For Quick Alerts
ALLOW NOTIFICATIONS  
For Daily Alerts

ಲೈಫಲ್ಲಿ ಯಾವಾಗಲೂ ಖುಷಿಯಾಗಿರಲು ಇಲ್ಲಿವೆ ಬೆಸ್ಟ್‌ ಟಿಪ್ಸ್

|

ಸದ್ಯ ಓಡುತ್ತಿರುವ ಈ ಜಗತ್ತು ನಮಗೆ ಬಳುವಳಿಯಾಗಿ ನೀಡಿರುವುದು ಒತ್ತಡಯುಕ್ತ ಜೀವನ. ಆದರೆ ಈ ಒತ್ತಡವನ್ನು ಸರಿಯಗಿ ನಿಭಾಯಿಸಿ ನೆಮ್ಮದಿ ಹಾಗೂ ಸಂತೋಷವಾಗಿ ಬದುಕುವವನೇ ನಿಜವಾದ ಸಾಧಕ. ಏಕೆಂದರೆ, ಇದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಸಣ್ಣ-ಸಣ್ಣ ಬದಲಾವಣೆ ಮಾಡಿಕೊಂಡರೆ, ದೀರ್ಘಾವಧಿಯಲ್ಲಿ ಇದು ನಿಮ್ಮ ಮಾನಸಿಕ ಅರೋಗ್ಯ ಹಾಗೂ ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸಕಾರಾತ್ಮಕವಾಗಿರಬಹುದು. ಹಾಗಾದರೆ, ಆ ಸಣ್ಣ ಬದಲಾವಣೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

123
ಪ್ರತಿದಿನ ಹೊರಗೆ ಕಾಲ ಕಳೆಯಿರಿ

ಪ್ರತಿದಿನ ಹೊರಗೆ ಕಾಲ ಕಳೆಯಿರಿ

ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದಾಗ ಅಥವಾ ಈಗಿನ ಚಳಿಗಾಲದ ವೇಳೆ ಹೊರಗೆ ಹೋಗಲು ಯಾರಿಗೂ ಮನಸ್ಸಾಗುವುದಿಲ್ಲ. ಆದರೆ, ನಿಮ್ಮ ಜೀವನವನ್ನು ಉತ್ತಮಗೊಳಿಸಲು ಪ್ರತಿದಿನ ಹೊರಗೆ ಕಾಳ ಕಳೆಯಿರಿ. ಈ ಮೂಲಕ ನಿಮ್ಮ ಮನಸ್ಸಿನ ಒತ್ತಡವನ್ನು ಹೊರಹಾಕಿ, ಫ್ರೆಶ್ ಮನಸ್ಥಿತಿಯನ್ನು ಬೆಳೆಸಿಕೊಳ್ಳಬಹುದು. ಇದಕ್ಕಾಗಿ ನೀವು ವಾಕಿಂಗ್ ಹೋಗಬಹುದು, ವ್ಯಾಯಾಮ ಮಾಡಬಹುದು ಅಥವಾ ಪಾರ್ಕ್‌ನಲ್ಲಿ ಸುಮ್ಮನೆ ಕುಳಿತು ವಿಶ್ರಾಂತಿಯೂ ಪಡೆದುಕೊಳ್ಳಬಹುದು. ಪ್ರಕೃತಿಯ ಸೌಂದರ್ಯದೊಂದಿಗೆ ಬೆರೆಯವುದರಿಂದ ನಿಮ್ಮ ಮನಸ್ಸು ಸಂತೋಷ ಹಾಗೂ ಶಾಂತಿಯುತವಾಗುತ್ತದೆ.

ಬಜೆಟ್‌ನಲ್ಲಿ ಹೇಗೆ ಪ್ರಯಾಣಿಸಬಹುದು ಎಂಬುದನ್ನು ತಿಳಿಯಿರಿ

ಬಜೆಟ್‌ನಲ್ಲಿ ಹೇಗೆ ಪ್ರಯಾಣಿಸಬಹುದು ಎಂಬುದನ್ನು ತಿಳಿಯಿರಿ

ಪ್ರಯಾಣ ಅಂದಾಕ್ಷಣ ದುಬಾರಿ ಹೋಟೆಲ್‌, ರೆಸಾರ್ಟ್‌ ಅಥವಾ ವಿಮಾನದಲ್ಲೇ ಪ್ರಯಾಣಿಸಬೇಕು ಎಂಬ ನಿಯಮವೇನಲ್ಲ. ಕಡಿಮೆ ಹಣದಲ್ಲೂ ಉತ್ತಮ ಪ್ರಯಾಣದ ಅನುಭವಗಳನ್ನು ಪಡೆದುಕೊಳ್ಳಬಹುದು. ಆದರೆ, ಬಜೆಟ್ ಪ್ರಯಾಣ ಮಾಡುವ ವಿಧಾನ ನಿಮಗೆ ತಿಳಿದಿರಬೇಕಷ್ಟೇ. ಇದಕ್ಕಾಗಿ ಆಫರ್‌ ಇರುವ ಹೋಟೆಲ್ ಅಥವಾ ಸಾರಿಗೆಯ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮಲ್ಲಿರುವ ಹಣದಲ್ಲೇ ಹೇಗೆ ಒಂದು ಉತ್ತಮ ರಜೆಯನ್ನು ಕಳೆಯಬಹುದು ಎಂಬುದನ್ನು ಪ್ಲಾನ್ ಮಾಡಿ. ಇದು ನಿಮಗೆ ಹೊಸ ಹೊಸ ಅನುಭವ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ

ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ

ಸ್ನೇಹಿತರೊಂದಿಗೆ ಸಮಯ ಕಳೆಯುವುದು, ರುಚಿಕರವಾದ ಆಹಾರ ಟ್ರೈ ಮಾಡುವುದಕ್ಕಿಂತ ಖುಷಿ ನೀಡುವ ವಿಚಾರ ಮತ್ತೊಂದಿಲ್ಲ. ಅಧ್ಯಯನಗಳ ಪ್ರಕಾರ, ಈ ಸಂವಹನವು ಖಿನ್ನತೆ ಮತ್ತು ಹೃದ್ರೋಗಗಳಂತಹ ಸಮಸ್ಯೆ ಅಭಿವೃದ್ಧಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿಮ್ಮ ನೆಚ್ಚಿನ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಕಾಲ ಕಳೆಯಲು ಸಮಯ ನಿಗದಿಪಡಿಸಿ.

ಪ್ರತಿದಿನ ಹೊಸದನ್ನು ಕಲಿಯಲು ಪ್ರಯತ್ನಿಸಿ

ಪ್ರತಿದಿನ ಹೊಸದನ್ನು ಕಲಿಯಲು ಪ್ರಯತ್ನಿಸಿ

ಜ್ಞಾನದ ನಿರಂತರ ಅನ್ವೇಷಣೆಯ ನಿಮ್ಮ ಸಂತೋಷ ಕಂಡುಕೊಳ್ಳುವ ಪ್ರಮುಖ ಅಂಶವಾಗಿದೆ. ಆನ್‌ಲೈನ್‌ಗೆ ಹೋಗಿ, ಆಸಕ್ತಿದಾಯಕ ಲೇಖನ, ವೀಡಿಯೊ, ಸಾಕ್ಷ್ಯಚಿತ್ರ ಅಥವಾ ಇನ್ನಾವುದಾದರೂ ನಿಮ್ಮ ಆಸಕ್ತಿ ಕೆದುಕುವ ವಿಚಾರಗಳನ್ನು ಹುಡುಕಿ. ಹೊಸದಾದ ವಿಚಾರ ತಿಳಿದುಕೊಳ್ಳಲು ದಿನಕ್ಕೆ ಕನಿಷ್ಠ 15 ನಿಮಿಷಗಳನ್ನು ಮೀಸಲಿಡಿ. ಇದರಿಂದ ನೀವು ಬೇಗನೆ ಉತ್ತಮ ತಿಳುವಳಿಕೆಯುಳ್ಳ ಮತ್ತು ಸಂತೋಷದ ವ್ಯಕ್ತಿಯಾಗುತ್ತೀರಿ.

ನಿಮ್ಮ ಮನೆ ಮತ್ತು ಮನಸ್ಸನ್ನು ಸಂಘಟಿಸಿ

ನಿಮ್ಮ ಮನೆ ಮತ್ತು ಮನಸ್ಸನ್ನು ಸಂಘಟಿಸಿ

ಅಸ್ತವ್ಯಸ್ತಗೊಂಡ ಮನೆಯು ಅಸ್ತವ್ಯಸ್ತಗೊಂಡ ಮನಸ್ಸಿಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ವ್ಯವಸ್ಥಿತಗೊಳಿಸಲು ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಿ. ಇದು ನಿಮ್ಮ ಮನೆಯ ಪ್ರತಿಯೊಂದು ಮೂಲೆ ಮತ್ತು ಮೂಲೆಯನ್ನು ಆಳವಾಗಿ ಸ್ವಚ್ಛಗೊಳಿಸುವುದು ಎಂದರ್ಥವಲ್ಲ. ಹರಡಿದ ಬಟ್ಟೆಗಳನ್ನು ಸರಿಮಾಡುವುದು ಹಾಸಿಗೆ ವ್ಯವಸ್ಥಿತಗೊಳಿಸುವುದು ಹಾಗೂ ಅಚ್ಚುಕಟ್ಟಾದ ಜೀವನವನ್ನು ನಡೆಸುವುದಾಗಿದೆ. ಈ ಅಭ್ಯಾಸಗಳು ಜೀವನದ ಮೇಲಿನ ನಿಮ್ಮ ದೃಷ್ಟಿಕೋನದ ಮೇಲೆ ಉತ್ತಮ ಪರಿಣಾಮವನ್ನು ಬೀರಬಹುದು. ಈ ಮೂಲಕ ಸ್ಪಷ್ಟವಾದ ಮನಸ್ಸನ್ನು ಹೊಂದಲು ಮತ್ತು ಕೈಯಲ್ಲಿರುವ ಪ್ರಮುಖ ಕಾರ್ಯಗಳ ಮೇಲೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ.

ನಿಮ್ಮನ್ನು ನೀವು ಒಪ್ಪಿಕೊಳ್ಳಿ

ನಿಮ್ಮನ್ನು ನೀವು ಒಪ್ಪಿಕೊಳ್ಳಿ

ನಮ್ಮ ವೈಯಕ್ತಿಕ ಗುಣಗಳಿಂದಾಗಿ ಇತರರಿಗಿಂತ ಭಿನ್ನವಾಗಿ ತೋರುತ್ತೇವೆ. ಕೆಲವೊಮ್ಮೆ ಇತರರಿಗಿಂತ ಉತ್ತಮ, ಇನ್ನೂ ಕೆಲವೊಮ್ಮೆ ಕಡಿಮೆ ಎನ್ನುವ ಭಾವನೆಯೂ ಬರಬಹುದು. ಆದರೆ ಇವುಗಳಿಗೆ ನೀವು ತಲೆಕೆಡಿಸಿಕೊಳ್ಳದೇ ನಿಮ್ಮನ್ನು ನೀವು ಒಪ್ಪಿಕೊಳ್ಳಬೇಕು. ಇತರರು ಹೇಗೆ ಇರಲಿ, ಅದು ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಇನ್ನೊಬ್ಬರ ಗುಣ ನಿಮ್ಮ ಮೇಲೆ ಯಾವಾಗ ಪರಿಣಾಮ ಬೀರುತ್ತದೆಯೋ ಆಗ, ನಿಮ್ಮ ಮನಸ್ಸು ಕದಡುವುದು, ನಿಮ್ಮ ನೆಮ್ಮದಿ, ಸಂತೋಷಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ನೀವು ಹೇಗೆ ಇರಿ, ಅದನ್ನು ಮೊದಲು ಒಪ್ಪಿಕೊಳ್ಳುವುದನ್ನು ಕಲಿಯಿರಿ.

English summary

How to upgrade our lifestyle in Kannada

Here we are discussing about How to upgrade our lifestyle in Kannada. Read more. ಇಲ್ಲಿ ನಾವು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಸುಲಭ ಮಾರ್ಗಗಳನ್ನು ಹೇಳಿದ್ದೇವೆ, ಮುಂದೆ ಓದಿ
Story first published: Sunday, December 4, 2022, 19:00 [IST]
X
Desktop Bottom Promotion