Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆ ಔಷಧ: ಮಾಸಿಕ ಋತುಚಕ್ರದ ನೋವಿಗೆ ಶೀಘ್ರ ಪರಿಹಾರ...
ಪ್ರತೀ ತಿಂಗಳು ಉಂಟಾಗುವ ಮುಟ್ಟಿನ ವೇಳೆಯ ನೋವನ್ನು ನಿವಾರಿಸಲು ಬೋಲ್ಡ್ ಸ್ಕೈ ನಿಮಗೆ ಸರಳವಾದ ಮನೆಮದ್ದನ್ನು ಸೂಚಿಸಿದೆ, ಒಮ್ಮೆ ಪ್ರಯತ್ನಿಸಿ ನೋಡಿ...
ಮಾಸಿನ ದಿನಗಳಲ್ಲಿ ಕೆಲವು ಮಹಿಳೆಯರಿಗೆ ಅತಿಹೆಚ್ಚಿನ ದಿನಗಳ ಕಾಲ ಕೆಳಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಇವರು ನಿತ್ರಾಣರಾಗಿ ಉತ್ಸಾಹವನ್ನೇ ಕಳೆದುಕೊಂಡಿರುತ್ತಾರೆ. ಋತುಮತಿ ಆದ ದಿನದಿಂದ ಹಿಡಿದು ರಜೋನಿವೃತ್ತಿಯವರೆಗೆ ನಡೆಯುವ ಈ ಪ್ರಕೃತಿನಿಯಮದಲ್ಲಿ ಫಲಿತಗೊಳ್ಳದ ಅಂಡಾಣು ದೇಹದಿಂದ ಹೊರದಬ್ಬಲ್ಪಡುವುದೇ ಈ ಕ್ರಿಯೆಯಾಗಿದೆ.
ಈ ಅವಧಿಯಲ್ಲಿ ಗರ್ಭಕೋಶದ ಒಳಭಾಗದ ಪದರಗಳು ವಿಸರ್ಜಿಸಲ್ಪಟ್ಟು ಹೊಸ ಜೀವಕೋಶಗಳು ಇವುಗಳನ್ನು ಬದಲಿಸಿ ಹೊಸ ಅಂಡಾಣುವಿಗೆ ಸ್ಥಳವನ್ನು ಸಿದ್ಧಪಡಿಸುತ್ತದೆ. ಮುಟ್ಟಿನ ನೋವಿಗೆ ಸಾಂತ್ವನ ನೀಡುವ ನುಗ್ಗೆ ಸೊಪ್ಪಿನ ಜ್ಯೂಸ್
ಈ ಕೆಲಸ ಸಾಮಾನ್ಯವಾಗಿ ಪ್ರತಿ ಇಪ್ಪತ್ತೆಂಟರಿಂದ ಮೂವತ್ತಾರು ದಿನಗಳಿಗೊಂದು ಬಾರಿ ಸಂಭವಿಸುತ್ತಿದ್ದು ಕೆಲವರಲ್ಲಿ ಇದು ಹೆಚ್ಚೂ ಕಡಿಮೆಯಾಗುತ್ತದೆ. ಈ ಹಳೆಯ ಜೋವಕೋಶಗಳು ಹೊರಹರಿಯಲು ಹೆಚ್ಚಿನ ರಕ್ತಸ್ರಾವದ ಅಗತ್ಯವಿದ್ದು ಸುಮಾರು ಮೂರರಿಂದ ಐದು ದಿನಗಳ ಕಾಲ ಈ ಕ್ರಿಯೆ ನಡೆಯುತ್ತದೆ.

ಈ ಅವಧಿಯಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು, ರಸದೂತಗಳ ಸ್ರಾವದ ಕಾರಣ ಮನೋಭಾವದಲ್ಲಿ ಬದಲಾವಣೆ, ಸಿಟ್ಟು, ಸಿಡುಕು ಮೊದಲಾದವು ಕಾಣಿಸಿಕೊಳ್ಳುತ್ತವೆ. ಕೆಲವು ಮಹಿಳೆಯರಿಗೆ ಈ ನೋವು ವಿಪರೀತವಾಗಿ ಕಾಡುತ್ತದೆ ಹಾಗೂ ಈ ನೋವಿನಿಂದ ಬಿಡುಗಡೆ ಪಡೆಯಲು ನೋವು ನಿವಾರಕ ಗುಳಿಗೆಗಳಿಗೆ ಮೊರೆ ಹೋಗುತ್ತಾರೆ.
ಆದರೆ ಇದು ತಾತ್ಕಾಲಿಕವಾಗಿ ನೋವಿಗೆ ಶಮನ ನೀಡಿದರೂ ಸತತ ಬಳಕೆಯಿಂದ ಹಾನಿಯನ್ನು ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ನಿಸರ್ಗ ನೀಡಿರುವ ಈ ನೋವಿಗೆ ನಿಸರ್ಗವೇ ನೀಡಿರುವ ಪರಿಹಾರವನ್ನು ಪಡೆಯುವುದೇ ಜಾಣತನದ ಕ್ರಮವಾಗಿದೆ. ಬನ್ನಿ, ನಿಸರ್ಗ ನೀಡಿರುವ ಒಂದು ಪರಿಹಾರವನ್ನು ಅನುಸರಿಸುವ ಬಗೆಯನ್ನು ನೋಡೋಣ: ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಹೇಗೆ?
ಅಗತ್ಯವಿರುವ ಸಾಮಾಗ್ರಿಗಳು
*ಬೀಟ್ರೂಟ್ ರಸ: ಅರ್ಧ ಕಪ್
*ಜೀರಿಗೆ ಪುಡಿ: ಒಂದು ಚಿಕ್ಕ ಚಮಚ
*ಬೀಟ್ರೂಟಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿದ್ದು ಇದು ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ ಈ ರಕ್ತವನ್ನು ಗರ್ಭಾಶಯಕ್ಕೆ ತಲುಪುವಂತೆ ಮಾಡುವ ಮೂಲಕ ಉರಿಯೂತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಉರಿಯೂತ ಮತ್ತು ಸೋಂಕು ಕಡಿಮೆಯಾದರೆ ನೋವು ಸಹಾ ಕಡಿಮೆಯಾಗುತ್ತದೆ.
*ಜೀರಿಗೆಯಲ್ಲಿರುವ ಕ್ಯೂಮೀನಿಯಂ ಎಂಬ ಪೋಷಕಾಂಶಕ್ಕೆ ಉರಿಯೂತ ನಿವಾರಣೆಯ ಗುಣವನ್ನು ಹೊಂದಿದ್ದು ಇದರ ಸೇವನೆಯಿಂದ ಶ್ವಾಸಕೋಶದ ಉರಿಯೂತವನ್ನು ಕಡಿಮೆಗೊಳಿಸುತ್ತದೆ.
ತಯಾರಿಕಾ ವಿಧಾನ
*ಇವೆರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
*ಈ ಪೇಯವನ್ನು ನೋವಿರುವ ದಿನಗಳಲ್ಲಿ ಪ್ರತಿದಿನ ಬೆಳಗ್ಗಿನ ಉಪಾಹಾರದ ಬಳಿಕ ಕುಡಿಯಿರಿ.
ಬರೆಯ ಈ ದಿನಗಳಲ್ಲಿ ಮಾತ್ರವಲ್ಲ, ಮುಂದಿನ ಬಾರಿಯ ಮುಟ್ಟಿನಲ್ಲಿಯೂ ನೋವು ಕಡಿಮೆ ಇರಲು ಈ ಪೇಯವನ್ನು ನಿತ್ಯವೂ ಉಪಾಹಾರದ ಬಳಿಕ ಕುಡಿಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



