For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ನಿಜಾಂಶಗಳಿವು

|

ಋತುಸ್ರಾವ ಅಥವಾ ಮುಟ್ಟಾಗುವುದು ಮಹಿಳೆಯರ ಪಾಲಿಗೆ ಅತೀ ಮಹತ್ವ ಪಡೆದ ಒಂದು ನೈಸರ್ಗಿಕ ಕ್ರಿಯೆ. ಇದರಿಂದ ಒಂದು ಹೆಣ್ಣು ಮತ್ತೊಂದು ಜೀವವನ್ನು ಸೃಷ್ಟಿಸಲು ಸಾಧ್ಯವಾಗುವುದು. ಅದರ ಜೊತೆಜೊತೆಗೆ ಈ ಮುಟ್ಟಿನ ದಿನಗಳು ಅಷ್ಟೇ ಕಿರಿಕಿರಿ ಉಂಟು ಮಾಡುತ್ತವೆ ಎಂಬುದು ಎಲ್ಲರೂ ಕಂಡು ಕೇಳಿರ್ತೀರಾ. ಆದರೆ ಈ ಮುಟ್ಟಿನ ಬಗ್ಗೆ ಕೆಲವೊಂದು ಅಪನಂಬಿಕೆಗಳು ಸುತ್ತುವರಿದಿವೆ. ಅಂತಹಗಳನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅವುಗಳಾವುವು? ಯಾವುದು ನಿಜವಾದ ಅಂಶಗಳು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಋತುಸ್ರಾವದ ಕುರಿತು ತಿಳಿದುಕೊಳ್ಳಲೇಬೇಕಾದ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ:

1. ಮುಟ್ಟಿನ ದಿನಗಳಲ್ಲೂ ಗರ್ಭಧಾರಣೆ ಸಾಧ್ಯ:

1. ಮುಟ್ಟಿನ ದಿನಗಳಲ್ಲೂ ಗರ್ಭಧಾರಣೆ ಸಾಧ್ಯ:

ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಗರ್ಭಧಾರಣೆಗೆ ಕಾರಣವಾಗುವುದಿಲ್ಲ ಎಂಬ ವ್ಯಾಪಕ ನಂಬಿಕೆ ಇದೆ. ಗರ್ಭಧರಿಸುವ ಸಾಧ್ಯತೆಗಳು ಕಡಿಮೆ ಇದ್ದರೂ, ಅದು ಸಂಪೂರ್ಣವಾಗಿ ಅಸಾಧ್ಯವಲ್ಲ. ಇದು ನಿಮ್ಮ ಅಂಡೋತ್ಪತ್ತಿ ಮತ್ತು ಋತುಚಕ್ರದ ದಿನಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಮುಟ್ಟಿನ ಅವಧಿ ಕಡಿಮೆಯಿದ್ದು, ಕೊನೆಯ ದಿನಗಳಲ್ಲಿ ಸಂಭೋಗ ನಡೆಸಿದರೆ, ನೀವು ಗರ್ಭಿಣಿಯಾಗುವ ಸಾಧ್ಯತೆಯಿದೆ. ಏಕೆಂದರೆ ವೀರ್ಯಗಳು ನಿಮ್ಮ ದೇಹದಲ್ಲಿ ಒಂದೆರಡು ದಿನಗಳವರೆಗೆ ವಾಸಿಸುತ್ತವೆ ಆಗ ಅಂಡೋತ್ಪತ್ತಿ ಕೂಡ ಆಗುತ್ತವೆ.

2. ಮುಟ್ಟಿನ ದಿನಾಂಕಗಳು ಬದಲಾಗುತ್ತಲೇ ಇರುತ್ತವೆ:

2. ಮುಟ್ಟಿನ ದಿನಾಂಕಗಳು ಬದಲಾಗುತ್ತಲೇ ಇರುತ್ತವೆ:

ನಿಮ್ಮ ಮುಟ್ಟಿನ ದಿನಾಂಕ ನಿಮಗೆ ನೆನಪಿದೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಮುಂದಿನ ತಿಂಗಳು ಅವರು ವಿಳಂಬವಾಗಿರುವದನ್ನು ಸಹ ನೀವು ಗಮನಿಸಬಹುದು. ಇದು ಸಾಮಾನ್ಯ ಪ್ರಕ್ರಿಯೆ. ನಿಮ್ಮ ಮುಟ್ಟಿನ ದಿನಾಂಕ, ನಿಮ್ಮ ನಡವಳಿಕೆ, ವಯಸ್ಸಿನ ಜೊತೆ ವಿಕಸನಗೊಳ್ಳಬಹುದು. ಹಾರ್ಮೋನುಗಳ ಬದಲಾವಣೆಗಳು, ಒತ್ತಡ, ತೂಕ ಮತ್ತು ವಯಸ್ಸು ನಿಮ್ಮ ಮುಟ್ಟಿನ ಚಕ್ರದ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಾಗಿವೆ. ನಿಮ್ಮ ದೇಹವು ಕ್ರಮೇಣ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ಗುರುತಿಸಲು ಕಲಿಯುತ್ತದೆ.

3. ಒಂದು ತಿಂಗಳು ಮುಟ್ಟಾಗದಿದ್ದರೆ ಗರ್ಭಧಾರಣೆ ಎಂದಲ್ಲ:

3. ಒಂದು ತಿಂಗಳು ಮುಟ್ಟಾಗದಿದ್ದರೆ ಗರ್ಭಧಾರಣೆ ಎಂದಲ್ಲ:

ನೀವು ಒಂದು ತಿಂಗಳು ಮುಟ್ಟಾಗದಿದ್ದರೆ, ಗರ್ಭಿಣಿಯಾಗಿದ್ದೀರಿ ಎಂಬ ತೀರ್ಮಾನಕ್ಕೆ ಹೋಗಬೇಡಿ. ಮುಟ್ಟಾಗದಿರುವುದು ಯಾವಾಗಲೂ ಗರ್ಭಧಾರಣೆಯನ್ನೇ ಸೂಚಿಸುವುದಿಲ್ಲ. ಈ ಗೊಂದಲ ಪರಿಹಾರಕ್ಕಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮುಟ್ಟಾಗದಿರುವುದು ಅಥವಾ ತಡವಾಗಿ ಆಗುವುದಕ್ಕೆ ಸಂಬಂಧಿಸಿದಂತೆ, ಹಲವಾರು ಕಾರಣಗಳಿವೆ. ಸ್ತ್ರೀ ಹಾರ್ಮೋನುಗಳು ನಿಮ್ಮ ದಿನಾಂಕಗಳನ್ನು ವಿಳಂಬಗೊಳಿಸಬಹುದು ಅಥವಾ ಇದು ಮತ್ತೊಂದು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು. ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

4. ರಕ್ತ ಯಾವಾಗಲೂ ಕೆಂಪು ಬಣ್ಣದ್ದೇ ಆಗಿರಬೇಕಿಲ್ಲ:

4. ರಕ್ತ ಯಾವಾಗಲೂ ಕೆಂಪು ಬಣ್ಣದ್ದೇ ಆಗಿರಬೇಕಿಲ್ಲ:

ಋತುಸ್ರಾವದ ಸಮಯದಲ್ಲಿ ನಿಮ್ಮ ದೇಹದಿಂದ ಹೊರಬರುವ ರಕ್ತವು ಕೆಂಪು ಬಣ್ಣದ್ದೇ ಆಗಿರಬೇಕಾಗಿಲ್ಲ. ಇದು ಕೆಂಪು, ಕಂದು ಅಥವಾ ಗುಲಾಬಿ ಬಣ್ಣದ ವಿವಿಧ ಛಾಯೆಗಳನ್ನು ಹೊಂದಿರಬಹುದು. ಹಾರ್ಮೋನುಗಳು ಮತ್ತು ಆರೋಗ್ಯ ಪರಿಸ್ಥಿತಿಗಳು ಮುಟ್ಟಿನ ರಕ್ತದ ಬಣ್ಣವನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ಗುಲಾಬಿ ಬಣ್ಣದ ರಕ್ತವು ದೇಹದಲ್ಲಿ ಕಡಿಮೆ ಈಸ್ಟ್ರೊಜೆನ್ ಮಟ್ಟವನ್ನು ಸೂಚಿಸುವುದು ಅಥವಾ ನೀವು ರಕ್ತಹೀನತೆ ಹೊಂದಿದ್ದೀರಿ ಎಂದರ್ಥ. ಆದರೆ, ನೀವು ಯಾವುದೇ ರೀತಿಯ ಸ್ವಯಂ-ರೋಗನಿರ್ಣಯವನ್ನು ಮಾಡಬಾರದು. ನಿಮ್ಮ ಮುಟ್ಟಿನ ರಕ್ತದ ಬಣ್ಣದಲ್ಲಿ ಬದಲಾವಣೆಯನ್ನು ಗಮನಿಸಿದರೆ, ವೈದ್ಯರನ್ನು ಸಂಪರ್ಕಿಸಿ.

5. ಸ್ಯಾನಿಟರಿ ಪ್ಯಾಡ್‌ಗಳನ್ನು ಮೀರಿದ ಜೀವನವಿದೆ:

5. ಸ್ಯಾನಿಟರಿ ಪ್ಯಾಡ್‌ಗಳನ್ನು ಮೀರಿದ ಜೀವನವಿದೆ:

ಮುಟ್ಟಿನ ದಿನಗಳನ್ನು ಎದುರಿಸಲು ಹಲವಾರು ಪರಿಸರ ಸ್ನೇಹಿ ಮಾರ್ಗಗಳಿವೆ. ನೀವು ಮುಟ್ಟಿನ ಕಪ್ಗಳು, ಪಿರಿಯಡ್ ಪ್ಯಾಂಟಿ ಮತ್ತು ಮರುಬಳಕೆ ಮಾಡಬಹುದಾದ ಬಟ್ಟೆ ಪ್ಯಾಡ್‌ಗಳನ್ನು ಬಳಸಬಹುದು. ಇವು ಸುಸ್ಥಿರ ಪರ್ಯಾಯಗಳಾಗಿದ್ದು ಕಡಿಮೆ ತ್ಯಾಜ್ಯವನ್ನು ಸೃಷ್ಟಿಸುತ್ತವೆ. ಸ್ಯಾನಿಟರಿ ಪ್ಯಾಡ್‌ಗಳು ಇಷ್ಟು ದಿನ ಜನಪ್ರಿಯವಾಗಿದ್ದವು, ಆದರೆ ಈಗೀಗ ಹಲವಾರು ಪರಿಸರ ಸ್ನೇಃಇ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದು, ನಿಮಗೆ ಸೂಕ್ತವಾಗಿರುವದನ್ನು ಆಯ್ಕೆ ಮಾಡಿ, ಬಳಸಬಹುದು.

English summary

Facts About Periods in Kannada

Here we talking about Facts About Periods in Kannada, read on
Story first published: Friday, June 18, 2021, 17:58 [IST]
X
Desktop Bottom Promotion