For Quick Alerts
ALLOW NOTIFICATIONS  
For Daily Alerts

ಪೀರಿಯಡ್ಸ್ ವಿಳಂಬವಾಗುತ್ತಿದೆಯೇ, ಈ ಕಾರಣಗಳಿರಬಹುದು

|

ಹೆಣ್ಣು ಮಕ್ಕಳಿಗೆ ಹದಿ ಹರೆಯದ ಪ್ರಾಯದಲ್ಲಿ ಪ್ರಾರಂಭವಾಗುವ ಮುಟ್ಟಿನ ಚಕ್ರ ನಿಲ್ಲುವುದು ಮೆನೋಪಾಸ್‌ ಹಂತದಲ್ಲಿ. ಪ್ರತಿ ತಿಂಗಳು ಮುಟ್ಟಾಗುವುದು ಆರೋಗ್ಯವಂತ ಮಹಿಳೆಯ ಲಕ್ಷಣ ಎನ್ನಲಾಗುವುದು. ಮುಟ್ಟಿನಲ್ಲಿ ವ್ಯತ್ಯಾಸ ಉಂಟಾದರೆ ಏನೋ ಹಾರ್ಮೋನ್‌ ಸಮಸ್ಯೆಯಿದೆ ಎಂದರ್ಥ.

ಕೆಲವರಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿರುತ್ತದೆ, ಆದರೆ ಇದ್ದಕ್ಕಿದ್ದಂತೆ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. 2-3 ತಿಂಗಳಾದರೂ ಮುಟ್ಟಾಗುವುದೇ ಇಲ್ಲ. ಲೈಂಗಿಕವಾಗಿ ಸಕ್ರಿಯೆವಾಗಿರುವವರಿಗೆ ತಾನು ಗರ್ಭಧರಿಸಿರಬಹುದೇ ಎಂಬ ಅನುಮಾನ ಕಾಡುವುದು. ಆದರೆ ಪರೀಕ್ಷೆ ಮಾಡಿದಾಗ ಗರ್ಭಧಾರಣೆಯ ಯಾವುದೇ ಸುಳಿವು ಇರುವುದಿಲ್ಲ, ಹಾಗಾದರೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲ ಏಕೆ? ನಾನಾ ಕಾಣಗಳಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು. ಗರ್ಭಧಾರಣೆ ಹೊರತು ಪಡಿಸಿ ಯಾವೆಲ್ಲಾ ಕಾರಣಗಳಿಂದ ತಿಂಗಳ ಮುಟ್ಟು ಆಗುವುದಿಲ್ಲ ಎಂದು ಹೇಳಲಾಗಿದೆ ನೋಡಿ:

1. ಎದೆ ಹಾಲುಣಿಸುವಾಗ

1. ಎದೆ ಹಾಲುಣಿಸುವಾಗ

ಹೆರಿಗೆಯಾಗಿ ಕೆಲವು ತಿಂಗಳವರೆಗೆ ಮುಟ್ಟಾಗುವುದಿಲ್ಲ. ಕೆಲವರು ಒಂದು ವರ್ಷದವರೆಗೆ ಮುಟ್ಟಾಗುವುದಿಲ್ಲ. ಮಗುವಿಗೆ ಎದೆ ಹಾಲುಣಿಸುವಾಗ ದೇಹದಲ್ಲಿ ಪ್ರೊಲಾಕ್ಟಿನ್ ಹಾರ್ಮೋನ್ ಅಧಿಕವಿರುತ್ತದೆ. ಹೀಗಾಗಿ ಮುಟ್ಟಾಗುವುದಿಲ್ಲ. ಕೆಲವರಿಗೆ ಹೆರಿಗೆಯಾಗಿ 2-3 ತಿಂಗಳಿಗೆ ಮುಟ್ಟಿನ ಚಕ್ರ ಪ್ರಾರಂಭವಾದರೆ, ಇನ್ನು ಕೆಲವರಿಗೆ ಮಗುವಿಗೆ ಎದೆ ಹಾಲು ಕೊಡುವುದು ಸಂಪೂರ್ಣವಾಗಿ ನಿಲ್ಲಿಸುವವರಿಗೆ ಮುಟ್ಟಿನ ಚಕ್ರ ಪ್ರಾರಂಭವಾಗುವುದಿಲ್ಲ.

2. ಮಾನಸಿಕ ಒತ್ತಡ

2. ಮಾನಸಿಕ ಒತ್ತಡ

ಮಾನಸಿಕ ಒತ್ತಡ ನಿಮ್ಮ ಮನಸ್ಸಿನ ಮೇಲೆ ಮಾತ್ರವಲ್ಲ ಶರೀರದ ಮೇಲೂ ತುಂಬಾ ಪರಿಣಾಮ ಬೀರುವುದು. ಇದು ಹಾರ್ಮೋನ್‌ಗಳ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಕಾರ್ಟಿಸೋಲ್ (Cortisol) ಹಾರ್ಮೋನ್ ಉತ್ಪತ್ತಿ ಅಧಿಕವಾಗುತ್ತದೆ. ಇದರಿಂದ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರುವುದು. ಮಾನಸಿಕ ಒತ್ತಡದಿಂದಾಗಿ ಈಸ್ಟ್ರೋಜಿನ್ ಹಾಗೂ ಪ್ರೊಗೆಸ್ಟಿರೋನ್ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುವುದು. ಇದರಿಂದಾಗಿ ಅನಿಯಮಿತ ಮುಟ್ಟು ಉಂಟಾಗುವುದು.

ಆದ್ದರಿಂದಲೇ ಪರೀಕ್ಷೆ ಸಮಯದಲ್ಲಿ ಮುಟ್ಟು ಮಿಸ್‌ ಆಗುವುದು ನಿಮ್ಮ ಗಮನಕ್ಕೆ ಬಂದಿರಬಹುದು.

3. ನಿದ್ದೆ ಮಾಡುವ ಸಮಯದಲ್ಲಿನ ವ್ಯತ್ಯಾಸ

3. ನಿದ್ದೆ ಮಾಡುವ ಸಮಯದಲ್ಲಿನ ವ್ಯತ್ಯಾಸ

ನಿದ್ದೆ ಮಾಡುವ ಸಮಯ ಕೂಡ ನಮ್ಮ ದೇಹದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ತುಂಬಾ ಕಡಿಮೆ ನಿದ್ದೆ ಮಾಡುವುದು, ನಿದ್ದೆ ಸರಿಯಾಗಿ ಮಾಡಲು ಸಾಧ್ಯವಾಗದೇ ಹೋಗುವುದು ಈ ರೀತಿ ಇದ್ದರೆ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಉಂಟಾಗುವುದು. ದಿನದಲ್ಲಿ 8 ಗಂಟೆ ನಿದ್ದೆ ಅವಶ್ಯಕ.

4. ಮೈ ತೂಕ ಕಡಿಮೆಯಾದರೆ

4. ಮೈ ತೂಕ ಕಡಿಮೆಯಾದರೆ

ಕಡಿಮೆ ಮೈ ತೂಕ ಹೊಂದಿರುವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುವುದು ಸಹಜ. ತುಂಬಾ ಮೈ ತೂಕ ಕಡಿಮೆಯಾದರೆ GnRH (gonadotropin-releasing hormone) ಸ್ರವಿಸುವುದಿಲ್ಲ. GnRH ಹಾರ್ಮೋನ್‌ ಪಿಟ್ಯುಟರಿ ಗ್ರಂಥಿ ಬಿಡುಗಡೆ ಮಾಡುವ ಸಂತಾನೊತ್ಪತ್ತಿ ಹಾರ್ಮೋನ್‌ಗಳಾದ FSH ಮತ್ತು ಪ್ರೊಲಾಕ್ಟಿನ್ ಹಾರ್ಮೋನ್‌ ನಿಯಂತ್ರಿಸುತ್ತದೆ. ಇದರಿಂದಾಗಿ ಪಿಟ್ಯುಟರಿ ಗ್ರಂಥಿಗೆ ಸಂತಾನೋತ್ಪತ್ತಿ ಹಾರ್ಮೋನ್‌ ಉತ್ಪಾದಿಸಲು ಸಂದೇಶ ರವಾನೆಯಾಗುವುದಿಲ್ಲ, ಇದು ಮುಟ್ಟಿನ ಚಕ್ರದ ಮೇಲೆ ಪರಿಣಾಮ ಬೀರುತ್ತದೆ.

5. ವಿಪರೀತ ವ್ಯಾಯಾಮ ಮಾಡಿದರೆ

5. ವಿಪರೀತ ವ್ಯಾಯಾಮ ಮಾಡಿದರೆ

ಅತಿಯಾಗಿ ವ್ಯಾಯಾಮ ಮಾಡುವುದರಿಂದ ಕೂಡ ತೂಕ ಇಳಿಕೆ ಉಂಟಾಗುತ್ತದೆ ಇದು ಕೂಡ ಮುಟ್ಟಿನಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ. ಮಹಿಳಾ ಕ್ರೀಡಾಪಟುಗಳು ಅಧಿಕ ದೈಹಿಕ ಕಸರತ್ತು ಮಾಡುತ್ತಾರೆ, ಅವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ.

6. ಅತ್ಯಧಿಕ ಮೈ ತೂಕ

6. ಅತ್ಯಧಿಕ ಮೈ ತೂಕ

ಅತಿಯಾದ ಮೈ ತೂಕ ಹೊಂದಿವರಲ್ಲೂ ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರುವುದು. ಅತಿಯಾದ ಮೈ ತೂಕ ಹೊಂದಿದ್ದರೆ ದೇಹದಲ್ಲಿ ಈಸ್ಟ್ರೋಜಿನ್ ಪ್ರಮಾಣ ಅಧಿಕವಾಗಿರುವುದು, ಇದು ಹಾರ್ಮೋನ್ ಉತ್ಪತ್ತಿ ಮೇಲೆ ಪರಿಣಾಮ ಬೀರಿ ಮುಟ್ಟಿನ ಸಮಸ್ಯೆ ಉಂಟಾಗುವುದು.

7. ಅವಧಿಪೂರ್ವ ಮೆನೋಪಾಸ್

7. ಅವಧಿಪೂರ್ವ ಮೆನೋಪಾಸ್

ಅವಧಿ ಪೂರ್ವ ಮೆನೋಪಾಸ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಇದಕ್ಕೆ ಜೀವನಶೈಲಿ ಕೂಡ ಒಂದು ಕಾರಣವಾಗಿದೆ. ಸಾಮಾನ್ಯವಾಗಿ ಮೆನೋಪಾಸ್ 50 ಬಳಿಕ ಉಂಟಾಗುವುದು, ಕೆಲವರಿಗೆ 30ರ ಪ್ರಾಯದಲ್ಲಿಯೇ ಉಂಟಾಗುವುದು. ಅಂಡಾಣುಗಳ ಬಿಡುಗಡೆಯಾಗದಿದ್ದರೆ ಅವಧಿಪೂರ್ವ ಮೆನೋಪಾಸ್ ಉಂಟಾಗುವುದು.

8. ದೈಹಿಕ ಸಮಸ್ಯೆಗಳು

8. ದೈಹಿಕ ಸಮಸ್ಯೆಗಳು

ದೇಹದಲ್ಲಿ ಕೆಲವೊಂದು ಸಮಸ್ಯೆಗಳಿದ್ದಾಗ ಕೂಡ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು. ಆದ್ದರಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾದಾಗ ಈ ಸಮಸ್ಯೆಗಳಿದೆಯೇ ಎಂದು ಪರೀಕ್ಷೆ ಮಾಡಿಸಿ ತಿಳಿದುಕೊಳ್ಲುವುದು ಒಳ್ಳೆಯದು:

  • ಪಿಸಿಓಎಸ್
  • ಉದರದ ಕಾಯಿಲೆ
  • ಮಧುಮೇಹ
  • ಥೈರಾಯ್ಡ್ ಸಮಸ್ಯೆ
English summary

Reasons Your Period Could Be Late Other Than Pregnancy

Here are teasons why your periods could be late other than pregnancy,read on
X
Desktop Bottom Promotion