ನೀವು ಇಷ್ಟಪಟ್ಟು ತಿನ್ನುವ ಈ ಆಹಾರಗಳಿಂದ, ತೋಳುಗಳಲ್ಲಿ ಬೊಜ್ಜು ಬರುತ್ತೆ, ಎಚ್ಚರವಹಿಸಿ

ಇಂದಿನ ಜೀವನಶೈಲಿಯಲ್ಲಿ ತೂಕ ಹೆಚ್ಚಾಗುವುದು, ಬೊಜ್ಜು ಬರುವುದು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಅದನ್ನು ತಡೆಗಟ್ಟಲು ಡಯೆಟ್, ವ್ಯಾಯಾಮ, ಯೋಗಗಳ ಮೊರೆಹೋಗುತ್ತಿರುವುದು ಸಹ ಮಾಮೂಲಿಯಾಗಿದೆ. ಆದರೆ, ಇವುಗಳ ಜೊತೆಗೆ ನಾವು ಮುಖ್ಯವಾಗಿ ಗಮನಿಸಬೇಕಾಗಿರುವುದು, ಸೇವಿಸುವ ಆಹಾರದ ಬಗ್ಗೆ. ಆರೋಗ್ಯಕರ ಆಹಾರ ಸೇವಿಸದೇ, ಎಂತಹ ಕಸರತ್ತು ನಡೆಸಿದರೂ, ಬೊಜ್ಜು ಬೆಳೆಯುವುದನ್ನು ತಡೆಯಲಾಗುವುದಿಲ್ಲ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದೇಹದ ಜೊತೆಗೆ ಕೈಗಳಲ್ಲಿ ಬೊಬ್ಬು ಶೇಖರಣೆಯಾಗುವುದನ್ನು ಕಂಡಿರಬಹುದು, ಇದು ಮಹಿಳೆಯರಲ್ಲಿ ಹೆಚ್ಚು. ಇದಕ್ಕೂ ಕಾರಣ ನಮ್ಮ ಆಹಾರವೇ. ಹಾಗಾದರೆ, ಕೈಗಳಲ್ಲಿ ಬೊಜ್ಜು ಸಂಗ್ರಹವಾಗಲು ಕಾರಣವಾಗುವ ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ.

ತೋಳುಗಳಲ್ಲಿ ಬೊಜ್ಜು ಸಂಗ್ರಹವಾಗಲು ಕಾರಣವಾಗುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕೆಂಪು ಮಾಂಸ/ ರೆಡ್ ಮೀಟ್:

ಕೆಂಪು ಮಾಂಸ/ ರೆಡ್ ಮೀಟ್:

ಕೆಂಪು ಮಾಂಸವನ್ನು ಸೇವಿಸುವುದರಿಂದ ಸ್ನಾಯುಗಳು ಬಲಾಢ್ಯವಾಗುತ್ತವೆ ಮತ್ತು ತೂಕ ಹೆಚ್ಚಾಗುತ್ತದೆ. ಇದರಲ್ಲಿ ಲ್ಯೂಸಿನ್ ಮತ್ತು ಕ್ರಿಯೇಟೈನ್ ಎಂಬ ಎರಡು ಪೋಷಕಾಂಶಗಳನ್ನು ಒಳಗೊಂಡಿದ್ದು, ಇದು ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತವೆ. ಜೊತೆಗೆ ಇವು ಪ್ರೋಟೀನ್ ಮತ್ತು ಕೊಬ್ಬು ಎರಡನ್ನೂ ಒಳಗೊಂಡಿದ್ದು, ತೂಕ ಹೆಚ್ಚಿಸಲು ಉತ್ತೇಜಿಸುತ್ತದೆ.

ಸಂಸ್ಕರಿಸಿದ ಹಿಟ್ಟು :

ಸಂಸ್ಕರಿಸಿದ ಹಿಟ್ಟು :

ಬಿಳಿ ಬ್ರೆಡ್ನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗಿದ್ದು, ಹೆಚ್ಚಾಗಿ ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತದೆ. ಇದು ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ ಅಧಿಕವಾಗಿದ್ದು, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಒಂದು ಅಧ್ಯಯನದ ಪ್ರಕಾರ, ದಿನಕ್ಕೆ ಎರಡು ಸ್ಲೈಸ್ ಬಿಳಿ ಬ್ರೆಡ್ ಅನ್ನು ತಿನ್ನುವುದು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಯ ಅಪಾಯ 40% ಹೆಚ್ಚಾಗಿದೆ ಎಂದು ಕಂಡುಹಿಡಿದಿದೆ. ಜೊತೆಗೆ ಮೈದಾ ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿಸಲಾರದು. ಇದು ಹಸಿವನ್ನು ಪ್ರಚೋದಿಸಿ, ಹೆಚ್ಚು ತಿನ್ನಲು ಪ್ರಚೋದಿಸುತ್ತದೆ. ಅಲ್ಲದೆ, ಇದು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಕೂಡ ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗುತ್ತದೆ.

ಬೆಣ್ಣೆ:

ಬೆಣ್ಣೆ:

ಬೆಣ್ಣೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವಂತಹ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು, ಮಿತಿಮೀರಿದ ಸೇವನೆಯು ತ್ವರಿತವಾಗಿ ಹೆಚ್ಚುವರಿ ಕ್ಯಾಲೊರಿಗಳನ್ನು ಸಂಗ್ರಹಿಸಲು ಕಾರಣವಾಗಬಹುದು. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡರೆ, ಅದು ಖಂಡಿತವಾಗಿಯೂ ನಿಮ್ಮ ದೇಹದ ಆಕಾರವನ್ನು ಕೆಡಿಸಬಹುದು.

ಜಂಕ್‌ಫುಡ್:

ಜಂಕ್‌ಫುಡ್:

ಇದು ಸಾಮಾನ್ಯವಾಗಿ ಚಾಕೊಲೇಟ್, ಚಿಪ್ಸ್, ವೇಫರ್, ಬಿಸ್ಕತ್ತುಗಳು ಮತ್ತು ಫ್ರೈಡ್ ಚಿಕನ್, ಬರ್ಗರ್‌ಗಳು ಮತ್ತು ಫ್ರೈಗಳನ್ನು ಒಳಗೊಂಡಂತೆ ಎಲ್ಲಾ ಆಹಾರಗಳನ್ನು ಒಳಗೊಂಡಿರುತ್ತದೆ. ಈ ಆಹಾರ ಪದಾರ್ಥಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿದ್ದು, ತೂಕ ಹೆಚ್ಚಾಗಲು ಕೊಡುಗೆ ನೀಡುತ್ತವೆ. ಜೊತೆಗೆ ಹೃದಯ ಮತ್ತು ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳನ್ನು ಉಲ್ಬಣಗೊಳಿಸುತ್ತದೆ.

ಗ್ಯಾಸ್ ತುಂಬಿರುವ ಪಾನೀಯ:

ಗ್ಯಾಸ್ ತುಂಬಿರುವ ಪಾನೀಯ:

ಸಕ್ಕರೆಯುಕ್ತ ಪಾನೀಯಗಳು ನಿಮ್ಮ ದೇಹಕ್ಕೆ ಅತ್ಯಂತ ಕೆಟ್ಟದು, ಏಕೆಂದರೆ ಅವುಗಳು ಕಾರ್ಬೋನೇಟ್‌ಗಳಿಂದ ತುಂಬಿರುತ್ತವೆ. ಒಂದು ಲೋಟ ಕೋಕಾ-ಕೋಲಾದಲ್ಲಿ ಸುಮಾರು 7 ಸ್ಪೂನ್ ಸಕ್ಕರೆ ಇರುವುದರಿಂದ ಅವುಗಳು ಅಪಾರ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿವೆ, ಇದು ಎಷ್ಟು ಹಾನಿಕಾರಕ ಎಂದು ನೀವೇ ಊಹಿಸಬಹುದು.

ಆಲ್ಕೋಹಾಲ್ :

ಆಲ್ಕೋಹಾಲ್ :

ಆಲ್ಕೋಹಾಲ್ ಖಂಡಿತವಾಗಿಯೂ ಹೆಚ್ಚಿನವರು ಇಷ್ಟಪಡುವ ಪಾನೀಯವಾಗಿದೆ. ಇದು ನಿಮ್ಮ ದೇಹ ಕೊಬ್ಬನ್ನು ಸುಡುವುದನ್ನು ತಡೆಯುತ್ತದೆ. ಜೊತೆಗೆ ಹೆಚ್ಚಿನ ಹಸಿವು ಮತ್ತು ಕಡಿಮೆ ತೃಪ್ತಿಗೆ ಕಾರಣವಾಗುತ್ತದೆ. ಇದು ಕಳಪೆ ಆಹಾರ ಆಯ್ಕೆಗಳನ್ನು ಉಂಟುಮಾಡುತ್ತದೆ. ಜೊತೆಗೆ ಕಾಕ್‌ಟೈಲ್, ಜ್ಯೂಸ್ ಹಾಗೂ ಸ್ವೀಟ್‌ಗಳು ಸಹ ನಿಮ್ಮ ದೇಹದಲ್ಲಿ ಕೊಬ್ಬು ಸೃಷ್ಟಿಸಬಹುದು, ಏಕೆಂದರೆ, ಇವುಗಳಲ್ಲಿ ಇರುವ ಸಕ್ಕರೆಯ ಅಂಶವೇ ಇದಕ್ಕೆ ಮುಖ್ಯ ಕಾರಣ.

English summary

Foods to Avoid fo Arm Fat in Kannada

Here we talking about foods to avoid fo arm fat in kannada
Story first published: Thursday, February 24, 2022, 13:40 [IST]
X
Desktop Bottom Promotion