Just In
- 16 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಧೂಮಪಾನದಿಂದ ದೂರ ಸರಿಯಲು ಮನೆ ಮದ್ದು ಅಗತ್ಯ...
ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್ ಪ್ಯಾಕ್‍ಗಳ ಮೇಲೆ ಬರೆದುಕೊಂಡು ಇದ್ದರೂ ಜನರು ಲೆಕ್ಕಿಸುವುದಿಲ್ಲ. ಅದನ್ನು ನೋಡಿಯೇ ಸಿಗರೇಟನ್ನು ಸೇದುತ್ತಾರೆ. ನಿಧಾನವಾಗಿಯೇ ಶ್ವಾಸಕೋಶಗಳನ್ನು ದುರ್ಬಲಗೊಳಿಸುವ ಧೂಮ ಪಾನ ವ್ಯಸನಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಂತರಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುವುದು. ಅವು ನಿಧಾನವಾಗಿ ಗಂಭೀರ ಸಮಸ್ಯೆಗಳಾಗಿ ಪರಿವರ್ತನೆ ಹೊಂದುವವು.
ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆ ಹಾಗೂ ಅಧ್ಯಯನದ ಪ್ರಕಾರ ಧೂಮಪಾನದಿಂದ ಕರುಳಿಗೆ ಹಾನಿ ಉಂಟಾಗುವುದು. ಕೊಲೈಟಿಸ್ ಅಪಾಯವನ್ನು ಹೆಚ್ಚಿಸುವುದು. ಸಿಗರೇಟ್ ಹೊಗೆಯಿಂದ ದೇಹದಲ್ಲಿರುವ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು. ಪ್ರೋಟೀನ್‍ಗಳು ಇಳಿಮುಖ ಹೊಂದುವವು. ಸ್ನಾಯುಗಳಲ್ಲಿ ಹಾಗೂ ಆಂತರಿಕ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುವುದು. ಧೂಮಪಾನವು ಕ್ರೋನ್ಸ್ ಕಾಯಿಲೆ, ಕರುಳಿನ ಉರಿಯೂತ ಮತ್ತು ಕೊಲೈಟಿಸ್‍ನಂತಹ ಅಪಾಯವನ್ನುಂಟು ಮಾಡುವುದು.
ಸಿಗರೇಟ್ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...
ಸಿಗರೇಟಿನ ಹೊಗೆಯು ದೇಹದೊಳಗೆ ಪ್ರವೇಶಿಸಿ ಜಠರಗಳಿಗೆ ಅನಾರೋಗ್ಯವನ್ನುಂಟುಮಾಡುತ್ತದೆ. ಹಸಿವಿನ ಸಂವೇದನೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಮ್ಲೀಯ ದ್ರವದ ಉತ್ಪತ್ತಿಯಾಗುವುದರ ಮೂಲಕ ಅನೇಕ ತೊಂದರೆಗಳ ಹುಟ್ಟಿಗೆ ಕಾರಣವಾಗುತ್ತದೆ. ಬಾಯಿ ರುಚಿ ಲಭಿಸದಿರುವುದು, ತುಟಿ ಕಪ್ಪಾದ ಬಣ್ಣಕ್ಕೆ ತಿರುಗುವುದು ಹಾಗೂ ಹೃದಯ ಸಮಸ್ಯೆಗಳು ಬಹುಬೇಗ ಕಾಡುವುದು. ಉಸಿರಾಟದ ತೊಂದರೆಯು ನಿಮ್ಮನ್ನು ಹೆಚ್ಚು ಆಯಾಸಗೊಳಿಸುವುದು. ದಕ್ಷಿಣ ಕೊರಿಯಾದ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಹ್ಯುನ್ಸ್ ಬೇ ಹೇಳುವ ಪ್ರಕಾರ ಸ್ವಾಶಕೋಶದ ಸಮಸ್ಯೆ ಹಾಗೂ ಕರುಳಿನ ಸಮಸ್ಯೆಯು ಧೂಮಪಾನ ಮಾಡುವವರಿಗೆ ಕಟ್ಟಿಟ್ಟ ಬುತ್ತಿ. ಕುತೂಹಲಕಾರಿಯಾದ ವಿಚಾರವೆಂದರೆ ಸಂಪ್ರದಾಯವಾದಿ ದೇಶಗಳಿಗೆ ಔಷಧ ತಯಾರಿಸುವಲ್ಲಿ ಧೂಮಪಾನದಿಂದ ಉಂಟಾಗುವ ಶ್ವಾಸಕೋಶ ಹಾಗೂ ದೊಡ್ಡ ಕರುಳಿನ ಸಮಸ್ಯೆಗೆ ದೀರ್ಘಕಾಲದ ಪರಿಣಾಮಕಾರಿ ಔಷಧವನ್ನು ಗುರುತಿಸಬೇಕು ಎನ್ನುವದನ್ನು ಒತ್ತಿ ಹೇಳಲಾಗುತ್ತಿದೆ.
ಕ್ರೋನ್ಸ್ ಕಾಯಿಲೆಯು ಶ್ವಾಸಕೋಶದ ಮೂಲಕ ವ್ಯಕ್ತಿಯ ಆಂತರಿಕ ವ್ಯವಸ್ಥೆಯನ್ನು ಆಕ್ರಮಿಸುವುದು. ಇದರಿಂದ ಶ್ವಾಸಕೋಶದಲ್ಲಿ ಉರಿಯೂತ ಹಾಗೂ ಕೆರುಳಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಸಂಶೋಧಕರು ಮಾಡಿರುವ ಪರೀಕ್ಷೆಯ ಪ್ರಕಾರ ಒಂದು ದಿನಕ್ಕೆ 20 ಸಿಗರೇಟ್‍ನಂತೆ ಆರು ವಾರಗಳಕಾಲ ಸೇದಲು ಅವಕಾಶ ಕಲ್ಪಿಸಿಕೊಟ್ಟರು. ನಂತರ ಶ್ವಾಸಕೋಶ ಮತ್ತು ಕೋಲೋನ್‍ಗಳಲ್ಲಿ ಉಂಟಾದ ಬದಲಾವಣೆಯನ್ನು ಪರೀಕ್ಷಿಸಿದರು. ಸಿಗರೇಟ್ ಸೇದದಿರುವ ಶ್ವಾಸಕೋಶಗಳಿಗೆ ಹೋಲಿಸಿದರೆ ಸಿಗರೇಟ್ ಸೇದಿರುವ ಶ್ವಾಸಕೋಶಗಳು ಗಮನಾರ್ಹವಾದ ಉರಿಯೂತಕ್ಕೆ ಒಳಗಾಗಿತ್ತು. ಜೊತೆಗೆ ಕ್ರೋನ್ಸ್ ರೋಗವನ್ನು ಹೋಲುವ ಒಂದು ರೀತಿಯ ಕೊಲೈಟಿಸ್ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರು. ಅಲ್ಲದೆ ಸಂಶೋಧನೆಗೆ ಒಳಗಾದ ಧೂಮಪಾನ ಹೊಗೆಯನ್ನು ಪಡೆದ ಇಲಿಗಳ ಮಲದಲ್ಲಿ ರಕ್ತ ಸ್ರಾವ ಉಂಟಾಗಿರುವುದು ಕಂಡು ಬಂದವು.
ಇಂಟರ್ಫೆರಾನ್-ಗಾಮಾ ಎಂಬ ಉರಿಯೂತದ ಪ್ರೋಟೀನ್‍ಅನ್ನು ಬಿಡುಗಡೆ ಮಾಡುತ್ತಿತ್ತು. ಅದು ಸಿಡಿ4+ಟಿ ಕೋಶಗಳ ಬಗೆಯ ವಿಧದ ಬಿಳಿ ರಕ್ತಕಣಗಳು ಕಂಡು ಬಂದವು. ತಂಡವು ಇಂಟರ್ಫೆರಾನ್ ಗಾಮಾವನ್ನು ಉತ್ಪಾದಿಸಲು ಸಾಧ್ಯವಾಗದ ಕೆಲವು ಸಿಡಿ4+ಟಿ ಕೋಶ ಹೊಂದಿರುವ ಇಲಿಗಳ ಮೇಲೆ ಪ್ರಯೋಗವನ್ನು ಪುನರಾವರ್ತಿಸಿದರು.
ಈ ಎರಡು ಪರೀಕ್ಷೆಯಲ್ಲಿ ಸಿಗರೇಟ್ ಹೊಗೆಯನ್ನು ಪಡೆದ ಇಲಿಗಳು ಕೊಲೈಟಿಸ್‍ಅನ್ನು ಅಭಿವೃದ್ಧಿಪಡಿಸಲಿಲ್ಲಾ ಎಂದು ಹೇಳಿದೆ. ಅಧ್ಯಯನದ ಫಲಿತಾಂಶವು "ಧೂಮಪಾನ ಮಾಡಿರುವ ಶ್ವಾಸಕೋಶದಲ್ಲಿ ಸಮಸ್ಯೆ, ಬಿಳಿ ರಕ್ತಕಣಗಳ ಮೇಲೆ ಪರಿಣಾಮ ಹಾಗೂ ಕರುಳಿನ ಉರಿಯೂತದಲ್ಲಿ ಗಮನೀಯ ಪರಿಣಾಮ ಉಂಟಾಗುತ್ತದೆ" ಎನ್ನುವುದನ್ನು ಕ್ಯುಂಗ್ ಹೀ ವಿಶ್ವವಿದ್ಯಾಲಯದ ಜಿನ್ಜುಕಿಮ್ ಹೇಳಿದ್ದಾರೆ.
ಧೂಮಪಾನ ಎನ್ನುವ ಭಯಾನಕ ಚಟದಿಂದ ದೂರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದರೆ ಒಮ್ಮೆ ಚಟ ಆರಂಭವಾದಮೇಲೆ ಅದರಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಆದರೆ ಕೆಲವು ಮನೆ ಮದ್ದು ಮಾಡುವುದರ ಮೂಲಕ ಧೂಮಪಾನದಿಂದ ದೂರ ಸರಿಯಬಹುದು ಎನ್ನುವುದನ್ನು ಕೆಲವು ಸಂಶೋಧನೆಯು ದೃಢಪಡಿಸಿದೆ. ಹಾಗಾದರೆ ಆ ಮನೆಮದ್ದು ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಲೇಖನದ ಮುಂದಿನ ಭಾಗವನ್ನು ಓದಿ...

ನೀರು
ನೀರು ನೈಸರ್ಗಿಕ ಡಿಟೊಕ್ಸಿಫೈಯರ್‍ಗಳಲ್ಲಿ ಒಂದಾಗಿದೆ. ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೊಡೆದುಹಾಕಲು ಮತ್ತು ಧೂಮಪಾನದ ಚಟದಿಂದ ದೂರವಾಗಲು ಸಾಕಷ್ಟು ನೀರನ್ನು ಕುಡಿಯಬೇಕು. ನೀರು ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಜೇನುತುಪ್ಪ
ಧೂಮಪಾನದಿಂದ ದೂರ ಸರಿಯಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಜೇನುತುಪ್ಪ. ಜೇನುತುಪ್ಪವು ಜೀವಸತ್ವ, ಕಿಣ್ವಗಳು ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ. ಇದರ ಸೇವನೆಯಿಂದ ಧೂಮಪಾನದ ಅಭ್ಯಾಸವನ್ನು ಬಿಡಬಹುದು. ಧೂಮಪಾನದ ಪ್ರಚೋದನೆ ಉಂಟಾದಾಗ ಇದನ್ನು ಸೇವಿಸಿ ನೀರು ಕುಡಿಯಬೇಕು. ಆಗ ಧೂಮಪಾನದ ಬಯಕೆಯು ಕಡಿಮೆಯಾಗುವುದು.

ಲೈಕೋರೈಸ್
ಧೂಮಪಾನವನ್ನು ತೊರೆಯಲು ಸಹಾಯ ಮಾಡುವ ಅತ್ಯಂತ ಪ್ರಸಿದ್ಧ ನೈಸರ್ಗಿಕ ಮನೆ ಪರಿಹಾರಗಳಲ್ಲಿ ಲೈಕೋರೈಸ್ ಸಹ ಒಂದು. ಧೂಮಪಾನ ಮಾಡಬೇಕೆನಿಸದಾಗ ಸಣ್ಣ ತುಂಡು ಲೈಕೋರೈಸ್ ತಿಂದರೆ ಸಿಗರೇಟ್ ಸೇದುವ ಬಯಕೆಯು ಹೋಗುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಹಕರಿಸುತ್ತದೆ.

ಶುಂಠಿ
ಧೂಮಪಾನ ತೊರೆದಾಗ ಕೆಲವರಿಗೆ ವಾಕರಿಕೆ ಸಂವೇಧನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗೆಯುವುದು ಅಥವಾ ಶುಂಠಿ ಚಹಾ ಸೇವಿಸುವುದರಿಂದ ವಾಕರಿಕೆ ಉಂಟಾಗುವುದನ್ನು ತಡೆಯಬಹುದು. ಅಲ್ಲದೆ ಧೂಮಪಾನ ಮಾಡಲು ಮನಸ್ಸಾಗದಂತೆ ಪ್ರೇರೇಪಿಸುತ್ತದೆ.

ಕ್ಯಾಮೋಮೈಲ್ ಟೀ
ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಹೆಚ್ಚುತ್ತಿರುವ ನಿಕೋಟಿನ್ ಬಯಕೆಯನ್ನು ಕಡಿಮೆಗೊಳಿಸುತ್ತದೆ.

ಜಿನ್ಸೆಂಗ್
ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ. ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ. ನಿಯಮಿತವಾದ ಸೇವನೆಯಿಂದ ದಿನವೂ ಕೊಂಚಕೊಂಚವಾಗಿ ಸಿಗರೇಟಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದು ಕೊನೆಗೊಂದು ದಿನ ನೀವು ನಿಜವಾಗಿಯೂ ಸಿಗರೇಟಿಲ್ಲದೇ ದಿನವನ್ನು ಯಶಸ್ವಿಯಾಗಿ ಕಳೆಯಲು ಸಿದ್ಧರಿರುತ್ತೀರಿ. ಈ ದಿನ ಶೀಘ್ರವೇ ಬರಲು ಜಿನ್ಸೆಂಗ್ ನೆರವಾಗುತ್ತದೆ.

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು
ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ. ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ. ಆದ್ದರಿಂದ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ತಿನ್ನುವ ಮೂಲಕ ನಿಕೋಟಿನ್ ಮೇಲಿನ ನಿರ್ಭರತೆಯನ್ನು ಮೆದುಳು ಕಳೆದುಕೊಳ್ಳುವಂತೆ
ಮಾಡಬಹುದು. ಕಿತ್ತಳೆ, ಪೇರಳೆಹಣ್ಣು, ವಿವಿಧ ಬೆರ್ರಿ ಹಣ್ಣುಗಳನ್ನು ಸೇವಿಸಿ.