For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ನಿತ್ಯ ಬ್ರೆಡ್‌ ಸೇವಿಸುತ್ತಿದ್ದೀರಾ, ಈ ಕೆಟ್ಟ ಅಭ್ಯಾಸ ಇಂದೇ ಬಿಟ್ಟುಬಿಡಿ

|

ನಮ್ಮ ಆರೋಗ್ಯ ಕಾಪಾಡುವಲ್ಲಿ ಬೆಳಗಿನ ಉಪಹಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಮಯದಲ್ಲಿ ಇಡೀ ದಿನಕ್ಕೆ ಅಗತ್ಯವಾದ ಪೋಷಕಾಂಶಗಳು ದೇಹಕ್ಕೆ ಸೇರಬೇಕು. ಆದರೆ ಬಹುತೇಕರು ಕೆಲಸದ ಒತ್ತಡವೋ, ಅಲಸ್ಯವೋ ಅಥವಾ ಇತರೆ ಕಾರಣಗಳಿಂದ ಇದನ್ನೇ ಕಡೆಗಣಿಸುತ್ತಾರೆ.

ದೀಢೀರ್‌ ಆಗಿ ತಯಾರಿಸಬಹುದಾದ ಬ್ರೇಕ್‌ಫಾಸ್ಟ್‌ಗಳನ್ನು ತಯಾರಿಸಿ ಸೇವಿಸುತ್ತಾರೆ, ಇದರಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶ ಇದೆಯೋ ಇಲ್ಲವೋ ಯೋಚಿಸುವುದಿಲ್ಲ. ಆ ಸಮಯಕ್ಕೆ ಹೊಟ್ಟೆ ತುಂಬುವುದಷ್ಟೇ ಇವರಿಗೆ ಆದ್ಯತೆಯಾಗಿರುತ್ತದೆ.

ಈ ಅವಸರದ ಬ್ರೇಕ್‌ಫಾಸ್ಟ್‌ಗಳಲ್ಲಿ ಒಂದು ಬ್ರೆಡ್‌. ಇದನ್ನೇ ಅಭ್ಯಾಸ ಮಾಡುತ್ತಾ ಹೋದರೆ ನಂತರ ಅವರು ಅನಾರೋಗ್ಯಕ್ಕೆ ಒಳಗಾಗುವುದು ಖಚಿತ, ಬಿಳಿ ಬ್ರೆಡ್ನ ಈ ಉಪಹಾರವು ನಿಮ್ಮ ದೇಹಕ್ಕೆ ಎಷ್ಟು ಹಾನಿಕಾರಕವಾಗಿದೆ, ತಿಳಿಯದೆ ನಿಮ್ಮ ದೇಹವನ್ನು ನೀವೆ ಅನಾರೋಗ್ಯದೆಡೆಗೆ ದೂಡುತ್ತಿದ್ದೀರಿ.

ನೀವು ಬೆಳಗಿನ ಉಪಾಹಾರಕ್ಕಾಗಿ ಬ್ರೆಡ್ ಸೇವಿಸಿದರೆ ಮುಂದೆ ನೀವು ಯಾವೆಲ್ಲಾ ಅನಾರೋಗ್ಯ ಸಮಸ್ಯೆ ಎದುರಿಸಬಹುದು ಮುಂದೆ ನೋಡಿ:

ಮಲಬದ್ಧತೆ

ಮಲಬದ್ಧತೆ

ಬಿಳಿ ಬ್ರೆಡ್ ಹೊಟ್ಟು ಮುಕ್ತವಾಗಿದೆ, ಅತ್ಯಲ್ಪ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಆಹಾರದ ನಿಧಾನ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಿತ್ಯವೂ ಬ್ರೆಡ್ ಸೇವನೆ ಮಾಡಿದರೆ ಮುಂದೆ ಮಲಬದ್ಧತೆ ಸಮಸ್ಯೆ ಬರಲು ಇದೇ ಕಾರಣವಾಗಬಹುದು.

ಬೊಜ್ಜು

ಬೊಜ್ಜು

ಆರೋಗ್ಯದ ಬಗ್ಗೆ ಅನೇಕ ಸಂಶೋಧನೆಗಳು ಹೇಳುತ್ತವೆ ತೂಕ ಇಳಿಸಿಕೊಳ್ಳಲು ಬಯಸುವ ಜನರು ತಮ್ಮ ಆಹಾರದಿಂದ ಬಿಳಿ ಬ್ರೆಡ್ ಅನ್ನು ಕಡಿತಗೊಳಿಸಬೇಕು ಎಂದು. ಬಿಳಿ ಬ್ರೆಡ್ ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ತ್ವರಿತವಾಗಿ ಕಡಿಮೆಯಾದಾಗ, ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ ಮತ್ತು ಅವನು ಮತ್ತೆ ಮತ್ತೆ ತಿನ್ನುತ್ತಾನೆ. ಇದರಿಂದ ಅವರ ಬೊಜ್ಜು ಹೆಚ್ಚುತ್ತದೆ.

ಹೊಟ್ಟೆ ಕೆಡುವುದು

ಹೊಟ್ಟೆ ಕೆಡುವುದು

ಪ್ರತಿದಿನ ಬ್ರೆಡ್ ತಿನ್ನುವುದರಿಂದ, ವ್ಯಕ್ತಿಯ ಹೊಟ್ಟೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಬಿಳಿ ಬ್ರೆಡ್ ಹೆಚ್ಚು ಪಿಷ್ಟದ ಉತ್ಪನ್ನವಾಗಿದೆ. ಕಂದು ಬ್ರೆಡ್ಗಿಂತ ಭಿನ್ನವಾಗಿ, ಇದು ಫೈಬರ್ ಅನ್ನು ಹೊಂದಿರುವುದಿಲ್ಲ. ಇದಲ್ಲದೆ ಬಿಳಿ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಗ್ಲುಟನ್ ಕಂಡುಬರುತ್ತದೆ, ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆ ನೋವು, ಭೇದಿ, ವಾಂತಿ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು.

English summary

Eating bread at breakfast, then these deadly disease can happen

Here we are discussing about Eating bread at breakfast, then these deadly disease can happen. Read more.
X
Desktop Bottom Promotion