For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡುವ 10 ಆಹಾರಗಳು

|

ಹೊಟ್ಟೆಯಲ್ಲಿ ಗ್ಯಾಸ್‌ ತುಂಬುವುದು ಒಂದು ಸಾಮಾನ್ಯ ಸಮಸ್ಯೆ. ಕೆಲವರಿಗೆ ಆಲೂಗಡ್ಡೆ, ಕಾಳು ಈ ರೀತಿಯ ಆಹಾರಗಳನ್ನು ತಿಂದಾಗ ಹೊಟ್ಟೆ ಉಬ್ಬುವ ಸಮಸ್ಯೆ ಉಂಟಾದರೆ, ಇನ್ನು ಕೆಲವರಿಗೆ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುವುದು.

Foods To Combat Stomach Gas Or Gastric | Boldsky Kannada

ಕಾರ್ಬೋಹೈಡ್ರೇಟ್ಸ್, ನಾರಿನಂಶ, ಸಕ್ಕರೆ, ಪಿಷ್ಠ ಅತ್ಯಧಿಕವಿರುವ ಆಹಾರವನ್ನು ಹೆಚ್ಚು ತಿಂದರೆ ಹೊಟ್ಟೆಗ್ಯಾಸ್‌ ಉಂಟಾಗುವುದು. ಸಾಮಾನ್ಯವಾಗಿ ಈ ಗ್ಯಾಸ್ ತೇಗು, ಗ್ಯಾಸ್‌ ಪಾಸಾಗುವ ಮೂಲಕ ಹೋಗುವುದರಿಂದ ದಿನನಿತ್ಯದ ಚಟುವಟಿಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಗ್ಯಾಸ್‌ ಹೊಟ್ಟೆಯಿಂದ ಹೊರಹೋಗದೇ ಹೋದರೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.

combat stomach gas


ಗ್ಯಾಸ್ಟ್ರಿಕ್ ಹೊಟ್ಟೆನೋವು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ತಂಪು ಪಾನೀಯಗಳ ಸೇವನೆ, ಆಹಾರವನ್ನು ಸರಿಯಾಗಿ ಜಗಿಯದೆ ಬೇಗ-ಬೇಗ ತಿನ್ನುವುದು, ಆಹಾರ ನುಂಗುವಾಗ ತುಂಬಾ ಗಾಳಿ ನುಂಗಿದರೆ, ಒತ್ತಡ ಹಾಗೂ ಕೆಲವೊಂದು ಬಗೆಯ ಆಹಾರಗಳಿಂದ ಹೊಟ್ಟೆ ಗ್ಯಾಸ್ ಸಮಸ್ಯೆ ಉಂಟಾಗುವುದು.

ಹೊಟ್ಟೆ ಗ್ಯಾಸ್‌ ಸಮಸ್ಯೆ ಕಾಡುತ್ತಿದ್ದರೆ ನೀವು ತಿನ್ನುವ ಆಹಾರದ ಜೊತೆ ಈ ಆಹಾರಗಳನ್ನು ಬಳಸಿದರೆ ಸಾಕು, ಗ್ಯಾಸ್‌ ತುಂಬಿ ಹೊಟ್ಟೆನೋವು ಉಂಟಾಗುವುದನ್ನು ತಡೆಯಬಹುದು.

1. ಶುಂಠಿ

1. ಶುಂಠಿ

ಗ್ಯಾಸ್‌ ತುಂಬಿ ಹೊಟ್ಟೆ ನೋವು ಉಂಟಾದರೆ ಅದನ್ನು ಕಡಿಮೆ ಮಾಡಲು ಬಳಸುವ ಪರಿಣಾಮಕಾರಿಯಾದ ಆಹಾರ ಇದಾಗಿದೆ. ಶುಂಠಿ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪತ್ತಿತಯನ್ನು ತಗ್ಗಿಸುತ್ತದೆ.

ಹೇಗೆ ಬಳಸಬಹುದು: ಊಟ ಮಾಡಿದ ಬಳಿಕ ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ನಿಂಬೆರಸ ಮತ್ತು ಜೇನು ಸೇರಿಸಿ ಕುಡಿದರೆ ಒಳ್ಳೆಯದು. ಗ್ಯಾಸ್‌ ಹೊಟ್ಟೆ ನೋವು ಕಾಣಿಸಿದಾಗ ಹೀಗೆ ಮಾಡಿ ಕುಡಿದು ನೋಡಿ ತಕ್ಷಣ ಕಡಿಮೆಯಾಗುವುದು.

2. ಅಜ್ವೈನ್

2. ಅಜ್ವೈನ್

ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆ ಮಾಡಲು ಅಜ್ಜಿ ಕಾಲದಿಂದಲೂ ಬಳಸುವ ಮನೆಮದ್ದು ಇದಾಗಿದೆ. ಇದನ್ನು ಸ್ವಲ್ಪ ಬಾಯಿಗೆ ಹಾಕಿ ಜಗಿದರೆ ಸಾಕು ಗ್ಯಾಸ್‌ ಸಂಬಂಧಿತ ಸಮಸ್ಯೆ ಕಡಿಮೆಯಾಗುವುದು. ಅಜ್ವೈನ್‌ ಹಾಗೇ ತಿನ್ನಲು ಸ್ವಲ್ಪ ಕಷ್ಟ ಅನಿಸಬಹುದು. ಒಂದು ಲೋಟ ನೀರಿಗೆ ಅರ್ಧ ಚಮಚ ಅಜ್ವೈನ್ ಹಾಕಿ ಕುದಿಸಿ ಕುಡಿದರೆ ಹೊಟ್ಟೆ ನೋವು ತಕ್ಷಣ ಕಡಿಮೆಯಾಗುವುದು.

3. ಪುದೀನಾ ಟೀ

3. ಪುದೀನಾ ಟೀ

ಅನೇಕ ಬಗೆಯ ಅಜೀರ್ಣ ಸಮಸ್ಯೆ ಹೋಗಲಾಡಿಸಲು ಪುದೀನಾ ಟೀ ತುಂಬಾ ಒಳ್ಳೆಯದು. ಪುದೀನಾ ಟೀ ಜಠರದಲ್ಲಿ ಪಿತ್ತರಸವನ್ನು ಉತ್ಪತ್ತಿ ಮಾಡುತ್ತದೆ. ಇದು ಹೊಟ್ಟೆಯಲ್ಲಿನ ಗ್ಯಾಸ್, ಅಜೀರ್ಣ ಸಮಸ್ಯೆ, ಕೆಳಹೊಟ್ಟೆ ನೋವು, ಎದೆ ಉರಿ ಈ ರೀತಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.

ಬಳಸುವುದು ಹೇಗೆ?

ಬಿಸಿ ನೀರಿಗೆ ಒಂದು ಎಲೆ ಪುದೀನಾ ಹಾಕಿ ಕುಡಿದರೂ ಸಾಕು, ಗ್ಯಾಸ್ಟ್ರಿಕ್‌ ಕಡಿಮೆಯಾಗುವುದು.

4. ಮಜ್ಜಿಗೆ

4. ಮಜ್ಜಿಗೆ

ಊಟದ ಬಳಿಕ ಮಜ್ಜಿಗೆ ಕುಡಿದರೆ ತುಂಬಾ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಮಜ್ಜಿಗೆ ತಿಂದ ಊಟವನ್ನು ಅರಗಿಸುವುದರಲ್ಲಿ ತುಂಬಾ ಸಹಕಾರಿ. ಇದು ಸ್ಯಾಚುರೇಟೆಡ್ ಕೊಬ್ಬನ್ನು ಹೊರ ಹಾಕುವಲ್ಲಿ ಸಹಕಾರಿ.

ಬಳಸುವುದು ಹೇಗೆ?

ಮಜ್ಜಿಗೆಗೆ ಅರ್ಧ ಚಟಿಕೆಯಷ್ಟು ಇಂಗು ಹಾಕಿ ಕುಡಿದರೆ ತುಂಬಾ ಒಳ್ಳೆಯದು.

5. ಜೀರಿಗೆ

5. ಜೀರಿಗೆ

ಹೊಟ್ಟೆ ಉಬ್ಬುವುದು, ಅಸಿಡಿಟಿ, ಅಜೀರ್ಣ ಈ ರೀತಿಯ ಸಮಸ್ಯೆಗೆ ಜೀರಿಗೆ ಉತ್ತಮವಾದ ಮನೆಮದ್ದಾಗಿದೆ. ಇದು ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್‌ ಉತ್ಪತ್ತಿಯಾಗುವುದನ್ನು ತಡೆಗಟ್ಟುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬಳಸುವುದು ಹೇಗೆ?

2 ಕಪ್ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ದೆಹದ ಉಷ್ಣತೆ ಕಡಿಮೆಯಾಗುವದು, ಜೀರ್ಣಕ್ರಿಯೆಗೂ ತುಂಬಾ ಸಹಕಾರಿ.

ಲೋಳೆಸರ

ಲೋಳೆಸರ

ಗ್ಯಾಸ್ಟ್ರಿಕ್‌ ಹೊರಹಾಕುವಲ್ಲಿ ಲೋಳೆಸರ ಕೂಡ ತುಂಬಾ ಸಹಕಾರಿ. ಇದು ಗ್ಯಾಸ್‌ ಹೊರಹೋಗುವಂತೆ ಮಾಡುವುದರ ಜೊತೆಗೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದು ಹೊಟ್ಟೆ ಉಬ್ಬುವುದರಿಂದ ಉಂಟಾಗುವ ಹೊಟ್ಟೆಯುರಿ ಸಮಸ್ಯೆ ಕೂಡ ಕಡಿಮೆ ಮಾಡುವುದು.

ಬಳಸುವುದು ಹೇಗೆ: ಹೊಟ್ಟೆ ನೋವು ಕಡಿಮೆ ಮಾಡಲು ಅಲೋವೆರಾ ರಸ ಮಾರ್ಕೆಟ್‌ನಲ್ಲಿ ದೊರೆಯುತ್ತದೆ. ಅದನ್ನು ತಂದು ಅದರಲ್ಲಿ ಸೂಚನೆ ನೀಡಿದಂತೆ ನೀರಿನಲ್ಲಿ ಕಲೆಸಿ ಕುಡಿದರೆ ಗ್ಯಾಸ್‌ ಸಮಸ್ಯೆ ಇಲ್ಪವಾಗುವುದು.

 ಮೊಸರು

ಮೊಸರು

ಮೊಸರು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಊಟವಾದ ಬಳಿಕ ಒಂದು ಕಪ್ ಮೊಸರು ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದಿಲ್ಲ. ಮೊಸರು ತಿನ್ನುವುದಾದರೆ ಪ್ಲೇನ್ ಮೊಸರು ತಿನ್ನಿ, ಇತರ ರುಚಿಗಳಿರುವ ಮೊಸರುಗಳು ಮಾರುಕಟ್ಟೆಯಲ್ಲಿ ದೊರೆಯುವುದಾದರೂ ಅವುಗಳನ್ನು ತಿಂದರೆ ಹೊಟ್ಟೆ ನೋವು ಕಡಿಮೆಯಾಗುವುದಿಲ್ಲ.

ಬಳಸುವುದು ಹೇಗೆ?

ಮೊಸರನ್ನು ಹಾಗೇ ತಿನ್ನಿ, ಬೇಕಿದ್ದರೆ ಸ್ವಲ್ಪ ಜೀರಿಗೆ ಪುಡಿ, ಉಪ್ಪು ಹಾಕಿ ತಿನ್ನಬಹುದು.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿನಲ್ಲಿರುವ ಪಾಪೈನ್ ಎಂಬ ಎಂಜೈಮ್ಸ್ ಜೀರ್ಣಕ್ರಿಯೆ ಅಂಗದಲ್ಲಿರುವ ಎಲ್ಲಾ ಕಶ್ಮಲಗಳನ್ನು ಹೊರಹಾಕುತ್ತದೆ. ಆದ್ದರಿಂದಾಗಿ ಗ್ಯಾಸ್ಟ್ರಿಕ್‌ ಕಡಿಮೆ ಮಾಡಲು ತುಂಬಾ ಸಹಕಾರಿ.

ಬಳಸುವುದು ಹೇಗೆ?

ತಾಜಾ ಪಪ್ಪಾಯಿ ಹಣ್ಣು ತಿನ್ನಿ, ಇಲ್ಲಾ ಜ್ಯೂಸ್ ಮಾಡಿ ಕುಡಿಯಬಹುದು.

9. ನಿಂಬೆರಸ ಮತ್ತು ಅಡುಗೆ ಸೋಡಾ

9. ನಿಂಬೆರಸ ಮತ್ತು ಅಡುಗೆ ಸೋಡಾ

ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿ ಹೊಟ್ಟೆ ನೋವು ಕಾಣಿಸಿಕೊಂಡರೆ ಅದನ್ನು ಕಡಿಮೆ ಮಾಡುವಲ್ಲಿ ಈ ಎರಡು ಆಹಾರಗಳು ತುಂಬಾ ಸಹಕಾರಿ. ನಿಂಬೆ ಪಾನೀಯ ಮಾಡಿ ಅದಕ್ಕೆ ಸ್ವಲ್ಪ ಸೋಡಾ ಹಾಕಿ ಕುಡಿದರೆ ಬೇಗನೆ ಕಡಿಮೆಯಾಗುವುದು.

ಬಳಸುವುದು ಹೇಗೆ?

ಬಿಸಿ ನೀರಿಗೆ ನಿಂಬೆರಸ ಹಾಕಿ, ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ಕುಡಿದರೆ ಸ್ವಲ್ಪ ಹೊತ್ತಿನಲ್ಲಿ ಅಜೀರ್ಣ ಹೊಟ್ಟೆನೋವು ಕಡಿಮೆಯಾಗುವುದು.

10. ನೆಲ್ಲಿಕಾಯಿ

10. ನೆಲ್ಲಿಕಾಯಿ

ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆ ಮಾಡುವಲ್ಲಿ ನೆಲ್ಲಿಕಾಯಿ ತುಂಬಾ ಸಹಕಾರಿ. ಇದನ್ನು ತಿನ್ನುವುದರಿಂದ ಜೀರ್ಣಾಂಗದಲ್ಲಿರುವ ಕಶ್ಮಳಗಳನ್ನು ಹೊರಹಾಕುತ್ತದೆ, ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು, ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

ಬಳಸುವುದು ಹೇಗೆ?

ಆಮ್ಲ ಜ್ಯೂಸ್‌ ಬಳ:ಸುವುದಾದರೆ ಇದನ್ನು ನೀರಿನಲ್ಲಿ ಮಿಶ್ರ ಮಾಡಿ, ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಾಕು.

 ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು

1. ನನ್ನ ಗ್ಯಾಸ್‌ ಸಮಸ್ಯೆ ಕಡಿಮೆ ಮಾಡುವುದು ಹೇಗೆ?

ಆಹಾರಕ್ರಮದಲ್ಲಿ ಸಣ್ಣ ಬದಲಾವಣೆ ಮಾಡುವ ಮೂಲಕ ಗ್ಯಾಸ್‌ ಸಮಸ್ಯೆ ಕಡಿಮೆ ಮಾಡಬಹುದು. ಊಟವನ್ನು ನಿಧಾನಕ್ಕೆ ಅಗಿದು ತಿನ್ನಬೇಕು, ನೀರು ನಿಧಾನಕ್ಕೆ ಕುಡಿಯಿರಿ, ಧೂಮಪಾನ ಅಭ್ಯಾಸವಿದ್ದರೆ ಬಿಡಬೇಕು. ಅತ್ಯಧಿಕ ನಾರಿನಂಶ ಹಾಗೂ ಕೊಬ್ಬಿನಂಶವಿರುವ ಆಹಾರವನ್ನು ಕಡಿಮೆ ಮಾಡಬೇಕು.

2. ಅನ್ನ ತಿಂದರೆ ಗ್ಯಾಸ್ಟ್ರಿಕ್ ಉಂಟಾಗುವುದೇ?

ಅತ್ಯಧಿಕ ನಾರಿನಂಶ, ಕಾರ್ಬೋಹೈಡ್ರೇಟ್ಸ್, ಪಿಷ್ಠ ಇರುವ ಆಹಾರಗಳನ್ನು ಜಠರದಲ್ಲಿ ದೊಡ್ಡ ಕರುಳು ಪ್ರತ್ಯೇಕಿಸುತ್ತದೆ, ಆಗ ಗ್ಯಾಸ್‌ ಉತ್ಪತ್ತಿಯಾಗುವುದು. ಅನ್ನದಲ್ಲಿ ಸ್ವಲ್ಪ ಕಾರ್ಬೋಹೈಡ್ರೇಟ್ಸ್ ಇದ್ದರೂ ಇದರಿಂದ ಗ್ಯಾಸ್‌ ಸಮಸ್ಯೆ ಉಂಟಾಗುವುದಿಲ್ಲ.

3. ಗ್ಯಾಸ್ಟ್ರಿಕ್‌ ಕಡಿಮೆ ಮಾಡಲು ಏನು ಮಾಡಬೇಕು?

ಹೊಟ್ಟೆ ಉಬ್ಬಿದರೆ ಈ ಲೇಖನದಲ್ಲಿ ಹೇಳಿದಂತೆ ಶುಂಠಿ ಟೀ, ಪುದೀನಾ ಟೀ, ಆಮ್ಲ ಜ್ಯೂಸ್, ಮಜ್ಜಿಗೆ, ಕಲ್ಲಮಗಡಿ ಜ್ಯೂಸ್‌ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುವುದು.

English summary

Foods To Combat Stomach Gas

by making small changes in diet patterns, people can treat their stomach gas problems without visiting a medical expert every time. Look at some of the best foods that help combat stomach gas.
X
Desktop Bottom Promotion