For Quick Alerts
ALLOW NOTIFICATIONS  
For Daily Alerts

ಬಾಯಿಹುಣ್ಣಿಗೆ ಸರಳ ಮನೆಮದ್ದುಗಳು-ಒಂದೇ ದಿನದಲ್ಲಿ ಪರಿಹಾರ

By Arshad
|

ಬಾಯಿಹುಣ್ಣು ಅಂದರೆ ಕೆನ್ನೆ ತುಟಿಗಳ ಒಳಭಾಗದ ಚರ್ಮದಲ್ಲಿ ಹಾಗೂ ಒಸಡಿನಲ್ಲಿ ಕೀವುಭರಿತ ಗುಳ್ಳೆಯೊಂದು ಮೂಡುವುದಕ್ಕೆ ಬಾಯಿ ಹುಣ್ಣು ಅಥವಾ ಮೌಥ್ ಅಲ್ಸರ್ ಎಂದು ಕರೆಯುತ್ತಾರೆ. ಈ ಹುಣ್ಣು ಉರಿ ಹಾಗೂ ನೋವಿನಿಂದ ಕೂಡಿದ್ದು ಮಾತನಾಡಲೂ, ಹಲ್ಲುಜ್ಜುವ ಹೊತ್ತಿನಲ್ಲಿಯೂ, ಆಹಾರ ಸೇವನೆಯ ವೇಳೆಯಲ್ಲಿಯೂ ಯಮಯಾತನೆ ನೀಡುತ್ತದೆ.

ನಾಲಿಗೆಯಲ್ಲಿ ಮೂಡುವ ಗುಳ್ಳೆಗಳನ್ನೂ ಇದೇ ವರ್ಗಕ್ಕೆ ಸೇರಿಸಬಹುದಾದರೂ ಇಲ್ಲಿ ಸಾಮಾನ್ಯವಾಗಿ ಕೀವು ಇರುವುದಿಲ್ಲ ಬದಲಿಗೆ ನಾಲಿಗೆಯ ಮೇಲೆ ಗುಳ್ಳೆಗಳು ಮೂಡುತ್ತವೆ. ಅಪರೂಪಕ್ಕೆ ಬಾಯಿಯ ಮೇಲ್ಭಾಗ ಅಂದರೆ ನಾಲಿಗೆಯ ಮೇಲೆ ಇರುವ ಚರ್ಮದ ಭಾಗದಲ್ಲಿಯೂ ಕೀವುಭರಿತ ಗುಳ್ಳೆಗಳು ಮೂಡುತ್ತವೆ.

ಈ ಹುಣ್ಣುಗಳನ್ನು canker sores ಎಂದೂ ಕರೆಯುತ್ತಾರೆ. ಇವು ಒಂದೊಂದೇ ಇರಬಹುದು ಅಥವಾ ಹಲವು ಗುಳ್ಳೆಗಳು ಒಂದಾಗಿ ಗೊಂಚಲಿನಂತೆಯೂ ಇರಬಹುದು. ಒಳಗಣ ಕೀವು ಹೆಚ್ಚಾಗಿ ಚರ್ಮವನ್ನು ಕೆಂಪಗಾಗಿಸಿ ಚಿಕ್ಕ ತೂತನ್ನು ಮೂಡಿಸಿ ಬೆಳ್ಳಗಿನ ಕೀವು ಹೊರಗೆ ಕಾಣುತ್ತದೆ. ಒಂದು ವೇಳೆ ಈ ನೋವಿನಿಂದ ನೀವು ನರಳುತ್ತಿದ್ದರೆ ಕೆಲವು ಮನೆಮದ್ದುಗಳ ಮೂಲಕ ಶೀಘ್ರವಾಗಿ ಇವುಗಳನ್ನು ಗುಣಪಡಿಸಿಕೊಳ್ಳಬಹುದು.....

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾ ಕ್ಷಾರೀಯವಾಗಿದ್ದು ಈ ಗುಣವನ್ನು ಬಾಯಿಹುಣ್ಣಿಗೆ ಕಾರಣವಾದ ಬ್ಯಾಕ್ಟೀರಿಯಾಗಳ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸಲು ಬಳಸಬಹುದು. ಈ ಮೂಲಕ ಬ್ಯಾಕ್ಟೀರಿಯಾಗಳನ್ನು ಕೊಂದು, ಬಾಯಿಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಉರಿಯೂತ ಇಲ್ಲವಾಗಿಸುತ್ತದೆ ಹಾಗೂ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಬಾಯಿಯಲ್ಲಿ ಮನೆಮಾಡಿಕೊಂಡಿದ್ದ ಇತರ ಕ್ರಿಮಿಗಳನ್ನೂ ಓಡಿಸಿ ಬಾಯಿಯ ಒಳಭಾಗವನ್ನು ಸ್ವಚ್ಚವಾಗಿರಿಸಲು ನೆರವಾಗುತ್ತದೆ. ಈ ವಿಧಾನವನ್ನು ಅನುಸರಿಸಲು ಒಂದು ದೊಡ್ಡಚಮಚ ಅಡುಗೆ ಸೋಡಾವನ್ನು ಅರ್ಧ ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಈ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ ಉಗಿದುಬಿಡಬೇಕು. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಬೇಕು.

ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ತುಳಸಿ ಎಲೆಗಳು

ತುಳಸಿ ಎಲೆಗಳು

ಬಾಯಿಹುಣ್ಣಿಗೆ ತುಳಸಿ ಎಲೆಗಳೂ ಉತ್ತಮವಾಗಿವೆ. ಈ ಎಲೆಗಳಲ್ಲಿ ಸರ್ವರೋಗಕ್ಕೂ ಮದ್ದು ಇದೆ ಎಂದು ಆಯುರ್ವೇದವೇ ಹೊಗಳಿದೆ. ಬಾಯಿ ಹುಣ್ಣಿದ್ದರೆ ಕೆಲವು ಹಸಿ ತುಳಸಿ ಎಲೆಗಳನ್ನು ಚೆನ್ನಾಗಿ ಅಗಿದು ನೀರಾದ ಬಳಿಕ ಕೊಂಚ ನೀರಿನೊಂದಿಗೆ ಕುಡಿದು ನುಂಗಿಬಿಡಬೇಕು. ಈ ವಿಧಾನವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅನುಸರಿಸಬೇಕು. ಹುಣ್ಣು ವಾಸಿಯಾದ ಬಳಿಕವೂ ಕೆಲವು ದಿನ ಮುಂದುವರೆಸುವ ಮೂಲಕ ಮುಂದಿನ ದಿನಗಳಲ್ಲಿ ಹುಣ್ಣಾಗದಂತೆ ತಡೆಯಬಹುದು.

ಆರೋಗ್ಯ ರಕ್ಷಕ- 'ತುಳಸಿ ಎಲೆಯ' ಜಬರ್ದಸ್ತ್ ಪವರ್

ಜೇನು

ಜೇನು

ಅಪ್ಪಟ ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಹುಣ್ಣಿನ ಉರಿಯನ್ನು ಕಡಿಮೆಗೊಳಿಸಲು ಹಾಗೂ ಗುಣವಾಗುವ ಗತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಹುಣ್ಣು ವಾಸಿಯಾದ ಬಳಿಕ ಕಲೆ ಉಳಿಯದಂತೆ ಹೊಸ ಅಂಗಾಂಶ ಬೆಳೆಯಲೂ ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ ಬೆರೆಸಿದ ಜೇನನ್ನು ಹುಣ್ಣು ಇರುವ ಭಾಗಕ್ಕೆ ಬೆರಳುಗಳಿಂದ ಹಚ್ಚಬೇಕು. ಕೊಂಚವೇ ಮಸಾಜ್ ಮಾಡಿ ಈ ಭಾಗಕ್ಕೆ ನಾಲಿಗೆ ತಾಗದಂತೆ ತಾಳ್ಮೆ ವಹಿಸಬೇಕು. ಒಂದು ವೇಳೆ ಉರಿ ಹೆಚ್ಚೇ ಇದ್ದರೆ ಈ ಮಿಶ್ರಣದೊಂದಿಗೆ ಕೊಂಚ ಅರಿಶಿನವನ್ನೂ ಬೆರೆಸಿ ಹಚ್ಚುವ ಮೂಲಕ ಗುಣವಾಗುವ ಗತಿ ಇನ್ನೂ ತೀವ್ರಗೊಳ್ಳುತ್ತದೆ.

ಮಜ್ಜಿಗೆ

ಮಜ್ಜಿಗೆ

ಬೆಣ್ಣೆ ನಿವಾರಿಸಿದ ಮಜ್ಜಿಗೆಗೂ ಬಾಯಿಹುಣ್ಣು ನಿವಾರಿಸುವ ಕ್ಷಮತೆ ಇದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲ ಹಾಗೂ ಕೊಂಚವೇ ಆಮ್ಲೀಯವಾಗಿರುವುದು ನೋವನ್ನು ಕಡಿಮೆಗೊಳಿಸಲು ಹಾಗೂ ಬಾಯಿಹುಣ್ಣು ಶೀಘ್ರವಾಗಿ ಗುಣವಾಗಲು ನೆರವಾಗುತ್ತದೆ.

ಕ್ಯಾಮೋಮೈಲ್

ಕ್ಯಾಮೋಮೈಲ್

ಈ ಹೂವಿನಲ್ಲಿ ಗುಣಪಡಿಸುವ ಗುಣವಿದ್ದು ಬಾಯಿಹುಣ್ಣಿಗೂ ಉತ್ತಮವಾಗಿದೆ. ಇದಕ್ಕಾಗಿ ಒಂದು ಮುಷ್ಟಿಯಷ್ಟು ಈ ಹೂವಿನ ಒಣದಳಗಳನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕಲಕಿ. ಈ ನೀರಿನಿಂದ ದಿನಕ್ಕೆರಡು ಬಾರಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಶೀಘ್ರವಾಗಿ ಗುಣವಾಗುತ್ತದೆ.

ಟೀ ಬ್ಯಾಗ್

ಟೀ ಬ್ಯಾಗ್

ಒಂದು ವೇಳೆ ಬಾಯಿಹುಣ್ಣು ಆಗಿರುವ ಸಮಯದಲ್ಲಿ ಮನೆಯಲ್ಲಿ ಇಲ್ಲದೇ ಇದ್ದರೆ ತಕ್ಷಣದ ಉಪಶಮನಕ್ಕಾಗಿ ಒಂದು ಟೀ ಬ್ಯಾಗ್ ಅನ್ನು ಕೊಂಚ ನೀರಿನಲ್ಲಿ ನೆನೆಸಿ ಬಾಯಿಹುಣ್ಣಿನ ಮೇಲೆ ಕೊಂಚ ಕಾಲ ಇರಿಸಿಕೊಳ್ಳಬೇಕು. ಟೀಯಲ್ಲಿರುವ ಟ್ಯಾನಿನ್ ಎಂಬ ಅಂಶಕ್ಕೆ ಉರಿ ಮತ್ತು ನೋವನ್ನು ಕಡಿಮೆಗೊಳಿಸುವ ಶಕ್ತಿಯಿದೆ.

 ಕೊತ್ತಂಬರಿ ಎಲೆಗಳು

ಕೊತ್ತಂಬರಿ ಎಲೆಗಳು

ಕೊಂಚ ಕೊತ್ತಂಬರಿ ಎಲೆಗಳನ್ನು ದಂಟಿನಿಂದ ಬೇರ್ಪಡಿಸಿ ಚೆನ್ನಾಗಿ ಹೆಚ್ಚಿಕೊಳ್ಳಬೇಕು. ಇವನ್ನು ಜಜ್ಜಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ನೇರವಾಗಿ ಹುಣ್ಣುಗಳ ಮೇಲೆ ಆವರಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಕೊತ್ತಂಬರಿ ಎಲೆಗಳು ಇಲ್ಲದಿದ್ದರೆ ಪೇರಳೆ ಮರದ ಎಲೆಗಳನ್ನೂ ಬಳಸಬಹುದು. ಈ ಎಲೆಗಳನ್ನು ಜಜ್ಜಿ ರಸ ಹಿಂಡಿ ಈ ರಸವನ್ನು ಹುಣ್ಣುಗಳ ಮೇಲೆ ಬಿಟ್ಟುಕೊಳ್ಳುವ ಮೂಲಕ ಬಾಯಿಹುಣ್ಣು ಶೀಘ್ರವೇ ವಾಸಿಯಾಗುತ್ತದೆ.

ಕೊತ್ತಂಬರಿ ಸೊಪ್ಪಿನಲ್ಲಿರುವ 10 ಔಷಧೀಯ ಗುಣಗಳು

English summary

Mouth Ulcer: Quick Home Remedies

Mouth ulcers can be very distressing to bear with. They are aching sores or lesions that appear either on your tongue, inside of your cheeks, lips or tend to emerge on the floor of the mouth. They are excruciatingly painful to deal with and cause agonizing sensations while eating or brushing your teeth.
X
Desktop Bottom Promotion