For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ಬಳಿಕ ಹೆಣ್ಮಕ್ಕಳು ಚಿಕ್ಕ ಪ್ರಾಯದಲ್ಲಿ ಋತುಮತಿಯಾಗುತ್ತಿದ್ದಾರೆ, ಏಕೆ? ಇದರ ಅಪಾಯಗಳೇನು?

|

ಕೊರೊನಾ ಎಂಬಾ ಮಹಾಮಾರಿ ಮನುಷ್ಯರ ಜೀವನದಲ್ಲಿ ಹಲವಾರು ಜೀವನದಲ್ಲಿ ಪರಿಣಾಮ ಬೀರುತ್ತಲೇ ಇದೆ. ಕೊರೊನದಿಂದಾಗಿ ಇಂದು ಹೃದಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದೆ. ಅದಲ್ಲದೆ ಕೊರೊನಾದ ಬಳಿಕ ಹೆಣ್ಮಕ್ಕಳು ತುಂಬಾ ಚಿಕ್ಕ ಪ್ರಾಯದಲ್ಲಿ ವಯಸ್ಸಿಗೆ ಬರ್ತಾ ಇದ್ದಾರೆ. ತುಂಬಾ ಚಿಕ್ಕ ಪ್ರಾಯದಲ್ಲಿ ಋತುಮತಿಯಾಗುತ್ತಿರುವುದು ಹೊಸತೇನೂ ಅಲ್ಲ, ಆದರೆ ಕೊರೊನಾ ಬಂದ ಮೇಲೆ ತುಂಬಾ ಚಿಕ್ಕ ಪ್ರಾಯದಲ್ಲಿ ಋತುಮತಿಯಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಕ್ಕಳ ತಜ್ಞರು ಹೇಳುತ್ತಿದ್ದಾರೆ.

Early Periods Among Girls

ತುಂಬಾ ಮಕ್ಕಳು ವಯಸ್ಸು 10 ವರ್ಷದೊಳಗೆ, ಕೆಲವರಂತ 8-9 ವರ್ಷದೊಳಗೆ ಋತುಮತಿಯಾಗುತ್ತಿದ್ದಾರೆ. ಏನೂ ತಿಳಿಯದ ವಯಸ್ಸು ಅದು, ಆ ಪ್ರಾಯದಲ್ಲಿ ಋತುಚಕ್ರ ಪ್ರಾರಂಭವಾದರೆ ಮಕ್ಕಳಿಗೆ ಏನೂ ತಿಳಿಯಲ್ಲ ಎಂಬ ಆತಂಕ ಪೋಷಕರಲ್ಲಿದೆ.

ಕೊರೊನಾ ಲಾಕ್‌ಡೌನ್‌ ಬಳಿಕ ಈ ಸಮಸ್ಯೆ ಹೆಚ್ಚಾಗಿದೆ

ಕೊರೊನಾ ಲಾಕ್‌ಡೌನ್‌ ಬಳಿಕ ಈ ಸಮಸ್ಯೆ ಹೆಚ್ಚಾಗಿದೆ

ತುಂಬಾ ಮಕ್ಕಳಿಗೆ 5 ವರ್ಷಗಳಿರುವಾಗಲೇ ಸ್ತನಗಳು ಮೂಡುತ್ತಿವೆ, 8 ವರ್ಷ ತುಂಬುವಷ್ಟರಲ್ಲಿ ವಯಸ್ಸಿಗೆ ಬರುತ್ತಿದ್ದಾರೆ.

ಆಹಾರಶೈಲಿ, ಜೀವನಶೈಲಿ ಈ ಎಲ್ಲಾ ಕಾರಣಗಳಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ.

ಮಕ್ಕಳು ಬೇಗನೆ ಋತುಮತಿಯಾಗುತ್ತಿರುವುದು ಪೋಷಕರ ಚಿಂತೆ ಹೆಚ್ಚಿಸಿದೆ

ಮಕ್ಕಳು ಬೇಗನೆ ಋತುಮತಿಯಾಗುತ್ತಿರುವುದು ಪೋಷಕರ ಚಿಂತೆ ಹೆಚ್ಚಿಸಿದೆ

ಮಕ್ಕಳಿಗೆ ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ತಿಳಿಸಿಕೊಡುತ್ತೇವೆ. ಆದರೆ ಮಕ್ಕಳು ಋತುಮತಿಯಾದಾಗ ತಮ್ಮ ಹೆಣ್ಮಕ್ಕಳ ಬಗ್ಗೆ ಜವಾಬ್ದಾರಿ, ಚಿಂತೆ ಸಹಜವಾಗಿಯೇ ಪೋಷಕರಿಗೆ ಹೆಚ್ಚಾಗುತ್ತೆ. ಅಲ್ಲದೆ ಅವರು ಬಟ್ಟೆ ಬದಲಾಯಿಸುವಾಗ ಬೇರೆಯವರ ಮುಂದೆ ಬಟ್ಟೆ ಬದಲಾಯಿಸಬೇಡಿ, ಕೂರುವಾಗ ಸರಿಯಾಗಿ ಕೂರು ಹೀಗೆ ಮಕ್ಕಳಿಗೆ ಹೇಳುವಾಗ ಏನೂ ತಿಳಿಯದ ಪ್ರಾಯವದು, ಅಪ್ಪ-ಅಮ್ಮ ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂದು ಮಕ್ಕಳಿಗೂ ಪೋಷಕರ ಮೇಲೆ ಕೋಪಬರಬಹುದು.

ಇನ್ನು ಪೋಷಕರಿಗೆ ತಮ್ಮ ಮಗಳ ಸುರಕ್ಷತೆ ಚಿಂತೆ ಹೆಚ್ಚಾಗಿ ಕಾಡುತ್ತದೆ. ಏಕೆಂದರೆ ಆ ಪ್ರಾಯದಲ್ಲಿ ಮಕ್ಕಳಿಗೆ ಏನೂ ತಿಳಿದಿರುವುದಿಲ್ಲ. ಇದರಿಂದಾಗಿ ಅವರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ದೈಹಿಕವಾದ ಬದಲಾವಣೆ

ದೈಹಿಕವಾದ ಬದಲಾವಣೆ

ಒಂದು ಕಡೆ ಮನೆಯಲ್ಲಿ ಅಪ್ಪ-ಅಮ್ಮ ಪದೇ ಪದೇ ಡ್ರೆಸ್ಸಿಂಗ್‌, ವರ್ತನೆ ಇದರ ಬಗ್ಗೆ ಹೇಳುತ್ತಿರುವಾಗ ಅದು ಒಂದು ರೀತಿ ಮಕ್ಕಳಿಗೆ ಕಿರಿಕಿರಿ ಅನಿಸುತ್ತದೆ ಅದರ ಜೊತೆಗೆ ಆಗುವ ದೈಹಿಕ ಬದಲಾವಣೆ ಕೂಡ ಮಕ್ಕಳ ಮೇಲೆ ಪರಿಣಾಮ ಬೀರಬಹುದು, ಅಲ್ಲದೆ ಮಕ್ಕಳ ಎತ್ತರ ಬೆಳವಣಿ ಮೇಲೆ ಕೂಡ ಪರಿಣಾಮ ಬೀರುವುದು.

 ಬೇಗನೆ ಋತುಮತಿಯಾದರೆ ಆರೋಗ್ಯ ಸಮಸ್ಯೆ

ಬೇಗನೆ ಋತುಮತಿಯಾದರೆ ಆರೋಗ್ಯ ಸಮಸ್ಯೆ

ಬೇಗನೆ ಋತುಮತಿಯಾದ ಶೇ. 30ರಷ್ಟು ಮಕ್ಕಳು ದೊಡ್ಡವರಾದಾಗ ಅವರಿಗೆ ಪಿಸಿಒಎಸ್‌ ಸಮಸ್ಯೆ ಕಂಡು ಬರುತ್ತಿದೆ. ಅಲ್ಲದೆ ತುಂಬಾ ಕಾಲ ಅಧಿಕ ಈಸ್ಟ್ರೋಜಿನ್‌ನಿಂದಾಗಿ ಸ್ತನ ಕ್ಯಾನ್ಸರ್‌ ಆಗುವ ಸಾಧ್ಯತೆ ಕೂಡ ಹೆಚ್ಚಿದೆ.

ಕೋವಿಡ್‌ 19 ಲಾಕ್‌ಡೌನ್ ಬಳಿಕ ಮಕ್ಕಳು ಬೇಗನೆ ಋತುಮತಿಯಾಗಲು ಕಾರಣವೇನು?

ಕೋವಿಡ್‌ 19 ಲಾಕ್‌ಡೌನ್ ಬಳಿಕ ಮಕ್ಕಳು ಬೇಗನೆ ಋತುಮತಿಯಾಗಲು ಕಾರಣವೇನು?

ಕೊರೊನಾ ಲಾಕ್‌ಡೌನ್‌ ನಮ್ಮೆಲ್ಲರ ಜೀವನಶೈಲಿಯನ್ನೇ ಬದಲಾಯಿಸಿತ್ತು, ಮಕ್ಕಳು ಮನೆಯಲ್ಲಿಯೇ ಇದ್ದರು. ಶಾಲೆಗೆ ಅಂತ ಓಡಾಟವಿಲ್ಲ, ಹೊರಗಡೆ ಹೋಗುವಂತಿಯಲ್ಲ ಮನೆಯೊಳಗಡೆ ಟಿವಿ, ಮೊಬೈಲ್‌ ನೋಡಿ ಕಾಲ ಕಳೆಯಲಾರಂಭಿಸಿದರು, ಇದರಿಂದಾಗಿ ಅವರ ಚಯಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿತ್ತು. ಮಕ್ಕಳ ಮೈ ತೂಕ ಹೆಚ್ಚಾದಾಗ ವಯಸ್ಸು ಚಿಕ್ಕದಾದರೂ ಮಕ್ಕಳು ಬೇಗನೆ ಋತುಮತಿಯಾಗಲಾರಂಭಿಸಿದರು.

ಮಕ್ಕಳು ಬೇಗನೆ ಋತುಮತಿಯಾದರೆ ಏನು ಮಾಡಬೇಕು?

ಮಕ್ಕಳು ಬೇಗನೆ ಋತುಮತಿಯಾದರೆ ಏನು ಮಾಡಬೇಕು?

ಮಕ್ಕಳು ಬೇಗನೆ ಋತುಮತಿಯಾದಾಗ ಮಕ್ಕಳಿಗೆ ಪೋಷಕರು ದೇಹದಲ್ಲಿಯಾಗುವ ಬದಲಾವಣೆ ಬಗ್ಗೆ ಹೇಳಬೇಕಾಗುತ್ತೆ, ಅಲ್ಲದೆ ಬೇಗನೆ ಋತುಮತಿಯಾದರೆ ಎತ್ತರ ಬೆಳೆಯುವುದು ಕಡಿಮೆಯಾಗಬಹುದು. ಇದನ್ನು ತಡೆಗಟ್ಟಲು ಹಾರ್ಮೋನ್‌ ಟ್ರೀಟ್ಮೆಂಟ್ ಅಥವಾ TSH ಟ್ರೀಟ್ಮೆಂಟ್‌ ತೆಗೆದುಕೊಳ್ಳಬೇಕು.

ಆದರೆ ಇದಕ್ಕೆ ತುಂಬಾ ಖರ್ಚಾಗುವುದು, ಇದು ಸಾಧ್ಯವಾಗದವರು ಮಕ್ಕಳಿಗೆ ಮಾನಸಿಕ ಬೆಂಬಲ ಹಾಗೂ ಭರವಸೆ ತುಂಬಬೇಕಾಗುತ್ತೆ.

English summary

Covid-19 Triggers Early Periods Among Girls Finds Study

Why after covid 19 many small girls getting period in their early age, reason and complication read on...
Story first published: Friday, October 21, 2022, 13:46 [IST]
X
Desktop Bottom Promotion