For Quick Alerts
ALLOW NOTIFICATIONS  
For Daily Alerts

ಒಮಿಕ್ರಾನ್ ಡೆಲ್ಟಾದಂತೆ ಮಾರಾಣಾಂತಿಕವಲ್ಲ: WHO

|

ಇದೀಗ ಇಡೀ ವಿಶ್ವಗೆ ಒಮಿಕ್ರಾನ್ ಚಿಂತೆ ಕಾಡಿದೆ. ಕೊರೊನಾವೈರಸ್‌ ಈ ಹೊಸ ರೂಪಾಂತರ ತಳಿ ಅತೀ ವೇಗವಾಗಿ ಹರಡುವುದು ಎಂದು ತಜ್ಞರು ಹೇಳಿದ್ದಾರೆ. ಭಾರತದಲ್ಲಿಯೂ ಈ ವೈರಸ್‌ ತಳಿ ಕಂಡು ಬಂದಿದೆ.

ಒಮಿಕ್ರಾನ್‌ ಭಯ ಎಲ್ಲೆಡೆ ಇದ್ದರೂ ಇದು ಮಾರಾಣಾಂತಿಕವಲ್ಲ ಎಂಬ ಸುದ್ದಿ ಸ್ವಲ್ಪ ಸಮಧಾನಕಾರವಾಗಿದೆ. ಒಮಿಕ್ರಾನ್‌ ಈ ಹಿಂದೆ ಕಂಡು ಬಂದ ಕೊರೊನಾ ತಳಿಗಳಿಗಿಂತ ಮಾರಾಣಾಂತಿಕ ಎಂದು ಊಹಿಸಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

 ಒಮಿಕ್ರಾನ್‌ ಮಾರಾಂತಿಕವಾಗಿಲ್ಲ

ಒಮಿಕ್ರಾನ್‌ ಮಾರಾಂತಿಕವಾಗಿಲ್ಲ

ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ನಿರ್ದೇಶಕ ಮಿಷಲ್ ರಯಾನ್‌ ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ ಡೆಲ್ಟಾಗಿಂತ ಒಮಿಕ್ರಾನ್‌ ಮಾರಾಂತಿಕವಾಗಿಲ್ಲ. ಈಗಿರುವ ಲಸಿಕೆಗಳು ಜನರಿಗೆ ಒಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತಿದೆ. ಲಸಿಕೆಯಿಂದಾಗಿ ಪರಿಸ್ಥಿತಿ ಗಂಭೀರವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಒಮಿಕ್ರಾನ್‌ ವೇಗವಾಗಿ ಹರಡುವುದು, ಆದರೆ ಡೆಲ್ಟಾದಷ್ಟು ಅಪಾಯಕಾರಿಯಲ್ಲ

ಒಮಿಕ್ರಾನ್‌ ವೇಗವಾಗಿ ಹರಡುವುದು, ಆದರೆ ಡೆಲ್ಟಾದಷ್ಟು ಅಪಾಯಕಾರಿಯಲ್ಲ

ಮೊದಲಿಗೆ ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾದ ಒಮಿಕ್ರಾನ್‌ ಕೊರೊನಾವೈರಸ್‌ ಬೇಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ.

ಇದುವರೆಗೆ ಕಂಡು ಬಂದ ಎಲ್ಲಾ ಕೊರೊನಾವೈರಸ್‌ ತಳಿಗಳನ್ನು ತಡೆಗಟ್ಟುವಲ್ಲಿ ಈಗಿರುವ ಲಸಿಕೆಗಳು ಪರಿಣಾಮಕಾರಿಯಾಗಿತ್ತು, ಆದರೆ ಒಮಿಕ್ರಾನ್‌ ವಿಷಯದಲ್ಲಿ ಹಾಗೇ ಆಗಲ್ಲ ಎಂದು ಊಹಿಸಬೇಕಾಗಿಲ್ಲ ಎಂದೂ ರಯಾನ್ ಹೇಳಿದ್ದಾರೆ.

ಆದರೆ ಒಮಿಕ್ರಾನ್‌ ತಡೆಗಟ್ಟುವಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುವುದನ್ನ ಹೇಳಲಾಗುತ್ತಿಲ್ಲ, ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ.

ಆದರೆ ಒಮಿಕ್ರಾನ್‌ ಬೇಗನೆ ಹೆಚ್ಚಿನ ಜನರಿಗೆ ಹರಡುವ ಗುಣವನ್ನು ಹೊಂದಿದೆ, ದಕ್ಷಿಣ ಆಫ್ರಿಕದಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ.

ಕೊರೊನಾವೈರಸ್‌ನಿಂದ ಪಾರಾಗಲು ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ:

ಕೊರೊನಾವೈರಸ್‌ನಿಂದ ಪಾರಾಗಲು ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ:

* ಮುಖ್ಯವಾಗಿ ಎರಡು ಡೋಸ್‌ ಲಸಿಕೆ ಪಡೆಯಿರಿ. ಲಸಿಕೆ ಪಡೆದವರಿಗೆ ಯಾವುದೇ ಕೊರೊನಾವೈರಸ್ ರೂಪಾಂತರ ಗಂಭೀರ ಪರಿಣಾಮ ಬೀರಿಲ್ಲ.

* ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿ.

* ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

* ಈ ಹಿಂದೆ ಡೆಲ್ಟಾ ಬಂದಾಗ ಎಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದಂತೆಯೂ ಈಗಲೂ ಪಾಲಿಸಿ.

English summary

Omicron Variant Not More Severe Than Delta, Existing Vaccines Will Work Says WHO

Omicron variant not more severe than Delta, existing vaccines will work says WHO, read on...
Story first published: Thursday, December 9, 2021, 20:18 [IST]
X
Desktop Bottom Promotion