For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಕಾಣಿಸಿಕೊಳ್ಳುವ 5 ಆರೋಗ್ಯ ಸಮಸ್ಯೆಯನ್ನು ನೀವು ನಿರ್ಲಕ್ಷಿಸಲೇಬಾರದು!

By Sushma
|

ಅದೆಷ್ಟೋ ರೀತಿಯ ಆರೋಗ್ಯ ಸಮಸ್ಯೆಗಳನ್ನು ಮನುಷ್ಯರು ಪ್ರತಿದಿನ ಎದುರಿಸುತ್ತಲೇ ಇರುತ್ತಾರೆ,. ಮನೆಯ ಕೆಲಸದ ಒತ್ತಡ, ಆಫೀಸಿನ ಕೆಲಸ ಇವುಗಳಿಂದಾಗಿ ಆ ಸಮಸ್ಯೆಯನ್ನು ನಿರ್ಲಕ್ಷಿಸುವುದು ಸರ್ವೇಸಾಮಾನ್ಯ. ನೀವೂ ಆರೋಗ್ಯವಾಗಿದ್ದೀರಿ ಸಣ್ಣಪುಟ್ಟದಕ್ಕೆಲ್ಲ ಡಾಕ್ಟರ್ ಹತ್ತಿರ ಹೋಗೋದು ಯಾಕೆ, ಸುಮ್ಮನೆ ಅವರಿಗೆ ದುಡ್ಡು ಕೊಡಬೇಕು ಅಂತ ನೀವು ಭಾವಿಸಬಹುದು. ಆದರೆ ಕೆಲವು ಅನಾರೋಗ್ಯದ ಚಿಹ್ನೆಗಳು ನಿಮಗೆ ಮುನ್ನೆಚ್ಚರಿಕೆಗಳು ಅನ್ನೋದನ್ನು ಮರಿಬೇಡಿ.

common health issues you should not neglect

ಬೆನ್ನು ನೋವು

ಪ್ರತಿದಿನ ಅದೆಷ್ಟೋ ಮಂದಿ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಕೆಲವೇ ನಿಮಿಷಗಳ ವರೆಗೆ ನೋವು ಕಾಣಿಸಿಕೊಳ್ಬಹುದು ಮತ್ತೂ ಕೆಲವರಿಗೆ ಗಂಟೆಗಳ ವರೆಗೆ ನೋವಿದ್ದು ಯಾವಾಗಲೂ ಪರಿತಪಿಸುವಂತೆ ಮಾಡಬಹುದು. ಕ್ರಾನಿಕ್ ಪೈನ್ ಆರಂಭವಾಗಿದ್ದರೆ ಖಂಡಿತ ನೀವು ಅದನ್ನು ಕಡೆಗಣಿಸಬಾರದು. ಬೆನ್ನು ನೋವು ನಿಮ್ಮ ದೈನಂದಿನ ಚಟುವಟಿಕೆಯ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುತ್ತೆ. ದೈಹಿಕ ವ್ಯಾಯಾಮ ನಿಮ್ಮ ಬೆನ್ನುನೋವನ್ನು ನಿವಾರಿಸಬಹುದು. ಕುಳಿತುಕೊಳ್ಳುವ ಭಂಗಿ, ಕೆಲಸ ಮಾಡುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ನಿಮ್ಮ ಬೆನ್ನುನೋವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. ನಿಮ್ಮ ವಯಸ್ಸನ್ನು ಮೀರಿಸಿ, ನಿಮ್ಮ ಕಾಳಜಿಯಿಂದ ಬೆನ್ನು ನೋವು ಕೆಲವೇ ದಿನಗಳಲ್ಲಿ ನಿವಾರಣೆಯಾಗದೆ ಪದೇ ಪದೇ ಮರುಕಳಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ.

ತಲೆನೋವು

ಮನುಷ್ಯನಾಗಿ ಹುಟ್ಟಿದ ಮೇಲೆ ತಲೆನೋವು ಒಂದು ಸಾಮಾನ್ಯ ಸಮಸ್ಯೆ. ಒಂದಲ್ಲ ಒಂದು ಸಂದರ್ಬದಲ್ಲಿ ತಲೆನೋವು ಪ್ರತಿಯೊಬ್ಬರನ್ನು ಕಾಡಿಯೇ ಕಾಡುತ್ತೆ. ಪ್ರತಿ ಇಬ್ಬರು ಮನುಷ್ಯರಲ್ಲಿ ಒಬ್ಬರಿಗೆ ತಲೆನೋವು ಇರುತ್ತಂತೆ. 10 ರಲ್ಲಿ ಒಬ್ಬ ಮನುಷ್ಯನಿಗೆ ಮೈಗ್ರೇನ್ ಇರುತ್ತಂತೆ. ಒತ್ತಡ, ಆಫೀಸ್ ಕೆಲಸ, ಟ್ರಾಫಿಕ್ ನಲ್ಲಿ ಹೆಚ್ಚು ಸಮಯ ಕಳೆಯುವುದು, ಅಸಿಡಿಟಿಯಿಂದಲೂ ತಲೆನೋವು ಬರಬಹುದು. ಕೆಟ್ಟ ಆಹಾರ ಕ್ರಮದಿಂದಲೂ ತಲೆ ಸಿಡಿಯುವಂತಾಗುತ್ತೆ. ಹೆಚ್ಚಿನ ತಲೆನೋವನ್ನು ನೋವು ನಿವಾರಕಗಳಿಂದ ನಿಯಂತ್ರಣದಲ್ಲಿಡಬಹುದು. ಅದು ಸಾಧ್ಯವಾಗದೇ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಹಲ್ಲು ನೋವು

ಪ್ರತಿಯೊಬ್ಬರ ದೈನಂದಿನ ಚಟುವಟಿಕೆ ಆರಂಭವಾಗೋದು ಬ್ರಷ್ಶಿಂಗ್ ನಿಂದಲೇ. ಮತ್ತು ಒಂದು ಕಾಫಿ ಅಥವಾ ಟೀ ಸೇವನೆ ಪ್ರತಿಯೊಬ್ಬರ ರೂಢಿ. ಆದರೆ ಕೆಲವರಿಗೆ ಹಲ್ಲು ನೋವು ಅವರ ಮುಂಜಾನೆಯನ್ನು ಹಾಳು ಮಾಡಿ ಬಿಡುತ್ತೆ. ಆಹಾರ ಸೇವನೆ ಕಷ್ಟವೆನಿಸುತ್ತೆ. ಆಸಿಡ್ ಫುಡ್, ಸಕ್ಕರೆ ಅಂಶದ ಆಹಾರ ಸೇವನೆ, ತಣ್ಣನೆಯ ಮತ್ತು ಬಿಸಿಯಾದ ಆಹಾರ ಸೇವನೆಯಿಂದ ಹಲ್ಲು ನೋವು ಅಧಿಕವಾಗಬಹುದು. ಆದರೆ ಇದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ, ಒಳ್ಳೆಯ ಟೂತ್ ಪೇಸ್ಟ್ ಬಳಸಿ. ಹಲ್ಲು ಝುಮ್ ಅನ್ನಿಸುವುದನ್ನು ಸಣ್ಣ ಸಮಸ್ಯೆಯೆಂದು ಕಡೆಗಡಿಸಿದರೆ ಮುಂದೆ ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತೆ. ಆಗಾಗ ಡೆಂಟಿಸ್ಟ್ ನ್ನು ಭೇಟಿ ಮಾಡಿ ಹಲ್ಲನ್ನು ಚೆಕ್ ಅಪ್ ಮಾಡಿಸಿಕೊಳ್ಳಿ ಮತ್ತು 3 ರಿಂದ 6 ತಿಂಗಳಿಗೊಮ್ಮೆ ಟೂತ್ ಬ್ರಷ್ ಬದಲಾಯಿಸಿ

ಕೂದಲುದುರುವಿಕೆ

ಕೂದಲೂ ಉದುರುವಿಕೆ ಮತ್ತು ಹುಟ್ಟುವಿಕೆಯ ಪ್ರಕ್ರಿಯೆ ಪ್ರತಿಯೊಬ್ಬರಲ್ಲೂ ಆಗುತ್ತೆ. 50 ರಿಂದ 100 ಕೂದಲು ಪ್ರತಿದಿನ ಉದುರುದರೆ ಅದೊಂದು ನಾರ್ಮಲ್ ಕಂಡೀಷನ್, ಆದರೆ ಅದಕ್ಕಿಂತಲೂ ಹೆಚ್ಚು ಕೂದಲು ಉದುರುವುದು ನಿಮ್ಮ ಬಾಚಣಿಗೆಯಲ್ಲಿ ಕಾಣಿಸಿದರೆ ಅದೊಂದು ಸಮಸ್ಯೆ. ಆಗ ನೀವು ಸ್ವಲ್ಪ ನಿಮ್ಮ ಕೂದಲಿನ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದರ್ಥ. ಇದನ್ನು ಸಮಸ್ಯೆಯೇ ಅಲ್ಲವೆಂಬಂತೆ ಪರಿಗಣಿಸಬೇಡಿ. ಸರಿಯಾಗಿ ಶಾಂಪೂ ಬಳಸಿ ಕೂದಲು ತೊಳೆದುಕೊಳ್ಳುವುದು, ನ್ಯೂಟ್ರೀಷಿಯನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕೂದಲುದುರುವಿಕೆಯನ್ನು ನಿಯಂತ್ರಿಸಬಹುದು. ಒತ್ತಡ ರಹಿತ ಜೀವನ, ಸ್ವಚ್ವವಾಗಿರುವುದರಿಂದಲೂ ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.

ಎದೆಯುರಿ

ಎದೆಯುರಿ ಅನ್ನುವುದು ನಿಮ್ಮ ಹೃದಯ ಸಮಸ್ಯೆ ಖಂಡಿತ ಅಲ್ಲ. ಎದೆಯುರಿಗೂ ಹೃದಯಕ್ಕೂ ಯಾವ ಸಂಬಂಧವೂ ಇಲ್ಲ. ನಿಮ್ಮ ಹೊಟ್ಟೆಯಿಂದ ಆಸಿಡ್ ಅಂಶ ಆಹಾರದ ಕೊಳವೆಯಲ್ಲಿ ಸ್ರವಿಸಿದಾಗ ಎದೆಯುರಿ ಕಾಣಿಸಿಕೊಳ್ಳುತ್ತೆ. ಸಹಿಸಲಸಾಧ್ಯವಾದ ಉರಿಯು ನಿಮ್ಮ ಹೊಟ್ಟೆಯಿಂದ ಹೃದಯ ಭಾಗದ ವರೆಗೆ ಕಾಣಿಸಿಕೊಂಡು ಗಂಟಲಿನಲ್ಲೂ ಉರಿಯ ಅನುಭವವಾಗಬಹುದು.. ಇದಕ್ಕೆ ಹಲವಾರು ಕಾರಣಗಳಿವೆ. ಅತಿಯಾದ ಆಹಾರ ಸೇವನೆ, ಫ್ಯಾಟ್ ಅಂಶವಿರುವ ಆಹಾರ ಸೇವಿಸುವುದು, ಎಣ್ಣೆ ಅಂಶದ ಆಹಾರ ಸೇವಿಸುವುದು, ಅಲ್ಕೋಹಾಲ್ ಸೇವನೆ, ಸಾಫ್ಟ್ ಡ್ರಿಂಕ್ ಗಳ ಸೇವನೆಯಿಂದ ಎದೆಯುರಿ ಹೆಚ್ಚಾಗಬಹುದು. ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ದೇಹ ತೂಕ ನಿಯಂತ್ರಣದಲ್ಲಿಡುವುದು, ಸರಿಯಾಗಿ ನಿದ್ದೆ ಮಾಡುವುದು, ಚೆನ್ನಾಗಿ ನೀರು ಸೇವಿಸುವುದು, ಒತ್ತಡ ರಹಿತ ಜೀವನಶೈಲಿಯಿಂದ ಎದೆಯುರಿಯನ್ನು ನಿಯಂತ್ರಣದಲ್ಲಿ ಇಡಬಹುದು. ಇದಕ್ಕೂ ಮೀರಿ ಸಮಸ್ಯೆಯಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಿ.

English summary

5 Common Health Issues You Should Not Neglect

There are many health problems that people deal with everyday. Amid bustling life and household chores, sometimes you tend to neglect taking note of your health issues. Whether you are basically healthy, have a disease, or just symptoms you do not understand, your doctor is the best person to talk with.
X
Desktop Bottom Promotion