಗಿದೆ. ಇದು ಪೆಡಸಾಗಿರುವ ಸ್ನಾಯುಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ ಆದರೆ ಗಾಯದಿಂದಾಗಿ ನೋವು ಉಂಟಾಗಿದ್ದರೆ ಈ ವಿಧಾನವನ್ನು ಬಳಸಬಾರದು. ನೋವಿರುವ ಭಾಗದ ಮೇಲೆ ಹೀಟ್ ಪ್ಯಾಡ್ ಅಥವಾ ಒದ್ದೆಯಾದ ಟವೆಲ್ (ಬೆಚ್ಚಗಿನ ನೀರಿನಲ್ಲಿ ಅದ್ದಿ) ಇರಿಸಲು ನೀವು ಪ್ರಯತ್ನಿಸಬಹುದು. ಹೀಟ್ ಪ್ಯಾಡ್ ಅಥವಾ ಟವೆಲ್ ತುಂಬಾ ಬಿಸಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅದು ನಿಮ್ಮ ಚರ್ಮವನ್ನು ಸುಡಬಹುದು. ಹಾಗಾಗಿ ಚರ್ಮ ಸಹಿಸಿಕೊಳ್ಳುವಷ್ಟು ಮಾತ್ರವೇ ಬಿಸಿ ಇರುವುದು ಅವಶ್ಯಕ.

4. ಐಸ್ ಪ್ಯಾಕ್

4. ಐಸ್ ಪ್ಯಾಕ್

ಸ್ನಾಯುಗಳ ಉಳುಕಿನಿಂದ ಉಂಟಾಗುವ ನೋವು ಮತ್ತು ಊತಕ್ಕೆ, ಐಸ್ ಪ್ಯಾಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ನೋವಿರುವ ಭಾಗವನ್ನು ನಿಶ್ಚೇಷ್ಟಿತಗೊಳಿಸುತ್ತದೆ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಐಸ್ ಪ್ಯಾಕ್ ಎಂದರೆ ಹೆಸರೇ ಸೂಚಿಸುವಂತೆ ಮಂಜುಗಡ್ಡೆಯ ತುಂಡುಗಳು ತುಂಬಿರುವ ಬಟ್ಟೆಯನ್ನು ಅಥವಾ ಮಂಜುಗಡ್ಡೆಯ ತುಂಡನ್ನೇ ನೇರವಾಗಿ ನೋವಿರುವ ಭಾಗದ ಮೇಲೆ ಇರಿಸಬೇಕು ಹಾಗೂ ನಯವಾಗಿ ನೇವರಿಸಬೇಕು.

5. ಶುಂಠಿ

5. ಶುಂಠಿ

ಶುಂಠಿಯಲ್ಲಿಯೂ ನೋವು ನಿವಾರಕ ಮತ್ತು ಉರಿಯೂತ ನಿವಾರಕ ಸಂಯುಕ್ತಗಳು ಸಮೃದ್ಧವಾಗಿವೆ. ನೋವು ಕಡಿಮೆ ಮಾಡುವಲ್ಲಿ ಶುಂಠಿ ಐಬುಪ್ರೊಫೇನ್ ನಂತಹ ಔಷಧಿಯಷ್ಟು ಪರಿಣಾಮಕಾರಿಯಾಗಬಹುದು ಎಂದು ಸಂಶೋಧನಾ ಅಧ್ಯಯನಗಳು ಸೂಚಿಸುತ್ತವೆ. ಶುಂಠಿಯನ್ನು ಹೊಂದಲು ಉತ್ತಮ ಮಾರ್ಗವೆಂದರೆ ಬೆಚ್ಚಗಿನ ನೀರಿನಲ್ಲಿ ಹಸಿಶುಂಠಿಯನ್ನು ತುರಿದು ಮಿಶ್ರಣ ಮಾಡಿ ಈ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಹಿಂಡಿ ನೋವಿರುವ ಭಾಗದ ಮೇಲೆ ಇರಿಸಬೇಕು.

English summary

Simple Home Remedies for Body Pain in Kannada

Here are simple home remedies to relieve body pain, have a look...
X
Desktop Bottom Promotion