Just In
Don't Miss
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Movies
ಸಾಯುವ ಮುನ್ನಾ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಜಯಶ್ರೀ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಕ್ಕಿ ಜ್ವರದ ಕುರಿತ ನಿಮ್ಮನ್ನು ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಕೊರೊನಾ ಆತಂಕದ ನಡುವೆಯೇ ಇದೀಗ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ಕೇರಳ ಸೇರಿದಂತೆ ಇಳಿದ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದ್ದು, ಕರ್ನಾಟಕದಲ್ಲೂ ರೋಗ ಕಾಣಿಸಿಕೊಳ್ಳಬಹುದು ಎಂಬ ಆತಂಕ ಇದೆ.
ಹಕ್ಕಿ ಜ್ವರವೂ ಏವಿಯನ್ ಇನ್‌ಫ್ಲುಂಜಾ ವೈರಸ್‌ನಿಂದ ಬರುತ್ತದೆ. ಈ ವೈರಸ್ ಕಾಡು ಹಕ್ಕಿ ಹಾಗೂ ಸಾಕು ಪ್ರಾಣಿಗಳಾದ ಕೋಳಿ, ಬಾತುಕೋಳಿ, ಟರ್ಕಿ ಇವುಗಳಿಗೂ ಹರಡುವುದು. ವೈರಸ್ ತಗುಲಿದ ಪಕ್ಷಿಗಳ ಎಂಜಲು, ಮಲ, ಮೂತ್ರ ಇವುಗಳ ಮೂಲಕ ಈ ರೋಗ ಹರಡುವುದು, ಈ ಪ್ರಾಣಿಗಳ ಸಂಪರ್ಕಕ್ಕೆ ಬಂದ ಮನುಷ್ಯರಿಗೂ ಹರಡುವುದು.

ಹಕ್ಕಿ ಜ್ವರ ಮೊದಲಿಗೆ ಎಲ್ಲಿ ಕಂಡು ಬಂತು?
ಮೊದಲಿಗೆ 2011ರಲ್ಲಿ ಹಕ್ಕಿ ಜ್ವರ ಹನ್ನೆರಡಕ್ಕೂ ಅಧಿಕ ದೇಶಗಳಲ್ಲಿ ಕಂಡು ಬಂದಿತ್ತು. ಬಾಂಗ್ಲದೇಶ, ಕಾಂಬೋಡಿಯಾ, ಈಜಿಪ್ಟ್, ಇಂಡೋನೇಷ್ಯಾ ಈ ದೇಶಗಳಲ್ಲಿ ಕಂಡು ಬಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹಕ್ಕಿ ಜ್ವರ ಬಂದಾಗ ಕಂಡು ಬರುವ ಲಕ್ಷಣಗಳೇನು?
ಜ್ವರ, ಕೆಮ್ಮು, ಗಂಟಲು ಕೆರೆತ ಹಾಗೂ ಮೈ ಚಳಿಯಾಗುವುದು. ಏವಿಯನ್ ಇನ್‌ಫ್ಲುಂಜಾ ಕಣ್ಣಿನ ತೊಂದರೆ, ಉಸಿರಾಟದ ತೊಂದರೆ, ನ್ಯೂಮೋನಿಯಾ ಉಂಟು ಮಾಡಬಹುದು, ಹಕ್ಕಿ ಜ್ವರ ಪ್ರಾಣಕ್ಕೆ ಅಪಾಯಕಾರಿಯಾದ ಕಾಯಿಲೆಯಾಗಿದೆ.

ಹಕ್ಕಿನ ಜ್ವರಕ್ಕೆ ಚಿಕಿತ್ಸೆಯೇನು?
ಹಕ್ಕಿ ಜ್ವರ ಬಂದಾಗ ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡಿದಂತೆ ನೀಡಲು ಸಾಧ್ಯವಿಲ್ಲ, ಈ ಜ್ವರ ಕಾಣಿಸಿಕೊಂಡಾಗ ಆ್ಯಂಟಿವೈರಲ್ ಔಷಧವಾಗಿರುವ oseltamivir (Tamiflu) and zanamivir (Relenza) ನೀಡಿದರೆ ಗುಣಮುಖರಾಗಲು ಸಾಧ್ಯ ಎಂದು ಸಿಡಿಸಿ ಹೇಳಿದೆ.

ಲಸಿಕೆ ಪಡೆದುಕೊಳ್ಳುವುದರಿಂದ ಹಕ್ಕಿ ಜ್ವರ ತಡೆಗಟ್ಟಲು ಸಾಧ್ಯವೇ?
ಇಲ್ಲ, ನೀವು ಜ್ವರ ತಡಗಟ್ಟಲು ತೆಗೆದುಕೊಳ್ಳುವ ಔಷಧಿಯಿಂದ ಏವಿಯನ್ ಇನ್‌ಫ್ಲುಂಜಾ ವೈರಸ್ ತಗುಲದಂತೆ ತಡೆಗಟ್ಟಲು ಸಾಧ್ಯವಿಲ್ಲ.

ಮೊಟ್ಟೆ ಹಾಗೂ ಪೌಲ್ಟ್ರಿ ಆಹಾರ ತಿನ್ನುವುದರಿಂದ ಹಕ್ಕಿ ಜ್ವರ ಬರುವುದೇ?
ಮೊಟ್ಟೆ, ಚಿಕನ್, ಟರ್ಕಿ ಇವುಗಳನ್ನು ಚೆನ್ನಾಗಿ ಬೇಯಿಸಿ ತಿಂದರೆ ಹಕ್ಕಿ ಜ್ವರ ಬರುವುದಿಲ್ಲ. ಹಕ್ಕಿ ಜ್ವರದ ಅಪಾಯ ತಡೆಗಟ್ಟಲು ನೀವು ಮಾಂಸ ಸ್ವಚ್ಛ ಮಾಡಿದ ಬಳಿಕ 20 ಸೆಕೆಂಡ್ ಸೋಪ್ ಹಚ್ಚಿ ಕೈ ತೊಳೆಯಿರಿ. ಕ್ಲೀನ್ ಮಾಡುವ, ಕತ್ತರಿಸುವ ನೈಫ್, ಬೋರ್ಡ್ ಇವುಗಳನ್ನು ಸೋಪ್ ಹಚ್ಚಿ ತೊಳೆದು ಇಡಬೇಕು. ಮೊಟ್ಟೆ, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೆ ಯಾವುದೇ ತೊಂದರೆಯಿಲ್ಲ.

ಸ್ವಲ್ಪ ಕೋಳಿ ಉಳಿಸಿಕೊಳ್ಳುವುದು ಸುರಕ್ಷಿತವೇ?
ಹಕ್ಕಿ ಜ್ವರ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಆ ಪ್ರದೇಶದ ಕೋಳಿಗಳೆನ್ನೆಲ್ಲಾ ಕೊಲ್ಲಲಾಗುವುದು. ಆದರೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲದ ಸ್ವಲ್ಪ ಕೋಳಿ ಉಳಿಸಬಹುದು. ಏಕೆಂದರೆ ಅಮೆರಿಕದಲ್ಲಿ ಹೀಗೆ ಸ್ವಲ್ಪ ಕೋಳಿ ಉಳಿಸಿದ್ದರು, ಆಗ ಯಾವುದೇ ತೊಂದರೆಯಾಗಿರಲಿಲ್ಲ.