ಈ ತೈಲಗಳಿಂದ ಮೂಲವ್ಯಾಧಿ/ಪೈಲ್ಸ್ ನೋವಿಗೆ ಬೈ ಬೈ ಹೇಳಿ!

ಗುದದ್ವಾರದ ಸುತ್ತಲಿನ ರಕ್ತನಾಳಗಳು ಉಬ್ಬಿಕೊಂಡು ರಕ್ತಸ್ರಾವವಾಗಲು ಪ್ರಾರಂಭಿಸಿದಾಗ ಮೂಲವ್ಯಾದಿ ಅಥವಾ ಪೈಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಎರಡು ಮುಖ್ಯ ಕಾರಣಗಳೆಂದರೆ, ಮಲಬದ್ಧತೆ ಮತ್ತು ಬೊಜ್ಜು. ಜೊತೆಗೆ ದೀರ್ಘಕಾಲ ನಿಂತಿರುವುದು ಅಥವಾ ಕುಳಿತುಕೊಳ್ಳುವುದು, ಆನುವಂಶೀಯತೆ, ದೇಹದ ಅಂಗಾಂಶಗಳ ದುರ್ಬಲತೆ ಮತ್ತು ಮಾನಸಿಕ ಒತ್ತಡವು ಸಹ ಕಾರಣವಾಗಿರಬಹುದು.

ಒಬ್ಬ ವ್ಯಕ್ತಿಗೆ ಪೈಲ್ಸ್ ಸಮಸ್ಯೆ ಇದ್ದಾಗ, ಆತ ತುಂಬಾ ನೋವಿನ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಮಲವಿಸರ್ಜನೆ ವೇಳೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಮೂಲವ್ಯಾಧಿ ಇರುವವರು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಹೆಚ್ಚಿನ ನಾರಿನ ಆಹಾರವನ್ನು ಸೇವಿಸಿ. ಈ ಆಹಾರಗಳು ಮಲವನ್ನು ಮೃದುಗೊಳಿಸುತ್ತದೆ ಮತ್ತು ಇದರಿಂದಾಗಿ ರಕ್ತಸ್ರಾವ ತಪ್ಪುತ್ತದೆ.

ಜೊತೆಗೆ ಈ ಸಮಸ್ಯೆಗೆ ಸಕಾಲಿಕ ಚಿಕಿತ್ಸೆ ಅಗತ್ಯ. ಆಯುರ್ವೇದದಲ್ಲಿ ಈ ಮೂಲ್ಯವಾಧಿ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ತೈಲಗಳಿವೆ. ಅವುಗಳನ್ನು ಬಳಸಿ ಸಮಸ್ಯೆಯನ್ನು ನಿವಾರಿಸಬಹುದು.

ಮೂಲವ್ಯಾಧಿಯ ನೋವನ್ನು ಶಮಗೊಳಿಸುವ ತೈಲಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1.ಲವಂಗದ ಎಣ್ಣೆ:

1.ಲವಂಗದ ಎಣ್ಣೆ:

ಲವಂಗದ ಸಾರಭೂತ ತೈಲದ ಬಳಕೆಯಿಂದ ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸಬಹುದು. ಇದಕ್ಕಾಗಿ, ಮೂಲವ್ಯಾಧಿ ಪೀಡಿತ ಪ್ರದೇಶದ ಮೇಲೆ ಲವಂಗದ ಕೆಲವು ಹನಿಗಳನ್ನು ಹಚ್ಚಿ. ಹೀಗೆ ಮಾಡುವುದರಿಂದ ಅದರ ನೋವಿನಿಂದ ಮುಕ್ತಿ ಪಡೆಯಬಹುದು.

2. ಪುದೀನಾ ಎಣ್ಣೆ:

2. ಪುದೀನಾ ಎಣ್ಣೆ:

ಪುದೀನಾ ಎಣ್ಣೆಯ ಬಳಕೆಯಿಂದ ಸಹ ಪೈಲ್ಸ್ ಸಮಸ್ಯೆಯನ್ನು ನಿವಾರಿಸಬಹುದು. ಈ ಎಣ್ಣೆಯ ಕೆಲವು ಹನಿಗಳನ್ನು ಆ ಜಾಗದ ಮೇಲೆ ಅನ್ವಯಿಸಬೇಕು. ಈ ರೀತಿ ಮಾಡುವುದರಿಂದ ಪೈಲ್ಸ್ ನಿವಾರಣೆಯಾಗುವುದಲ್ಲದೇ, ಉರಿಯೂತವೂ ಕಡಿಮೆಯಾಗುವುದು.

3. ಟೀ ಟ್ರೀ ಆಯಿಲ್:

3. ಟೀ ಟ್ರೀ ಆಯಿಲ್:

ಟೀ ಟ್ರೀ ಆಯಿಲ್ ಬಳಕೆಯಿಂದ ಪೈಲ್ಸ್ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಈ ಎಣ್ಣೆಯ ಕೆಲವು ಹನಿಗಳನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಬೇಕು. ಬೇಕಿದ್ದಲ್ಲಿ ಚಹಾ ಮರದ ಎಣ್ಣೆಯೊಂದಿಗೆ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಬಹುದು. ಹೀಗೆ ಮಾಡುವುದರಿಂದ ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪೈಲ್ಸ್ ಸಮಸ್ಯೆಯನ್ನು ಹೋಗಲಾಡಿಸಲು ಈ ಎಣ್ಣೆಗಳು ತುಂಬಾ ಉಪಯುಕ್ತವಾಗಿವೆ. ಆದಾಗ್ಯೂ, ಅವುಗಳನ್ನು ಬಳಸುವ ಮೊದಲು, ಒಮ್ಮೆ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಿ.

ಈ ತೈಲಗಳ ಜೊತೆಗೆ ನೋವು ಕಡಿಮೆಯಾಗಲು ಈ ಮನೆಮದ್ದುಗಳನ್ನ ಸಹ ಬಳಸಬಹುದು:

ಈ ತೈಲಗಳ ಜೊತೆಗೆ ನೋವು ಕಡಿಮೆಯಾಗಲು ಈ ಮನೆಮದ್ದುಗಳನ್ನ ಸಹ ಬಳಸಬಹುದು:

ಅರಿಶಿನ ಪೇಸ್ಟ್:

ಅರಿಶಿನ ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಪೈಲ್ಸ್ ಪೀಡಿತ ಪ್ರದೇಶವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಟೀಚಮಚ ಅರಿಶಿನ ಪುಡಿ, ¼ ಟೀಸ್ಪೂನ್ ಸಾಸಿವೆ ಎಣ್ಣೆ, ಮತ್ತು ಎರಡು ಮೂರು ಹನಿ ಈರುಳ್ಳಿ ರಸ ಬೆರೆಸಿ ಪೇಸ್ಟ್ ಮಾಡಿ ಮೂಲವ್ಯಾಧಿ ಇರುವ ಜಾಗದಲ್ಲಿ ರಾತ್ರಿ ಮಲಗುವಾಗ ಹಚ್ಚಿ. ಇದು ಗಾಯವನ್ನು ಗುಣಪಡಿಸಲು ಮತ್ತು ಊತಗೊಂಡ ರಕ್ತನಾಳಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈರುಳ್ಳಿ ಮತ್ತು ಜೇನುತುಪ್ಪ:

ಈರುಳ್ಳಿ ಮತ್ತು ಜೇನುತುಪ್ಪ:

ಈರುಳ್ಳಿ ಉರಿಯೂತದ ಗುಣಗಳಿಗೆ ಹೆಸರುವಾಸಿಯಾಗಿದ್ದು, ಮೂಲವ್ಯಾಧಿಯ ಉರಿಯೂತ ಮತ್ತು ಊತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿರಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ. ಇದರಿಂದ ನಿಮ್ಮ ನೋವು ಮತ್ತು ರಕ್ತಸ್ರಾವ ಶೀಘ್ರದಲ್ಲೇ ಗುಣವಾಗುತ್ತದೆ.

English summary

How to Use Essential Oils for Piles Treatment in Kannada

Here we talking about How to Use Essential Oils for Piles Treatment in Kannada, read on
Story first published: Friday, February 25, 2022, 13:34 [IST]
X
Desktop Bottom Promotion