For Quick Alerts
ALLOW NOTIFICATIONS  
For Daily Alerts

ಯೋಗ ಅಭ್ಯಾಸ ಪ್ರಾರಂಭಿಸಿದವರು ಯಾರು?

|

ಶತಮಾನಗಳಿಂದ ಭಾರತೀಯರು ಆರೋಗ್ಯ ಕಾಪಾಡಲು ಮಾಡಿಕೊಂಡು ಬಂದಿರುವಂತಹ ಯೋಗವು ಇಂದು ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಪ್ರತೀ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ವಿಶ್ವಸಂಸ್ಥೆಯು ನಿರ್ಣಯ ತೆಗೆದುಕೊಂಡ ಬಳಿಕ ಪ್ರತೀ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. 2015ರಲ್ಲಿ ಜೂನ್ 21ರಂದು ಮೊದಲ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಯೋಗವು ಒಂದು ವ್ಯಾಯಾಮವಾದರೂ ಇದರಿಂದ ಕೇವಲ ದೈಹಿಕ ಮಾತ್ರವಲ್ಲ, ಭೌತಿಕ ಹಾಗೂ ಮಾನಸಿಕ ಶಕ್ತಿಯು ಸಿಗುವುದು. ಬೇರೆ ವ್ಯಾಯಾಮಗಳು ಕೇವಲ ದೇಹವನ್ನು ದಂಡಿಸಲು ಮಾತ್ರ ಇದೆ. ಆದರೆ ಯೋಗವು ದೇಹ ಹಾಗೂ ಮನಸ್ಸು ಎರಡನ್ನು ದಂಡಿಸುವಂತೆ ಮಾಡುವುದು.

History Of Yoga

ಯೋಗಾಭ್ಯಾಸದಿಂದಾಗಿ ದೇಹದಲ್ಲಿ ಒಂದು ಅದ್ಭುತವಾದ ಶಕ್ತಿಯು ಹೊರಹೊಮ್ಮುವುದು. ನಿತ್ಯವೂ ನಿಗದಿತ ಸಮಯಕ್ಕೆ ಇಂತಿಷ್ಟು ಸಮಯ ಯೋಗಾಭ್ಯಾಸ ಮಾಡಿದರೆ ಅದರಿಂದ ದೇಹ ಹಾಗೂ ಆರೋಗ್ಯಕ್ಕೆ ನಾನಾ ರೀತಿಯ ಲಾಭಗಳು ಸಿಗುವುದು.

ಯೋಗಾಭ್ಯಾಸವನ್ನು ಪಾಲಿಸಿಕೊಂಡು ಹೋದರೆ ಅದರಿಂದ ಒಳ್ಳೆಯ ಹವ್ಯಾಸ, ಶಿಶ್ತು ಮತ್ತು ಸ್ವಯಂ ಪ್ರಶ್ನೆ ಮತ್ತು ಭಾವನಾತ್ಮಕವಾಗಿ ಹೆಚ್ಚು ಬೆಸೆದುಕೊಳ್ಳದಂತೆ ಮಾಡುವುದು. ಇದು ನಿಮ್ಮ ಒಳಮನಸ್ಸನ್ನು ಜಾಗೃತಗೊಳಿಸಿ ಆರೋಗ್ಯಕಾರಿ ಜೀವನ ಹಾಗೂ ಜೀವನದ ಆಕಾಂಕ್ಷೆಗಳನ್ನು ಪೂರೈಸಲು ನೆರವಾಗುವುದು. ಯೋಗದಿಂದ ಸ್ಪಷ್ಟತೆ, ಶಾಂತಿ ಮತ್ತು ಸಂತೋಷವು ಸಿಗುವುದು.

ಯೋಗ ಇತಿಹಾಸ

ಯೋಗ ಇತಿಹಾಸ

ಪತಾಂಜಲಿಯ ಯೋಗ ಸೂತ್ರ ಎನ್ನುವ ಪುಸ್ತಕವು ಕ್ರಿ.ಶ.400ರಲ್ಲಿ ಬರೆಯಲ್ಪಟ್ಟಿದ್ದು, ಇದರಲ್ಲಿ ಯೋಗದ ಬಗ್ಗೆ ವಿವರಣೆ ಇದೆ. ಈ ಪುಸ್ತಕದ ಎರಡನೇ ಆವೃತ್ತಿಯಲ್ಲಿ ಯೋಗವನ್ನು ``ಮನಸ್ಸಿನ ಅಲೆದಾಟ ನಿಲ್ಲಿಸುವುದು'' ಎಂದು ವಿವರಿಸಲಾಗಿದೆ. ಇದರಲ್ಲಿನ ಕೆಲವೊಂದು ಸೂತ್ರಗಳು ಇದನ್ನು ಪಾಲಿಸುವವರಿಗೆ ಮನಸ್ಸಿನಿಂದ ಮೇಲ್ಪಟ್ಟು ಯೋಗ ಸ್ವಾತಂತ್ರ್ಯವನ್ನು ಪಡೆಯಬಹುದು ಎಂದು ಹೇಳಿದೆ.

ಇದರಲ್ಲಿ ಹೇಳಿರುವಂತಹ ಎಂಟು ಅಂಗಗಳ ವ್ಯಕ್ತಿಯು ಆಂತರಿಕ ಮತ್ತು ಯೋಗದ ಪ್ರಮುಖ ಭಾಗವಾಗಿದೆ. ಇಂದು ನಾವು ಹೆಚ್ಚಾಗಿ ದೈಹಿಕವಾಗಿರುವಂತಹ ಕೆಲವು ಆಸನಗಳನ್ನು ಅಭ್ಯಾಸ ಮಾಡುತ್ತೇವೆ. ಇದನ್ನು 20ನೇ ಶತಮನಾದಲ್ಲಿ ಶ್ರೀ ತಿರುಮಲೈ ಕೃಷ್ಣಾಮಾಚಾರಿ ಅವರು ರಚಿಸಿದ್ದರು. ಇವರ ಮೂವರು ಶಿಷ್ಯರು ಇದನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದರು. ಇದರಿಂದಾಗಿ ತುಂಬಾ ಲಾಭಗಳು ದೇಹಕ್ಕೆ ಲಭ್ಯವಾದವು.

ಇಂದು ನಾವು ಮಾಡುತ್ತಿರುವಂತಹ ಹೆಚ್ಚಿನ ಯೋಗಾಭ್ಯಾಸಗಳು ಇವರ ಶಿಷ್ಯರು ಅಭಿವೃದ್ಧಿಪಡಿಸಿರುವುದಾಗಿದೆ. ಮುಖ್ಯವಾಗಿ ವಿನ್ಯಾಸ ಯೋಗ ಎನ್ನುವುದು ಇದೆ. ಇದು ಮುಖ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ್ದಾಗಿದೆ.

ಬಿಕೆಎಸ್ ಐಯ್ಯಂಗಾರ್: ಐಯ್ಯಂಗಾರ್ ಯೋಗದ ಸ್ಥಾಪಕರು.

ಕೆ. ಪಟ್ಟಾಭಿ ಜೋಯಿಸ: ಅಷ್ಟಾಂಗ ಯೋಗದ ರಚಿಸಿದವರು.

ಟಿ.ಕೆ.ವಿ ದೇಸಿಕಾಚಾರ್ಯ: ವಿನಿಯೋಗ ರಚಿಸಿದವರು.

ಇಂದಿನ ದಿನಗಳಲ್ಲಿ ನಮಗೆ ಯೋಗಾಭ್ಯಾಸ ಮಾಡಲು ಹಲವಾರು ಮಾಧ್ಯಮಗಳು ಲಭ್ಯವಿದೆ. ಇದರಲ್ಲಿ ಸಮುದಾಯ ಕೇಂದ್ರ, ಶಾಲೆ ಮತ್ತು ಹೊರಾಂಗಣ ಇತ್ಯಾದಿಗಳಲ್ಲಿ ಅಭ್ಯಾಸ ಮಾಡಬಹುದು. ಇಂಟರ್ನೆಟ್ ನಲ್ಲಿ ಹಲವಾರು ವಿಡಿಯೋಗಳು ಕೂಡ ಲಭ್ಯವಿದೆ. ಅದೇ ರೀತಿಯಾಗಿ ಯೋಗ ಶಿಬಿರ, ತರಬೇತಿಗಳಿಗೆ ಕೂಡ ಹಾಜರಾಗಬಹುದು.

ಯೋಗಾಭ್ಯಾಸದಲ್ಲಿ ನೀವು ತೊಡಗಿಸಿಕೊಂಡರೆ ಆಗ ಅದರಿಂದ ನಿಮ್ಮ ದೈಹಿಕ ಹಾಗೂ ಸಂಪೂರ್ಣ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವುದು.

ನಿಮ್ಮನ್ನು ನೀವು ಶಕ್ತಿಶಾಲಿಯಾಗಿಸಲು ಯೋಗವು ಹಲವಾರು ವಿಧಾನ ಹಾಗೂ ಮೂಲವನ್ನು ಹೊಂದಿದೆ. ಇದರಿಂದ ನೀವು ಯೋಗಾಭ್ಯಾಸ ಮಾಡಿಕೊಂಡು ದೇಹ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಯೋಗಾಭ್ಯಾಸ ಯಾಕೆ ಮಾಡಬೇಕು?

ಯೋಗಾಭ್ಯಾಸ ಯಾಕೆ ಮಾಡಬೇಕು?

ನಾವಿಂದು ವಾಸಿಸುವಂತಹ ಜಗತ್ತು ತುಂಬಾ ವೇಗ ಹಾಗೂ ಒತ್ತಡದಿಂದ ಕೂಡಿದೆ. ಇದರಿಂದ ನಮ್ಮ ಮನಸ್ಸು ಮತ್ತು ನರ ವ್ಯವಸ್ಥೆಯು ಪದೇ ಪದೇ ಉತ್ತೇಜಿಸಲ್ಪಡುವುದು. ಯೋಗದಿಂದ ಮನಸ್ಸಿನ ಮೇಲೆ ನಿಗ್ರಹ ಸಾಧಿಸಿ, ಅದನ್ನು ನಿಧಾನವಾಗಿಸಿಕೊಂಡು ಸಮತೋಲನ ಕಾಪಾಡಬಹುದು. 2016ರಲ್ಲಿ ಯೋಗ ಜರ್ನಲ್ ಮತ್ತು ಯೋಗ ಅಲೈಯನ್ಸ್ ಕೈಗೊಂಡಿರುವಂತಹ ಅಧ್ಯಯನದ ಪ್ರಕಾರ ಅಮೆರಿಕಾದಲ್ಲಿ ಸುಮಾರು 36.7 ಮಿಲಿಯನ್ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದೆ. 2012ಕ್ಕೆ ಹೋಲಿಕೆ ಮಾಡಿದರೆ ಇದು ಶೇ.50ರಷ್ಟು ಹೆಚ್ಚಾಗಿತ್ತು.

ಯೋಗದ ಬೆಳವಣಿಗೆ ಮತ್ತು ಜನಪ್ರಿಯತೆಗೆ ನೇರ ಕಾರಣವೇನು ಎಂದು ತಿಳಿದಿಲ್ಲ. ಆದರೆ ಖಂಡಿತವಾಗಿಯೂ ಇದರಿಂದ ಆಗುವ ಲಾಭ ಮತ್ತು ಮಾನಸಿಕ ಶಾಂತಿಯು ಇದರ ಜನಪ್ರಿಯತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ನಿಜ.

ದೈಹಿಕವಾಗಿ ಯೋಗದಿಂದ ನೆರವು

ದೈಹಿಕವಾಗಿ ಯೋಗದಿಂದ ನೆರವು

ಯೋಗವು ದೈಹಿಕವಾಗಿ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದರಲ್ಲಿ ಪ್ರಮುಖವಾಗಿ

ಸ್ಥಿತಿಸ್ಥಾಪಕತ್ವ

ಶಕ್ತಿ

ಚಲನಶೀಲತೆ

ಸಮತೋಲನ

ಕ್ರೀಡಾಳುಗಳು ಕೂಡ ಯೋಗಾಭ್ಯಾಸ ಮಾಡಿಕೊಂಡು ಅವರ ತರಬೇತಿಯಲ್ಲಿ ಇದನ್ನು ಪರಿಣಾಮಕಾರಿ ಆಗಿ ಬಳಸಬಹುದು. ಯೋಗಾಭ್ಯಾಸದ ಸಂದರ್ಭದಲ್ಲಿ ದೇಹವು ವಿವಿಧ ರೀತಿಯ ಚಲನೆಗೆ ಒಳಗಾಗುವುದು ಮತ್ತು ಇದರಿಂದ ಒತ್ತಡ ಅಥವಾ ಕೆಟ್ಟ ಕುಳಿತುಕೊಳ್ಳುವ ಭಂಗಿಯಿಂದಾಗಿ ಉಂಟಾಗಿರುವ ಸೆಳೆತ ಮತ್ತು ನೋವನ್ನು ಇದು ಕಡಿಮೆ ಮಾಡುವುದು. ಯೋಗ ಕೇವಲ ನಿಮಗೆ ನೆರವಾಗುವುದು ಮಾತ್ರವಲ್ಲದೆ, ಸಮತೋಲನ ಮತ್ತು ಸಂಪೂರ್ಣ ಕ್ರೀಡೆಗೆ ಇದು ಸಹಕಾರಿಯಾಗುವಂತೆ ದೇಹವನ್ನು ರಚಿಸುವುದು.

ಒತ್ತಡ ಮತ್ತು ಆರಾಮಕ್ಕೆ ಯೋಗ ನೆರವು

ಒತ್ತಡ ಮತ್ತು ಆರಾಮಕ್ಕೆ ಯೋಗ ನೆರವು

ಯೋಗದ ಮತ್ತೊಂದು ಪ್ರಮುಖ ಲಾಭವೆಂದರೆ ಇದು ಒತ್ತಡ ಕಡಿಮೆ ಮಾಡಲು ತುಂಬಾ ಸಹಕಾರಿ. ಅತಿಯಾದ ಒತ್ತಡದಿಂದಾಗಿ ನಿಮ್ಮ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಇದರಿಂದ ಗಮನ ಕೇಂದ್ರೀಕರಿಸಲು ಮತ್ತು ಸರಿಯಾಗಿ ನಿದ್ರಿಸಲು ಆಗದು. ಯೋಗಾಭ್ಯಾಸ ವೇಳೆ ಮಾಡಲ್ಪಡುವಂತಹ ಕೆಲವು ಉಸಿರಾಟದ ಅಭ್ಯಾಸದಿಂದಾಗಿ ಹೃದಯ ಬಡಿತ ಕಡಿಮೆ ಮಾಡುವುದು ಮತ್ತು ನರವ್ಯವಸ್ಥೆಯು ತುಂಬಾ ಆರಾಮವಾಗಿ ಇರುವಂತೆ ಮಾಡುವುದು. ಇದರಿಂದ ಒಳ್ಳೆಯ ನಿದ್ರೆ ಮತ್ತು ಗಮನ ಕೇಂದ್ರೀಕರಿಸಲು ಸಹಕಾರಿ.

ಆಧ್ಯಾತ್ಮಿಕವಾಗಿ ಹೆಚ್ಚು ಆಸಕ್ತಿ ಹೊಂದಿರುವಂತಹ ಜನರು ಯೋಗಾಭ್ಯಾಸದಿಂದಾಗಿ ದೈಹಿಕ ಲಾಭಕ್ಕಿಂತಲೂ ಹೆಚ್ಚಿನದನ್ನು ಪಡೆಯುವರು. ಇದರಿಂದ ಅವರಿಗೆ ದೀರ್ಘವಾಗಿ ಆಧ್ಯಾತ್ಮದಲ್ಲಿ ತೊಡಗಿಕೊಂಡು ತಮ್ಮ ಇಚ್ಛೆ ಮತ್ತು ಒಳಮನಸ್ಸಿನ ಸಂಪೂರ್ಣ ಸಂಪರ್ಕಕ್ಕೆ ಬರಬಹುದು.

ಯೋಗ ಆರಂಭ ಹೇಗೆ

ಯೋಗ ಆರಂಭ ಹೇಗೆ

ಯೋಗವು ಎಲ್ಲರಿಗೆ ಒಂದೇ ರೀತಿಯಾಗಿ ಹೊಂದಾಣಿಕೆ ಆಗಲ್ಲ. ಆದರೆ ವಿವಿಧ ಬಗೆಯ ಯೋಗಾಭ್ಯಾಸಗಳು ಇರುವ ಕಾರಣದಿಂಧಾಗಿ ನೀವು ಇದರಲ್ಲಿ ಒಂದನ್ನು ಆಯ್ಕೆ ಮಾಡಬಹುದು. ನಿಮಗೆ ಯಾವುದು ಒಳ್ಳೆಯದಾಗಿ ಹೊಂದಾಣಿಕೆ ಆಗುವುದು ಎಂದು ತಿಳಿದುಕೊಂಡು ಅದನ್ನು ಪ್ರಯತ್ನಿಸಿದರೆ ಒಳ್ಳೆಯದು.

ಕೆಲವೊಂದು ಯೋಗದ ವಿವರಣೆ

ಕೆಲವೊಂದು ಯೋಗದ ವಿವರಣೆ

ಐಯ್ಯಂಗಾರ್

ಈ ರೀತಿಯ ಯೋಗಾಭ್ಯಾಸವು ನಿಂತು ಹಾಗೂ ಕುಳಿತುಕೊಂಡು ಮಾಡುವಂತಹ ಹಲವಾರು ಭಂಗಿಗಳು ಇವೆ. ಇದನ್ನು ದೇಹದ ಭಂಗಿ ಮತ್ತು ತೂಕ ಕಡಿಮೆ ಮಾಡಲು ಬಯಸುವವರು ಹಾಗೂ ದೇಹದ ಚಲನಶೀಲತೆ ಹೆಚ್ಚಿಸಲು ಬಯಸುವವರು ಇದನ್ನು ಮಾಡಬಹುದು.

ವಿನಿಯೋಗ

ಇದು ದೇಹಕ್ಕೆ ಹೆಚ್ಚು ಚಲನೆ ನೀಡದೆ ಉಸಿರಾಟ ಮತ್ತು ಧ್ಯಾನದ ಕಡೆಗೆ ಗಮನ ಹರಿಸುವಂತಹ ಯೋಗಾಭ್ಯಾಸಗಳು. ಇದು ಒಳಮನಸ್ಸು ಮತ್ತು ಆರಾಮ, ದೇಹದ ಜಾಗೃತಿ ಮತ್ತು ಒಳ್ಳೆಯ ಭಂಗಿಗೆ ನೆರವಾಗುವುದು.

ಜೀವನಮುಕ್ತಿ

ಆಧ್ಯಾತ್ಮಿಕ ಅಂಶ ಮತ್ತು ಯೋಗದ ತುಂಬಾ ಹಳೆ ವಿಧಾನದ ಮೂಲಕ ದೇಹದ ಜಾಗೃತಿ, ಸಂಸ್ಕೃತ ಅಭ್ಯಾಸ ಮತ್ತು ಸಂಬಂಧವನ್ನು ಸುಧಾರಿಸುವ ಇದರಲ್ಲಿ ಹೆಚ್ಚಾಗಿ ಧ್ಯಾನ, ಮಂತ್ರ ಮತ್ತು ದೀರ್ಘವಾಗಿ ಆಲಿಸುವುದನ್ನು ಒಳಗೊಂಡಿದೆ.

ಹಠ ಯೋಗ

ಈ ರೀತಿಯ ಯೋಗ ಭಂಗಿಗಳು ಹೆಚ್ಚಾಗಿ ದೇಹ, ಮನಸ್ಸು ಮತ್ತು ಧ್ಯಾನಕ್ಕೆ ಸ್ಪೂರ್ತಿಯನ್ನು ತುಂಬುವಂತಹ ಹಲವಾರು ವಿಧಾನಗಳನ್ನು ಒಳಗೊಂಡಿದೆ. ಇದು ತುಂಬಾ ನಿಧಾನಗತಿಯದ್ದಾಗಿದ್ದರೂ ಇದನ್ನು ಮಾಡಲು ದೈಹಿಕವಾಗಿ ಹೆಚ್ಚು ದಂಡನೆ ಅಗತ್ಯ.

ವಿನ್ಯಾಸ

ಈ ಕ್ರಿಯಾತ್ಮಕ ಪ್ರಕರಣವು ಉಸಿರಾಟದೊಂದಿಗೆ ಬೆರೆತಿರುವುದು ಆಗಿದೆ ಮತ್ತು ಇದು ಸಾಂಪ್ರದಾಯಿಕ ಹಠ ಯೋಗಕ್ಕಿಂತಲೂ ಹೆಚ್ಚು ವೇಗವಾಗಿದೆ.

ಅಷ್ಟಾಂಗ

ಅಷ್ಟಾಂಗ ಯೋಗವು ದೈಹಿಕವಾಗಿ ಸವಾಲು ನೀಡುವ ಮತ್ತು ಹೆಚ್ಚು ವೇಗವಾದ ಯೋಗ ಭಂಗಿಗಳು. ಇದನ್ನು ಉಸಿರಾಟದ ಮೇಲೆ ಹೆಚ್ಚು ಬಲವನ್ನು ನೀಡುವಂತಾಗಿದೆ. ಸಾಂಪ್ರದಾಯಿಕ ಯೋಗ ತರಬೇತಿಯಲ್ಲಿ ನಿಮಗೆ ಯೋಗ ಭಂಗಿಗಳ ಮಧ್ಯೆ ನೀರು ಕುಡಿಯಲು ಅವಕಾಶವಿಲ್ಲ ಮತ್ತು ಎಲ್ಲಾ ಭಂಗಿಗಳನ್ನು ಪೂರೈಸಿದ ಕೆಲವು ಹೊತ್ತಿನ ಬಳಿಕ ಕುಡಿಯಬಹುದಾಗಿದೆ.

ಬಿಕ್ರಂ

ಬಿಕ್ರಂನಲ್ಲಿ ಎರಡು ರೀತಿಯ ಉಸಿರಾಟದ ತಂತ್ರ ಮತ್ತು 26 ಯೋಗಾ ಭಂಗಿಗಳು ಸುಮಾರು 90 ನಿಮಿಷಗಳ ಕಾಲ ಮಾಡಬೇಕಾಗುತ್ತದೆ. ಇದನ್ನು ಸುಮಾರು 40.6 ಸೆ. ತಾಪಮಾನದ ಕೋಣೆಯಲ್ಲಿ ಮಾಡಲಾಗುತ್ತದೆ. ಇದರಿಂದ ಬೆವರಿನ ಮೂಲಕ ದೇಹದ ವಿಷಕಾರಿ ಅಂಶವು ಹೊರಗೆ ಬರುವುದು.

ಕುಂಡಲಿನಿ

ಇದು ಕೆಲವೊಂದು ರೀತಿಯ ಕ್ರಿಯೆಯನ್ನು ಒಳಗೊಂಡಿದೆ. ಉಸಿರಾಟ, ಮಂತ್ರ, ಜಪ ಮತ್ತು ಧ್ಯಾನವು ಇದರಲ್ಲಿ ಒಳಗೊಂಡಿದೆ. ಇದು ಬೆನ್ನಿನ ಕೆಳಭಾಗದಲ್ಲಿ ಇರುವಂತಹ ಶಕ್ತಿಯನ್ನು ಜಾಗ್ರತಗೊಳಿಸಿ ಮೇಲ್ಭಾಗದ ಚಕ್ರಗಳಿಗೆ ತಲುಪಿಸುವುದು.

ಯಿನ್

3-5 ನಿಮಿಷ ಕಾಲ ಈ ಭಂಗಿಯಲ್ಲಿ ಇರಬೇಕು. ಇದು ಮಲಗಿಕೊಂಡು ಅಥವಾ ಕುಳಿತು ಮಾಡುವಂತಹ ಯೋಗ ಭಂಗಿಗಳು. ದೀರ್ಘವಾಗಿ ಎಳೆಯುವುದರಿಂದ ಒತ್ತಡವು ಕಡಿಮೆ ಆಗುವುದು ಮತ್ತು ಮಾಂಸಖಂಡಗಳು ಮತ್ತು ಅದರ ಅಂಗಾಂಶಗಳಲ್ಲಿ ಚಲನೆ ಉಂಟು ಮಾಡುವುದು. ಬಿಗಿ ಸ್ನಾಯುಗಳು, ಒತ್ತಡ ಅಥವಾ ದೀರ್ಘಕಾಲದ ನೋವು ಇರುವವರಿಗೆ ಇದು ಸಹಕಾರಿ.

ಪುನಶ್ಚೇತನಕಾರಿ

ಈ ಯೋಗದಲ್ಲಿ ಒಂದು ಭಂಗಿಯಲ್ಲಿ ಹತ್ತು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬೇಕು. ಭಂಗಿ ವೇಳೆ ಬೆಂಬಲ ಮತ್ತು ಆರಾಮಕ್ಕೆ ತಲೆದಿಂಬು ಇತ್ಯಾದಿಗಳನ್ನು ಬಳಸಬಹುದು. ಯಿನ್ ಯೋಗದಂತೆ ಇರುವ ಇದು ದೀರ್ಘಕಾಲದ ನೋವು ಮತ್ತು ಒತ್ತಡಕ್ಕೆ ಒಳಗಾಗಿದ್ದರೆ ಮಾಡಬಹುದು.

ಎಲ್ಲಾ ರೀತಿಯ ಯೋಗ ಭಂಗಿಗಳು ಹೆಚ್ಚಾಗಿ ಒಂದೇ ರೀತಿ ಕಾಣಬಹುದು ಮತ್ತು ಇದರ ಅಂತಿಮ ಉದ್ದೇಶವೆಂದರೆ ಅದು ಸ್ವಯಂ ಚಿಕಿತ್ಸೆ.

ನೀವು ಯಿನ್ ಅಥವಾ ವಿನ್ಯಾಸವನ್ನು ಆಯ್ಕೆ ಮಾಡಿ ಅಭ್ಯಾಸ ಮಾಡಬಹುದು. ಎಲ್ಲವೂ ನಿಮಗೆ ದೇಹದ ಆಂತರಿಕ ಶಕ್ತಿ ಮತ್ತು ನಿಮ್ಮನ್ನು ಅರಿತುಕೊಳ್ಳಲು ನೆರವಾಗಲಿದೆ.

English summary

History Of Yoga And Why You Should Practice Yoga

Here are more information about yoga, to know who started,how to developed this practice, read this article.
X
Desktop Bottom Promotion