For Quick Alerts
ALLOW NOTIFICATIONS  
For Daily Alerts

ಬೇರೆ ಪಾನೀಯ ತ್ಯಜಿಸಿ, ಸಾಕಷ್ಟು ನೀರು ಕುಡಿಯಿರಿ

|

ನಮ್ಮ ದೇಹದ ಶೇ.75ರಷ್ಟು ನೀರಿನಾಂಶವಿದೆ. ದೇಹಕ್ಕೆ ಹೇಗೆ ಆಹಾರ ಅತೀ ಅಗತ್ಯವೋ ಹಾಗೆ ನೀರು ಕೂಡ ಮುಖ್ಯ. ನೀರಿಲ್ಲದೆ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ದಿನದಲ್ಲಿ ನಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಇಂತಿಷ್ಟು ಪರಿಣಾಮವಾಗಿ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಈಗಲೂ ವಾದವಿವಾದಗಳು ನಡೆಯುತ್ತಿದೆ.

ಆದರೆ ಇಂದಿನ ದಿನಗಳಲ್ಲಿ ಜನರು ಹೆಚ್ಚು ಚಾ, ಕಾಫಿ ಹಾಗೂ ತಂಪು ಪಾನೀಯಗಳನ್ನು ಅತಿಯಾಗಿ ಕುಡಿಯುತ್ತಾರೆ. ದಿನವಿಡಿ ಸೋಡಾ ಹಾಗೂ ಕೆಫಿನ್ ಸೇವನೆ ಮಾಡುತ್ತಿರುವರು. ಆದರೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲಿಗೆ ನೀರು ಸೇವಿಸಬೇಕು. ಇದರಿಂದ ಕೆಲವೊಂದು ಅಚ್ಚರಿಯ ಫಲಿತಾಂಶಗಳು ನಿಮಗೆ ಸಿಗುವುದು. ನೀವು ಹೆಚ್ಚು ನೀರು ಕುಡಿದಷ್ಟು ಅದರಿಂದ ಆರೋಗ್ಯಕ್ಕೆ ಶ್ರೇಷ್ಠ ಲಾಭವಾಗಲಿದೆ. ಹೆಚ್ಚಾಗಿ ನಾವೆಲ್ಲರೂ ಬೇಕಾಗುವಷ್ಟು ನೀರು ಕುಡಿಯಲು ವಿಫಲವಾಗುತ್ತೇವೆ. ನೀವು ಬೇರೆಲ್ಲಾ ಪಾನೀಯವನ್ನು ಬಿಟ್ಟು ನೀರನ್ನು ಕುಡಿಯಬೇಕು. ಇದರಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನೀವು ತಿಳಿಯಿರಿ...

ತೂಕ ಇಳಿಕೆಗೆ ವೇಗ ನೀಡುವುದು

ತೂಕ ಇಳಿಕೆಗೆ ವೇಗ ನೀಡುವುದು

ತೂಕ ವೇಗವಾಗಿ ಇಳಿಸಬೇಕಾದರೆ ಎಲ್ಲಾ ಪಾನೀಯಗಳನ್ನು ಬಿಟ್ಟು ಕೇವಲ ನೀರು ಕುಡಿಯಬೇಕು. ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿದರೆ ಆಗ ವೇಗವಾಗಿ ತೂಕ ವೇಗವಾಗಿ ಇಳಿಸಬಹುದು. ಅಧ್ಯಯನದ ವರದಿಯ ಪ್ರಕಾರ 9 ದಿನಗಳ ಕಾಲ ನೀವು ಬೇರೆ ಪಾನೀಯಗಳ ಬದಲಿಗೆ ನೀರನ್ನು ಸೇವಿಸಬೇಕು. ಇದರಿಂದ ನೀವು ಪ್ರತಿನಿತ್ಯ 8 ಕಿ.ಮೀ.ಜಾಗಿಂಗ್ ಮಾಡುಷ್ಟೇ ಪ್ರಮಾಣದ ಕ್ಯಾಲರಿ ದಹಿಸಲಿದ್ದೀರಿ. ಇದರಿಂದಾಗಿ ಬೇರೆ ಪಾನೀಯಗಳನ್ನು ತ್ಯಜಿಸಿ ಮತ್ತು ನೀರು ಕುಡಿಯಿರಿ.

ಚಯಾಪಚಯ ವೃದ್ಧಿಸುವುದು

ಚಯಾಪಚಯ ವೃದ್ಧಿಸುವುದು

ಬೇರೆಲ್ಲಾ ಪಾನೀಯಗಳ ಬದಲಿಗೆ ನೀರನ್ನು ಕುಡಿದರೆ ಆಗ ಚಯಾ ಪಚಯ ಕ್ರಿಯೆ ಸುಧಾರಣೆ ಆಗುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು. ಇದರಿಂದ ದಿನವಿಡಿ ಸಾಧ್ಯವಾದಷ್ಟು ನೀರು ಕುಡಿಯಿರಿ ಮತ್ತು ದಿನವಿಡಿ ಶಕ್ತಿಯಿಂದ ಇರಿ. ನೀರು ಕುಡಿದರೆ ಆಗ ನಿಮ್ಮ ದಿನದ ಕಾರ್ಯಗಳನ್ನು ಮಾಡಲು ಶಕ್ತಿ ಸಿಗುವುದು.

ಮೆದುಳಿನ ಕಾರ್ಯ ಸುಧಾರಿಸುವುದು

ಮೆದುಳಿನ ಕಾರ್ಯ ಸುಧಾರಿಸುವುದು

ಮನುಷ್ಯನ ಮೆದುಳಿನಲ್ಲಿ ಸೇ.75ರಿಂದ 85ರಷ್ಟು ನೀರಿನಾಂಶ ಇರುವುದು ಎಂದು ನಿಮಗೆ ತಿಳಿದಿರಬೇಕು. ಅಧಿಕ ನೀರು ಕುಡಿಯುವ ಕಾರಣದಿಂದ ಏಕಾಗ್ರತೆ ಹೆಚ್ಚಿಸಲು ನೆರವಾಗುವುದು. ಇದರಿಂದ ದೈನಂದಿನ ಕಾರ್ಯಗಳನ್ನು ತುಂಬಾ ವೇಗ ಹಾಗೂ ಪರಿಣಾಮಕಾರಿಯಾಗಿ ಮಾಡಲು ನೆರವಾಗುವುದು. ಇದರಿಂದ ಕೆಫಿನ್ ಸೇವನೆ ಕಡಿಮೆ ಮಾಡಿ ಮತ್ತು ನೀರು ಸೇವಿಸಿ.

ಹಸಿವು ಕಡಿಮೆ ಮಾಡುವುದು

ಹಸಿವು ಕಡಿಮೆ ಮಾಡುವುದು

ನೀರು ಹೆಚ್ಚಾಗಿ ಕುಡಿದರೆ ಆಗ ಕಡಿಮೆ ತಿನ್ನಬಹುದು. ನಿಮಗೆ ಅಧಿಕ ಕ್ಯಾಲರಿ ಸೇವಿಸುವ ಭಾವನೆಯಾಗುತ್ತಲಿದ್ದರೆ ಆಗ ನೀವು ಒಂದು ಲೋಟ ನೀರು ಕುಡಿಯಿರಿ. ಆಗ ಬಯಕೆ ಕಡಿಮೆ ಆಗುವುದು. ಇದರಿಂದ ತೂಕ ನಿಯಂತ್ರಣದಲ್ಲಿ ಇಡಲು ಹಾಗೂ ಆರೋಗ್ಯವಾಗಿರಲು ನೆರವಾಗುವುದು. ಕೆಲವೊಂದು ಸಲ ದಾಹದಿಂದಾಗಿ ಬಯಕೆ ಮೂಡಬಹುದು. ನಿಮ್ಮ ಹತ್ತಿರ ಯಾವಾಗಲೂ ನೀರನ್ನು ಇಟ್ಟುಕೊಳ್ಳಿ ಮತ್ತು ಅನಗತ್ಯ ಕ್ಯಾಲರಿಗೆ ಗುಡ್ ಬೈ ಹೇಳಿ.

ವಿಷವನ್ನು ವೇಗವಾಗಿ ಹೊರಹಾಕುವುದು

ವಿಷವನ್ನು ವೇಗವಾಗಿ ಹೊರಹಾಕುವುದು

ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ಆಗ ವಿಷಕಾರಿ ಅಂಶಗಳನ್ನು ವೇಗವಾಗಿ ಹೊರಹಾಕಬಹುದು ಮತ್ತು ಚರ್ಮವು ಆರೋಗ್ಯವಾಗಿ ಇರುವುದು ಮತ್ತು ವಯಸ್ಸಾಗುವ ಲಕ್ಷಣ ತಡೆಯಬಹುದು. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ಅದರಿಂದ ಯೌವನಯುತ ಚರ್ಮ ಕಾಪಾಡಲು ನೆರವಾಗುವುದು. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿ ನಿಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ.

ಕಾಯಿಲೆಗಳನ್ನು ತಡೆಯುವುದು

ಕಾಯಿಲೆಗಳನ್ನು ತಡೆಯುವುದು

ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಪರಿಣಾಮ ಹಲವಾರು ಕಾಯಿಲೆಗಳ ಅಪಾಯ ತಡೆಯಬಹುದು ಮತ್ತು ಕೆಲವೊಂದು ಗಂಭೀರ ಕಾಯಿಲೆಗಳಾಗಿರುವ ಅಧಿಕ ರಕ್ತದೊತ್ತಡ, ಅಪಧಮನಿ ಕಾಯಿಲೆ, ಮೂತ್ರಕೋಶದ ಸಮಸ್ಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಬಹುದು. ನೀರು ಸಾಕಷ್ಟು ಪ್ರಮಾಣದಲ್ಲಿ ಕುಡಿದರೆ ಆಗ ವೈದ್ಯರ ಬಳಿಗೆ ಹೋಗುವ ಸಂಭವ ಕಡಿಮೆ ಆಗುವುದು.

English summary

Replace all your drinks with water

You indulge yourself in different drinks throughout the day, from sodas to caffeine the list is long. But do you know which one is good for your health and which is not? Water is the best drink you can ever consume. If you replace all your drinks with water throughout the day, it can give you surprising results. Consumption of more water offers you great health benefits. But you often forget to drink it in the required quantity.
Story first published: Monday, April 29, 2019, 17:37 [IST]
X
Desktop Bottom Promotion