Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
'ಜೋಳ ತಿಂದವ ತೋಳ' : ಜೋಳದ ರೊಟ್ಟಿ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಅಕ್ಕಿ ತಿಂದವ ಹಕ್ಕಿ, ಜೋಳ ತಿಂದವ ತೋಳ' ಎಂಬ ಮಾತೇ ಇದೆ. ಉತ್ತರ ಕರ್ನಾಟಕದ ಮಂದಿಯನ್ನು ನೋಡುವಾಗ ಈ ಮಾತು ಸತ್ಯ ಅನಿಸುವುದು. ತೆಳ್ಳಗೆ ಗಟ್ಟಿಮುಟ್ಟಾಗಿರುವ ಅವರ ಆರೋಗ್ಯದ ರಹಸ್ಯವೇ ಜೋಳದ ರೊಟ್ಟಿ, ಕಡಕ್ ರೊಟ್ಟಿ ಎಂದರೆ ತಪ್ಪಾಗಲಾರದು.

ಜೋಳದ ರೊಟ್ಟಿ ತಿಂದಿಲ್ಲ ಎಂದರೆ ಅವರಿಗೆ ಆಹಾರ ಸೇವಿಸಿದಂತೆ ಆಗುವುದೇ ಇಲ್ಲ, ಜೋಳದ ರೊಟ್ಟಿ ಬದನೆಕಾಯಿಪಲ್ಯ ಕಾಂಬಿನೇಷನ್ ಅಂತೂ ತುಂಬಾನೇ ಸೂಪರ್ ಆಗಿರುತ್ತದೆ. ಉತ್ತರ ಕರ್ನಾಟದ ಪ್ರಸಿದ್ಧ ಆಹಾರವಾಗಿರುವ ಜೋಳದ ರೊಟ್ಟಿ ತಿಂದರೆ ಈ ಪ್ರಮುಖ ಪ್ರಯೋಜನಗಳಿವೆ ನೋಡಿ:

ಜೋಳದ ರೊಟ್ಟಿ ಗ್ಲುಟೀನ್ ಮುಕ್ತ ಆಹಾರ
ಜೋಳದ ರೊಟ್ಟಿ ಮಧುಮೇಹಿಗಳಿಗೂ ಅತ್ಯುತ್ತಮವಾದ ಆಹಾರವಾಗಿದೆ. ಇದರಲ್ಲಿ ನಾರಿನಂಶ ಅಧಿಕವಾಗಿರುತ್ತದೆ, ಆದ್ದರಿಂದ ಜೀರ್ಣಕ್ರಿಯೆಗೂ ಒಳ್ಳೆಯದು. ಜೋಳ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಹಾಗೂ ಕೊಲೆಸ್ಟ್ರಾಲ್ ಕೂಡ ಕಡಿಮೆ ಮಾಡುತ್ತದೆ.
ಕಿಡ್ನಿ ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
ಪ್ರತಿನಿತ್ಯ ಜೋಳದ ರೊಟ್ಟಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುವುದು. ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಕಿಡ್ನಿ ಹಾಗೂ ಲಿವರ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ
ಯಾರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅವರು ಜೋಳದ ರೊಟ್ಟಿಯ ಆಹಾರ ಪದ್ಧತಿಗೆ ಬದಲಾಗಿ ನೋಡಿ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದು ಅಲ್ಲದೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸಲು ಕೂಡ ಸಹಕಾರಿ. ಅತಿಯಾದ ಅಸಿಡಿಟಿ, ಹೊಟ್ಟೆ ಉಬ್ಬುವುದು ಈ ಬಗೆಯ ಸಮಸ್ಯೆ ಕೂಡ ಇರುವುದಿಲ್ಲ.
ಜೋಳದ ರೊಟ್ಟಿ ತಿಂದಾಗ ದೊರೆಯುವ ಪೋಷಕಾಂಶಗಳು
ಜೋಳದ ರೊಟ್ಟಿಯಲ್ಲಿ ವಿಟಮಿನ್ ಎ, ಸಿ, ಕೆ ಮತ್ತು ಬಿ ವಿಟಮಿನ್ಗಳಿವೆ ಅಲ್ಲದೆ ಇದರಲ್ಲಿ ಕಬ್ಬಿಣದಂಶ, ರಂಜಕ, ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಇನ್ನು ಜೋಳದ ರೊಟ್ಟಿ ಸವಿಯಲು ಶೇಂಗಾ ಬೀಜದ ಚ್ಟನಿ ಪುಡಿ, ತುಪ್ಪ, ತರಕಾರಿ ಪಲ್ಯ ಇವುಗಳನ್ನು ಬಳಸುತ್ತೇವೆ, ಇದರಿಂದಾಗಿ ತರಕಾರಿಯಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು
ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಜೋಳದ ರೊಟ್ಟಿ ತುಂಬಾ ಒಳ್ಳೆಯದು. ಹೆರಿಗೆಯ ಬಳಿಕ ಜೋಳದ ರೊಟ್ಟಿ ತಿನ್ನುವುದರಿಂದ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯುತ್ತದೆ, ಮೈ ಬೊಜ್ಜು ಹೆಚ್ಚಾಗುವುದನ್ನು ತಡೆಗಟ್ಟಬಹುದು.
ಥೈರಾಯ್ಡ್ ಗ್ರಂಥಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿ
ಇದರಲ್ಲಿ ಅತ್ಯಧಿಕ ಬೀಟಾಕೆರೋಟಿನ್ ಹಾಗೂ ಸೆಲೆನಿಯಮ್ ಇರುವುದರಿಂದ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ತುಂಬಾನೇ ಸಹಕಾರಿ.
ಜೋಳದ ರೊಟ್ಟಿ ಮಾಡುವುದು ಹೇಗೆ?
ಮೊದಲಿಗೆ ಸ್ವಲ್ಪ ನೀರಿಗೆ ಉಪ್ಪು ಹಾಕಿ ಕುದಿಸಬೇಕು, ನೀರು ಕುದಿ ಬರುವಾಗ ಜೋಳದ ಹಿಟ್ಟು ಹಾಕಿ ಕಲೆಸಬೇಕು, ಆಗ ಮುದ್ದೆ ರೀತಿಯಾಗುವುದು, ಅದು ಗಟ್ಟಿಯಾಗದಿರಲು ಸ್ವಲ್ಪ ನೀರು ಹಾಕಿ. ಅದಕ್ಕೆ ಜಿಗಟು ಅಂತಾರೆ.
* ಈಗ ಸ್ವಲ್ಪ ಜಿಗಟು ತೆಗೆದು ಅದಕ್ಕೆ ಜೋಳದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು, ನಂತರ ಸ್ವಲ್ಪ ನೀರು ಸೇರಿಸಿ ಚಪಾತಿಗೆ ಕಲೆಸಿದಂತೆ ಕಲೆಸಿ, ನಂತರ ಸ್ವಲ್ಪ ಪುಡಿ ಉದುರಿಸಿ ರೊಟ್ಟಿ ತಟ್ಟಬೇಕು.
* ನಂತ ಹಂಚು ಬಿಸಿ ಮಾಡಿ ಅದಕ್ಕೆ ರೊಟ್ಟಿ ಹಾಕಿ, ಚಿಕ್ಕ ಬಟ್ಟೆಯನ್ನು ನೀರಿಗೆ ಅದ್ದಿ ರೊಟ್ಟಿ ಮೇಲೆ ಒತ್ತಬೇಕು. ಎರಡು ಬದಿ ಚೆನ್ನಾಗಿ ಬೆಂದರೆ ಜೋಳದ ರೊಟ್ಟಿ ರೆಡಿ.



Click it and Unblock the Notifications
