For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಕಿಡ್ನಿ ಸ್ಟೋನ್‌ಗೆ ಶಾಶ್ವತ ಪರಿಹಾರ

By Deepu
|

ನಮ್ಮ ನಿತ್ಯದ ಚಟುವಟಿಕೆಯನ್ನೇ ನಿಲ್ಲಿಸಿಬಿಡಬಲ್ಲಷ್ಟು ನೋವು ನೀಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟು ಸುಲಭವಲ್ಲ. ಇದರ ನಿವಾರಣೆಗೂ ಮುನ್ನ ಇದು ಪ್ರಾರಂಭವಾಗುವುದು ಹೇಗೆ ಎಂದು ತಿಳಿದುಕೊಂಡರೆ ಉತ್ತಮ. ದೇಹದ ನೀರನ್ನು ಶೋಧಿಸಿ ಲವಣಗಳನ್ನು ಮತ್ತು ಕಲ್ಮಶಗಳನ್ನು ಮೂತ್ರದ ಮೂಲಕ ಹೊರಹಾಕುವ ಮೂತ್ರಪಿಂಡಗಳಲ್ಲಿ ಕೆಲವೊಮ್ಮೆ ಕೆಲವು ಲವಣಗಳು ಘನರೂಪ ಪಡೆದು ನಿಂತುಬಿಡುತ್ತವೆ.

ಸತತವಾಗಿ ಶೋಧಿಸುತ್ತಾ ಹೋಗುವಾಗ ಇನ್ನಷ್ಟು ಲವಣದ ಕಣಗಳು ಈ ಕಲ್ಲಿಗೆ ಅಂಟಿಕೊಳ್ಳುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರ ಮೂತ್ರಪಿಂಡಗಳಲ್ಲಿ ಈ ಕಲ್ಲುಗಳು ಚಿಕ್ಕದಾಗಿ ಇದ್ದೇ ಇರುತ್ತವೆ. ಆದರೆ ನೀರು ಹೆಚ್ಚಿದಂತೆ ಇವು ಕರಗುತ್ತವೆ ಸಹಾ. ಕೆಲವೊಂದು ಲವಣಗಳು ಮಾತ್ರ ಕರಗದೇ ಗಟ್ಟಿಯಾದ ಕಲ್ಲುಗಳಾಗಿ ಉಳಿದುಬಿಡುತ್ತವೆ. ಕಲ್ಲುಗಳು ಕರಗದೇ ಇರಲಿಕ್ಕೆ ಅಧಿಕ ರಕ್ತದೊತ್ತಡ, ಪ್ರಾಣಿಜನ್ಯ ಕೊಬ್ಬಿನ ಪ್ರಮಾಣದಲ್ಲಿ ಹೆಚ್ಚಳ, ಕುಡಿಯುವ ನೀರು ಕಡಿಮೆಯಾಗುವುದು, ಆಹಾರದಲ್ಲಿ ನಾರು ಇಲ್ಲದಿರುವುದು ಮೊದಲಾದ ಕಾರಣಗಳೂ ಇವೆ.

ಬಹುತೇಕ ಕಲ್ಲುಗಳೂ ಕ್ಯಾಲ್ಸಿಯಂ ಫಾಸ್ಪೇಟ್ ಅಥವಾ ಕ್ಯಾಲ್ಸಿಯಂ ಆಕ್ಸಲೇಟ್ ರೂಪ ಪಡೆಯುತ್ತವೆ. ಒಂದು ವೇಳೆ ಕ್ಯಾಲ್ಸಿಯಂ ಫಾಸ್ಪೇಟ್ ಆಗಿದ್ದರೆ ಇವು ನಯವಾದ ಸುಣ್ಣದ ಕಲ್ಲಿನಂತಿದ್ದು ನೆನೆದ ಚಾಕ್ ಪೀಸ್ ನಷ್ಟೇ ಗಟ್ಟಿಯಾಗಿರುತ್ತದೆ. ಈ ಕಲ್ಲುಗಳನ್ನು ಕರಗಿಸುವುದು ಸುಲಭ. ಆದರೆ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಮಾತ್ರ ರಸ್ತೆಗೆ ಹಾಕುವ ಟಾರಿನಲ್ಲಿರುವ ಕಲ್ಲಿನಷ್ಟು ಗಟ್ಟಿಯಾಗಿದ್ದು ಇದನ್ನು ಒಡೆಯುವುದು ವೈದ್ಯರಿಗೆ ದೊಡ್ಡ ಸವಾಲಾಗಿದೆ.

ಒಂದು ವೇಳೆ ಒಡೆದರೂ ಇದರ ಚೂರುಗಳು ಮೂತ್ರನಾಳದಲ್ಲಿ ಇಳಿದು ಹೊರಹೋಗಲು ಬಹಳಷ್ಟು ಸಮಯ ಹಾಗೂ ಅಪಾರ ನೋವು ನೀಡುತ್ತವೆ. ಆದರೆ ಆಯುರ್ವೇದದಲ್ಲಿ ಈ ಕಲ್ಲುಗಳನ್ನು ಕರಗಿಸಿ ಸುಲಭವಾಗಿ ಹೊರಹಾಕಲು ಕೆಲವು ವಿಧಾನಗಳಿದ್ದು ನೈಸರ್ಗಿಕವಾಗಿವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ....

ತುಳಸಿ ಎಲೆಗಳು

ತುಳಸಿ ಎಲೆಗಳು

ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ.

ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ.

ಬಳಕೆಯ ವಿಧಾನ

ನಾಲ್ಕಾರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ಜೇನಿನೊಂದಿಗೆ ಬೆರೆಸಿ ಪ್ರತಿದಿನ ಜಗಿದು ತಿನ್ನುವ ಮೂಲಕ ಕಲ್ಲುಗಳು ನಿಧಾನವಾಗಿ

ಕರಗುತ್ತಾ ಹೋಗುತ್ತವೆ.

ಎಳನೀರು

ಎಳನೀರು

ನಮ್ಮ ದೇಹಕ್ಕೆ ಅತ್ಯುತ್ತಮವಾದ ದ್ರವವಾಗಿರುವ ಎಳನೀರು ಮೂತ್ರಪಿಂಡಗಳ ಕಲ್ಲು ನಿವಾರಿಸಲು ಹಾಗೂ ನೋವು ಇಲ್ಲದಂತಾಗಿಸಲೂ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯುವ ಮೂಲಕ ಕಲ್ಲುಗಳು ಕರಗಲು ಸಾಧ್ಯವಾಗುತ್ತದೆ.

ಬಳಕೆಯ ವಿಧಾನ

ಖಾಲಿಹೊಟ್ಟೆಯಲ್ಲಿ ಒಂದು ಎಳನೀರು ಕುಡಿದ ಬಳಿಕ ದಿನದಲ್ಲಿ ಸುಮಾರು ನಾಲ್ಕರಿಂದ ಐದು ಎಳನೀರನ್ನಾದರೂ ಊಟಕ್ಕೆ ಅರ್ಧ ಗಂಟೆಗೆ ಮುನ್ನ ಕುಡಿಯಬೇಕು. ರಾತ್ರಿ ಮಲಗುವ ಮುನ್ನವೂ ಒಂದು ಎಳನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮೂತ್ರ ವಿಸರ್ಜಿಸಿ ಮಲಗಿಕೊಳ್ಳಬೇಕು.

ನೀರು ಕುಡಿಯುವುದು

ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ತಡೆಯುತ್ತದೆ. ಕನಿಷ್ಠ ಪಕ್ಷ 8 ಲೋಟಗಳಷ್ಟಾದರೂ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿದೆ. ನೀರಲ್ಲದೆ, ಸಿಟ್ರಸ್ ಅಂಶವುಳ್ಳ ಜ್ಯೂಸ್ ಅನ್ನು ಕೂಡ ನೀವು ಸೇವಿಸಬಹುದು. ಈ ಪಾನೀಯಗಳು ಕಲ್ಲಿನ ರಚನೆಯನ್ನು ನಿರ್ಬಂಧಿಸುವಲ್ಲಿ ಸಹಕಾರಿ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿ ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಶುಂಠಿ ಸಹಾ ಉತ್ತಮವಾದ ಮೂಲಿಕೆಯಾಗಿದೆ. ಬರೆಯ ಮೂತ್ರಪಿಂಡಗಳು ಮಾತ್ರವಲ್ಲ, ಜೀರ್ಣಾಂಗ ಮತ್ತು ಕರುಳುಗಳಿಂದಲೂ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಯಕೃತ್ ಸಹಾ ಇದರಿಂದ ಶುದ್ಧಗೊಳ್ಳುತ್ತದೆ. ಇದಕ್ಕಾಗಿ ಹೆಚ್ಚೇನೂ ಮಾಡಬೇಕಾಗಿಲ್ಲ, ದಿನದಲ್ಲಿ ಕುಡಿಯುವ ಟೀ ಯಲ್ಲಿ ಕೊಂಚ ಶುಂಠಿಯನ್ನು ಸೇರಿಸಿದರೆ ಸಾಕು. ಉತ್ತಮ ಪರಿಣಾಮಕ್ಕಾಗಿ ಶುಂಠಿ ಕುದಿಸಿ ಸೋಸಿ ತಣಿಸಿದ ನೀರನ್ನು ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಮೆಂತೆ ಕಾಳು

ಮೆಂತೆ ಕಾಳು

ಒಂದು ಚಮಚ ಮೆಂತೆಯನ್ನು ಒಂದು ಲೋಟ ನೀರಿನಲ್ಲಿ ನೆನೆ ಹಾಕಿ ಬೆಳ್ಳಗ್ಗೆ ತಿನ್ನಬೇಕು. ಈ ರೀತಿ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲು ಮಾತ್ರವಲ್ಲ ದೇಹದಲ್ಲಿರುವ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಇನ್ನೊಂದು ವಿಧಾನವೆಂದರೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸಿ

ದಿನಕ್ಕೊ೦ದು ಸೇಬನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿನ ಕಲ್ಲುಗಳು ಕರಗಿಹೋಗುತ್ತವೆ. ಸೇಬಿನಲ್ಲಿ ಕೆಲವು ಕಿಣ್ವಗಳಿದ್ದು, ಅವು ಕಾಲಕ್ರಮೇಣವಾಗಿ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಿ, ಮೂತ್ರದ ಮೂಲಕ ಶರೀರದಿ೦ದ ಆ ಹರಳುಗಳು ಹೊರಹೋಗುವ೦ತೆ ಮಾಡುತ್ತವೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಒ೦ದು ಅಥವಾ ಎರಡು ಟೇಬಲ್ ಚಮಚಗಳಷ್ಟು ಆಪಲ್ ಸೈಡರ್ ವಿನೆಗರ್ ಗೆ ಒ೦ದಿಷ್ಟು ನೀರನ್ನು ಬೆರೆಸಿಕೊಳ್ಳುವುದರ ಮೂಲಕ ಅದನ್ನು ತಿಳಿಯಾಗಿಸಿಕೊ೦ಡು ಅದನ್ನು ದಿನಾಲೂ ಕುಡಿಯಿರಿ. ಆಪಲ್ ಸೈಡರ್ ವಿನಿಗರ್ ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಕರಗಿಸಲು ನೆರವಾಗುವುದರ ಮೂಲಕ ಯಾವುದೇ ಯಾತನೆಯಿಲ್ಲದೇ ಕರಗಿದ ಹರಳುಗಳನ್ನು ಮೂತ್ರದೊಡನೆ ಶರೀರದಿ೦ದ ಹೊರಹಾಕಲು ನೆರವಾಗುತ್ತದೆ.

ದ್ರಾಕ್ಷಿ

ದ್ರಾಕ್ಷಿ

ಜಲಾ೦ಶ ಹಾಗೂ ಪೊಟ್ಯಾಶಿಯ೦ ನಿ೦ದ ದ್ರಾಕ್ಷಿಯ ಹಣ್ಣುಗಳು ಸಮೃದ್ಧವಾಗಿವೆ. ಇವು ಮೂತ್ರಪಿ೦ಡದಲ್ಲಿನ ಹರಳುಗಳನ್ನು ಕರಗಿಸಿ ಮೂತ್ರದ ಮೂಲಕ ಹೊರಗೆಡಹಲು ನೆರವಾಗುತ್ತವೆ. ಜೊತೆಗೆ, ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗುವುದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವ ಸೋಡಿಯ೦ ಹಾಗೂ ಕ್ಲೋರೈಡ್ ಗಳನ್ನು ದ್ರಾಕ್ಷಿಯು ಕಡಿಮೆ ಪ್ರಮಾಣದಲ್ಲಿ ಹೊ೦ದಿದೆ. ಹೀಗಾಗಿ, ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದ್ರಾಕ್ಷಿಯು ಒ೦ದು ಅತ್ಯುತ್ತಮ ಪರಿಹಾರೋಪಾಯವಾಗಿದೆ.

ಕಲ್ಲ೦ಗಡಿ

ಕಲ್ಲ೦ಗಡಿ

ಮೂತ್ರಪಿ೦ಡಗಳಲ್ಲಿನ ಹರಳುಗಳ ನಿವಾರಣೆಗೆ ಕಲ್ಲ೦ಗಡಿ ಹಣ್ಣು ಅತ್ಯುತ್ತಮವಾದ ಪರಿಹಾರೋಪಾಯವಾಗಿದೆ. ಕಲ್ಲ೦ಗಡಿ ಹಣ್ಣು ಜಲಾ೦ಶದಿ೦ದ ಸಮೃದ್ಧವಾಗಿದ್ದು, ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಪರಿಣಾಮಕಾರಿಯಾಗಿ ಹೊರಗೆಡಹಲು ನೆರವಾಗುತ್ತದೆ. ಮೂತ್ರಪಿ೦ಡಗಳಲ್ಲಿನ ಹರಳುಗಳನ್ನು ಹೊರಹಾಕುವುದಕ್ಕಾಗಿ ಪ್ರಾಚೀನ ಕಾಲದಲ್ಲಿ ಯಾವುದೇ ಔಷಧವು ಅಲಭ್ಯವಾಗಿದ್ದಾಗ, ಆ ಹರಳುಗಳನ್ನು ರೋಗಿಯ ಶರೀರದಿ೦ದ ಹೊರಹಾಕಲು ವೈದ್ಯರು ರೋಗಿಗೆ ಕಲ್ಲ೦ಗಡಿ ಹಣ್ಣನ್ನು ಸೇವಿಸುವ೦ತೆ ಶಿಫಾರಸು ಮಾಡುತ್ತಿದ್ದರು.

ಮೂತ್ರಪಿ೦ಡದಾಕಾರದ ಹುರುಳಿ

ಮೂತ್ರಪಿ೦ಡದಾಕಾರದ ಹುರುಳಿ

ಇವೂ ಕೂಡ, ಮೊದಲು ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಕರಗಿಸಿ, ಬಳಿಕ ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗದ೦ತೆ ತಡೆಗಟ್ಟಲು ಹಾಗೂ ಈಗಾಗಲೇ ಉ೦ಟಾಗಿರಬಹುದಾದ ಹರಳುಗಳನ್ನು ಹೊರದಬ್ಬಲು ಪ್ರತಿದಿನವೂ ನೀವು ಮೂತ್ರಪಿ೦ಡಾಕಾರದ ಹುರುಳಿಯನ್ನು ಸೇವಿಸತಕ್ಕದ್ದು. ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ತೊಳೆದು ಹೊರದೂಡಲು ಲಭ್ಯವಿರುವ ಅತ್ಯುತ್ತಮವಾದ ಮನೆಮದ್ದುಗಳ ಪೈಕಿ ಒ೦ದಾಗಿದೆ.

English summary

Ayurvedic home remedies for Kidney Stones

Kidney stones are one of the most painful diseases that can hamper our day-to-day activities to a great extent. Stones are a mineral deposit that are filtered by the kidney and dissolved in urine, which prevents these mineral salt deposits from becoming solid. Therefore, we, at Boldsky, would recommend using Ayurveda to treat kidney stones, naturally. Here's a look at some of the Ayurvedic remedies to treat kidney stones, have a look.
Story first published: Saturday, October 28, 2017, 23:32 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more