For Quick Alerts
ALLOW NOTIFICATIONS  
For Daily Alerts

ತ್ವಚೆಗೆ, ಕೂದಲಿಗೆ ಹಾಗೂ ಆರೋಗ್ಯಕ್ಕೆ ಹಝೆಲ್‌ನಟ್‌ನ ಆರೋಗ್ಯಕಾರಿ ಪ್ರಯೋಜನಗಳು

|

ಹಝೆಲ್ ನಟ್ (ಹಝೆಲ್ ಬೀಜಗಳು) ಕೆಲವೊಂದು ದೇಶಗಳಲ್ಲಿ ತುಂಬಾ ಜನಪ್ರಿಯವಾಗಿದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಗಳು ಇದ್ದು, ತುಂಬಾ ರುಚಿಕರ ಮತ್ತು ಹೊಟ್ಟೆ ತುಂಬುವಂತೆ ಮಾಡುವುದು. ಇದರಲ್ಲಿ ಉನ್ನತ ಮಟ್ಟ ಪ್ರೋಟೀನ್ ಗಳು, ಕೊಬ್ಬು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ನಮಗೆ ಸಿಗುವುದು. ಹಝೆಲ್ ನಟ್ ತುಂಬಾ ಸಿಹಿ ಆಗಿರುವುದು. ಇದನ್ನು ಹಸಿಯಾಗಿ, ಹುಡಿ ಮಾಡಿ ಅಥವಾ ಹುರಿದು ತಿನ್ನಬಹುದು. ಇದನ್ನು ಹಲವಾರು ಖಾದ್ಯಗಳಿಗೆ ರುಚಿ ಹೆಚ್ಚಿಸುವ ಸಲುವಾಗಿ ಬಳಸಿಕೊಳ್ಳಲಾಗುತ್ತದೆ. ಕಾಫಿ ಮತ್ತು ಕೇಕ್ ಗಳಿಗೆ ರುಚಿ ಹೆಚ್ಚಿಸುವ ಸಲುವಾಗಿ ಹಝೆಲ್ ನಟ್ ನ್ನು ಬಳಕೆ ಮಾಡಲಾಗುತ್ತದೆ. ಇದು ಸಿಹಿ ತಿಂಡಿಗಳಿಗೆ ಅಲಂಕಾರಕ್ಕಾಗಿ ಬಳಕೆ ಮಾಡುವರು. ಇದರಿಂದ ಬೆಣ್ಣೆ, ತೈಲ, ಹಿಟ್ಟು ಇತ್ಯಾದಿಗಳನ್ನು ತಯಾರಿಸಿಕೊಳ್ಳುವರು.

Hazelnuts

ಹಝೆಲ್ ನಟ್ ನಲ್ಲಿ ಇರುವ ಪೋಷಕಾಂಶ ಮೌಲ್ಯಗಳು

  • 100 ಗ್ರಾಂ ಹಸಿ ಹಝೆಲ್ ನಟ್ ನಲ್ಲಿ ಸುಮಾರು 567 ಕೆಸಿಎಎಲ್ ಶಕ್ತಿಯಿದೆ. ಇದರಲ್ಲಿ ಇರುವ ಇತರ ಪೋಷಕಾಂಶಗಳು
  • 13.33 ಗ್ರಾಂ. ಪ್ರೋಟೀನ್
  • 40 ಗ್ರಾಂ. ಕೊಬ್ಬು
  • 40 ಗ್ರಾಂ ಕಾರ್ಬೊಹೈಡ್ರೇಟ್ಸ್
  • 6.7 ಗ್ರಾಂ ನಾರಿನಾಂಶ
  • 3.33 ಗ್ರಾಂ ಸಕ್ಕರೆ
  • 200 ಮಿ.ಗ್ರಾಂ.ಕ್ಯಾಲ್ಸಿಯಂ
  • 3.60 ಮಿ.ಗ್ರಾಂ. ಕಬ್ಬಿನಾಂಶ
  • ಹಝೆಲ್ ನಟ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಇ, ಪೋಸ್ಪರಸ್, ಪೊಟಾಶಿಯಂ, ಸತು, ಫಾಲಟೆ, ಮೆಗ್ನಿಶಿಯಂ, ಆರೋಗ್ಯಕಾರಿ ಕೊಬ್ಬು, ತಾಮ್ರ, ವಿಟಮಿನ್ ಬಿ6 ಇದೆ.

ಹಝೆಲ್ ನಟ್ ನಿಂದ ಸಿಗುವ ಆರೋಗ್ಯ ಲಾಭಗಳು

1.ಬೊಜ್ಜಿನ ಅಪಾಯ ತಗ್ಗಿಸುವುದು

ಹಝೆಲ್ ನಟ್ ಸೇವನೆ ಮಾಡಿದ ವೇಳೆ ಇದು ಚಯಾಪಚಯ ಕ್ರಿಯೆ ವೃದ್ಧಿಸುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು. ಚಯಾಪಚಯ ಕ್ರಿಯೆಯು ಹೆಚ್ಚಾದರೆ ಆಗ ದೇಹದಲ್ಲಿ ಕ್ಯಾಲರಿಯು ಅಧಿಕ ದಹಿಸುವುದು ಮತ್ತು ಇದು ಶಕ್ತಿಯಾಗಿ ಪರಿವರ್ತನೆ ಆಗುವುದು. ಅಧ್ಯಯನ ವರದಿಗಳು ಹೇಳುವ ಪ್ರಕಾರ ಮರದಲ್ಲಿ ಬೆಳೆಯುವಂತಹ ಬೀಜಗಳು ಬೊಜ್ಜಿನ ಅಪಾಯ ಕಡಿಮೆ ಮಾಡುವುದು. ಯಾಕೆಂದರೆ ಇದು ಚಯಾಪಚಯ ಕ್ರಿಯೆಗೆ ವೇಗ ನೀಡುವುದು. ಹಝೆಲ್ ನಟ್ ನಲ್ಲಿ ಉನ್ನತ ಮಟ್ಟ ಪ್ರೋಟೀನ್, ಕೊಬ್ಬು ಮತ್ತು ನಾರಿನಾಂಶಗಳು ಇವೆ. ಇದು ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಪದೇ ಪದೇ ತಿಂಡಿ ತಿನ್ನುವುದು ತಪ್ಪುವುದು ಮತ್ತು ದೀರ್ಘ ಕಾಲದ ತನಕ ತೃಪ್ತಿ ಉಂಟು ಮಾಡುವುದು.

2.ಹೃದಯದ ಆರೋಗ್ಯ ವೃದ್ಧಿಸುವುದು

ಹಝೆಲ್ ನಟ್ ನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳು ಇವೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚು ಮಾಡಿ, ಕೆಟ್ಟ ಕೊಲೆಸ್ಟ್ರಾಲ್ ನ್ನು ತಗ್ಗಿಸುವುದು. ಇದರಿಂದ ಅಪಧಮನಿಗಳಲ್ಲಿ ಪದರಗಳು ನಿರ್ಮಾಣವಾಗುವುದು ತಡೆಯಬಹುದು. ಈ ಕಾರಣದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ದೂರ ಆಗುವುದು. ಅಧ್ಯಯನ ವರದಿಯ ಪ್ರಕಾರ ನಿಮ್ಮ ಆಹಾರ ಕ್ರಮದಲ್ಲಿ ಹಝೆಲ್ ನಟ್ ನ್ನು ಸೇರಿಸಿಕೊಂಡರೆ ಆಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಅಪಾಯವು ಕಡಿಮೆ ಆಗುವುದು. ಯಾಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ನ್ನು ತಗ್ಗಿಸುವಂತಹ ಗುಣಗಳು ಇವೆ.

3.ಕ್ಯಾನ್ಸರ್ ತಡೆಯುವುದು

ಹಝೆಲ್ ನಟ್ ನಲ್ಲಿ ಇರುವಂತಹ ಪ್ರಬಲ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಪರಿಣಾಮವನ್ನು ಇದು ತಗ್ಗಿಸುವುದು. ಹಝೆಲ್ ನಟ್ ಮತ್ತು ಇತರ ಕೆಲವೊಂದು ಮರದಲ್ಲಿ ಬೆಳೆಯುವ ಬೀಜಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇದೆ. ಇದನ್ನು ಪ್ರೊನ್ಟೋಸಯಾನಿಡಿನ್ ಗಳು ಎಂದು ಕರೆಯಲಾಗುತ್ತದೆ. ಇದು ಕೆಲವೊಂದು ರೀತಿಯ ಕ್ಯಾನ್ಸರ್ ನ್ನು ತಡೆಯುವುದು.
ಹಝೆಲ್ ನಟ್ ನಲ್ಲಿ ಉನ್ನತ ಮಟ್ಟದ ವಿಟಮಿನ್ ಇ ಇದೆ. ಇದು ಮತ್ತೊಂದು ರೀತಿಯ ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿದೆ. ಕ್ಯಾನ್ಸರ್ ಗೆ ಸಂಬಂಧಿಸಿದ ಅಂಗಾಂಶಕ್ಕೆ ಆಗುವ ಹಾನಿಯನ್ನು ಇದು ತಡೆಯುವುದು. ಹಝೆಲ್ ನಟ್ ನಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ನ್ನು ಪಡೆಯಬೇಕಾರೆ, ಆಗ ಅದನ್ನು ಸಿಪ್ಪೆಯ ಜತೆಗೆ ಸೇವಿಸಬೇಕು.

4.ಮಧುಮೇಹ ನಿಯಂತ್ರಿಸುವುದು

ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಹಝೆಲ್ ನಟ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸಲು ನೆರವಾಗುವುದು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಇದು ಸುಧಾರಣೆ ಮಾಡುವುದು. ಸಂಶೋಧನೆಯಲ್ಲಿ ಭಾಗಿಯಾದವರಿಗೆ 15 ಗ್ರಾಂ ವಾಲ್ ನಟ್, 7.5 ಗ್ರಾಂ ಬಾದಾಮಿ ಮತ್ತು 7.5 ಗ್ರಾಂ ಹಝೆಲ್ ನಟ್ ನೀಡಲಾಯಿತು. ಇದರ ಪರಿನಾಮವಾಗಿ ಅವರ ಇನ್ಸುಲಿನ್ ಮಟ್ಟ ಗಣನೀಯವಾಗಿ ತಗ್ಗಿರುವುದನ್ನು ಕಂಡುಕೊಳ್ಳಲಾಗಿದೆ. ಒಲಿಕ್ ಆಮ್ಲ ಎನ್ನುವಂತಹ ಕೊಬ್ಬಿನಾಮ್ಲವು ಹಝೆಲ್ ನಟ್ ನಲ್ಲಿದೆ. ಇದು ಇನ್ಸುಲಿನ್ ಸೂಕ್ಷ್ಮತೆಗೆ ತುಂಬಾ ಪರಿಣಾಮಕಾರಿ ಆಗಿದೆ.

5.ಉರಿಯೂತ ಕಡಿಮೆ ಮಾಡುವುದು

ಹಝೆಲ್ ನಟ್ ನಲ್ಲಿ ಇರುವಂತಹ ಉನ್ನತ ಪ್ರಮಾಣದ ಆರೋಗ್ಯಕಾರಿ ಕೊಬ್ಬಿನಾಮ್ಲಗಳಿಂದಾಗಿ ಇದು ಉರಿಯೂತ ಕಡಿಮೆ ಮಾಡುವಂತಹ ಗುಣವನ್ನು ಹೊಂದಿದೆ. ಹಝೆಲ್ ನಟ್ ನಿಂದ ಸಮೃದ್ಧವಾಗಿರುವ ಆಹಾರ ಕ್ರಮದಿಂದಾಗಿ ಉರಿಯೂತ ತಡೆಯಬಹುದು. ಇದರಿಂದಾಗಿ ಬೊಜ್ಜು ಮತ್ತು ಅತಿಯಾದ ತೂಕ ಕಡಿಮೆ ಮಾಡಬಹುದು.

6.ಮೆದುಳಿನ ಆರೋಗ್ಯ ಉತ್ತಮಪಡಿಸುವುದು

ಹಝೆಲ್ ನಟ್ ನಲ್ಲಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವ ಅಂಶಗಳು ಇದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಇದರಲ್ಲಿ ಉನ್ನತ ಮಟ್ಟ ವಿಟಮಿನ್ ಇ, ಮೆಗ್ನಿಶಿಯಂ, ತಾಮ್ರ ಮತ್ತು ಫಾಲಟೆ ಇದೆ. ವಿಟಮಿನ್ ಇ ಮತ್ತು ಮೆಗ್ನಿಶಿಯಂ ನೆನಪಿನ ಕಾರ್ಯದಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು ಮತ್ತು ಇದು ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ಕಾಯಿಲೆಗಳಾಗಿರುವ ಅಲ್ಝೈಮರ್, ಪರ್ಕಿಸನ್ ಮತ್ತು ಡೆಮೆಂಟಿಯಾವನ್ನು ತಗ್ಗಿಸುವುದು.
ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯು ನಡೆಸಿರುವಂತಹ ಒಂದು ಅಧ್ಯಯನ ವರದಿಯ ಪ್ರಕಾರ ಈ ಮೈಕ್ರೋನ್ಯೂಟ್ರಿಯಂಟ್ಸ್ ಗಳು ಕಡಿಮೆ ಆದಷ್ಟು ವಯಸ್ಸಿಗೆ ಸಂಬಂಧಿಸಿದಂತಹ ಕಾಯಿಲೆಗಳು ಬರುವುದು ಅಧಿಕ ಎಂದು ಹೇಳಲಾಗಿದೆ.

7.ಮೂಳೆಯ ಆರೊಗ್ಯ ಹೆಚ್ಚಿಸುವುದು

ಹಝೆಲ್ ನಟ್ ನಲ್ಲಿ ಇರುವಂತಹ ಕ್ಯಾಲ್ಸಿಯಂ ಮತ್ತು ಮೆಗ್ನಿಶಿಯಂನಿಂದಾಗಿ ಇದು ಮೂಳೆಯ ಆರೋಗ್ಯ ಮತ್ತು ಮೂಳೆ ಬಲಗೊಳಿಸಲು ನೆರವಾಗುವುದು. ಹಝೆಲ್ ನಟ್ ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸುವುದು ಮತ್ತು ಅಸ್ಥಿರಂಧ್ರತೆ ಮತ್ತು ಸಂಧಿವಾತದಂತಹ ಸಮಸ್ಯೆಯನ್ನು ಇದು ಕಡಿಮೆ ಮಾಡುವುದು.

8.ವೀರ್ಯ ಗಣತಿ ಹೆಚ್ಚಿಸುವುದು

ಯುರೋಪಿಯನ್ ಸೊಸೈಟಿ ಆಪ್ ಹ್ಯುಮನ್ ರಿಪ್ರಾಡಕ್ಷನ್ ಆ್ಯಂಡ್ ಎಂಬ್ರೊಲಾಜಿ ಪ್ರಕಾರ, ಹಝೆಲ್ ನಟ್, ವಾಲ್ ನಟ್, ಬಾದಾಮಿ ಇತ್ಯಾದಿ ಬೀಜಗಳನ್ನು ಸೇವಿಸುವ ಕಾರಣದಿಂದಾಗಿ ಇದು ವೀರ್ಯದ ಗುಣಮಟ್ಟ ಮತ್ತು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

9.ಮಲಬದ್ಧತೆ ತಡೆಯುವುದು

ಹಝೆಲ್ ನಟ್ ನಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದನ್ನು ನಿಯಮಿತವಾಗಿ ತಿನ್ನುವುದರಿಂದ ಹೊಟ್ಟೆಯ ಕ್ರಿಯೆಯು ಸರಾಗವಾಗಿ ಆಗುವುದು ಮತ್ತು ಮಲಬದ್ಧತೆ ಸಮಸ್ಯೆಯನ್ನು ಇದು ತಡೆಯುವುದು. ಇದರಲ್ಲಿ ಇರುವಂತಹ ನಾರಿನಾಂಶವು ಮಲವು ಸರಾಗವಾಗಿ ಸಾಗಲು ಮತ್ತು ಅದಕ್ಕೆ ಕರುಳಿನಲ್ಲಿ ಅಡೆತಡೆ ಉಂಟಾಗದಂತೆ ನೆರವಾಗುವುದು.

10.ಆರೋಗ್ಯಕಾರಿ ಚರ್ಮ ಹಾಗೂ ಕೂದಲಿಗೆ

ಹಝೆಲ್ ನಟ್ ನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಇ ಯಿಂದಾಗಿ ಆರೋಗ್ಯಕಾರಿ ತ್ವಚೆ ಹಾಗೂ ಕೂದಲು ಪಡೆಯಬಹುದು. ವಿಟಮಿನ್ ಇ ಚರ್ಮಕ್ಕೆ ಅಕಾಲಿಕ ವಯಸ್ಸಾಗುವುದನ್ನು ತಪ್ಪಿಸುವುದು ಮತ್ತು ಚರ್ಮದ ಆರೋಗ್ಯ ಕಾಪಾಡುವುದು. ಇದರಿಂದ ಮೊಡವೆ, ನೆರಿಗೆ ಮತ್ತು ಗಾಯದ ಸಮಸ್ಯೆ ನಿವಾರಣೆ ಆಗುವುದು. ವಿಟಮಿನ್ ನಿಂದಾಗಿ ಕೂದಲಿನ ಬೆಳವಣಿಗೆ ಆಗುವುದು ಮತ್ತು ಕೂದಲು ಉದುರುವುದು ತಪ್ಪುವುದು.

ಒಳ್ಳೆಯ ಹಝೆಲ್ ನಟ್ ನ್ನು ಆಯ್ಕೆ ಮಾಡುವುದು ಹೇಗೆ?

ಯಾವಾಗಲೂ ನೀವು ತಾಜಾ, ಹಸಿ ಹಝೆಲ್ ನಟ್ ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ದುಂಡಗೆ, ಕುರುಕಲು, ತುಂಬಿದ ಮತ್ತು ಭಾರವಾಗಿ ಇರುವುದು. ಸ್ವಲ್ಪ ಕಡು ಕೆಂಪುಕಂದು ಬಣ್ಣದಲ್ಲಿ ಕಾಂತಿಯುತವಾಗಿ ಹೊಳೆಯುವಂತಹ ಚಿಪ್ಪನ್ನು ಹೊಂದಿರುವಂತಹ ಹಝೆಲ್ ನಟ್ ನ್ನು ನೀವು ಆಯ್ಕೆ ಮಾಡಿಕೊಳ್ಳಿ. ಚಿಪ್ಪಿನಲ್ಲಿ ಯಾವುದೇ ಬಿರುಕು ಅಥವಾ ರಂಧ್ರವಿದ್ದರೆ ಆಗ ನೀವು ಇದನ್ನು ಕಡೆಗಣಿಸಿ.

ನಿಮ್ಮ ಆಹಾರ ಕ್ರಮದಲ್ಲಿ ಹಝೆಲ್ ನಟ್ ನ್ನು ಬಳಸುವ ವಿಧಾನ

•ತುಂಡು ಮಾಡಿರುವ ಅಥವಾ ಕತ್ತರಿಸಿರುವಂತಹ ಹಝೆಲ್ ನಟ್ ನ್ನು ಮಿಲ್ಕ್ ಶೇಕ್, ಸಲಾಡ್ ಮತ್ತು ಡಿಪ್ಸ್ ಗಳಿಗೆ ಬಳಸಬಹುದು.
•ಹಝೆಲ್ ನಟ್ ನ್ನು ಹುಡಿ ಮಾಡಿಕೊಂಡು ಅದರಿಂದ ಹಿಟ್ಟು ಮಾಡಬಹುದು ಅಥವಾ ಬೆಣ್ಣೆ ತಯಾರಿಸಬಹುದು.
•ಹಝೆಲ್ ನಟ್ ನ್ನು ಕೇಕ್, ಐಸ್ ಕ್ರೀಮ್ ಮತ್ತು ಇತರ ಸಿಹಿ ತಿಂಡಿಗಳಲ್ಲಿ ಬಳಕೆ ಮಾಡಬಹುದು.
•ಚಾಕಲೇಟ್ ಗೆ ಇದನ್ನು ಬಳಸಬಹುದು ಅಥವಾ ಮೆಣಸು, ದಾಲ್ಚಿನಿ ಹುಡಿ ಬಳಸಿಕೊಂಡು ಇದನ್ನು ಸಿಹಿ ಮತ್ತು ಖಾರದ ಮಿಶ್ರಣವಾಗಿ ಸೇವಿಸಬಹುದು.

ಹಝೆಲ್ ನಟ್ ಸೇವನೆಯಿಂದ ಇರುವ ಕೆಲವು ಅಪಾಯಗಳು

ಕೆಲವೊಂದು ಜನರಿಗೆ ಬೀಜಗಳಿಂದ ಅಲರ್ಜಿ ಇರುವುದು. ಇದರಿಂದ ನೀವು ಹಝೆಲ್ ನಟ್ ಸೇವಿಸುವ ಮೊದಲು ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಿ. ದಿನಕ್ಕೆ ಎಷ್ಟು ಹಝೆಲ್ ನಟ್ ನ್ನು ಸೇವಿಸಬೇಕು? ಹೆಚ್ಚಿನ ಆರೋಗ್ಯ ಲಾಭ ಪಡೆಯಲು ನೀವು ದಿನಕ್ಕೆ 30 ಗ್ರಾಂನಷ್ಟು ಹಝೆಲ್ ನಟ್ ನ್ನು ಸೇವಿಸಬೇಕು.

English summary

Health Benefits Of Hazelnuts For Skin, Hair & Health

Hazelnuts are nutritious, delicious and filling nuts that come from the Corylus tree. Hazelnuts, also called filberts, are rich in protein, fats, vitamins and minerals which benefit your health largely. The health benefits of hazelnuts are protecting heart health, preventing cancer, managing diabetes, lowering inflammation, etc.
X
Desktop Bottom Promotion