For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಸೆಕ್ಸ್ ನಡೆಸಿದರೆ ಈ ಐದು ವಿಚಿತ್ರವಾದವು ಸಂಭವಿಸಬಹುದು!!

|

ಈ ಲೇಖನ ಮಹಿಳೆಯರಿಗೆ ಮೀಸಲಾಗಿದೆ. ಮಾಸಿಕ ದಿನಗಳಲ್ಲಿ ಸೆಕ್ಸ್ ನಡೆಸುವುದು ಬಹುತೇಕ ಮಹಿಳೆಯರು ಅಪಾಯಕಾರಿ ಎಂದು ತಿಳಿದಿದ್ದಾರೆ. ಆದರೆ ವಿಜ್ಞಾನ ಇದು ಅಷ್ಟು ಅಪಾಯಕಾರಿಯಲ್ಲ ಎಂದು ಸೂಚಿಸುತ್ತದೆ. ಆದರೆ ಇತರ ದಿನಗಳಂತಲ್ಲದೇ ಈ ದಿನಗಳಲ್ಲಿ ಭಿನ್ನವಾದ ಅನುಭವವುಂಟಾಗಬಹುದು ಹಾಗೂ ಕೆಲವು ವಿಚಿತ್ರ ಸಂಗತಿಗಳೂ ಸಂಭವಿಸಬಹುದು.

ನಿಮ್ಮ ಮಾಸಿಕ ದಿನಗಳ ಸೆಡೆತ ಕಡಿಮೆಯಾಗಬಹುದು

ನಿಮ್ಮ ಮಾಸಿಕ ದಿನಗಳ ಸೆಡೆತ ಕಡಿಮೆಯಾಗಬಹುದು

ಮಾಸಿಕ ದಿನಗಳಲ್ಲಿ ಎದುರಾಗುವ ನೋವು ಯಾರಿಗೂ ಇಷ್ಟವಾಗುವುದಿಲ್ಲ ಅಲ್ಲವೇ? ಆದರೆ ಸಂಸರ್ಗದ ಬಳಿಕ ಪಡೆಯುವ ಕಾಮಪರಾಕಾಷ್ಠೆಯ ಸಮಯದಲ್ಲಿ ಮೆದುಳಿನಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು (ಮೂಲತಃ ಇವು ಮನಸ್ಸಿಗೆ ಮುದನೀಡುವ ರಸದೂತಗಲಾಗಿವೆ) ದೇಹದ ಎಲ್ಲಾ

ಭಾಗಗಳಲ್ಲಿ ಸಂತೃಪ್ತಿಯ ಭಾವವನ್ನು ಮೂಡಿಸುತ್ತದೆ. ಇದರಲ್ಲಿ ನೋವಿನಿಂದ ಕೂಡಿರುವ ಕೆಳಹೊಟ್ಟೆಯೂ ಸೇರಿದೆ. ಪರಿಣಾಮವಾಗಿ ಮಾಸಿಕ ದಿನಗಳ ನೋವು ಸಹಿಸಿಕೊಳ್ಳುವಷ್ಟು ಕಡಿಮೆಯಾಗುತ್ತದೆ. ಈ ವಿದ್ಯಮಾನಕ್ಕೆ ಖಚಿತವಾದ ಕಾರಣವನ್ನು ಇದುವರೆಗೆ ವಿವರಿಸಲು ಸಾಧ್ಯವಾಗಿಲ್ಲ. ಆದರೆ ತಜ್ಞರ ಅಭಿಪ್ರಾಯದ ಪ್ರಕಾರ ಮಾಸಿಕ ದಿನಗಳ ಸಂಸರ್ಗದ ಮೂಲಕ ಪಡೆಯುವ ಕಾಮಪರಾಕಾಷ್ಠೆಯಿಂದ ಕೆಳಹೊಟ್ಟೆಯ ನೋವಿಗೆ ಕಾರಣವಾಗಿದ್ದ ಪ್ರೋಸ್ಟಾಗ್ಲಾಂಡಿನ್ಸ್ ಎಂಬ ರಾಸಾಯನಿಕಗಳು ಇಲ್ಲವಾಗಲು ಸಾಧ್ಯವಾಗುತ್ತದೆ.

ನಿಮಗೆ ಬೇರಾವುದೇ ಹೆಚ್ಚುವರಿ ಜಾರುಕದ್ರವದ ಅಗತ್ಯ ಬೀಳುವುದಿಲ್ಲ

ನಿಮಗೆ ಬೇರಾವುದೇ ಹೆಚ್ಚುವರಿ ಜಾರುಕದ್ರವದ ಅಗತ್ಯ ಬೀಳುವುದಿಲ್ಲ

ಮಾಸಿಕ ದಿನಗಳ ಸಮಯದಲ್ಲಿ ಜನನಾಂಗದಲ್ಲಿರುವ ರಕ್ತ ಮತ್ತು ಇತರ ದ್ರವಗಳೇ ಜಾರುಕದ್ರವದಂತೆ ಕಾರ್ಯನಿರ್ವಹಿಸುವ ಕಾರಣ ಬೇರೆ ಜಾರುಕದ್ರವದ ಅಗತ್ಯತೆಯೇ ಬೀಳುವುದಿಲ್ಲ.

ಮಾಸಿಕ ದಿನಗಳ ಅವಧಿಯೂ ಕಡಿಮೆಯಾಗಲಿದೆ

ಮಾಸಿಕ ದಿನಗಳ ಅವಧಿಯೂ ಕಡಿಮೆಯಾಗಲಿದೆ

ಇನ್ನೊಮ್ಮೆ, ಈ ದಿನಗಳಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಮತ್ತು ಪ್ರೋಸ್ಟಾಗ್ಲಾಂಡಿನ್ಸ್ ಗಳೇ ನಿಮ್ಮ ಮಾಸಿಕ ದಿನಗಳ ಅವಧಿಯನ್ನು ನಿರ್ಧರಿಸುತ್ತವೆ. ಅಲ್ಲದೇ ಈ ದಿನಗಳಲ್ಲಿ ಸೆಕ್ಸ್ ನಡೆಸಿದ ಬಳಿಕ ಜನನಾಂಗದ ಸ್ನಾಯುಗಳು ಸಂಕುಚಿತಗೊಳ್ಳುವ ಮೂಲಕ ಒಳಗೆ ಸಂಗ್ರಹವಾಗಿದ್ದ ರಕ್ತವನ್ನು ಸುಲಭವಾಗಿ

ಮತ್ತು ಪೂರ್ಣಪ್ರಮಾಣದಲ್ಲಿ ಕಡಿಮೆ ಸಮಯದಲ್ಲಿ ಹೊರ ಹಾಕಲು ನೆರವಾಗುತ್ತದೆ. ಪರಿಣಾಮವಾಗಿ ಮಾಸಿಕ ದಿನಗಳ ಅವಧಿಯೂ ಕಡಿಮೆಯಾಗುತ್ತದೆ.

ಈ ಅವಧಿಯ ಸಂಸರ್ಗದಿಂದ ಗರ್ಭಧಾರಣೆಯ ಸಾಧ್ಯತೆ ಅತೀ ಕಡಿಮೆ

ಈ ಅವಧಿಯ ಸಂಸರ್ಗದಿಂದ ಗರ್ಭಧಾರಣೆಯ ಸಾಧ್ಯತೆ ಅತೀ ಕಡಿಮೆ

ಮಾಸಿಕ ದಿನಗಳಲ್ಲಿನ ಸಂಸರ್ಗದಿಂದಲೂ ಗರ್ಭಧಾರಣೆಯ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಈ ಸಾಧ್ಯತೆ ಅತಿ ಕಡಿಮೆಯಾಗಿರುತ್ತದೆ. ಹಾಗಾಗಿ, ಒಂದು ವೇಳೆ ನೀವು ಗರ್ಭಧರಿಸುವ ಬಯಕೆ ಹೊಂದಿದ್ದರೆ ನಿಮ್ಮ ಫಲವತ್ತತೆಯ ದಿನಗಳನ್ನು ಅರಿತುಕೊಂಡು ಈ ದಿನಗಳಲ್ಲಿಯೇ ಹೆಚ್ಚು ಸೆಕ್ಸ್ ನಡೆಸುವ ಮೂಲಕ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತದೆ.

Most Read: ಮುಟ್ಟಿನ ದಿನಗಳಲ್ಲಿ ಸೆಕ್ಸ್- ಇವೆಲ್ಲಾ ಸಂಗತಿಗಳು ನೆನಪಿರಲಿ!

ಈ ಸಮಯದ ಸಂಸರ್ಕ ಇನ್ನಷ್ಟು ಹೆಚ್ಚು ಬೇಕು ಎನ್ನಿಸುತ್ತದೆ

ಈ ಸಮಯದ ಸಂಸರ್ಕ ಇನ್ನಷ್ಟು ಹೆಚ್ಚು ಬೇಕು ಎನ್ನಿಸುತ್ತದೆ

ಸಾಮಾನ್ಯವಾಗಿ ಮಾಸಿಕ ದಿನಗಳ ಅವಧಿಯಲ್ಲಿ ಮಹಿಳೆಯರಲ್ಲಿ ದೇಹದ ಜೊತೆಗೇ ಭಾವನಾತ್ಮಕ ಬದಲಾವನೆಗಳೂ ಕಂಡು ಬರುತ್ತವೆ. ಕಾಮಾಸಕ್ತಿ ಈ ಸಮಯದಲ್ಲಿ ಹೆಚ್ಚುತ್ತದೆ ಎಂದು ಹಲವು ಮಹಿಳೆಯರು ಒಪ್ಪಿಕೊಂಡಿದ್ದಾರೆ. ದೇಹದ ಸೂಕ್ಷ್ಮ ಅಂಗಗಳು ಇತರ ಸಮಯಕ್ಕಿಂತಲೂ ಈ ದಿನಗಳಲ್ಲಿ ಹೆಚ್ಚು ಸಂವೇದಿಯಾಗಿರುವ ಕಾರಣ ಲೈಂಗಿಕತೆ ಇನ್ನಷ್ಟು ಬೇಕು ಎನ್ನಿಸುತ್ತದೆ.

ಆದರೆ ಈ ಸಮಯದ ಸೆಕ್ಸ್ ಗೋಜಲುಮಯವಾಗದಂತೆ ನೋಡಿಕೊಳ್ಳುವುದು ಹೇಗೆ?

ಆದರೆ ಈ ಸಮಯದ ಸೆಕ್ಸ್ ಗೋಜಲುಮಯವಾಗದಂತೆ ನೋಡಿಕೊಳ್ಳುವುದು ಹೇಗೆ?

ಒಂದು ವೇಳೆ ಈ ಸಮಯ ಹೆಚ್ಚು ಹೆಚ್ಚು ಪ್ರಣಯದಿಂದ ಕೂಡಿದ್ದು ಕಡಿಮೆ ಗೋಜಲು ಎದುರಾಗುವಂತೆ ನೋಡಿಕೊಳ್ಳುವುದು ನಿಮ್ಮ ಇಚ್ಛೇಯಾಗಿದ್ದರೆ ನೀವು ಯಾವುದೇ ಅಳುಕಿಲ್ಲದೇ ಮುಂದುವರೆಯ ಬಹುದು. ಒಂದು ವೇಳೆ ಯಾವುದೇ ಗೋಜಲು ಎದುರಾದರೂ ಇದನ್ನು ಸಂಗ್ರಹಿಸಿಡಲು ಮಾಸಿಕ ದಿನಗಳ ಸ್ರಾವ ಸಂಗ್ರಹಿಸಲೆಂದೇ ಇರುವ ಕಪ್ (menstrual cup) ಒಂದನ್ನು ಪಕ್ಕದಲ್ಲಿಯೇ ಇರಿಸಿಕೊಂಡರಾಯಿತು.

ಆದರೆ ರಕ್ಷಣೆ ಪಡೆಯುವುದನ್ನು ಮರೆಯದಿರಿ

ಆದರೆ ರಕ್ಷಣೆ ಪಡೆಯುವುದನ್ನು ಮರೆಯದಿರಿ

ಆದರೆ ಈ ಬಗ್ಗೆ ಇರುವ, ಸದಾ ಅನ್ವಯವಾಗುವ ಸೂತ್ರವನ್ನು ಮರೆಯದಿರಿ. ಅದೆಂದರೆ ಸೂಕ್ತ ರಕ್ಷಣೆಯನ್ನು ವಹಿಸುವುದು. ರಕ್ಷಣೆ ಇದ್ದರೆ ನಿಮಗೆ ಇಷ್ಟವಾದಷ್ಟೂ ಹೊತ್ತು ದಂಪತಿಗಳು ಸಂಸರ್ಗಸುಖವನ್ನು ಮುಂದುವರೆಸಬಹುದು.

Most Read: ಖಾಲಿ ಹೊಟ್ಟೆ ಅಥವಾ ತುಂಬಿದ ಹೊಟ್ಟೆ? ಸೆಕ್ಸ್ ಗೆ ಯಾವುದು ಒಳ್ಳೆಯದು?

 ಅಗತ್ಯ ಸೂಚನೆ

ಅಗತ್ಯ ಸೂಚನೆ

ಒಂದು ವೇಳೆ ನಿಮ್ಮ ಚಿಕ್ಕ ಅಚಾತುರ್ಯದಿಂದ ಹೊದಿಕೆಯ ಮೇಲೆ ಚೆಲ್ಲುವ ರಕ್ತದ ಚಿಕ್ಕ ಬಿಂದುವೂ ಮರುದಿನ ಇತರರ ಎದುರು ಮುಜುಗರಕ್ಕೆ ಕಾರಣ ವಾಗುವುದನ್ನು ತಪ್ಪಿಸಲು ಈ ದಿನದ ಬೆಡ್ ಶೀಟ್ ಗಾಢವರ್ಣದ್ದಾಗಿರುವಂತೆ ನೋಡಿಕೊಳ್ಳಿ. ಅಲ್ಲದೇ ಒಂದು ವೇಳೆ ನೀವು ಟಾಂಪೋನ್ ಗಳನ್ನು ಉಪಯೋಗಿಸುವವರಾಗಿದ್ದರೆ, ಸೆಕ್ಸ್ ನಡೆಸುವ ಮುನ್ನ ಹೊರತೆಗೆಯುವುದನ್ನು ಮರೆಯದಿರಿ.

English summary

5 strange things that happen when you have sex during periods!

For all the women out there, it is important to understand that having sex during periods is absolutely normal and unless you are worried about things going a little messy, there is nothing unsafe about it. However, there are certain strange things that may happen when you catch some action during your periods.
X
Desktop Bottom Promotion