For Quick Alerts
ALLOW NOTIFICATIONS  
For Daily Alerts

ರಕ್ತ ಪರೀಕ್ಷೆಗೆ ಮುನ್ನ ಖಾಲಿ ಹೊಟ್ಟೆಯಲ್ಲಿ ಇರಬೇಕೆ?

|

ವ್ಯಕ್ತಿಯೋರ್ವರ ಆರೋಗ್ಯದ ಗುಟ್ಟನ್ನ ಹೊರಹಾಕುವುದೇ ರಕ್ತದ ವಿವಿಧ ಪರೀಕ್ಷೆಗಳು. ವೈದ್ಯರು ರೋಗಿಗಳಿಗೆ ವಿವಿಧ ಚಿಕಿತ್ಸೆಗಳನ್ನ ಸಲಹೆ ಮಾಡೋದು ಬಹುತೇಕ ಸಂದರ್ಭಗಳಲ್ಲಿ ಈ ರಕ್ತಪರೀಕ್ಷೆಗಳ ಆಧಾರದ ಮೇಲೆಯೇ. ತೋಳಿನ ರಕ್ತನಾಳದಿಂದ ಸಂಗ್ರಹಿಸಿದ ರಕ್ತ ಮಾದರಿಯ ಘಟಕಗಳ ಸವಿವರವಾದ ವಿಶ್ಲೇಷಣೆಯೇ ರಕ್ತ ಪರೀಕ್ಷೆ. ಇಂತಹ ರಕ್ತಪರೀಕ್ಷೆಯು ನಿಮ್ಮ ದೇಹದ ಮುಖ್ಯ ಅಂಗಾಂಗಗಳ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಕೊಡಲಾಗುತ್ತಿರುವ ಚಿಕಿತ್ಸೆಗಳು ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನೂ ಬಹಿರಂಗಗೊಳಿಸುತ್ತದೆ. ಮೂತ್ರಪಿಂಡಗಳ, ಯಕೃತ್ತಿನ, ಥೈರಾಯಿಡ್ ಗ್ರಂಥಿಯ, ಹಾಗೂ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳ ಪತ್ತೆಗೆ ವೈದ್ಯರು ಸರ್ವೇಸಾಮಾನ್ಯವಾಗಿ ಸಲಹೆ ಮಾಡುವುದೇ ರಕ್ತ ಪರೀಕ್ಷೆಯನ್ನ.

ಬೇರೆ ಬೇರೆ ಬಗೆಯ ರೋಗಗಳ ಪತ್ತೆಗೆ ಬೇರೆ ಬೇರೆ ಬಗೆಯ ರಕ್ತಪರೀಕ್ಷೆಗಳಿವೆ. ಅಂತೆಯೇ ರೋಗಗಳಿಗೆ ಅನುಗುಣವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೂ ಬೇರೆ ಬೇರೆಯೇ ಆಗಿರುತ್ತವೆ. ಕೆಲಬಗೆಯ ರಕ್ತಪರೀಕ್ಷೆಗಳನ್ನ ಕೈಗೊಳ್ಳುವುದಕ್ಕೆ ಮೊದಲು ರೋಗಿಯು ಉಪವಾಸವಿರಬೇಕಾದುದು ಅಗತ್ಯವಾಗಿರುತ್ತದೆ. ಅದೇ ವೇಳೆಗೆ, ಇನ್ನಿತರ ಕೆಲಬಗೆಯ ರಕ್ತಪರೀಕ್ಷೆಗಳಿಗೆ ರೋಗಿಯು ಉಪವಾಸ ಮಾಡಬೇಕಾದ ಅಗತ್ಯ ಇರುವುದಿಲ್ಲ. ಯಾವೆಲ್ಲ ರಕ್ತಪರೀಕ್ಷೆಗಳಿಗೆ ಉಪವಾಸವನ್ನಾಚರಿಸಬೇಕಾದ ಅಗತ್ಯ ಇದೆ ಅನ್ನೋದನ್ನ ಹಾಗೂ ಹಾಗೆ ಉಪವಾಸವನ್ನ ಸುರಕ್ಷಿತವಾಗಿ ಹೇಗೆ ಕೈಗೊಳ್ಳಬೇಕನ್ನೋದನ್ನ ನಾವು ಪ್ರಸ್ತುತ ಲೇಖನದಲ್ಲಿ ವಿವರಿಸಿದ್ದೇವೆ.

1. ಉಪವಾಸವು ಏಕೆ ಅವಶ್ಯಕ ?

1. ಉಪವಾಸವು ಏಕೆ ಅವಶ್ಯಕ ?

ಉಪವಾಸವೆಂದರೆ, ರಕ್ತಪರೀಕ್ಷೆಗೆ ಗುರಿಯಾಗುವ ಮೊದಲು ಏನನ್ನೇ ಆಗಲೀ ತಿನ್ನದಿರುವುದು ಅಥವಾ ಕುಡಿಯದಿರುವುದು. ಕರಾರುವಕ್ಕಾದ ಫಲಿತಾಂಶಗಳನ್ನ ಪಡೆಯೋದಕ್ಕಾಗಿ ಕೆಲ ರಕ್ತಪರೀಕ್ಷೆಗಳ ವಿಚಾರದಲ್ಲಿ ಹೀಗೆ ಉಪವಾಸ ಮಾಡೋದು ತುಂಬಾನೇ ಅಗತ್ಯ. ಘನ ಹಾಗೂ ದ್ರವಾಹಾರಗಳು ನಮ್ಮ ಹೊಟ್ಟೆಯಲ್ಲಿ ಸಣ್ಣ ಸಣ್ಣ ಅಣುಗಳಾಗಿ ವಿಘಟನೆಗೊಳ್ಳುತ್ತವೆ ಹಾಗೂ ಬಳಿಕ ಅವು ರಕ್ತಪ್ರವಾಹದಿಂದ ಹೀರಿಕೊಳ್ಳಲ್ಪಡುತ್ತವೆ. ಹೀಗಾದಾಗ, ಅದು ರಕ್ತದಲ್ಲಿನ ಸಕ್ಕರೆ, ಕಬ್ಬಿಣಾಂಶ, ಕೊಲೆಸ್ಟೆರಾಲ್ ನಂತಹ ಕೆಲ ಘಟಕಗಳ ಮಟ್ಟವನ್ನ ಬದಲಾಯಿಸುವ ಸಾಧ್ಯತೆ ಇರುತ್ತದೆ.

2, ಉಪವಾಸವನ್ನ ಅಪೇಕ್ಷಿಸುವ ರಕ್ತ ಪರೀಕ್ಷೆಗಳಿವು:

2, ಉಪವಾಸವನ್ನ ಅಪೇಕ್ಷಿಸುವ ರಕ್ತ ಪರೀಕ್ಷೆಗಳಿವು:

ಎಲ್ಲ ಬಗೆಯ ರಕ್ತಪರೀಕ್ಷೆಗಳಿಗೆ ಉಪವಾಸವಿರಬೇಕಾದ ಅಗತ್ಯವಿಲ್ಲ. ಕೆಲವು ರಕ್ತಪರೀಕ್ಷೆಗಳನ್ನ ದಿನದ ಯಾವ ಹೊತ್ತಿನಲ್ಲಾದರೂ ನಡೆಸಬಹುದು. ಹಾಗಾದರೆ ಉಪವಾಸವಿರಬೇಕಾದ ಅಗತ್ಯವನ್ನು ಬಯಸುವ ಆ ರಕ್ತಪರೀಕ್ಷೆಗಳು ಯಾವುವು ಅನ್ನೋದನ್ನ ಈಗ ನೋಡೋಣ:

3.ಫ಼ಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್

3.ಫ಼ಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್

ಈ ರಕ್ತಪರೀಕ್ಷೆಯನ್ನ ಸರ್ವೇಸಾಮಾನ್ಯವಾಗಿ ಮಧುಮೇಹಿಗಳಿಗೆ ಸಲಹೆ ಮಾಡಲಾಗುತ್ತದೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನ ಹೊರಗೆಡಹೋದು ಈ ರಕ್ತಪರೀಕ್ಷೆಯ ಉದ್ದೇಶ. ಶರೀರದಲ್ಲಿ ಗ್ಲುಕೋಸ್ ನ ಮಟ್ಟವು ಸಮತೋಲನದಲ್ಲಿದೆಯೇ ಅಥವಾ ಇಲ್ಲವೇ ಅನ್ನೋದನ್ನ ಖಚಿತಪಡಿಸಿಕೊಳ್ಳುವುದಕ್ಕಾಗಿ ಫ಼ಾಸ್ಟಿಂಗ್ ಬ್ಲಡ್ ಗ್ಲುಕೋಸ್ ಪರೀಕ್ಷೆಯನ್ನ ಮಾಡಬೇಕಾಗುತ್ತದೆ. ಈ ಪರೀಕ್ಷೆಗೆ ಒಳಪಡುವವರು, ಪರೀಕ್ಷೆಗೆ ಮೊದಲು 8 ರಿಂದ 10 ಘಂಟೆಗಳ ಕಾಲ ಉಪವಾಸವಿರಬೇಕಾಗುತ್ತದೆ.

4.ಕೊಲೆಸ್ಟೆರಾಲ್ ಟೆಸ್ಟ್

4.ಕೊಲೆಸ್ಟೆರಾಲ್ ಟೆಸ್ಟ್

ಶರೀರದಲ್ಲಿರುವ ಒಳ್ಳೆಯ ಹಾಗೂ ಕೆಟ್ಟ ಕೊಲೆಸ್ಟೆರಾಲ್ ಪ್ರಮಾಣಗಳನ್ನ ನಿರ್ಧರಿಸೋದಕ್ಕೆ ಈ ಪರೀಕ್ಷೆ ನೆರವಾಗುತ್ತದೆ. ಶರೀರದಲ್ಲಿ ಕೊಲೆಸ್ಟೆರಾಲ್ ನ ಮಟ್ಟವು ತೀರಾ ಹೆಚ್ಚಾಗಿದ್ದರೆ, ಅದು ಹೃದ್ರೋಗಕ್ಕೆ ಆಹ್ವಾನವನ್ನೀಯುತ್ತದೆ. ಅರ್ಥಾತ್ ರಕ್ತದಲ್ಲಿನ ಕೊಲೆಸ್ಟೆರಾಲ್ ನ ಪ್ರಮಾಣಕ್ಕೂ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ. ಈ ಬಗೆಯ ರಕ್ತ ಪರೀಕ್ಷೆಗೆ ಒಳಗಾಗುವವರು ಪರೀಕ್ಷೆಗೆ ಮೊದಲು 9 ರಿಂದ 12 ಘಂಟೆಗಳ ಕಾಲ ನೀರನ್ನು ಹೊರತುಪಡಿಸಿ, ಬೇರಾವುದೇ ಆಹಾರವಸ್ತುವನ್ನಾಗಲೀ, ದ್ರವ ಪದಾರ್ಥವನ್ನಾಗಲೀ ಸೇವಿಸಬಾರದು. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಈ ಪರೀಕ್ಷೆಗೂ ಉಪವಾಸದ ಅಗತ್ಯ ಇರೋದಿಲ್ಲ. ಹಾಗಾಗಿ ನಿಮ್ಮ ವೈದ್ಯರ ಸಲಹೆಯನ್ನ ಪಾಲಿಸಿ.

5. ಕಬ್ಬಿಣಾಂಶದ ಮಟ್ಟವನ್ನ ತಿಳಿದುಕೊಳ್ಳಲಿಕ್ಕಾಗಿ ರಕ್ತಪರೀಕ್ಷೆ (ಐರನ್ ಬ್ಲಡ್ ಟೆಸ್ಟ್)

5. ಕಬ್ಬಿಣಾಂಶದ ಮಟ್ಟವನ್ನ ತಿಳಿದುಕೊಳ್ಳಲಿಕ್ಕಾಗಿ ರಕ್ತಪರೀಕ್ಷೆ (ಐರನ್ ಬ್ಲಡ್ ಟೆಸ್ಟ್)

ರಕ್ತದಲ್ಲಿನ ಕಬ್ಬಿಣಾಂಶದ ಮಟ್ಟವನ್ನ ತಿಳಿಯುವುದಕ್ಕಾಗಿಯೂ ರಕ್ತ ಪರೀಕ್ಷೆಯನ್ನ ಕೈಗೊಳ್ಳುತ್ತಾರೆ. ಅದರ ಹೆಸರೇ ಐರ್ನ್ ಬ್ಲಡ್ ಟೆಸ್ಟ್. ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯುಂಟಾದಲ್ಲಿ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಈ ಪರೀಕ್ಷೆಗೆ ಒಳಗಾಗುವವರು, ಪರೀಕ್ಷೆಗೆ ಮೊದಲು, ಬೆಳಗ್ಗಿನಿಂದಲೇ ಉಪವಾಸ ಆರಂಭಿಸಬೇಕು ಹಾಗೂ ಮುಂದಿನ 24 ಘಂಟೆಗಳವರೆಗೆ ಯಾವುದೇ ಬಗೆಯ ಸಪ್ಲಿಮೆಂಟ್ ಗಳನ್ನ ಅವರು ತೆಗೆದುಕೊಳ್ಳುವಂತಿಲ್ಲ.

6. ಈ ಪರೀಕ್ಷೆಗೆ ಉಪವಾಸ ಇರಬೇಕು

6. ಈ ಪರೀಕ್ಷೆಗೆ ಉಪವಾಸ ಇರಬೇಕು

ಈ ಮೇಲಿನವುಗಳಷ್ಟೇ ಅಲ್ಲದೇ ಈ ಕೆಳಗೆ ಸೂಚಿಸಲಾಗಿರುವ ಇನ್ನಿತರ ಕೆಲಬಗೆಯ ರಕ್ತಪರೀಕ್ಷೆಗಳಿಗೂ ಉಪವಾಸವಿರಬೇಕೆಂದು ವೈದ್ಯರು ಸಲಹೆ ಮಾಡುತ್ತಾರೆ:

ಟ್ರೈಗ್ಲಿಸರೈಡ್ ಲೆವೆಲ್ ಟೆಸ್ಟ್

ಹೈ-ಡೆನ್ಸಿಟಿ ಲೈಪೋಪ್ರೋಟೀನ್ (ಹೆಚ್.ಡಿ.ಎಲ್) ಲೆವೆಲ್ ಟೆಸ್ಟ್

ಲೋ-ಡೆನ್ಸಿಟಿ ಲೈಪೋಪ್ರೋಟೀನ್ (ಎಲ್.ಡಿ.ಎಲ್) ಲೆವೆಲ್ ಟೆಸ್ಟ್

ಬೇಸಿಕ್ ಮೆಟಾಬೋಲಿಕ್ ಪ್ಯಾನೆಲ್

ರೀನಲ್ ಫ಼ಂಕ್ಷನ್ ಪ್ಯಾನೆಲ್

ಲೈಪೋಪ್ರೋಟೀನ್ ಪ್ಯಾನೆಲ್

7. ಈ ಮೇಲಿನ ಪರೀಕ್ಷೆಗಳಿಗೆ ಒಳಗಾಗುವವರು ಎಷ್ಟು ಘಂಟೆಗಳವರೆಗೆ ಉಪವಾಸವಿರಬೇಕು ?

7. ಈ ಮೇಲಿನ ಪರೀಕ್ಷೆಗಳಿಗೆ ಒಳಗಾಗುವವರು ಎಷ್ಟು ಘಂಟೆಗಳವರೆಗೆ ಉಪವಾಸವಿರಬೇಕು ?

ಯಾವ ಬಗೆಯ ರಕ್ತ ಪರೀಕ್ಷೆಗೆ ನೀವು ಒಳಗಾಗುತ್ತಿರುವಿರಿ ಅನ್ನೋದರ ಮೇಲೆ ಉಪವಾಸದ ಅವಧಿ ಅವಲಂಬಿಸಿರುತ್ತದೆ. ಬಹುತೇಕ ಪರೀಕ್ಷೆಗಳಿಗೆ 8 ಘಂಟೆಗಳವರೆಗೆ ನೀವೇನನ್ನೂ ತಿನ್ನಬಾರದೆಂದು ಸಲಹೆ ಮಾಡಲಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ, ನೀವು 12 ಘಂಟೆಗಳ ಕಾಲ ಉಪವಾಸ ಇರಬೇಕಾಗಬಹುದು.

ಇಂತಹ ರಕ್ತಪರೀಕ್ಷೆಗಳಿಗೆ ಒಳಗಾಗುವುದಕ್ಕೆ ಮೊದಲು, ಈ ಕೆಳಗಿನ ಕೆಲವು ಚಟುವಟಿಕೆಗಳನ್ನೂ ಕೈಗೊಳ್ಳಬಾರದು:

ಆಲ್ಕೋಹಾಲ್ ಸೇವನೆ: ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬಿನ ಮಟ್ಟಗಳನ್ನ ಹೆಚ್ಚಿಸುತ್ತದೆ.

ಧೂಮಪಾನ: ಧೂಮಪಾನವೂ ಸಹ ರಕ್ತಪರೀಕ್ಷೆಯ ಫಲಿತಾಂಶವನ್ನ ಬದಲಾಯಿಸಬಲ್ಲದು.

ಕೆಫೀನ್ ನ ಸೇವನೆ: ಕೆಫೀನ್ ನಿಮ್ಮ ಜೀರ್ಣಾಂಗವ್ಯೂಹಕ್ಕೆ ಹಾನಿ ಮಾಡಬಲ್ಲದು. ಹಾಗಾಗಿ ಇದನ್ನು ವರ್ಜಿಸಬೇಕು.

ವ್ಯಾಯಾಮಗಳು: ಯಾವುದೇ ರಕ್ತಪರೀಕ್ಷೆಗೆ ಒಳಪಡುವುದಕ್ಕೆ ಮೊದಲು ವ್ಯಾಯಾಮ ಮಾಡಿದರೆ ಅದು ಜೀರ್ಣಕ್ರಿಯೆಯ ವೇಗವನ್ನ ಹೆಚ್ಚಿಸುತ್ತದೆ.

ಗಮನಿಸಬೇಕಾದ ಅಂಶ:

ಉಪವಾಸವಿರುವುದು ಮುಖ್ಯವಾದರೂ ಕೂಡ, ಈ ಅವಧಿಯಲ್ಲಿ ನೀವು ನೀರನ್ನು ಕುಡಿಯಬಹುದು. ಕೆಲನಿರ್ಧಿಷ್ಟ ಔಷಧಗಳನ್ನು ನೀವು ಸೇವಿಸುತ್ತಿದ್ದಲ್ಲಿ, ಅವುಗಳ ಸೇವನೆಯನ್ನ ಕೈಬಿಡಬೇಡಿ. ನೀವು ಸೇವಿಸುವ ಆ ಜೌಷಧಗಳ ಕುರಿತಾಗಿ ಮುಂಚಿತವಾಗಿಯೇ ನಿಮ್ಮ ವೈದ್ಯರಿಗೆ ತಿಳಿಸಿಬಿಡಿ.

English summary

Fasting Before A Blood Test : All You Need To Know In Kannada

fatsing before a blood test, things you need to know, have a look, read on.
X
Desktop Bottom Promotion