For Quick Alerts
ALLOW NOTIFICATIONS  
For Daily Alerts

ಆರೆಂಜ್‌ ಎಣ್ಣೆ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

|

ಕಿತ್ತಳೆ ಸಾರಭೂತ ತೈಲವು ಅತ್ಯಂತ ಪ್ರಸಿದ್ಧ ಮತ್ತು ವ್ಯಾಪಕವಾಗಿ ಬಳಸಲಾಗುವ ತೈಲವಾಗಿದೆ. ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ದೇಹದಾದ್ಯಂತ ಸ್ನಾಯುವಿನ ಸೆಳೆತಕ್ಕೆ ಚಿಕಿತ್ಸೆ ನೀಡಲು ಇದನ್ನು ಬಹಳ ಪಮುಖವಾಗಿ ಬಳಸಲಾಗುತ್ತದೆ. ಇದು ನಿದ್ರಾಜನಕ/ ನಿದ್ದೆ ಬರಿಸುವ ಮದ್ದು ಎಂದೇ ಹೆಸರುವಾಸಿಯಾಗಿದೆ.

ಒತ್ತಡ, ಆತಂಕ ಮತ್ತು ಆಘಾತದ ಭಾವನೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಕಿತ್ತಳೆ ಸಾರಭೂತ ಎಣ್ಣೆಯು ದೇಹದಲ್ಲಿನ ಉರಿಯೂತ ನಿವಾರಣೆಗೂ ಸಹ ರಾಮಬಾಣವಾಗಿದೆ. ಕಿತ್ತಳೆ ಎಣ್ಣೆ, ಬಲವಾದ ನಂಜುನಿರೋಧಕ ಮತ್ತು ಜೀವಿರೋಧಿ ಗುಣಗಳನ್ನು ಹೊಂದಿದೆ, ಅದಕ್ಕಾಗಿಯೇ ಆಂತರಿಕ ಮತ್ತು ಬಾಹ್ಯ ಸೋಂಕುಗಳನ್ನು ತಡೆಗಟ್ಟಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಉತ್ತೇಜಕ ಮತ್ತು ಚೈತನ್ಯದಾಯಕ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ ಎಣ್ಣೆ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಏಕೆಂದರೆ ಇದು ಗ್ಯಾಸ್ಟ್ರಿಕ್ ಪಿತ್ತರಸ ಮತ್ತು ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದ ವ್ಯವಸ್ಥೆಯಲ್ಲಿನ ಹೆಚ್ಚುವರಿ ವಾತವನ್ನು ತೊಡೆದುಹಾಕುತ್ತದೆ. ನಿಮ್ಮನ್ನು ಹೆಚ್ಚಾಗಿ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ ಮತ್ತು ಆದ್ದರಿಂದ ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯವಾಗುತ್ತದೆ.

ಕಿತ್ತಳೆ ಸಾರಭೂತ ತೈಲವು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಕಾಮೋತ್ತೇಜಕವಾಗಿದೆ ಮತ್ತು ಇದು ಕಾಮಾಸಕ್ತಿ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ದುರ್ಬಲತೆಯ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ತೈಲವು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು ಏಕೆಂದರೆ ಇದು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಂತಹ ವಯಸ್ಸಿನ ಗುಣ ಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳನ್ನು ಹೋಗಲಾಡಿಸಲೂ ಸಹಾಯ ಮಾಡುತ್ತದೆ ಮತ್ತು ಚರ್ಮದಲ್ಲಿನ ಕಲೆಗಳನ್ನು ಕಡಿಮೆ ಮಾಡುವ ಒಂದು ಉತ್ತಮ ಎಣ್ಣೆ ಇದಾಗಿದೆ.

ಕಿತ್ತಳೆ ಎಣ್ಣೆಯು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಜೊತೆಗೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಅರಿವಿನ ಕಾರ್ಯವನ್ನು ಸುಧಾರಿಸಲು ಕಿತ್ತಳೆ ಸಾರಭೂತ ತೈಲವು ತುಂಬಾ ಒಳ್ಳೆಯದು. ಈ ಎಣ್ಣೆ, ಆಲ್ಝೈಮರ್ (ಮೆದುಳಿಗೆ ಸಂಬಂಧಿಸಿದ್ದು) ಕಾಯಿಲೆ ನಿವಾರಣೆಗೆಗೂ ಬಳಸಲಾಗುತ್ತದೆ ಎಂದು ತೋರಿಸುವ ಅಧ್ಯಯನಗಳಿವೆ. ನಿಮ್ಮ ಮನೆಯಲ್ಲಿರುವ ಹೌಸ್ ಫ್ಲೈ (ನೊಣದ ರೀತಿಯ ಕೀಟ) ಗಳನ್ನು ತೊಡೆದುಹಾಕಲು ಸಹ ಇದನ್ನು ಬಳಸಬಹುದು.

ಸ್ನಾಯು ಸೆಳೆತಕ್ಕೆ ಚಿಕಿತ್ಸೆ ನೀಡುತ್ತದೆ

ಸ್ನಾಯು ಸೆಳೆತಕ್ಕೆ ಚಿಕಿತ್ಸೆ ನೀಡುತ್ತದೆ

ಕಿತ್ತಳೆ ಸಾರಭೂತ ಎಣ್ಣೆ ಆಂಟಿಸ್ಪಾಸ್ಮೊಡಿಕ್ (ಸೆಳೆತ ವಿರೋಧಿ) ಗುಣಗಳನ್ನು ಹೊಂದಿದೆ. ಸ್ನಾಯುವಿನ ಅನೈಚ್ಛಿಕ ಸಂಕೋಚನ ಅಥವಾ ಕುಗ್ಗುವಿಕೆಯೆ ಸೆಳೆತ. ಇದು ದೇಹದ ಯಾವುದೇ ಭಾಗದಲ್ಲಿ, ಯಾವಾಗಲಾದರೂ ಬರಬಹುದು. ಈ ಸೆಳೆತದ ಪ್ರಮಾಣ ಮಂದತೆಯಿಂದ ತೀವ್ರ ಮಟ್ಟದವರೆಗೂ ಇರುತ್ತದೆ.

ಸ್ನಾಯು ಸೆಳೆತ ಆ ಭಾಗದಲ್ಲಿ ಅನಾನುಕೂಲ ಉಂಟುಮಾಡುವುದರಿಂದ ಹಿಡಿದು ನಿಮ್ಮ ಅಂಗಗಳಿಗೆ ಅಥವಾ ದೇಹದ ವ್ಯವಸ್ಥೆಗೆ ಸಾಕಷ್ಟು ನೋವು ಮತ್ತು ಹಾನಿಯನ್ನುಂಟು ಮಾಡುವವರೆಗೆ ಸಮಸ್ಯೆಯನ್ನು ಉಂಟುಮಾಡಹುದು.

ಕಿತ್ತಳೆ ಸಾರಭೂತ ತೈಲವು ಸೆಳೆತಕ್ಕೆ ಚಿಕಿತ್ಸೆ ನೀಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿರಂತರ ಕೆಮ್ಮು, ಅತಿಸಾರ ಮತ್ತು ಸ್ನಾಯು ಸೆಳೆತದಂತಹ ಹಲವಾರು ಸಮಸ್ಯೆಗಳಿಗೆ ಕಿತ್ತಳೆ ಎಣ್ಣೆ ಅತ್ಯುತ್ತಮ ಚಿಕಿತ್ಸಕವಾಗಿದೆ. ದೇಹದಲ್ಲಿ ಸ್ನಾಯು ಮತ್ತು ನರಗಳ ಸೆಳೆತವು ಉಂಟಾಗದಂತೆ ತಡೆಯಲು ಈ ತೈಲವು ಸಹಾಯ ಮಾಡುತ್ತದೆ.

ನಿದ್ರಾಜನಕ (ನಿದ್ರೆ ಬರಿಸಲು ಸಹಾಯಕ)

ನಿದ್ರಾಜನಕ (ನಿದ್ರೆ ಬರಿಸಲು ಸಹಾಯಕ)

ಕಿತ್ತಳೆ ಸಾರಭೂತ ತೈಲವು ನಿದ್ರಾಜನಕ ಗುಣಲಕ್ಷಣಗಳನ್ನು ಹೊಂದಿದೆ. ಇದರರ್ಥ ಇದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ಕೆಲಸದಲ್ಲಿ ಅತೀ ಒತ್ತಡದ ದಿನವನ್ನು ಹೊಂದಿರುವಾಗ ಅಥವಾ ನಿಮ್ಮ ದೇಹದಲ್ಲಿನ ಉರಿಯೂತದಿಂದ ಪರಿಹಾರವನ್ನು ಪಡೆಯಲು ಬಯಸಿದಾಗ, ನೈಸರ್ಗಿಕ ನಿದ್ರಾಜನಕಗಳು ನಿಮ್ಮ ಸಮಸ್ಯೆಗಳಿಗೆ ಉತ್ತರವಾಗಬಹುದು ಏಕೆಂದರೆ ಅವುಗಳು ಮಾರುಕಟ್ಟೆಯಲ್ಲಿರುವ ಹೆಚ್ಚಿನ ಟ್ರ್ಯಾಂಕ್ವಿಲೈಜರ್ (ನೋವು ನಿವಾರಕಗಳು) ಗಳಂತೆ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ.

ಆತಂಕ, ಒತ್ತಡ ಮತ್ತು ಖಿನ್ನತೆಯ ಭಾವನೆಗಳಿಗೆ ಒಂದು ಪ್ರಮುಖ ಚಿಕಿತ್ಸಕವಾಗಿದೆ ಕಿತ್ತಳೆ ಎಣ್ಣೆ ಜೊತೆಗೆ ನಿಮ್ಮ ದೇಹ ಹಾಗೂ ಮನಸ್ಸನ್ನು ಸಂಪೂರ್ಣ ಶಾಂತಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅಥವಾ ಮಲಗಲು ತೊಂದರೆಯಾಗಿದ್ದರೆ, ಈ ಸಾರಭೂತ ತೈಲವು ನಿಮಗೆ ವಿಶ್ರಾಂತಿ ಮತ್ತು ನಿದ್ರೆಗೆ ಹೆಚ್ಚು ಅನುಕೂಲಕರವಾಗಿದೆ. ಇದಲ್ಲದೆ, ಕಿತ್ತಳೆ ಸಾರಭೂತ ತೈಲವು, ನಿದ್ರಾಹೀನತೆಯ ಒಂದು ಪರಿಣಾಮಗಳಲ್ಲಿ ಒಂದಾದ ಉರಿಯೂತವನ್ನು ನಿವಾರಿಸುತ್ತದೆ.

ಅತ್ಯುತ್ತಮ ಚಿಕಿತ್ಸಕ

ಅತ್ಯುತ್ತಮ ಚಿಕಿತ್ಸಕ

ಮಸಾಲೆಯುಕ್ತ ಆಹಾರ ಸೇವನೆ, ಜ್ವರ, ಸೋಂಕುಗಳು, ಅನಿಲ, ಪ್ರತಿಜೀವಕಗಳು, ಮಾದಕ ವಸ್ತುಗಳು, ವಿಷಕಾರಿ ವಸ್ತುಗಳನ್ನು ಸೇವಿಸುವುದು ಅಥವಾ ಯಾವುದೇ ಉದ್ರೇಕಕಾರಿಗಳಂತಹ ವಿವಿಧ ಕಾರಣಗಳಿಂದ ಉಂಟಾಗುವ ಆಂತರಿಕ ಮತ್ತು ಬಾಹ್ಯ ಉರಿಯೂತ ಎರಡರಲ್ಲೂ ಇದು ಅತ್ಯುತ್ತಮ ಚಿಕಿತ್ಸಕವಾಗಿ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ ಸಾರಭೂತ ತೈಲವು ಉರಿಯೂತದ ಎಲ್ಲಾ ರೋಗಲಕ್ಷಣಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಇದನ್ನು ಸ್ನಾಯುಗಳು ಮತ್ತು ಕೀಲುಗಳ ಮೇಲೆ ಬಾಹ್ಯವಾಗಿ ಬಳಸಬಹುದು ಇವುಗಳ ಜೊತೆಗೆ ಮೊಣಕಾಲು ನೋವನ್ನು ನಿರ್ಮೂಲನೆ ಮಾಡಲು ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಈ ಪರಿಣಾಮದಿಂದಾಗಿ ಕಿತ್ತಳೆ ಎಣ್ಣೆ ಮಂದ ಸಂಧಿವಾತವನ್ನು ನಿವಾರಿಸುವುದರಲ್ಲಿಯೂ ಕೂಡ ಹೆಚ್ಚಾಗಿ ಬಳಸಲ್ಪಡುತ್ತದೆ.

ಕಾಮೋತ್ತೇಜಕ

ಕಾಮೋತ್ತೇಜಕ

ಕಿತ್ತಳೆ ಸಾರಭೂತ ತೈಲವು ಸೌಮ್ಯ ಕಾಮೋತ್ತೇಜಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಮಾರುಕಟ್ಟೆಯಲ್ಲಿ ಕಂಡುಬರುವ (myrrh) ಇತರ ಕೆಲವು ಸಾರಭೂತ ತೈಲಗಳಂತೆ ಇದು ಬಲವಾಗಿಲ್ಲದಿದ್ದರೂ, ಈ ಸಾರಭೂತ ತೈಲವು ನಿಮಗೆ ಸಣ್ಣ ಪ್ರಮಾಣದಲ್ಲಿ ಇದ್ದರೂ ಅದೇ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕಾಮಾಸಕ್ತಿಯನ್ನು ನೀವು ಕಳೆದುಕೊಂಡಿದ್ದರೆ ಅಥವಾ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿಲ್ಲದಿದ್ದರೆ, ಈ ಸಾರಭೂತ ತೈಲವು ಮತ್ತೆ ಜೀವನೋತ್ಸಾಹ ತುಂಬಲು ಸಹಾಯ ಮಾಡುತ್ತದೆ.

ಇದಲ್ಲದೆ, ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ದುರ್ಬಲತೆಗೆ ಸಹಾಯ ಮಾಡುತ್ತದೆ. ಇದು ಚತುರತೆಗೆಗೂ ಸಹಾಯ ಮಾಡುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹವನ್ನು ಪುನರುಜ್ಜೀವನಗೊಳಿಸಲು ಉತ್ತಮವಾಗಿರುತ್ತದೆ.

ಚೋಲಗೋಗ್ (ದೇಹದಲ್ಲಿ ಪಿತ್ತರಸ ಹೊರಹಾಕಲು ಉತ್ತೇಜಿಸುತ್ತದೆ)

ಚೋಲಗೋಗ್ (ದೇಹದಲ್ಲಿ ಪಿತ್ತರಸ ಹೊರಹಾಕಲು ಉತ್ತೇಜಿಸುತ್ತದೆ)

ಕಿತ್ತಳೆ ಸಾರಭೂತ ತೈಲವು ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಎಂಡೋಕ್ರೈನ್ ಮತ್ತು ಎಕ್ಸೊಕ್ರೈನ್ (ಅಂತಃಸ್ರಾವ ಮತ್ತು ಬಹಿಸ್ರಾವ) ವ್ಯವಸ್ಥೆಗಳಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಇದರರ್ಥ ಇದು ಪ್ರಮುಖ ಹಾರ್ಮೋನುಗಳು ಮತ್ತು ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಕಿತ್ತಳೆ ಎಣ್ಣೆ ಅಂತಿಮವಾಗಿ ನಿಮ್ಮ ದೇಹದ ವ್ಯವಸ್ಥೆ ಕಾರ್ಯನಿರ್ವಹಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಅಂಗಗಳು ಮತ್ತು ದೇಹದ ಒಟ್ಟಾರೆ ಆರೋಗ್ಯವನ್ನು ಖಚಿತಪಡಿಸುತ್ತದೆ.

ಕಿತ್ತಳೆ ಸಾರಭೂತ ತೈಲವನ್ನು ಹಲವಾರು ಇತರ ಪ್ರಮುಖ ಸ್ರವಿಸುವಿಕೆಯನ್ನು ಉತ್ತೇಜಿಸಲು ಬಳಸಬಹುದು. ಇದು ಮುಟ್ಟನ್ನು ಪ್ರೇರೇಪಿಸುತ್ತದೆ. ಪ್ರಮುಖ ಜೀರ್ಣಕಾರಿ ರಸಗಳ ಸ್ರವಿಸುವಿಕೆ, ಹಾಲುಣಿಸುವಿಕೆ (ಮೊಲೆ ಹಾಲು ಸ್ರವಿಸುವಿಕೆ), ಪಿತ್ತರಸ ಮತ್ತು ಇತರ ಕಿಣ್ವಗಳು ನಿಮ್ಮ ದೇಹಕ್ಕೆ ಪ್ರತಿದಿನವೂ ಅಗತ್ಯವಾಗಿರುತ್ತದೆ. ಹೀಗಾಗಿ, ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಇದು ಉಪಯುಕ್ತವಾಗಿರುತ್ತದೆ.

ಸೋಂಕುಗಳನ್ನು ತಡೆಯುತ್ತದೆ

ಸೋಂಕುಗಳನ್ನು ತಡೆಯುತ್ತದೆ

ಕಿತ್ತಳೆ ಸಾರಭೂತ ತೈಲವು ಬಲವಾದ ಜೀವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಗಟ್ಟಲು ಕಡಿತ, ಗಾಯಗಳು ಮತ್ತು ಒರಟಾದ ಮೇಲ್ಮೈ ಮೇಲೆ ಬಳಸಬಹುದು. ಇದು ಬ್ಯಾಕ್ಟೀರಿಯಾದ ಸೋಂಕು ಬರದಂತೆ ತಡೆಯಲು ಸಹಾಯ ಮಾಡುತ್ತದೆ. ಈ ಸಾರಭೂತ ತೈಲವು ಆಂಟಿಫಂಗಲ್ (ಶಿಲೀಂಧ್ರ ವಿರೋಧಿ) ಗುಣಗಳನ್ನು ಸಹ ಹೊಂದಿದೆ ಮತ್ತು ದೇಹದಲ್ಲಿ ಬಾಹ್ಯವಾಗಿ ಮತ್ತು ಆಂತರಿಕವಾಗಿ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗುವ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುವಲ್ಲಿ ಉತ್ತಮ ಪಾತ್ರವಹಿಸುತ್ತದೆ.

ಹೆಚ್ಚಿನ ಸೂಕ್ಷ್ಮಜೀವಿಯ ಸೋಂಕುಗಳ ವಿರುದ್ಧ ಕಿತ್ತಳೆ ಎಣ್ಣೆ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದಲ್ಲದೆ, ಕಿತ್ತಳೆ ಸಾರಭೂತ ತೈಲವು ನಂಜುನಿರೋಧಕ ಗುಣಗಳನ್ನು ಸಹ ಹೊಂದಿದೆ. ಇದು ಗಾಯವು ಸೆಪ್ಟಿಕ್ (ನಂಜು) ಆಗುವುದನ್ನು ಮತ್ತು ನಂತರ ಟೆಟನಸ್ (ಧನುರ್ವಾಯು) ಆಗಿ ಹೆಚ್ಚಾಗುವುದನ್ನು ತಡೆಯುತ್ತದೆ. ನಿಮ್ಮ ದೇಹವನ್ನು ಎಲ್ಲಾ ರೀತಿಯ ರೋಗಾಣುಗಳಿಂದ ಸುರಕ್ಷಿತವಾಗಿರಿಸುವುದು ತುಂಬಾ ಅಗತ್ಯ. ಹಾಗಾಗಿ ಕುತ್ತಳೆ ಸಾರಭೂತ ಎಣ್ಣೆ ಈ ಎಲ್ಲಾ ರೋಗಾಣುಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

English summary

Health Benefits Orange Oil

Here we are discussing about How Orange Oil Healpfull For Health. Orange essential oil is one of the most well known and widely used essential oil. It provides a ton of health benefits. Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X