ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

Posted By: lekhaka
Subscribe to Boldsky

ನಮ್ಮೆಲ್ಲರಿಗೂ ಗೊತ್ತರುವ ಹಾಗೆ ವಿಶ್ವದಲ್ಲಿ ಅನೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅಸ್ತಮಾ ಕಾಯಿಲೆ ಇರುವವರು ಉಸಿರಾಡಲು ಕಷ್ಟ ಪಡುವುದನ್ನು ನೋಡುವಾಗ ಎಂತಹವರಿಗೂ ಅಯ್ಯೋ ಪಾಪ ಅನಿಸುತ್ತದೆ. ಅಸ್ತಮಾ ಕಾಯಿಲೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಇದೇ ಕಾರಣದಿಂದ ಕಾಣಿಸಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಉಸಿರಾಟ ತೊಂದರೆ: ಇದು ಅಸ್ತಮಾವೇ ಅಥವಾ ಬೇರೆ ಏನಾದರೂ ಕಾಯಿಲೆಯೇ?

ವಂಶಪಾರಂಪರ್ಯವಾಗಿ ಬರಬಹುದು. ಹವಾಮಾನ ಬದಲಾದಾಗ, ತಂಪಾದ ಹವಾಮಾನದಿಂದ, ಪರಿಸರ ಮಾಲಿನ್ಯ, ದೂಳು, ಧೂಮಪಾನ, ಆಗಾಗ ಕೆಮ್ಮು ಕಂಡು ಬರುವುದು, ಕೆಲವು ವಸ್ತುಗಳಿಂದ ಅಲರ್ಜಿ ಉಂಟಾಗಿ ಅಸ್ತಮಾ ಕಂಡು ಬರಬಹುದು. ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿರುವುದರಿಂದ ತಂದೆ-ತಾಯಿಯಲ್ಲಿ ಯಾರಿಗಾದರು ಇದ್ದರೆ ಮಕ್ಕಳಿಗೆ ಬರುತ್ತದೆ ಎಂಬ ಸಂಶಯ ಹಲವರಲ್ಲಿದೆ.  ಯೋಗ ಟಿಪ್ಸ್: ಅಸ್ತಮಾ ವಿರುದ್ಧ ಹೋರಾಡಲು 'ಪಾಶಾಸನ'

ಇನ್ನು ಮಕ್ಕಳಿಗೆ ಬಂದೇ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಬರುವುದೇ ಇಲ್ಲ ಅಂತಲೂ ಹೇಳಲು ಸಾಧ್ಯವಿಲ್ಲ. ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing) ಕಂಡುಬರುವುದು, ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು. ಅದರಲ್ಲೂ ಇಂತಹ ಸಮಯದಲ್ಲಿ ಮೆಟ್ಟಿಲು ಹತ್ತುವುದು, ವ್ಯಾಯಮ ಮಾಡುವುದು ಮತ್ತು ಯಾವುದೇ ಆಟವಾಡುವುದು ಕಷ್ಟಸಾಧ್ಯವಾಗಬಹುದು. ಅಸ್ತಮಾಗೆ ಇರುವ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ... 

ಮೂಲಂಗಿ-ಜೇನು-ನಿಂಬೆರಸ

ಮೂಲಂಗಿ-ಜೇನು-ನಿಂಬೆರಸ

ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಸೇರಿಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತೆ.

ಮೆಂತೆ ಕಾಳು

ಮೆಂತೆ ಕಾಳು

ಮೆಂತೆ ಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ. ನೀರಿನೊಂದಿಗೆ ಮಂತೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಅಸ್ತಮಾ ಕಡಿಮೆಮಾಡಬಹುದು. ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು

ನೂರು!

ಹಾಗಲಕಾಯಿ-ಜೇನಿನ ಜೋಡಿ

ಹಾಗಲಕಾಯಿ-ಜೇನಿನ ಜೋಡಿ

ಹಾಗಲಕಾಯಿ ಅಸ್ತಮಾಗೆ ಮತ್ತೊಂದು ಪರಿಣಾಮಕಾರಿ ಮದ್ದು. ಜೇನಿನೊಂದಿಗೆ ಹಾಗಲಕಾಯಿ ಪೇಸ್ಟ್, ತುಳಸಿ ಎಲೆ ರಸ ಸೇರಿಸಿ ಕುಡಿಯುವುದರಿಂದ ಅಲರ್ಜಿ ನಿವಾರಿಸಿ ಅಸ್ತಮಾ ಬರುವುದನ್ನೂ ತಡೆಗಟ್ಟುತ್ತದೆ.

ಜೇನು

ಜೇನು

ಜೇನನ್ನು ಅಸ್ತಮಾಗೆ ಉತ್ತಮ ಮನೆಮದ್ದಾಗಿ ಉಪಯೋಗಿಸಲಾಗುತ್ತೆ. ಅಸ್ತಮಾ ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಜೇನನ್ನು ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಬೇಗನೆ ಪರಿಣಾಮ ಬೀರುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ಬೆರೆಸಿ ಅದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅಸ್ತಮಾ ನಿಯಂತ್ರಿಸಬಹುದು.

ಮಾವಿನ ಎಲೆಗಳು

ಮಾವಿನ ಎಲೆಗಳು

ಕೆಲವು ಎಳೆಯ ಮಾವಿನ ಎಲೆಗಳನ್ನು ಕೊಂಚ ಜಜ್ಜಿ ಮುಳುಗುವಷ್ಟು ನೀರಿನಲ್ಲಿ ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಸಂಗ್ರಹಿಸಿ. ಈ ನೀರನ್ನು ಸೋಂಕಿರುವ ಸಮಯದಲ್ಲಿ ಸೇವಿಸುತ್ತಾ ಬನ್ನಿ. ಇನ್ನೊಂದು ವಿಧಾನದಲ್ಲಿ ಎಳೆಯ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಅನಾರೋಗ್ಯದ ಸಮಯದಲ್ಲಿ ಈ ಪುಡಿಯನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ ಕಲಕಿ ಕುಡಿಯಿರಿ. ಇನ್ನೂ ಉತ್ತಮ ವಿಧಾನವೆಂದರೆ ಎಳೆಯ ಎಲೆಗಳನ್ನು ಹಸಿಯಾಗಿ ಜಗಿದು, ಕೊಂಚ ಒಗರಾಗಿದ್ದರೂ ಸಹಿಸಿ ನುಂಗಿಬಿಡಿ.

For Quick Alerts
ALLOW NOTIFICATIONS
For Daily Alerts

    English summary

    Best Home Remedies for Asthma

    During an asthma attack, your airway muscles constrict and mucus membranes produce excess mucus, blocking your breathing. Allergens such as dust, spores, animal hairs, cold air, infection and even stress can trigger asthma. Boldsky shares with you effective home remedies for asthma treatment. Have a look at some natural remedies for asthma.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more