For Quick Alerts
ALLOW NOTIFICATIONS  
For Daily Alerts

ನಾನ್‌ವೆಜ್ ಪ್ರಿಯರಿಗೆ ಸಿಹಿ ಸುದ್ದಿ: ಮೀನು ತಿನ್ನಿ ಕೊಬ್ಬು ಕರಗಿಸಿ!

By Manu
|

ಪ್ರಕೃತಿ ನಮಗೆ ಹಲವಾರು ರೀತಿಯ ಆಹಾರಗಳನ್ನು ನೀಡಿದೆ. ಪ್ರತಿಯೊಂದು ಆಹಾರದಲ್ಲೂ ನಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಇದ್ದೇ ಇರುತ್ತದೆ. ಸಸ್ಯಹಾರಿಗಳಾಗಿರಲಿ ಅಥವಾ ಮಾಂಸಹಾರಿಗಳಾಗಿರಲಿ ಪ್ರತಿಯೊಬ್ಬರಿಗೂ ಅವರು ತಿನ್ನುವಂತಹ ಆಹಾರದಲ್ಲಿ ಪೋಷಕಾಂಶಗಳು ಇದ್ದೇ ಇರುತ್ತದೆ. ಅದರಲ್ಲೂ ಸಾಗರ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ. ಮೀನು ಪ್ರಿಯರಿಗಾಗಿ 8 ಬಗೆಯ ಮೀನಿನ ರೆಸಿಪಿ

ನಮಗೆಲ್ಲಾ ಗೊತ್ತಿರುವಂತೆ ಸಾಗರೋತ್ಪನ್ನಗಳಲ್ಲಿಯೇ ಮೀನು ಅತಿ ಸುಲಭವಾಗಿ, ಯಥೇಚ್ಛವಾಗಿ, ಸರಿಸುಮಾರು ಇಡಿಯ ವರ್ಷ ಎಲ್ಲೆಡೆ ದೊರಕುವ ಆಹಾರವಾಗಿದ್ದು ವಿಶ್ವದ ಅತಿ ಹೆಚ್ಚಿನ ಜೀವಿಗಳು ಸೇವಿಸುವ ಆಹಾರವೂ ಆಗಿದೆ. ಮನುಷ್ಯರಿಗೂ ಇದು ಅತ್ಯಂತ ಆರೋಗ್ಯಕರವಾಗಿದ್ದು ಹಲವಾರು ರೀತಿಯಲ್ಲಿ ಅಂಗಾಂಗಗಳ ಪೋಷಣೆ ಮಾಡುತ್ತದೆ. ಸುಲಭವಾಗಿ ತಯಾರಿಸಿ ಗರಿಗರಿಯಾದ ಮೀನಿನ ಫ್ರೈ!

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪ್ರೋಟೀನುಗಳು ಮತ್ತು ಒಮೆಗಾ ಕೊಬ್ಬಿನ ತೈಲಗಳು (ಸುಲಭವಾಗಿ ಮೀನಿನಿಣ್ಣೆ ಎಂದು ಕರೆಯಬಹುದು) ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿರುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಯವಿಲ್ಲ, ಅಲ್ಲದೆ ಕೊಬ್ಬನ್ನು ಕೂಡ ನಿಯಂತ್ರಿಸುತ್ತದೆ, ಬನ್ನಿ ಮೀನಿನಲ್ಲಿರುವ ಇನ್ನಷ್ಟು ಪ್ರಯೋಜನಗಳನ್ನು ಮುಂದೆ ಓದಿ...

ಮೀನಿನಲ್ಲಿ ಒಮೆಗಾ3 ಸಮೃದ್ಧವಾಗಿದೆ

ಮೀನಿನಲ್ಲಿ ಒಮೆಗಾ3 ಸಮೃದ್ಧವಾಗಿದೆ

ನೀವು ದಿನಾಲೂ ಮೀನು ತಿಂದರೆ ಆಗ ರಕ್ತದಲ್ಲಿ ಒಮೆಗಾ 3 ಹೆಚ್ಚಾಗುತ್ತದೆ. ಇದರಿಂದ ಸೆರೊಟೊನಿನ್ ಎನ್ನುವ ಅಂಶವು ಉತ್ಪತ್ತಿಯಾಗುತ್ತದೆ. ಅಲ್ಲದೆ ಸೆರೊಟೊನಿನ್ ಖಿನ್ನತೆಯನ್ನು ದೂರ ಮಾಡುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಮೀನು ಹೃದಯಕ್ಕೆ ತುಂಬಾ ಒಳ್ಳೆಯದು

ಮೀನು ಹೃದಯಕ್ಕೆ ತುಂಬಾ ಒಳ್ಳೆಯದು

ಹೃದಯ ಯಾವುದೇ ಸ್ಥಿತಿಯಲ್ಲಿದ್ದರೂ ಮೀನು ತಿಂದರೆ ಅದರಲ್ಲಿನ ಕೆಲವೊಂದು ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಎಚ್ ಐವಿ ಅಥವಾ ಏಡ್ಸ್ ನಂತಹ ರೋಗದಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ದಿನಾಲೂ ಮೀನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮೀನು ಹೃದಯಕ್ಕೆ ತುಂಬಾ ಒಳ್ಳೆಯದು

ಮೀನು ಹೃದಯಕ್ಕೆ ತುಂಬಾ ಒಳ್ಳೆಯದು

ಅದರಲ್ಲೂ ಮೀನನ್ನು ದಿನಾಲೂ ತಿನ್ನುವುದರಿಂದ ದೇಹದಲ್ಲಿನ ಉರಿಯೂತ ಶಮನವಾಗುವುದು. ಅರ್ಥಟೀಸ್ ಇರುವವರು ನಿಯಮಿತವಾಗಿ ಮೀನು ತಿಂದರೆ ನೋವಿನಿಂದ ಗುಣಮುಖವಾಗಬಹುದು.

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯಕ್ಕೆ

ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವಂತಹ ಎರಡು ರೀತಿಯ ಆ್ಯಸಿಡ್‌ಗಳಾದ ಡೊಕೊಸ್ಹೆಕ್ಸೊನೊಕ್ ಮತ್ತು ಇಕೊಸ್ಪೊಂಟೊನಿಕ್ ಎನ್ನುವ ಎರಡು ಆ್ಯಸಿಡ್ ಮೀನಿನಲ್ಲಿದೆ. ದಿನಾಲೂ ಮೀನು ತಿನ್ನುವುದರಿಂದ ಚರ್ಮದ ತೇವಾಂಶ ಹೆಚ್ಚಾಗುವುದು, ಮೊಡವೆ ಕಡಿಮೆಯಾಗಿ ನೆರಿಗೆಗಳು ಮಾಯವಾಗುತ್ತದೆ.

ದೇಹದ ತೂಕವನ್ನು ಇಳಿಸಿಕೊಳ್ಳಲು

ದೇಹದ ತೂಕವನ್ನು ಇಳಿಸಿಕೊಳ್ಳಲು

ಮೀನನ್ನು ದಿನಾಲೂ ತಿಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರಲ್ಲೂ ವ್ಯಾಯಾಮ ಮತ್ತು ಇತರ ಪಥ್ಯಕ್ಕಿಂತ ಹೆಚ್ಚು ಕೊಬ್ಬನ್ನು ಕರಗಿಸುವ ಶಕ್ತಿ ಮೀನಿನಲ್ಲಿದೆ. ಕೊಬ್ಬಿನ ಕೋಶಗಳು ದೇಹದಲ್ಲಿ ಬೆಳೆಯುವುದನ್ನು ತಡೆದು ಅದನ್ನು ಕೊಲ್ಲುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ.

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ

ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಹಿತಮಿತವಾಗಿ (ಯಾವುದಕ್ಕೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ) ಮೀನು ತಿಂದರೆ ಅದು ಮಗುವಿಗೆ ತುಂಬಾ ಒಳ್ಳೆಯದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಮೀನಿನಲ್ಲಿರುವ ಒಮೆಗಾ3 ಎನ್ನುವ ಅಂಶವು ಮನುಷ್ಯರ ಮೆದುಳಿನ ಬೆಳವಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆಯಂತೆ.

English summary

Why You Should Eat Fish Daily

We are all aware of the fact that eating fish on a daily basis is good for our skin and hair. Besides this there are a lot of health benefits of eating fish. Let us focus on some of the health benefits of eating fish. The cell membranes of fish contain omega-3s.
X
Desktop Bottom Promotion