For Quick Alerts
ALLOW NOTIFICATIONS  
For Daily Alerts

ಇಂಥಾ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಸಲೇಬೇಡಿ

|

ಮನುಷ್ಯ ಎಂದ ಮೇಲೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಆಗಾಗ ಕಾಡುವುದು ಸಹಜ. ಆದರೆ ಬರುವ ಎಲ್ಲಾ ಸಮಸ್ಯೆಗಳನ್ನು ತೀರಾ ಗಂಭೀರವಾಗಿಯೂ ಪರಿಗಣಿಸುವಂತಿಲ್ಲ, ಹಾಗಂತ ನಿರ್ಲಕ್ಷ್ಯವೂ ಸಲ್ಲದು.

health issues

ಅಂಥಾ ಕೆಲವು ಸಮಸ್ಯೆಗಳಲ್ಲಿ ನಾವು ತೀರಾ ಕಡೆಗಣಿಸುವ ಹಾಗೂ ಆದರೆ ನಿರ್ಲಕ್ಷಕ್ಕೆ ಸಲ್ಲದ ಆರೋಗ್ಯ ಸಮಸ್ಯೆಗಳ ಬಗ್ಗೆ ನಾವಿಲ್ಲಿ ಚರ್ಚಿಸುತ್ತಿದ್ದೇವೆ.

ಕೆಲವು ಸಮಸ್ಯೆಗಳು ನಮಗೆ ಎಲ್ಲರ ಮುಂದೆ ಅವಮಾನಕ್ಕೆ ಈಡು ಮಾಡಿದರೆ, ಕೆಲವು ನಮ್ಮ ದೈಹಿಕ ಆರೋಗ್ಯಕ್ಕೆ ಕುತ್ತು ತರುತ್ತದೆ. ಅವು ಯಾವುವು ಎಂದು ಮುಂದೆ ತಿಳಿಯೋಣ:

ತುರಿಕೆ

ತುರಿಕೆ

ತುರಿಕೆ ಅತ್ಯಂತ ಕಿರಿಕಿರಿಯುಂಟು ಮಾಡುವ ಸಮಸ್ಯೆ. ಸಾರ್ವಜನಿಕ ಸಭೆಗಳಲ್ಲಿ, ಸಮಾರಂಭಗಳಲ್ಲಿ, ಅತಿಥಿಗಳ ಮುಂದೆ ತುರಿಕೆ ಉಂಟಾದರೆ ಅದು ಅತ್ಯಂತ ಮುಜುಗರದ ಕ್ಷಣವಾಗಿರುತ್ತದೆ. ಇದರಿಂದ ನಮ್ಮ ಬಗೆಗಿನ ಅವರ ಅಭಿಪ್ರಾಯವೇ ಬದಲಾಗಬಹುದು. ಇಂಥಾ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷಿಬೇಡಿ, ಮನೆಮದ್ದಿನ ಮೂಲಕ ಅಥವಾ ವೈದ್ಯರನ್ನು ಕಾಣುವ ಮೂಲಕ ಸಮಸ್ಯೆಯಿಂದ ನಿಮ್ಮನ್ನು ಗುಣಪಡಿಸಿಕೊಳ್ಳುವುದು ಉತ್ತಮ.

ಕೆಟ್ಟ ಉಸಿರಾಟದ

ಕೆಟ್ಟ ಉಸಿರಾಟದ

ಕಚೇರಿಯಲ್ಲಿ ಸಹೋದ್ಯೋಗಿ ಅಥವಾ ಸಂಬಂಧಿಕರ ಮುಂದೆ ಮಾತನಾಡುವಾಗ ನಿಮ್ಮ ಉಸಿರಾಟದಿಂದ ಕೆಟ್ಟ ವಾಸನೆ ಬರುತ್ತಿದೆ ಎಂದಾದರೆ ಖಂಡಿತಾ ಅವರು ನಿಮ್ಮಿಂದ ನಿಧಾನವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ನಿಮ್ಮ ಹಿಂದೆ ನಿಮ್ಮ ಬಗ್ಗೆಯೇ ನಕಾರಾತ್ಮಕವಾಗಿ ಸಹ ಮಾತನಾಡುತ್ತಾರೆ. ಬಾಯಿಯ ದುರ್ವಾಸನೆ ಅನಾರೋಗ್ಯದ ಸಂಕೇತವೂ ಹೌದು ಈ ಬಗ್ಗೆ ಎಚ್ಚರವಿರಲಿ.

ಆದ್ದರಿಂದ ಯಾವುದೇ ನಿರ್ಲಕ್ಷ್ಯ ಮಾಡದೇ ಕೂಡಲೇ ಇದಕ್ಕೆ ಅಗತ್ಯ ಚಿಕಿತ್ಸೆ ಪಡೆಯುವುದು ಉತ್ತಮ.

ನೋವಿನ ಸ್ಖಲನ

ನೋವಿನ ಸ್ಖಲನ

ಲೈಂಗಿಕ ಸಂಪರ್ಕದ ವೇಳೆ ಸಂತೋಷವಾಗಿರುವುದರ ಬದಲಾಗಿ ಸ್ಖಲನದ ವೇಳೆ ಯಾವುದೇ ನೋವು ಅನುಭವಿಸುತ್ತಿದ್ದರೆ ಅಥವಾ ಡಿಸ್ಚಾರ್ಜ್‌ನಿಂದ ಬಳಲುತ್ತಿದ್ದರೆ ಕೂಡಲೇ ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಒಳಿತು. ಇಂಥಾ ಸಮಸ್ಯೆಗಳ ಬಗ್ಗೆ ನಾಚಿಕೆ ಪಡುವ ಅಗತ್ಯವಿಲ್ಲ, ಮುಕ್ತವಾಗಿ ವೈದ್ಯರೊಂದಿಗೆ ಚರ್ಚಿಸುವುದರಿಂದ ಮತ್ತೆ ಈ ಸಮಸ್ಯೆ ಮರುಕಳಿಸದಂತೆ ತಡೆಯಬಹುದು.

ಬೆವರು ಸಮಸ್ಯೆ

ಬೆವರು ಸಮಸ್ಯೆ

ಬೇಸಿಗೆಯ ಕಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಬೆವರುವುದು. ಇದು ಬಿಸಿಲಿನಿಂದ ಎದುರಾದ ಬೆವರಾದರೆ ಚಿಂತೆ ಪಡುವ ಅಗತ್ಯವಿಲ್ಲ, ಕೆಲವರಿಗೆ ಈ ಬೆವರು ಎಲ್ಲಾ ಕಾಲಮಾನದಲ್ಲೂ ಬರುತ್ತದೆ. ಅವರೇನೂ ದೈಹಿಕ ಶ್ರಮ ಪಡೆದಿದ್ದರೂ ಬೆವರಿನ ಸಮಸ್ಯೆ ಇರುತ್ತದೆ. ಇದು ನಂತರ ಮೊಡವೆ, ಬೆವರು ಗುಳ್ಳೆ, ತ್ವಚೆ ಕಪ್ಪಾಗುವುದು ಹೀಗೆ ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಅಲ್ಲದೇ ಅನಗತ್ಯವಾಗಿ ಬಳಸುವ ಡಿಯೋಡರೆಂಟ್‌ಗಳು, ಸುಗಂಧದ್ರವ್ಯಗಳು ಸಹ ಇದಕ್ಕೆ ಕಾರಣವಾಗಬಹುದು. ಇಂಥಾ ಸಮಸ್ಯೆಯನ್ನು ಕಡೆಗಣಿಸುವುದು ಸೂಕ್ತವಲ್ಲ.

ಮೂತ್ರದಲ್ಲಿ ರಕ್ತ

ಮೂತ್ರದಲ್ಲಿ ರಕ್ತ

ಇದ್ದಕ್ಕಿಂದ್ದಂತೆ ನಿಮ್ಮ ಮೂತ್ರದಲ್ಲಿ ರಕ್ತ ಬರುತ್ತಿದೆ ಎಂದಾದರೆ ನೀವು ಗಂಭೀರ ಸಮಸ್ಯೆಗೆ ತುತ್ತಾಗಿದ್ದೀರಿ ಎಂದರ್ಥ. ಈ ಬಗ್ಗೆ ಮನೆಯವರೊಂದಿಗೆ ಹಂಚಿಕೊಳ್ಳಲು ಮುಜುಗರ ಪಡುವ ಅಗತ್ಯವಿಲ್ಲ, ಇದು ಮತ್ತೊಂದು ಹಂತದ ಸಮಸ್ಯೆಗೆ ದಾರಿಮಾಡಿಕೊಡಬಹುದು. ಸಮಸ್ಯೆ ಎದುರಾದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಮಾಲೋಚಿಸುವುದು ಉತ್ತಮ.

English summary

Embarrassing health issues you should never ignore

Here we are discussing about Embarrassing health issues you should never ignore. The most awkward and irritating time in any persons life is related with some of their health issues. Lets have a look on some of these types of problems. Read more.
X
Desktop Bottom Promotion