For Quick Alerts
ALLOW NOTIFICATIONS  
For Daily Alerts

ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿ ಕೊಂಡರೆ ಆತಂಕ ಪಡದಿರಿ!

ಮುಳ್ಳು ತೆಗೆದು ಮೀನು ತಿನ್ನುವ ಕಲೆ ಪ್ರತಿಯೊಬ್ಬರಿಗೂ ಕರಗತವಾಗಿರುವುದಿಲ್ಲ. ಹೀಗೆ ಮೀನು ತಿನ್ನುವಾಗ ಮೀನಿನ ಮುಳ್ಳುಗಳು ಬಾಯಿ, ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಇದೆ.... ಅದಕ್ಕೆಂದೇ ಕೆಲವೊಂದು ಟಿಪ್ಸ್ ನೀಡಿದ್ದೇವೆ, ಮುಂದೆ ಓದಿ...

|

ದೇಶದ ಯಾವುದೇ ಭಾಗದ ಕರಾವಳಿಗೆ ಹೋಗಿ. ಅಲ್ಲಿನ ಜನರ ನೆಚ್ಚಿನ ಆಹಾರ ಮೀನು. ಮೀನಿನ ಪದಾರ್ಥಗಳನ್ನು ವಿವಿಧ ರೀತಿಯಿಂದ ತಯಾರಿಸಲಾಗುತ್ತದೆ. ಅದರ ರುಚಿಯೇ ಬೇರೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಅಥವಾ ಕರ್ನಾಟಕದ ಕರಾವಳಿ ಭಾಗದ ಜನರನ್ನು ನೋಡಿ. ಅವರಿಗೆ ಮೀನು ಎಂದರೆ ಇಷ್ಟದ ಆಹಾರ. ತಯಾರಿಸುವ ವಿಧಾನ ಭಿನ್ನಭಿನ್ನವಾಗಿದ್ದರೂ ಅವರಿಗೆ ಪ್ರತೀ ದಿನ ಮೀನು ಬೇಕೇಬೇಕು. ಮೀನಿನಲ್ಲಿ ಅಗಾಧ ಪ್ರಮಾಣದ ಪೌಷ್ಠಿಕಾಂಶಗಳು ಕೂಡ ಇದೆ. ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ: ಮೀನು ತಿನ್ನಿ ಕೊಬ್ಬು ಕರಗಿಸಿ!

ಮೀನನ್ನು ಕೆಲವರು ಇಷ್ಟಪಡದ ಕಾರಣವೆಂದರೆ ಅದರಲ್ಲಿರುವ ಮುಳ್ಳುಗಳು. ಮುಳ್ಳು ತೆಗೆದು ಮೀನು ತಿನ್ನುವ ಕಲೆ ಪ್ರತಿಯೊಬ್ಬರಿಗೂ ಕರಗತವಾಗಿರುವುದಿಲ್ಲ. ಹೀಗೆ ಮೀನು ತಿನ್ನುವಾಗ ಮೀನಿನ ಮುಳ್ಳುಗಳು ಬಾಯಿ, ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಇದೆ. ಇಂತಹ ಸಂದರ್ಭದಲ್ಲಿ ನೀರು ಅಥವಾ ಬೇರೆ ಘನ ಆಹಾರ ಸೇವಿಸಿದಾಗ ಮುಳ್ಳು ಕಿತ್ತು ಹೋಗಬಹುದು. ಮೀನು ತಿಂದರೆ ದೊರೆಯುವ ಪ್ರಮುಖ ಗುಣಗಳು

ಒಂದು ವೇಳೆ ಮುಳ್ಳು ಬರದೇ ಇದ್ದರೆ ಕೆಲವೊಂದು ಮನೆಮದ್ದನ್ನು ಪ್ರಯತ್ನಿಸಬಹುದು. ಇದು ಸಫಲವಾಗದಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಬಾಯಿಯಲ್ಲಿ ಸಿಕ್ಕಿಕೊಂಡ ಮುಳ್ಳನ್ನು ತೆಗೆಯುವುದು ಹೇಗೆಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಓದುತ್ತಾ ಸಾಗಿ....


ಭಯಪಡಬೇಡಿ

ಭಯಪಡಬೇಡಿ

ಇದಕ್ಕೆ ಭಯಪಡುವ ಅಗತ್ಯವೇ ಇಲ್ಲ. ನೀವು ಮುಳ್ಳನ್ನು ನುಂಗಿದ್ದೀರಿ ಮತ್ತು ಅದು ಗಂಟಲಿನಲ್ಲಿ ಇಳಿದುಹೋಗಿದೆ ಎಂದರೆ ಅದು ಸಣ್ಣ ಮುಳ್ಳು ಎಂದು ಹೇಳಬಹುದು. ದೊಡ್ಡ ಮುಳ್ಳಾಗಿದ್ದರೆ ಅದು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತಾ ಇತ್ತು.

ಹೀಗೆ ಮಾಡಿ...

ಹೀಗೆ ಮಾಡಿ...

ಕಿಬ್ಬೊಟ್ಟೆಯ ಮೇಲೆ ಒತ್ತಡ ಹಾಕುವುದು ಒಳ್ಳೆಯ ವಿಧಾನ. ನಿಮ್ಮ ಕಿಬ್ಬೊಟ್ಟೆಯ ಮೇಲೆ ಒತ್ತಡ ಹಾಕಲು ಪೋಷಕರಿಗೆ ಹೇಳಿ. ಇದರಿಂದ ಆಹಾರ ಸಿಲುಕಿಕೊಂಡಾಗ ಉಂಟಾಗುವಂತಹ ಭಾವನೆಯು ಕಡಿಮೆಯಾಗುವುದು.

ಜೀರ್ಣಗೊಂಡು ಹೊರಹೋಗುತ್ತದೆ...

ಜೀರ್ಣಗೊಂಡು ಹೊರಹೋಗುತ್ತದೆ...

ಹೆಚ್ಚಿನ ಸಂದರ್ಭದಲ್ಲಿ ಹೊಟ್ಟೆಯೊಳಗೆ ಮುಳ್ಳು ಹೋದಾಗ ಅದು ಜೀರ್ಣಗೊಂಡು ಹೊರಹೋಗುತ್ತದೆ. ಕೆಲವು ಸಲ ಇದು ಕರುಳಿನಲ್ಲಿ ಉಳಿದುಕೊಳ್ಳಬಹುದು. ಆದರೆ ಸ್ವಲ್ಪ ದಿನದ ಬಳಿಕ ಇದು ಹೊರಹೋಗುವುದು.

ಕರುಳಿನಲ್ಲಿ

ಕರುಳಿನಲ್ಲಿ

ಒಂದು ವೇಳೆ ಮುಳ್ಳು ಜೀರ್ಣವಾಗದೆ ಇದ್ದು, ಮಲದ ಮೂಲಕ ಅದು ಹೊರಬಂದರೆ ಆಗ ಮಲವಿಸರ್ಜನೆ ವೇಳೆ ನೋವಾಗುವುದು. ಮುಳ್ಳು ಕರುಳು ಅಥವಾ ಹೊಟ್ಟೆಯ ಬೇರೆ ಭಾಗದಲ್ಲಿ ಚುಚ್ಚಿಕೊಂಡಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಸರಿಯಾಗಿ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ

ಮುಳ್ಳು ಸಿಲುಕಿಕೊಂಡರೆ ಏನೂ ತಿನ್ನಲು ಹೋಗಬೇಡಿ. ಕೇವಲ ನೀರು ಮಾತ್ರ ಕುಡಿಯಿರಿ. ಬೇರೆ ಏನೇ ತಿಂದರೂ ಆಗ ಮುಳ್ಳನ್ನು ತೆಗೆಯುವುದು ತುಂಬಾ ಕಷ್ಟವಾಗಬಹುದು.

ಬೇಯಿಸಿದ ಅನ್ನ...

ಬೇಯಿಸಿದ ಅನ್ನ...

ಒಂದು ಹಿಡಿಯಷ್ಟು ಬೇಯಿಸಿದ ಅನ್ನವನ್ನು ಜಗಿಯದೆ ಹಾಗೆ ನುಂಗಿದ ಬಳಿಕ ನೀರು ಕುಡಿಯಿರಿ.

ಸಣ್ಣ ಬಾಳೆಹಣ್ಣನ್ನು ಸ್ವಲ್ಪನೇ ಜಗಿದು ಹಾಗೆ ನುಂಗಿ!

ಸಣ್ಣ ಬಾಳೆಹಣ್ಣನ್ನು ಸ್ವಲ್ಪನೇ ಜಗಿದು ಹಾಗೆ ನುಂಗಿ!

ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಿದ್ದರೆ ಬಾಳೆಹಣ್ಣು ಸೇವಿಸುವುದು ಒಳ್ಳೆಯ ವಿಧಾನ. ಬಾಳೆಹಣ್ಣನ್ನು ಸ್ವಲ್ಪನೇ ಜಗಿದು ಹಾಗೆ ನುಂಗಿ. ಬಾಯಿಯಲ್ಲಿ ಎರಡು ನಿಮಿಷ ಇಟ್ಟುಕೊಂಡು ಬಳಿಕ ಬಾಳೆಹಣ್ಣನ್ನು ನುಂಗಿ. ನೀರು ಕುಡಿಯಿರಿ. ಇದರಿಂದ ಸಿಲುಕಿಕೊಂಡ ಮುಳ್ಳು ಹೋಗುವುದು.

ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ

ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ

ಎರಡು ಚಮಚ ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಬಳಿಕ ನುಂಗಿ. ಇದು ಗಂಟಲಿನ ಮುಳ್ಳನ್ನು ತೆಗೆದು ಹಾಕುವುದು.

ಕಂದು ಬ್ರೆಡ್

ಕಂದು ಬ್ರೆಡ್

ಕಂದು ಬ್ರೆಡ್ ತೆಗೆದುಕೊಂಡು ಅದಕ್ಕೆ ಕಡಲೆಬೀಜದ ಬೆಣ್ಣೆಯನ್ನು ಹಚ್ಚಿಕೊಂಡು ಒಂದು ತುಂಡು ಮಾಡಿ. ಅದನ್ನು ಸ್ವಲ್ಪ ಹೊತ್ತು ಬಾಯಿಯಲ್ಲಿ ಇಟ್ಟ ಬಳಿಕ ನುಂಗಿ. ಜಗಿಯದೆ ನುಂಗಿ ಮತ್ತು ನೀರು ಕುಡಿಯಿರಿ. ಇದು ಗಂಟಲಿನ ಮುಳ್ಳನ್ನು ತೆಗೆದುಹಾಕುವುದು.

ಯಾವ ಮದ್ದು ಫಲಿಸದಿದ್ದರೆ ಏನು ಮಾಡಬೇಕು?

ಯಾವ ಮದ್ದು ಫಲಿಸದಿದ್ದರೆ ಏನು ಮಾಡಬೇಕು?

ಈ ಮನೆಮದ್ದುಗಳು ಫಲಿಸದೆ ಇದ್ದರೆ ಮುಳ್ಳು ಈಗಲೂ ನಿಮ್ಮ ಗಂಟಲಿನಲ್ಲಿ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಗಂಟಲಿನಲ್ಲಿಯೇ ಬಿಟ್ಟರೆ ಅದರಿಂದ ಸೋಂಕು ಬರಬಹುದು. ಹೀಗೆ ಆದಲ್ಲಿ ಶಸ್ತ್ರಚಿಕಿತ್ಸೆ ಬೇಕಾಗಬಹುದು.

English summary

Will You Die If You Swallow A Fish Bone?

Fish is tasty and healthy too. But the only problem with it is the sharp bones in it. Generally, any of us would carefully eat the flesh leaving the bones. But in rare cases, small sharp pieces of the bone may accidentally come into your mouth while eating the fleshy part. Is it dangerous if it goes inside your body? It depends.
X
Desktop Bottom Promotion