For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಋತುಸ್ರಾವವು ಮೆದುಳಿನ ಕ್ರಿಯೆಗೆ ಅಡ್ಡಿಯಾಗದು...

By Hemanth
|

ಋತುಸ್ರಾವದ ವೇಳೆ ಮಹಿಳೆಯರು ಕಠಿಣ ಕೆಲಸ ಮಾಡುವುದರಿಂದ ಹಿಂದೆ ಉಳಿಯುತ್ತಾರೆ. ನೋವು ಹಾಗೂ ಇತರ ಕೆಲವೊಂದು ಕಾರಣಗಳಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಮಹಿಳೆಯರು ಋತುಸ್ರಾವದ ವೇಳೆ ಒಳ್ಳೆಯ ರೀತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಋತುಸ್ರಾವ ಮತ್ತು ಮೆದುಳಿನ ಕ್ರಿಯೆಗೆ ಯಾವುದೇ ಸಂಬಂಧವಿಲ್ಲವೆಂದು ಅಧ್ಯಯನಗಳು ಹೇಳಿವೆ.

Brain

ಋತುಸ್ರಾವ ಮತ್ತು ಮೆದುಳಿನ ಕ್ರಿಯೆಗೆ ಯಾವುದೇ ಸಂಬಂಧವಿಲ್ಲ. ದೇಹದಲ್ಲಿ ಆಗುವ ಕೆಲವೊಂದು ಹಾರ್ಮೋನು ಬದಲಾವಣೆಯಿಂದಾಗಿ ಅವರಲ್ಲಿ ಸ್ವಲ್ಪ ಮಟ್ಟಿನ ನಿರಾಸಕ್ತಿ ಮೂಡಬಹುದು ಎಂದು ಜರ್ನಲ್ ಫ್ರಂಟಿಯರ್ಸ್ ಇನ್ ಬಿಹೇವಿಯರಲ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನದಿಂದ ತಿಳಿದುಬಂದಿದೆ.

ಋತುಸ್ರಾವದ ವೇಳೆ ಉಂಟಾಗುವಂತಹ ಹಾರ್ಮೋನು ಬದಲಾವಣೆ ಮತ್ತು ಮೆದುಳಿನ ಪ್ರದರ್ಶನಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ವೈಯಕ್ತಿಕವಾಗಿ ಅಲ್ಲಿ ನಿರೀಕ್ಷೆಗಳಿರುತ್ತದೆ. ಋತುಸ್ರಾವದ ವೇಳೆ ಹಾರ್ಮೋನು ಬದಲಾವಣೆಗಳು ಆಗುವುದರಿಂದ ಮೆದುಳಿನ ಚಟುವಟಿಕೆ ಮೇಲೆ ಯಾವುದೇ ಪರಿಣಾಮವಾಗದು ಎಂದು ಸ್ವಿಟ್ಜರ್ಲೆಂಟ್ ನ ಜ್ಯೂರಿಕ್ ನಲ್ಲಿರುವ ಯೂನಿವರ್ಸಿಟಿ ಹಾಸ್ಪಿಟಲ್ ನ ಸಂಶೋಧಕಿ ಬ್ರಿಗಿಟ್ಟೆ ಲೀನೆರ್ಸ್ ತಿಳಿಸಿದರು.

ಎರಡು ಋತುಸ್ರಾವದ ವೇಳೆ ಮೂರು ರೀತಿಯ ಮೆದುಳಿನ ಕ್ರಿಯೆಯ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗಿದೆ. ದೇಹದಲ್ಲಿರುವ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಮೇಲೆ ಋತುಸ್ರಾವದ ವೇಳೆ ಯಾವುದೇ ಪರಿಣಾಮವಾಗಿಲ್ಲ. ಇದರಿಂದ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯದ ಬಗ್ಗೆ ಗಮನಹರಿಸುವುದು ಋತುಸ್ರಾವದ ವೇಳೆ ಕಷ್ಟವಲ್ಲ.

ಅಧ್ಯಯನ ತಂಡವು ಅಭ್ಯಾಸ ಮಾಡಿರುವಂತಹ ಹಾರ್ಮೋನುಗಳು ಮೆದುಳಿನ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡಿಲ್ಲ. ನಾನು ಮನಶಾಸ್ತ್ರಜ್ಞನಾಗಿರುವ ಕಾರಣ ಹಲವಾರು ಮಂದಿ ಮಹಿಳೆಯರನ್ನು ಈ ವೇಳೆ ಭೇಟಿಯಾಗಬೇಕಾಗುತ್ತದೆ. ವೈಜ್ಞಾನಿಕವಾಗಿ ಈ ವಿಷಯವು ಸಾಬೀತಾಗಿದೆಯಾ ಎಂದು ಕೇಳಿದಾಗ ಈ ವಿಷಯದ ಬಗ್ಗೆ ಮತ್ತಷ್ಟು ಗಮನಹರಿಸುವುದಾಗಿ ಹೇಳಿದೆ.

ತಂಡವು 68 ಮಂದಿ ಮಹಿಳೆಯರನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. ಋತುಸ್ರಾವದ ವಿವಿಧ ಹಂತದಲ್ಲಿ ಈ ಮಹಿಳೆಯರ ಮೆದುಳಿನ ಚಟುವಟಿಕೆಯಲ್ಲಿ ಆಗಿರುವಂತಹ ಬದಲಾವಣೆಗಳನ್ನು ಗಮನಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮೇಲ್ವಿಚಾರಣೆ ನೋಡಿಕೊಳ್ಳಲಾಗಿದೆ. ಋತುಸ್ರಾವದ ಮೊದಲ ಹಂತದಲ್ಲಿ ನಡೆಸಿರುವಂತಹ ಅಧ್ಯಯನದಿಂದ ಮೆದುಳಿನ ಚಟುವಟಿಕೆ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮ ಕಂಡುಬಂದಿದೆ. ಆದರೆ ಇದರ ಫಲಿತಾಂಶವು ಎರಡನೇ ಹಂತದಲ್ಲಿ ಕಂಡುಬಂದಿಲ್ಲ. ಮಾಡುವಂತಹ ಕೆಲಸದಲ್ಲಿ ನೀಡುವಂತಹ ಪ್ರದರ್ಶನವು ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಇದು ಸಮಯದಿಂದ ಸಮಯಕ್ಕೆ ಬದಲಾಗುತ್ತಾ ಇರುತ್ತದೆ ಎಂದು ಅಧ್ಯಯನವು ಕಂಡುಕೊಂಡಿವೆ.

English summary

Menstruation Doesn't Disturb Brain Functioning: Study

While people tend to assume that anyone who is menstruating is not working at top mental pitch, new research has found evidence to suggest that that is not actually the case. Hormonal changes during the menstrual cycle have no impact on aspects of cognition, showed the findings published in the journal Frontiers in Behavioral Neuroscience. Hormonal changes during the menstrual cycle have no impact on aspects of cognition, showed the findings published in the journal Frontiers in Behavioral Neuroscience.
X
Desktop Bottom Promotion